ಸೌಜನ್ಯ ಪ್ರಕರಣ: ಸಂತೋಷ್ ರಾವ್ ವಿರುದ್ಧ ಅಪಪ್ರಚಾರ ಮಾಡಕೂಡದು: ಮೋಹಿತ್ ಕುಮಾರ್ ಎಚ್ಚರಿಕೆ

ಬೆಂಗಳೂರು, ಸೆ.24: ಧರ್ಮಸ್ಥಳದ ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ಅವರ ವಿರುದ್ಧ ಆಧಾರರಹಿತ ಆರೋಪ,ಅಪಪ್ರಚಾರ ಅಥವಾ ಮಾನಹಾನಿಕರ ಹೇಳಿಕೆಗಳನ್ನು ಪ್ರಸಾರ ಮಾಡದಂತೆ ಅವರ ಪರ ವಕೀಲ ಮೋಹಿತ್ ಕುಮಾರ್ ಕೆ. ಅವರು ಕಾನೂನು ಎಚ್ಚರಿಕೆ ನೀಡಿದ್ದಾರೆ.

ಸೆಪ್ಟೆಂಬರ್ 24, 2026ರಂದು ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ, ಸುಪ್ರೀಂ ಕೋರ್ಟ್‌ನ Special Leave Petition (Criminal) No.5763 of 2026 ಹಾಗೂ 2023ರ Spl.CC No.203/2016 ಪ್ರಕರಣದ ತೀರ್ಪು ಮತ್ತು 2026ರ ಆದೇಶಗಳನ್ನು ಉಲ್ಲೇಖಿಸಲಾಗಿದೆ.

ಸುಪ್ರೀಂ ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಸಂತೋಷ್ ರಾವ್ ಅವರ ವಿರುದ್ಧ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಆಧಾರರಹಿತ ಆರೋಪ, ನಿಂದನೆ, ಮಾನಹಾನಿಕರ ಹೇಳಿಕೆ, ಸುಳ್ಳು ಮಾಹಿತಿ ಅಥವಾ ಅಪಪ್ರಚಾರವನ್ನು ಮಾಡಬಾರದು ಎಂದು ವಕೀಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಿಂಟ್ ಮೀಡಿಯಾ, ಎಲೆಕ್ಟ್ರಾನಿಕ್ ಮೀಡಿಯಾ, ಸಾಮಾಜಿಕ ಜಾಲತಾಣಗಳು ಹಾಗೂ ಇತರ ಸಾರ್ವಜನಿಕ ವೇದಿಕೆಗಳಲ್ಲಿ ಸಂತೋಷ್ ರಾವ್ ವಿರುದ್ಧ ಇಂತಹ ಹೇಳಿಕೆಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಪ್ರಕಟಿಸುವುದು, ಪ್ರಸಾರ ಮಾಡುವುದು ಅಥವಾ ಹಂಚಿಕೊಳ್ಳುವುದನ್ನು ತಪ್ಪಿಸುವಂತೆ ಎಚ್ಚರಿಕೆ ನೀಡಲಾಗಿದೆ.

ಇಂತಹ ಹೇಳಿಕೆಗಳು ಅಥವಾ ಪ್ರಕಟಣೆಗಳು ಮುಂದುವರಿದರೆ, ಸಂಬಂಧಪಟ್ಟವರ ವಿರುದ್ಧ ಯಾವುದೇ ಹೆಚ್ಚಿನ ನೋಟಿಸ್ ನೀಡದೆ ಮಾನಹಾನಿ ಸೇರಿದಂತೆ ಸೂಕ್ತ ಸಿವಿಲ್ ಮತ್ತು ಕ್ರಿಮಿನಲ್ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೋಹಿತ್ ಕುಮಾರ್ ಕೆ. ತಿಳಿಸಿದ್ದಾರೆ.

ಸಂಬಂಧಪಟ್ಟ ವ್ಯಕ್ತಿಗಳು, ಮಾಧ್ಯಮ ಸಂಸ್ಥೆಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಇಂತಹ ಹೇಳಿಕೆಗಳು ಅಥವಾ ಪ್ರಕಟಣೆಗಳಿಂದ ದೂರವಿರಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

More articles

Latest article

Most read