Saturday, July 27, 2024

ದರ್ಶನ್ ಜೊತೆಗಿರುವ ಖಾಸಗಿ ಫೋಟೋ ಹಂಚಿಕೊಂಡ ಪವಿತ್ರಗೌಡ; ಡಿಬಾಸ್ ಪತ್ನಿಯಿಂದ ವಾರ್ನಿಂಗ್!

Most read

ಕಳೆದ ಹಲವು ವರ್ಷಗಳಿಂದ ಪವಿತ್ರಾ ಗೌಡ ಹಾಗೂ ನಟ ದರ್ಶನ್ ಅವರ ರಿಲೇಶನ್ ಶಿಪ್ ಬಗ್ಗೆ ಸಮಾಜಿಕ ವಲಯದಲ್ಲಿ ಹಲವು ಚರ್ಚೆಗಳು ವಿವಾದಗಳು ಹುಟ್ಟಿಕೊಂಡಿದ್ದವು. ಅದಕ್ಕೆ ಪುಷ್ಟಿ ಕೊಡುವಂತಹ ಪೋಸ್ಟ್‌ಗಳನ್ನು ಪವಿತ್ರಗೌಡ ಸಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದರು. ಈಗ, ಪವಿತ್ರ ಗೌಡ ಸೋಶಿಯಲ್ ಮೀಡಿಯಾದಲ್ಲಿ ನನ್ನ ಮತ್ತು ದರ್ಶನ್ ಅವರ 10ವರ್ಷಗಳ ಜರ್ನಿ ಅನ್ನೋ ಫೋಟೋ ಶೇರ್ ಮಾಡಿದ್ದು, ಅದಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇನ್ಸ್ಟಾಗ್ರಾಮ್ ಮೂಲಕ ವಾರ್ನಿಂಗ್ ನೀಡಿದ್ದಾರೆ.

ಇನ್ಸ್ಟಾಗ್ರಾಮ್‌ನಲ್ಲಿ ದರ್ಶನ್ ಅವರ ಬಗ್ಗೆ ಪವಿತ್ರಗೌಡ ತಾವು ದರ್ಶನ್ ಜೊತೆಗಿರುವ ಕೆಲವು ಖಾಸಗಿ ಫೋಟೋಗಳನ್ನು ಹಂಚಿಕೊಂಡು, “ಒಂದು ದಶಕ ಕಳೆದಿದೆ, ಇದು ಶಾಶ್ವತವಾಗಿರಲಿ.” ನಮ್ಮ ಸಂಬಂಧಕ್ಕೆ 10 ವರ್ಷಗಳಾಗಿವೆ ಥ್ಯಾಂಕ್ ಯು ಎಂದು ಬರೆದುಕೊಂಡಿದ್ದು, ಈ ಪೋಸ್ಟ್ ನಟ ದರ್ಶನ್ ಹಾಗೂ ಮಗಳು ಖುಷಿ ಗೌಡ ಅವರನ್ನು ಟ್ಯಾಗ್ ಸಹ ಮಾಡಿದ್ದಾರೆ.

ಪವಿತ್ರಗೌಡ ದರ್ಶನ್ ಜೊತೆಗಿನ ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಿಡಿಕಾರಿದ್ದು, ಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ, ಅದು ಅವಳ ಪಾತ್ರ ಮತ್ತು ನೈತಿಕ ನಿಲುವಿನ ಬಗ್ಗೆ ಮಾತನಾಡುತ್ತದೆ. ಪುರುಷ ವಿವಾಹಿತನೆಂದು ತಿಳಿದಿದ್ದರೂ ಕೂಡ ತಮ್ಮ ವೈಯಕ್ತಿಕ ಅಗತ್ಯಗಳಿಗಾಗಿ ಅವರೊಂದಿರುವ ಪೋಸ್ಟ್ ಹಂಚಿಕೊಳ್ಳುವುದು ಸರಿಯಲ್ಲ. ಎಂದು ಪವಿತ್ರಗೌಡ ಅವರ ಪತಿ ಸಂಜಯ್ ಸಿಂಗ್ ಮತ್ತು ಅವರ ಮಗಳ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ವಿಜಯಲಕ್ಷ್ಮಿ ಪೋಸ್ಟ್ ಮಾಡಿದ್ದಾರೆ.

ಮುಂದುವರೆದು, ಖುಷಿ ಗೌಡ ಪವಿತ್ರಾ ಮತ್ತು ಸಂಜಯ್ ಸಿಂಗ್ ಅವರ ಮಗಳು. ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಧ್ವನಿ ಎತ್ತಲು ಸಾಮಾಜಿಕ ಮಾಧ್ಯಮವನ್ನು ಬಳಸುವುದಿಲ್ಲ. ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ. ಇಡೀ ಸಮಾಜಕ್ಕೆ ವಿಭಿನ್ನ ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಪವಿತ್ರ ಗೌಡ ಪೋಸ್ಟ್ :

https://www.instagram.com/reel/C2fhWmdP6Nj/?utm_source=ig_web_copy_link

ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೋಸ್ಟ್ :

https://www.instagram.com/p/C2fjl_hPSTC/?igsh=MTI1NDZ4bnU5aXpsbw==

More articles

Latest article