ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಪಾದಯಾತ್ರೆ  ವೇಳೆ ಬಾಲಕನನ್ನು ಕಾಡಿನೊಳಗೆ ಎಳೆದೊಯ್ದು ಕೊಂದ ಚಿರತೆ

ಚಾಮರಾಜನಗರ  : ಇದು ನಿಜಕ್ಕೂ ಎದೆ ನಡುಗಿಸುವ ದುರ್ಘಟನೆ.  ಚಿರತೆಗೆ ಬಲಿಯಾದ  ಏನು ಆರಿಯದ ಮುಗ್ದ ಬಾಲಕ ತನ್ನ ಕುಟುಂಬದವರೊಡನೆ ಮುಂಜಾನೆದ್ದು ಉಲ್ಲಾಸದಿಂದ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ರಕ್ಷಸ ಚಿರತೆ ಹಠಾತ್ತನೆ ಎರಗಿ ಬಾಲಕನ್ನು ಕಚ್ಚಿಕೊಂಡು ಹೋಗಿ ಕೊಂದಿದೆ.

ಅಬ್ಬಾಬ್ಬಾ… ಪೋಷಕರ ಆರ್ತನಾದ ಮತ್ತು ಕಿರುಚಾಟದ ನಡುವೆಯೂ ಚಿರತೆ ಬಾಲಕನನ್ನು ಹಿಡಿದು ದಟ್ಟ ಕಾಡಿನೊಳಗೆ ಕಣ್‌ ಬಿಡುವಷ್ಷರಲ್ಲಿ ಎತ್ತಿಕೊಂಡು ಮಾಯವಾಗಿದೆ. ಭಾನುವಾರ  ಬೆಂಗಳೂರು ಮೂಲದ ಹರ್ಷಿತ್ ತನ್ನ ಪೋಷಕರೊಂದಿಗೆ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಪಾದಯಾತ್ರೆ ಕೈಗೊಂಡಿದ್ದ ವೇಳೆ  ಘೋರ ದುರಂತ ಸಂಭವಿಸಿದೆ

ಚಾಮರಾಜನಗರದ ಇತಿಹಾಸ ಪ್ರಸಿದ್ದ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ವ್ಯಾಪ್ತಿಯಲ್ಲಿ ಚಿರತೆಗಳ ಹಾವಳಿ ಮಿತಿ ಮೀರಿದೆ ಎಂಬುದಕ್ಕೆ ಈ ಘಟನೆ ಜೀವಂತ ಸಾಕ್ಷಿಯಾಗಿದೆ. 

ಜನವರಿ 21 ರಂದು ಮಂಡ್ಯ ಮೂಲದ ಪ್ರವೀಣ್‌ ಎಂಬ ಭಕ್ತ ತಾಳುಬೆಟ್ಟದ ಬಳಿ ಚಿರತೆ ದಾಳಿಗೆ ಬಲಿಯಾಗಿದ್ದ. .ಫೆಬ್ರವರಿಯಲ್ಲಿ ಚನ್ನಪಟ್ಟಣದ ಶ್ರೇಯಸ್‌ ಎಂಬ ಬಾಲಕನ ಮೇಲೆ ಚಿರತೆ ದಾಳಿ ನಡೆಸಿತ್ತು. ಅದೃಷ್ಟವಶಾತ್ ಆತ ಬದುಕುಳಿದಿದ್ದ. ಈಗ ಹರ್ಷಿತ್ ಬಲಿಯಾಗಿರುವುದು ಅರಣ್ಯ ಇಲಾಖೆಯ ವಿರುದ್ಧ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಏನಾಯ್ತು :  ಭಾನುವಾರ ಬೆಳಿಗ್ಗೆ 7 ರಲ್ಲಿ ಹರ್ಷಿತ್ ಮತ್ತು ಆತನ ಕುಟುಂಬಸ್ಥರು ದಟ್ಟ ಅರಣ್ಯದ ನಡುವೆ ಇರುವ ನಾಗಮಲೆ ಹಾದಿಯಲ್ಲಿ ಸಾಗುತ್ತಿದ್ದರು. ಪೋಷಕರ ಜೊತೆಯಲ್ಲೇ ನಡೆಯುತ್ತಿದ್ದ ಬಾಲಕನ ಮೇಲೆ ಪೊದೆಯಲ್ಲಿ ಹೊಂಚು ಹಾಕಿ ಕುಳಿತಿದ್ದ ಚಿರತೆ ಮಿಂಚಿನ ವೇಗದಲ್ಲಿ ದಾಳಿ ಮಾಡಿದೆ.

ಕುಟುಂಬಸ್ಥರ ಕಣ್ಣೆದುರೇ ಚಿರತೆಯು ಬಾಲಕನನ್ನು ಕಾಡಿನೊಳಗೆ ಎಳೆದುಕೊಂಡು ಹೋಗಿದೆ. ಪೋಷಕರ ಆರ್ತನಾದ ಮತ್ತು ಕಿರುಚಾಟಕ್ಕೆ ಬೆಚ್ಚದೇ ಬೆದರದೆ ಚಿರತೆ ಬಾಲಕನನ್ನು ಹಿಡಿದು ದಟ್ಟ ಕಾಡಿನೊಳಗೆ ಮಾಯವಾಗಿದೆ.

ತಕ್ಷಣವೇ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಹುಡುಕಾಟ ನಡೆಸಿದಾಗ ಬಾಲಕನ ಮೃತದೇಹ ಕಾಡಿನ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ. ಚಿರತೆಯು ಬಾಲಕನ ದೇಹದ ಕೆಲವು ಭಾಗಗಳನ್ನು ಭಕ್ಷಿಸಿರುವುದು ಪತ್ತೆಯಾಯಿತು.

ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

ಅರಣ್ಯ ಇಲಾಖೆಯು ಕೇವಲ ಚಿರತೆ ಕಾರ್ಯಪಡೆ ರಚನೆ ಮಾಡಿದೆ. ಆದರೆ, ಭಕ್ತರ ಪ್ರಾಣಕ್ಕೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ. ಪದೇ ಪದೇ ದಾಳಿ ನಡೆಯುತ್ತಿದ್ದರೂ ನರಭಕ್ಷಕ ಚಿರತೆ ಹಿಡಿಯುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ, ಎಂದು ಸ್ಥಳೀಯರು ಮತ್ತು ಭಕ್ತರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂದಿನಂತೆ  ಭರವಸೆ :  ಎಂದಿನಂತೆ ಘಟನೆ ನಡೆದಾಗಲೆಲ್ಲಾ ಕ್ರಮ ತೆಗೆದುಕೊಳ್ಳುವಂತೆ ಈಗ ಸದ್ಯಕ್ಕೆ ನಾಗಮಲೆ ಹಾದಿಯಲ್ಲಿ ಪಾದಯಾತ್ರೆ ಮಾಡುವವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದ್ದು, ಮುಂಜಾನೆ ಮತ್ತು ಸಂಜೆ ವೇಳೆ ಕಾಡಿನ ಹಾದಿಯಲ್ಲಿ ಸಂಚರಿಸದಂತೆ ಸೂಚಿಸಲಾಗಿದೆ. ನರಭಕ್ಷಕ ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ತೀವ್ರಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

More articles

Latest article

Most read