ಹಿರಿಯ ಚಿತ್ರ ಕಲಾವಿದ ಕೆ.ಟಿ.ಶಿವಪ್ರಸಾದ್‌ ಇನ್ನಿಲ್ಲ

ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಚಿತ್ರ ಕಲಾವಿದ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಆಪ್ತರಾಗಿದ್ದ ಕೆ.ಟಿ.ಶಿವಪ್ರಸಾದ್‌ (78) ಇಂದು ನಿಧನರಾಗಿದ್ದಾರೆ.

ಪರಿಸರದ ಬಗ್ಗೆ ರೈತ ಹಾಗೂ ದಲಿತ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಕೆ. ಟಿ. ಶಿವಪ್ರಸಾದ್ ಪೂರ್ಣಚಂದ್ರ ತೇಜಸ್ವಿ ಅವರ ಆಪ್ತರಾಗಿದ್ದರು. ಹಾಸನ ಜಿಲ್ಲೆಯ ಕಾರ್ಲೆಯ ಆಗಿನ ಖ್ಯಾತ ಉದ್ಯಮಿ ಎಲ್. ಟಿ. ಕಾರ್ಲೆ ಅವರ ಪುತ್ರ. ಇವರ ನಿಧನಕ್ಕೆ ಗಣ್ಯರು ಹಾಗೂ ಕಲಾವಿದರು ಸಂತಾಪ ಸೂಚಿಸಿದ್ದಾರೆ.
ಶಿವಪ್ರಸಾದ್ ಅವರ ಪಾರ್ಥಿವ ಶರೀರವನ್ನು ಬುಧವಾರ ಬೆಂಗಳೂರಿನಿಂದ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನಕ್ಕೆ ತರಲಾಗುವುದು. ಸಾರ್ವಜನಿಕರಿಗೆ ಬೆಳಗ್ಗೆ 9.30ರಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ ಮಧ್ಯಾಹ್ನ 2 ಗಂಟೆಗೆ ಬಿಟ್ಟಗೌಡನಹಳ್ಳಿ ಶಾಂತಿಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

1947ರಲ್ಲಿ ಕೊಡಗಿನ ಮಡಿಕೇರಿ ತಾಲೂಕಿನ ಕೃಷಿ ಕುಟುಂಬವೊಂದರಲ್ಲಿ ಜನಿಸಿದ ಕೆ.ಟಿ ಶಿವಪ್ರಸಾದ್‌ ಅವರಿಗೆ ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.  ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಪರಿಣಾಮ  ಇಂಜಿನಿಯರಿಂಗ್‌ ಅಧ್ಯಯವನ್ನು ಅರ್ಧಕ್ಕೇ ಕೈಬಿಟ್ಟ ಅವರು, ಮುಂಬೈನ ಪ್ರತಿಷ್ಠಿತ ಸರ್‌ ಜೆ.ಜೆ ಸ್ಕೂಲ್‌ ಆಫ್‌ ಆರ್ಟ್‌ ಸೇರಿದರು. ಅಲ್ಲಿ ಕಠಿಣ ಪರಿಶ್ರಮದಿಂದ 1973ರಲ್ಲಿ ಚಿತ್ರಕಲೆಯಲ್ಲಿ ಡಿಪ್ಲೊಮಾ ಪದವಿ ಪಡೆದು, ಕಲಾ ಜಗತ್ತಿಗೆ ಅಧಿಕೃತವಾಗಿ ಹೆಜ್ಜೆ ಇಟ್ಟರು.

ಶಿವಪ್ರಸಾದ್‌ ಅವರ ವಿಶಿಷ್ಟ ಕಲಾ ಶೈಲಿಯನ್ನ ಬಿಟ್ರನ್‌ನ ಖ್ಯಾತ ಮಾಡರ್ನಿಸ್ಟ್‌ ಕಲಾಕಾರ ಲುಸಿಯನ್‌ ಫ್ರಾಯ್ಡ್‌ ಅವರ ಶೈಲಿಗೆ ಹೋಲಿಸಲಾಗ್ತಿತ್ತು, ಇವರ ಕಲಾಕೃತಿಗಳು ಕೇವಲ ಭಾರತ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಅಪಾರ ಪ್ರಶಂಸೆ ಗಳಿಸಿದ್ದವು. 1976ರಿಂದಲೇ ಬೆಂಗಳೂರು, ಮೈಸೂರು, ಮುಂಬೈ ಮತ್ತು ನವದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇವರ ಹಲವಾರು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳು ಯಶಸ್ವಿಯಾಗಿ ನಡೆದಿದ್ದವು. ಮುಂಬೈನ ಜಹಾಂಗೀರ್‌ ಆರ್ಟ್‌ ಗ್ಯಾಲರಿ, ಚೆನ್ನೈನ ಸಾಕ್ಷಿ ಗ್ಯಾಲರಿ ಹಾಗೂ ನವದೆಹಲಿಯ ಆರ್ಟ್‌ ಟುಡೇ ಮುಂತಾದ ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರದರ್ಶನಗೊಂಡಿವೆ.

ಅಂತರರಾಷ್ಟ್ರೀಯ ಮಟ್ಟದಲ್ಲೂ ಇವರ ಸಾಧನೆ ವಿಸ್ತರಿಸಿತ್ತು. ಭೋಪಾಲ್‌ ಬಿನ್ನಾಲೆ (1988), ಬಾಂಬೆ ಆರ್ಟ್‌ ಸೊಸೈಟಿ ಶತಮಾನೋತ್ಸವ ಪ್ರದರ್ಶನ (1989) ಹಾಗೂ ಹಾಂಗ್‌ಕಾಂಗ್‌ ಗ್ಯಾಲರಿಗಳಲ್ಲಿ (1996) ಇವರ ಕಲಾಕೃತಿಗಳು ಪ್ರದರ್ಶನಗೊಂಡು ಜಾಗತಿಕ ಗಮನ ಸೆಳೆದಿದ್ದವು.

ಚಿತ್ರಕಲಾ ಕ್ಷೇತ್ರಕ್ಕೆ ಹಾಗೂ ಕಲಾ ಲೋಕಕ್ಕೆ ಕೆಟಿ ಶಿವಪ್ರಸಾದ್‌ ಅವರು ನೀಡಿದ ಕೊಡುಗೆ ಮತ್ತು ಅವರ ಜೀವಮಾನದ ಸಾಧನೆಯನ್ನ ಪರಿಗಣಿಸಿ, ಕರ್ನಾಟಕ ಸರ್ಕಾರವು 2001ರಲ್ಲಿ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದರೊಂದಿಗೆ ಇನ್ನು ಹತ್ತಾರು ಗೌರವಗಳು ಹಾಗೂ ಪುರಸ್ಕಾರಗಳು ಇವರ ಮುಡಿಗೇರಿದ್ದವು. 

More articles

Latest article

Most read