ಮುಂಗಾರು ಮಳೆ ಕುಂಠಿತ : ಆರ್‌ಎಸ್‌. ಹೇಮಾವತಿ, ಕಬಿನಿ, ಹಾರಂಗಿ ಜಲಾಶಯಗಳಿಗೆ ಹರಿಯದ ನೀರು

ಮೈಸೂರು : ಹೋದ ವರ್ಷ ಆರ್ಭಟಿಸಿದಂತೆ ಈ ವರ್ಷ ಮುಂಗಾರು ಮಳೆ ಏಕೋ ಏನೋ ಆರ್ಭಟಿಸುತ್ತಿಲ್ಲ. ಕೇರಳಕ್ಕೆ ಮುಂಗಾರು ಪ್ರವೇಶವಾದ ನಂತರ ಹವಾಮಾನ ಇಲಾಖೆ ಹೇಳಿದಂತೆ ನಿರೀಕ್ಷೆಯಷ್ಟು ಮಳೆ ಭೂಮಿಗೆ ಸುರಿಯುತ್ತಿಲ್ಲ. ಅಲ್ಲಲ್ಲಿ ಮಳೆ ಆಗುತ್ತಿದೆ. ಆದರೆ ಕಳೆದ ವರ್ಷದಂತೆ ಜಲಾಶಯಗಳಿಗೆ ಯಥೇಷ್ಷವಾಗಿ ನೀರು ಬರು ಮಟ್ಟಿಗೆ ಮಳೆ ಆರ್ಭಟ ಇಲ್ಲ.

ವಾಸ್ತವವಾಗಿ ಮುಂಗಾರು ಆರಂಭದಲ್ಲಿ ಆಕಾಶ-ಭೂಮಿ ಒಂದಾಗುವಷ್ಟರ ಮಟ್ಟಿಗೆ ಮಳೆರಾಯನ ರುದ್ರ ನರ್ತನ ಮೇಳೈಸಬೇಕು. ಈಗ ಮುಂಗಾರು ಆರಂಭವಾಗಿ ಎರಡು ವಾರಗಳು ಕಳೆಯುತ್ತಾ ಬಂದಿದ್ದರೂ ಮಳೆಯ ಅತಿ ಸಾಮಾನ್ಯವಾಗಿ ನರ್ತನವಾಗುತ್ತಿದೆ ಅಷ್ಟೇ..

ಇನ್ನೊಂದು ಪ್ರಮುಖ ಅಂಶವೆಂದರೆ ಹೋದ ಬಾರಿ ಜೂನ್‌ ನಿಂದ ಆಗಸ್ಟ್‌ ಅಂತರದಲ್ಲಿ ಜಲಾಶಯಗಳು ಎರಡು ಭಾರಿ ಭರ್ತಿ ಆಗಿದ್ದವು. ಆದರೆ ಈಗ ಜೂನ್‌ ಅರ್ಧ ಮುಗಿದರೂ ಮಳೆಯ ವೇಗ- ಗತಿಯನ್ನು ಗಮನಿಸಿದರೆ ಒಂದು ಬಾರಿಯೂ ತುಂಬುವುದು ಕಷ್ಟ. ಮಳೆ ಆರ್ಭಟಿಸದಿದ್ದರೇ ಕೃಷಿಗೆ ಮತ್ತು ಕುಡಿಯುವ ನೀರಿಗೆ ತೊಂದರೆ ಆಗುವುದು ಗ್ಯಾರಂಟಿ ಎಂಬ ಆತಂಕ ಉಂಟಾಗಿದೆ.

ಹಳೆ ಮೈಸೂರು ಭಾಗದ ಪ್ರಮುಖ ಜಲಾಶಯಗಳಾದ ಕೃಷ್ಣರಾಜ ಸಾಗರ (ಕೆಆರ್‌ಎಸ್‌), ಹೇಮಾವತಿ, ಕಬಿನಿ ಮತ್ತು ಹಾರಂಗಿ ಜಲಾಶಯಗಳಿಂದ ಕೋಟ್ಯಾಂತರ ಹೆಕ್ಟೇರ್‌ ಭೂಮಿ ನೀರು ಉಣಿಸಲಾಗುತ್ತದೆ. ಅಲ್ಲದೇ ಬೆಂಗಳೂರು, ತುಮಕೂರು ಮತ್ತು ಮೈಸೂರು ನಗರಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ತಮಿಳುನಾಡಿಗೂ ನೀರನ್ನು  ನೀಡಲು ಈ ಜಲಾಶಯಗಳು ಭರ್ತಿ ಆಗಬೇಕು. ಇಲ್ಲದಿದ್ದರೆ ತಮಿಳುನಾಡು- ಕರ್ನಾಟಕ ರಾಜ್ಯಗಳ ನಡುವೆ ನೀರಿನ ಸಂಘರ್ಷ ಆರಂಭವಾಗುತ್ತದೆ.

ಮಲೆನಾಡು ಪ್ರದೇಶಗಳಾದ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಆಗುತ್ತಿಲ್ಲ. ಕೊಡಗಿನಲ್ಲಿ ಮಳೆಯಾದರೆ ಹಾರಂಗಿಗೆ ಮತ್ತು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮತ್ತು ಸಕಲೇಶಪುರ ಭಾಗದಲ್ಲಿ ಮಳೆಯಾದರೆ ಹೇಮಾವತಿ ಜಲಾಶಯಕ್ಕೆ ನೀರು ಹರಿದು ಬರುತ್ತದೆ. ಹೇಮೆ ಮತ್ತು ಹಾರಂಗಿ ಭರ್ತಿ ಆಗಿ ಅವೆರಡು ಜಲಾಶಯಗಳಿಂದ ಹೆಚ್ಚು ನೀರು ಬಿಡುಗಡೆ ಮಾಡಿದರೆ ಮಾತ್ರ ಕೆಆರ್‌ಎಸ್‌ ಒಡಲು ತುಂಬುತ್ತದೆ.

ಈ ಜಲಾಶಯದ ಮೂಲಕವೇ ತಮಿಳುನಾಡಿಗೆ ನೀರು ಹರಿಸಬೇಕು ಮತ್ತು ಬೆಂಗಳೂರು, ಮೈಸೂರು ನಗರಗಳಿಗೂ ಕುಡಿಯುವ ನೀರನ್ನು ಇಲ್ಲಿಂದಲೇ ಸರಬರಾಜು ಮಾಡಬೇಕು. ಕೆಆರ್‌ಎಸ್‌ಗೆ ಜಲಾನಯನ ಪ್ರದೇಶ ಕಡಿಮೆ. ಎಚ್‌. ಡಿ.ಕೋಟೆ ತಾಲೂಕಿನಲ್ಲಿ ಕಬಿನಿ ಜಲಾಶಯಕ್ಕೆ ಕೇರಳದ ವೈನಾಡಿನಲ್ಲಿ ಮಳೆಯಾದರೆ ನೀರು ಬರುತ್ತದೆ. ಈ ಜಲಾಶಯದಿಂದ ಬಿಡುಗಡೆ ಆಗುವ ನೀರು ನೇರವಾಗಿ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಹರಿದು ಹೋಗುತ್ತದೆ ಕಳೆದ ಬಾರಿ ಜೂನ್‌ನಲ್ಲೇ ಭರ್ತಿ ಆಗಿತ್ತು.

ರಾಜ್ಯದಲ್ಲೇ ಮೊದಲು ಭರ್ತಿ ಆಗುವ ಕಬಿನಿ ಖಾಲಿ

ಮಳೆ ನಿರೀಕ್ಷೆಯಂತೆ ಬಾರದ ಕಾರಣ  ರಾಜ್ಯದಲ್ಲೇ ಮೊದಲು ಭರ್ತಿಯಾಗುವ  ಎಚ್.ಡಿ. ಕೋಟೆ ತಾಲೂಕು ಬೀಚನಹಳ್ಳಿಯಲ್ಲಿ ಇರುವ ಕಬಿನಿ ಜಲಾಶಯ ಇದೀಗ ಖಾಲಿ-ಖಾಲಿ ಆಗಿದೆ. ಕಳೆದ ವರ್ಷ ಇದೇ ಈ ಜಲಾಶಯಕ್ಕೆ 15 ಸಾವಿರ ಕ್ಯೂಸೆಕ್‌ ಹರಿದುಬರುತ್ತಿತ್ತು. 2446 ಕ್ಯೂಸೆಕ್‌ ಇದೆ. ಜಲಾಶಯದಿಂದ 600 ಕ್ಯೂಸೆಕ್‌ ಹೊರ ಬಿಡಲಾಗುತ್ತಿದೆ.  ಸಮುದ್ರಮಟ್ಟದಿಂದ 2284 ಅಡಿ ಸಾಮರ್ಥ್ಯದ ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ 2252 ಅಡಿಗೆ ಕುಸಿದಿದೆ.

ಬೇಸಿಗೆ ಮುಗಿದು ಮಳೆಗಾಲ ಆರಂಭವಾಗಿದ್ದರೂ ಸರಿಯಾಗಿ ವರುಣನ ಕೃಪೆ ತೋರದೆ ಇರುವ ಹಿನ್ನೆಲೆಯಲ್ಲಿ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ 81 ಅಡಿಗೆ ಕುಸಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಾರಿ ಜೂನ್ ಅರ್ಧ ತಿಂಗಳು ಕಳೆಯುತ್ತಿದ್ದರೂ ಸರಿಯಾಗಿ ಮಳೆಯಾಗುತ್ತಿಲ್ಲ  ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಭಾವ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ  ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಇಂದು 81.35  ಅಡಿಗಳಿಗೆ ಕುಸಿದಿದೆ. ಕೆಆರ್ ಎಸ್ ಜಲಾಶಯ 124 ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ.

ಕೆಆರ್‌ಎಸ್‌ ಜಲಾಶಯದಲ್ಲಿ  ಕೇವಲ 11 ಟಿಎಂಸಿ ಮಾತ್ರ ನೀರು ಸಂಗ್ರಹವಾಗಿದ್ದು,  ಇದರಲ್ಲಿ 4 ರಿಂದ 5 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದೆ, ಬಳಕೆಗೆ ಲಭ್ಯವಿರುವುದು ಕೇವಲ 7 ಟಿಎಂಸಿ ಮಾತ್ರವಿದೆ. ಹೀಗಾಗಿ  ಬೆಂಗಳೂರು, ಮೈಸೂರು ಮತ್ತು ಮಂಡ್ಯ ಭಾಗಗಳಿಗೆ ಕುಡಿಯುವ ನೀರಿನ ಸಂಕಷ್ಟ  ಎದುರಾಗುವ ಸಾಧ್ಯತೆ ಇದೆ.

ಈ ನಡುವೆಯೂ  ಜೂನ್ ತಿಂಗಳಿನಲ್ಲಿ ತಮಿಳುನಾಡಿಗೆ ಸುಪ್ರೀಂಕೋರ್ಟ್ ಆದೇಶದಂತೆ ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕಾದ ಅನಿವಾರ್ಯತೆ ಇದೆ.

ಜಲಾಶಯಗಳ ಸ್ಥಿತಿ ಗತಿ ಹೀಗಿದೆ
ಕೆಆರ್‌ಎಸ್
ಗರಿಷ್ಠ ನೀರಿನ ಮಟ್ಟ – 124.80 ಅಡಿ
ಇಂದಿನ ನೀರಿನ ಮಟ್ಟ -81.35 ಅಡಿ
ಒಳ ಹರಿವು -474 ಕ್ಯೂಸೆಕ್
ಹೊರ ಹರಿವು -436  ಕ್ಯೂಸೆಕ್

ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ – 2859 ಅಡಿಗಳು
ಇಂದಿನ ನೀರನ ಮಟ್ಟ -2823.68
ಒಳ ಹರಿವು – 421 ಕ್ಯೂಸೆಕ್
ಹೊರ ಹರಿವು – 180 ಕ್ಯೂಸೆಕ್

ಕಬಿನಿ ಜಲಾಶಯ
ಗರಿಷ್ಠ ನೀರಿನ ಮಟ್ಟ -2284 ಅಡಿ.
ಇಂದಿನ ನೀರಿನ ಮಟ್ಟ -2252 ಅಡಿ
ಒಳ ಹರಿವು –  1890 ಕ್ಯೂಸೆಕ್
ಹೊರ ಹರಿವು – -600 ಕ್ಯೂಸೆಕ್

ಹೇಮಾವತಿ ಜಲಾಶಯ
ಗರಿಷ್ಠ ನೀರಿನ ಮಟ್ಟ -2922 ಅಡಿ
ಇಂದಿನ ನೀರನ ಮಟ್ಟ –2890 ಅಡಿ
ಒಳ ಹರಿವು – 498 ಕ್ಯೂಸೆಕ್
ಹೊರ ಹರಿವು -300 ಕ್ಯೂಸೆಕ್

More articles

Latest article

Most read