ಕೇರಳದಲ್ಲಿ ಕಮ್ಯೂನಿಸ್ಟ್‌ ಸರ್ಕಾರ ಅಂತ್ಯ

 ಕೇರಳ:  ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಮುನ್ನಡೆ ಸಾಧಿಸುವ ಮೂಲಕ ಎಲ್​ಡಿಎಫ್ ಸರ್ಕಾರವನ್ನು ಸೋಲಿಸಿದೆ. ಈ ಮೂಲಕ ಕೇರಳದಲ್ಲಿ ಮಾತ್ರವೇ ಅಸ್ತಿತ್ವದಲ್ಲಿದ್ದ ಕಮ್ಯೂನಿಸ್ಟ್​ ಸರ್ಕಾರ ಅಂತ್ಯವಾಗಿದೆ.

 ಮೊದಲ ಕೆಲವು ಸುತ್ತಿನ ಎಣಿಕೆಯ ನಂತರ, ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ 140 ವಿಧಾನಸಭಾ ಸ್ಥಾನಗಳ ಪೈಕಿ 100 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಸಿಪಿಐ(ಎಂ) ನೇತೃತ್ವದ ಆಡಳಿತಾರೂಢ ಎಡ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಕೇವಲ 40 ಕ್ಷೇತ್ರಗಳಲ್ಲಿ ಮಾತ್ರ ಮುಂದಿತ್ತು.

 ಯುಡಿಎಫ್​ಗೆ 99, ಎಲ್​ಡಿಎಫ್​ಗೆ 38, ಹಾಗೂ ಎನ್​ಡಿಎ 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಣ್ಣೂರು ಜಿಲ್ಲೆಯಲ್ಲಿ ತಮ್ಮ ಸಾಂಪ್ರದಾಯಿಕ ಭದ್ರಕೋಟೆಯಾದ ಧರ್ಮಡಂನಲ್ಲಿ ಆರಂಭಿಕ ಸುತ್ತುಗಳಲ್ಲಿಯೇ ಹಿಂದುಳಿದಿದ್ದರು.

ಆರಂಭಿಕ ಸೋಲನ್ನು ಎದುರಿಸುತ್ತಿರುವ ಇತರೆ ಸಚಿವರಲ್ಲಿ ವೀಣಾ ಜಾರ್ಜ್, ಎಂ. ಬಿ. ರಾಜೇಶ್, ಒ. ಆರ್. ಕೇಲು, ಆರ್ ಬಿಂಧು, ಜೆ. ಚಿಂಚುರಾಣಿ, ಪಿ. ರಾಜೀವ್, ಕೆ. ಬಿ. ಗಣೇಶ್ ಕುಮಾರ್, ವಿ. ಎನ್. ವಾಸವನ್, ವಿ. ಶಿವನ್‌ಕುಟ್ಟಿ, ವಿ ಅಬ್ದುರಹಿಮಾನ್, ಕಾಡನ್ನಪ್ಪಲ್ಲಿ ರಾಮಚಂದ್ರನ್, ಎ. ಕೆ. ಸಸೀಂದ್ರನ್ ಮತ್ತು ರೋಶಿ ಆಗಸ್ಟಿನ್ ಸೇರಿದ್ದಾರೆ. ಎಲ್‌ಡಿಎಫ್ ಸಂಚಾಲಕ ಟಿ. ಪಿ. ರಾಮಕೃಷ್ಣನ್ ಅವರು ಕೋಝಿಕ್ಕೋಡ್ ಜಿಲ್ಲೆಯ ತಮ್ಮ ಹಾಲಿ ಕ್ಷೇತ್ರ ಪೆರಂಬ್ರಾದದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

ವಿಜಯನ್ ನೇತೃತ್ವದಲ್ಲಿ ಸತತ ಎರಡು ಅವಧಿಗೆ ಅಧಿಕಾರದಲ್ಲಿರುವ ಸಿಪಿಐ(ಎಂ) ನೇತೃತ್ವದ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಮಹತ್ವದ ಪಾತ್ರ ವಹಿಸಿದೆ.

ಆಡಳಿತದಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪಗಳ ಬಗ್ಗೆ ವಿರೋಧ ಪಕ್ಷಗಳಿಂದ ಪದೇ ಪದೇ ಆರೋಪಗಳು ಕೇಳಿ ಬರುತ್ತಿದ್ದರಿಂದಾಗಿ, ಹಲವಾರು ಕ್ಷೇತ್ರಗಳ ಮತದಾರರು ಹಾಲಿ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದು ಇದರಿಂದ ತಿಳಿದುಬರುತ್ತಿದೆ.

 ಗಮನಾರ್ಹ ಬೆಳವಣಿಗೆಯೊಂದರಲ್ಲಿ, ಸಿಪಿಐ(ಎಂ) ಅಭ್ಯರ್ಥಿ ಇ. ಟಿ. ಟೈಸನ್ ಆರಂಭಿಕ ಮುನ್ನಡೆ ಸಾಧಿಸಿದ್ದ ಉತ್ತರ ಪರವೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ಮತ್ತು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಸನ್ ಹಿನ್ನಡೆಯಲ್ಲಿದ್ದಾರೆ. ಅದಾಗ್ಯೂ, ರಾಷ್ಟ್ರೀಯ ಪಕ್ಷಕ್ಕೆ ಅನುಕೂಲಕರವಾದ ಕ್ಷೇತ್ರಗಳಲ್ಲಿ ಎಣಿಕೆ ಮುಂದುವರೆದಂತೆ ಸತೀಸನ್ ಚೇತರಿಕೆ ಕಂಡಿದ್ದಾರೆ.

More articles

Latest article

Most read