Saturday, December 7, 2024

ಕನ್ನಡದ ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರವನ್ನು ಬೆಂಬಲಿಸಿದ ಖ್ಯಾತ ನಿರ್ದೇಶಕ ಪಾ.ರಂಜಿತ್

Most read

ಎ.ಆರ್.ಸಾಯಿರಾಮ್ ಕಥೆ,ಚಿತ್ರಕಥೆ, ಸಂಭಾಷಣೆ ಹಾಗೂ ಗೀತರಚನೆ ಮಾಡಿ ಆಕ್ಷನ್ ಕಟ್ ಹೇಳಿರುವ ವಿನೂತನ ಶೀರ್ಷಿಕೆ ಹೊಂದಿರುವ ’ಧೈರ್ಯಂ ಸರ್ವತ್ರ ಸಾಧನಂ’ (ಡಿಎಸ್‌ಎಸ್) (Dariyam Sarvatra Sadhanam) ಚಿತ್ರದ ಡಿಜಿಟಲ್ ಟೀಸರ್‌ ಅನ್ನು ತಮಿಳು ಸಿನಿಮಾ ನಿರ್ದೇಶಕ ಪಾ.ರಂಜಿತ್ (Pa. Ranjith) ಬಿಡುಗಡೆ ಮಾಡಿ, ಚಿತ್ರ ನೋಡಲು ನಾನು ಉತ್ಸುಕನಾಗಿದ್ದೇನೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಚಿತ್ರದ ಟೀಸರ್‌ ಅನ್ನು ನಟ ವಸಿಷ್ಠ ಸಿಂಹ (Vasishtha Simha)ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ. ನಂತರ ಮಾತನಾಡಿದ ಅವರು ಒಂದು ದೃಶ್ಯದಲ್ಲಿ ಮಲಗಿರುವ ವ್ಯಕ್ತಿಯ ಮೇಲೆ, ಒಬ್ಬರ ಮೇಲೊಬ್ಬರು ಒಟ್ಟು ಮೂರು ಜನ ನಿಂತಿರುವುದು ಕುತೂಹಲ ಕೆರಳಿಸಿದೆ. ಇದನ್ನು ತಿಳಿಯಲು ಚಿತ್ರಮಂದಿರಕ್ಕೆ ತಾವುಗಳು ಬರಬೇಕು ಎಂದು ಕೇಳಿಕೊಂಡಿದ್ದಾರೆ.

ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿ ಚರ್ಚೆಯಾಗುತ್ತಿರುವುದು ತಂಡಕ್ಕೆ ಸಂತಸ ತಂದಿದೆ. ಎಲ್ಲಿಯೂ ಗ್ರಾಫಿಕ್ಸ್ ಬಳಸದೆ ನೈಜತೆಯಲ್ಲಿ ಶೂಟ್ ಮಾಡಿರುವುದು ಸಿನಿಮಾದ ಮತ್ತೊಂದು ವಿಶೇಷ ಎನ್ನಲಾಗಿದೆ.

More articles

Latest article