Wednesday, May 22, 2024

ವಿಜಯವಾಡ | ಜಗತ್ತಿನ ಅತ್ಯಂತ ಎತ್ತರದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಇಂದು ಅನಾವರಣ

Most read

ಜನವರಿ 19 ರಂದು ವಿಜಯವಾಡದಲ್ಲಿ ಉದ್ಘಾಟನೆಗೊಳ್ಳಲಿರುವ ವಿಶ್ವದ ಅತ್ಯಂತ ಎತ್ತರದ ಸಂವಿಧಾ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 125 ಅಡಿ ಪ್ರತಿಮೆ ಅನಾವರಣಕ್ಕೆ ಜನರು ಸ್ವಯಂಪ್ರೇರಿತರಾಗಿ ಆಗಮಿಸುವಂತೆ ಎಪಿ ಸಿಎಂ ವೈಎಸ್ ಜಗನ್ ಕರೆ ನೀಡಿದ್ದಾರೆ.

ಸಾಮಾಜಿಕ ನ್ಯಾಯದ ಪ್ರತಿಮೆ ಹೆಸರಿನಲ್ಲಿ ವಿಜಯವಾಡದ ಬಂದರ್ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಅದ್ಧೂರಿ ಅನಾವರಣವನ್ನು ಸಿಎಂ ಜಗನ್ ಮಾಡಲಿದ್ದು, ಅದ್ಧೂರಿ ಕಾರ್ಯಕ್ರಮಕ್ಕೆ ವಿಜಯವಾಡ ಸಜ್ಜಾಗಿದೆ.

81 ಅಡಿ ಎತ್ತರದ ಪೀಠದ ಮೇಲೆ 125 ಅಡಿಗಳ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇದರ ಒಟ್ಟು ಎತ್ತರ 206 ಅಡಿ. ಇದು ದೇಶದಲ್ಲೇ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ಎಂದು ಹೇಳಲಾಗುತ್ತದೆ. 18.81 ಎಕರೆಯಲ್ಲಿ ಸ್ಮಾರಕ ವನ ಸ್ಥಾಪಿಸಲಾಗಿದೆ. 9 ಎಕರೆ ಸಂಪೂರ್ಣ ಹಸಿರಿನಿಂದ ತುಂಬಿದೆ.

ಗ್ರಂಥಾಲಯದ ಜತೆಗೆ ಅನುಭವ ಕೇಂದ್ರವನ್ನೂ ಇಲ್ಲಿ ಸ್ಥಾಪಿಸಲಾಗಿದೆ. ಕಂಚಿನ ಪ್ರತಿಮೆಯನ್ನು ದೆಹಲಿಯಲ್ಲಿ ಮಾಡಲಾಗಿತ್ತು. ಅದನ್ನು ಭಾಗಗಳಾಗಿ ವಿಜಯವಾಡಕ್ಕೆ ಸ್ಥಳಾಂತರಿಸಿ ನಿಯಮಿತ ರೀತಿಯಲ್ಲಿ ಸ್ಮೃತಿವನದಲ್ಲಿ ಸ್ಥಾಪಿಸಿ ಸುಂದರವಾಗಿ ಅಲಂಕರಿಸಲಾಗಿದೆ.

ನೆಲ ಮಹಡಿಯಲ್ಲಿ ನಾಲ್ಕು ಸಭಾಂಗಣಗಳಿದ್ದು, ಪ್ರತಿಯೊಂದೂ ನಾಲ್ಕು ಸಾವಿರ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಅವುಗಳಲ್ಲಿ ಒಂದು ಸಿನಿಮಾ ಹಾಲ್ ಮತ್ತು ಉಳಿದ ಮೂರು ಹಾಲ್‌ಗಳಲ್ಲಿ ಅಂಬೇಡ್ಕರ್ ಅವರ ಇತಿಹಾಸವನ್ನು ಹೇಳುವ ಡಿಜಿಟಲ್ ಮ್ಯೂಸಿಯಂ ಇರುತ್ತದೆ.

More articles

Latest article