ಜಾರ್ಖಂಡ್ ಮುಖ್ಯಮಂತ್ರಿಯ ದೆಹಲಿ ನಿವಾಸದ ಮೇಲೆ ಇ ಡಿ ಅಧಿಕಾರಿಗ ರೈಡ್

Most read

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ದೆಹಲಿ ನಿವಾಸವನ್ನು ಶೋಧಿಸಿದ ಜಾರಿ ನಿರ್ದೇಶನಾಲಯವು 36 ಲಕ್ಷ ರೂಪಾಯಿ, ಒಂದು ಎಸ್‌ಯುವಿ ಕಾರು ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭೂ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಡರಲ್ ಏಜೆನ್ಸಿಯು ಸೋಮವಾರ ದೆಹಲಿಯ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಅವರ ಶಾಂತಿ ನಿಕೇತನ ಮನೆಯ ಮೇಲೆ ದಾಳಿ ನಡೆಸಿದೆ. ಈ ಕುರಿತು ಇ ಡಿ ಅಧಿಕಾರಿಗಳು ಸೊರೆನ್ ಅವರನ್ನು ಪ್ರಶ್ನಿಸಲು ಸುಮಾರು 13 ಗಂಟೆಗಳ ಕಾಲ ಅಲ್ಲಿಯೇ ಕಾದುಕುಳಿತ್ತಿದ್ದರು ಎಂದು ತಿಳಿದು ಬಂದಿದೆ.

ಇಡೀ ದಿನದ ಕಾರ್ಯಾಚರಣೆಯಲ್ಲಿ ಇ.ಡಿ ಅಧಿಕಾರಿಗಳು ಸುಮಾರು 36 ಲಕ್ಷ ರೂಪಾಯಿ ನಗದು, “ಬೇನಾಮಿ ಹೆಸರಲ್ಲಿ ನೋಂದಾಯಿಸಲಾದ ಬಿಎಂಡಬ್ಲ್ಯು ಕಾರಿನ ನಂಬರ್ ಪ್ಲೇಟ್ ಮತ್ತು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.

More articles

Latest article