Friday, December 6, 2024

ರಾಷ್ಟ್ರಧ್ವಜವನ್ನು ತಾಲಿಬಾನ್‌ ಧ್ವಜ ಎಂದ ಬಿಜೆಪಿ ನಾಯಕ ಸಿ.ಟಿ ರವಿ : ಎಲ್ಲೆಡೆ ಆಕ್ರೋಶ

Most read

ಮಂಡ್ಯದ ಕೆರಗೋಡು ಗ್ರಾಮದಲ್ಲಿ ಉಂಟಾಗಿರುವ ಹನುಮಾನ್ ಧ್ವಜ ವಿವಾದದ ಕುರಿತು ಬಿಜೆಪಿ ನಾಯಕ ಸಿ.ಟಿ ರವಿ ‘ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜ ಎಂದು ಹೇಳಿಕೆ ನೀಡಿದ್ದು’ ಈ ಎಲ್ಲೆಡೆ ವಿರೋಧಕ್ಕೆ ಕಾರಣವಾಗಿದೆ.

ಕೆರಗೋಡು ಗ್ರಾಮದಲ್ಲಿ ಉಂಟಾಗಿರುವ ಹನುಮಾನ್ ಧ್ವಜ ಪರಿಶೀಲಿಸಿದ ಅಧಿಕಾರಿಗಳು ಹನುಮಾನ್ ಧ್ವಜವನ್ನು ಕೆಳಗಿಳಿಸಿ ತ್ರಿವರ್ಣ ಧ್ವಜ ಹಾರಿಸಿದ್ದರು. ಇದಾದ ನಂತರ ರಾಜ್ಯ ಬಿಜೆಪಿ ಜೆಡಿಎಸ್ ಹನುಮಾನ್ ಧ್ವಜ ಇಳಿಸಿ ರಾಷ್ಟ್ರಧ್ವಜ ಹಾರಿಸಿದ್ದನ್ನು ವಿರೋಧಿಸಿದ್ದರು. ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಹಿಂದಿಯಲ್ಲಿ ಮಾತನಾಡಿದ ಸಿ.ಟಿ ರವಿ, “ಹನುಮ ಧ್ವಜವನ್ನು ಕೆಳಗಿಳಿಸಿ ತಾಲಿಬಾನ್‌ ಧ್ವಜವನ್ನು ಹಾರಿಸಿದ್ದಾರೆ” ಎಂದು ಹೇಳಿಕೆ ನೀಡಿದ್ದರು.

ಭಾರತದ ರಾಷ್ಟ್ರಧ್ವಜವನ್ನು ಸಿ.ಟಿ ರವಿ ತಾಲಿಬಾನ್ ಧ್ವಜ ಎಂದು ಹೇಳಿದ್ದು ದೇಶದ್ರೋಹದ ಹೇಳಿಕೆ ಸಿ.ಟಿ ರವಿ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಿ ಎಂದು ಅನೇಕರು ಸಮಾಜಿಕ ಜಾಲತಾಣದಲ್ಲಿ ಸಿಟಿ ರವಿ ವಿರುದ್ಧ ಅಕ್ರೋಶ ಹೊರಹಾಕಿದ್ದಾರೆ.

ರಾಷ್ಟ್ರಧ್ವಜವನ್ನು ಬಿಜೆಪಿ ಮುಖಂಡ ಸಿ.ಟಿ.ರವಿ ತಾಲಿಬಾನ್ ಧ್ವಜ ಎಂದು ಕರೆದಿದ್ದಾರೆ. ರಾಷ್ಟ್ರಧ್ವಜವನ್ನು ಅಪಮಾನಿಸಿದ್ದಾರೆ. ಈ ಕುರಿತು ದೂರು ನೀಡುವುದಾಗಿ ಶಾಸಕ ನರೇಂದ್ರ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

ಸಿ.ಟಿ ರವಿಯ ಹೇಳಿಕೆಗೆ ರಾಜ್ಯ ಕಾಂಗ್ರೆಸ್‌ ಕಿಡಿ:-

ಪವಿತ್ರವಾದ ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸಿದ ದೇಶದ್ರೋಹಿ ಬಿಜೆಪಿಯ ಸಿ.ಟಿ ರವಿ ಎನ್ನುವ ಕೋಮು ಕ್ರಿಮಿ ದೇಶದ ಘನತೆಯನ್ನು ಮಣ್ಣುಪಾಲು ಮಾಡುವ ಹೇಳಿಕೆ ನೀಡಿದ್ದಾರೆ. ತ್ರಿವರ್ಣ ಧ್ವಜ ಈಗ ಬಿಜೆಪಿ ಪ್ರಕಾರ ತಾಲಿಬಾನ್ ಧ್ವಜವಾಗಿದೆಯೇ?. ತ್ರಿವರ್ಣ ಧ್ವಜವನ್ನು ವಿರೋಧಿಸುವ ಆರ್‌.ಎಸ್‌.ಎಸ್‌ನ ಸಿದ್ಧಾಂತವನ್ನು ಬಿಜೆಪಿ ಚಾಚೂ ತಪ್ಪದೆ ಪಾಲಿಸುತ್ತಿದೆ ಎಂದಿದೆ.

ಶ್ರೀ ಗೌರಿ ಶಂಕರ ಟ್ರಸ್ಟ್‌ನವರು ಕನ್ನಡ ಧ್ವಜ ಮತ್ತು ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದು ಕೇಸರಿ ಧ್ವಜ ಹಾರಿಸಿದ್ದರು. ಅದನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಇದಕ್ಕೆ ಬಣ್ಣ ಬಣ್ಣದ ಲೇಪ ಹಚ್ಚಿದ ಬಿಜೆಪಿ ಜೆಡಿಎಸ್ ನಾಯಕರು ಶಾಂತಿ ಕದಡುವ ಹಾಗೂ ಮಂಡ್ಯದ ಸಾಮರಸ್ಯ ಕದಡುವ ಹೇಳಿಕೆಗಳನ್ನು ನೀಡಿ ಪ್ರತಿಭಟನೆಗೆ ಕಡೆ ಕೊಟ್ಟಿದ್ದರು. ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ಕಾರ್ಯಕರ್ತರು ಹಮ್ಮಿಕೊಂಡಿದ್ದ ಕೆರಗೋಡು ಗ್ರಾಮದಿಂದ ಮಂಡ್ಯದವರೆಗೆ ನಡೆದ ಪಾದಯಾತ್ರೆ ವೇಳೆ, ದಾರಿ ಉದ್ದಕ್ಕೂ ರಸ್ತೆಬದಿ ಹಾಕಲಾಗಿದ್ದ ಕಾಂಗ್ರೆಸ್ ನಾಯಕರ ಫ್ಲೆಕ್ಸ್ ಗಳನ್ನು ಬಿಜೆಪಿ ಕಾರ್ಯಕರ್ತರು ಕಿತ್ತು ಹರಿದುಹಾಕಿ ಬೆಂಕಿ ಹಚ್ಚಿ, ಕಲ್ಲು ತೂರಾಟ ಕೂಡ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಪೊಲೀಸರ ಮೇಲೆ ಗೂಂಡಾಗಿರಿ ನಡೆಸಿ ಅನೇಕ ವಾಹನಗಳನ್ನು ಜಖಂಗೊಳಿಸಿದ್ದರು.

ಇಷ್ಟಾದರೂ ಕೂಡ, ಜಾತ್ಯಾತೀತ ಜನತಾದಳದ ನಾಯಕ ಕುಮಾರಸ್ವಾಮಿ ಕೇಸರಿ ಶಾಲು ಹಾಕಿಕೊಂಡು ಡಿಸಿ ಕಚೇರಿಕೆ ಭೇಟಿ ನೀಡಿ ಕಾರ್ಯಕರ್ತರನ್ನು ಮತ್ತಷ್ಟು ಹುರಿದುಂಬಿಸಿದರು.

More articles

Latest article