ವಿಧಿ ಎಂಬುದೇ ಹಾಗೇ ಹುಟ್ಟಿನ ಬಗ್ಗೆ ಒಂದು ಅಂದಾಜಿನ ಲೆಕ್ಕಚಾರವನ್ನಾದರೂ ತಿಳಿಯಬಹುದು. ಆದರೆ ಸಾವಿನ ಲೆಕ್ಕಾಚಾರವನ್ನು ಯಾರಿಂದಲೂ ತಿಳಿಯುವುದಕ್ಕೆ ಆಗುವುದಿಲ್ಲ. ಒಂದು ವೇಳೆ ಯಾರಿಂದಲೋ ಮುನ್ಸೂಚನೆ ಸಿಕ್ಕರು, ವಿಧಿಯಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವೂ ಆಗಿರುವುದಿಲ್ಲ. ನಟಿ ನಿವೇದಿತಾ ಜೈನ್ ಬದುಕಲ್ಲಿ ನಡೆದದ್ದು ಕೂಡ ಅಂಥದ್ದೆ. ನಿವೇದಿತಾ ಜೈನ್ ಬದುಕಿದ್ದು ಕೇವಲ 19 ವರ್ಷ. ಆದರೆ ಹಲವು ಸಿನಿಮಾಗಳಲ್ಲಿ ನಟಿಸಿ, ಎಲ್ಲರನ್ನು ಬಿಟ್ಟು ಹೊರಟೆ ಹೋದರು. ಇಂದಿಗೂ ಅವರ ಸಾವು ಆತ್ಮಹತ್ಯೆಯೋ, ಸಹಜ ಸಾವೋ ಎಂಬ ಪ್ರಶ್ನೆ ಕಾಡುತ್ತದೆ. ಅವರ ತಾಯಿ ಇದಕ್ಕೆಲ್ಲಾ ಉತ್ತರ ಕೊಟ್ಟಿದ್ದಾರೆ.
ರಘುರಾಮ್ ಎಂಬುವವರ ಯೂಟ್ಯೂಬ್ ಚಾನೆಲ್ ನಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಮಗಳ ಸಾವಿನ ಬಗ್ಗೆ ಮಾತನಾಡಿರುವ ಪ್ರಿಯಾ ಜೈನ್, ನಿವೇದಿತಾ ಜೈನ್ 9ನೇ ತರಗತಿ ಓದುತ್ತಿರುವಾಗಲೇ ಮಿಸ್ ಬೆಂಗಳೂರು ಆಗಿದ್ದರು. ಮಿಸ್ ಬೆಂಗಳೂರು ಬಗ್ಗೆ ಪೇಪರ್ ನಲ್ಲಿ ಬಂದಿದ್ದನ್ನು ಅವರ ತಂದೆ ಫೋಟೋ ಕಳುಹಿಸಿಕೊಟ್ಟಿದ್ದರು. ಅವಳಿಗೆ ಕಾಲ್ ಬಂತು. ಅವಳ ಆಗಿನ ಹೈಟ್ ನೋಡಿ 18 ಇರಬಹುದು ಎಂದುಕೊಂಡಿದ್ದರು. ಅವಳಿಗೂ ಆ ಕಾಂಪಿಟೇಷನ್ ನಲ್ಲಿ ಭಾಗವಹಿಸುವ ಆಸೆ ಇತ್ತು. ಅದಾದ ಬಳಿಕ ಅವಳ ಫೋಟೋಗಳು ಪೇಪರ್, ಮ್ಯಾಗಜಿನ್ ನಲ್ಲಿ ಬಂತು. ಡಾ. ರಾಜ್‍ಕುಮಾರ್ ಅವರ ಮಗ ರಾಘವೇಂದ್ರ ರಾಜ್‍ಕುಮಾರ್ ಅವರ ಶಿವರಂಜಿನಿ ಸಿನಿಮಾಗೆ ಆಫರ್ ಬಂತು. ಅವಳು ತುಂಬಾನೇ ಚಿಕ್ಕವಳಿದ್ದಳು. ಹೀಗಾಗಿ ನಾವೂ ಆಸಕ್ತಿ ತೋರಿಸಲಿಲ್ಲ. ಅವಳು ಕೂಡ ಆಸಕ್ತಿ ಇಲ್ಲ ಎಂದಳು. ಆದರೆ ಅಣ್ಣಾವ್ರ ಬ್ಯಾನರ್ ಅಂತ ಒಪ್ಪಿದಳು.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಕುಟುಂಬ ಸಮೇತ ಹೋದೆವು. ಅಲ್ಲಿ ಪೂಜೆ ಮಾಡುತ್ತಿದ್ದ ವ್ಯಕ್ತಿ ಕರೆದು, ನಿಮ್ಮ ಮಗಳಿಗೆ ಅಲ್ಪ ಆಯಸ್ಸು ಎಂದು ಹೇಳಿದರು. ಮನೆಯ ದಿಕ್ಕುಗಳ ಬಗ್ಗೆಯೂ ಹೇಳಿದರು. ಆ ಮನೆ ನಿವೇದಿತಾ ಜೈನ್ ಅನ್ನು ಆಹುತಿ ಪಡೆಯುತ್ತೆ ಅಂತ ಕೂಡ ಹೇಳಿದ್ದರು. ಮನೆ ಬದಲಾಯಿಸಲು ಹೇಳಿದ್ದರು. ಅಲ್ಲಿಂದ ಬಂದ ಮೇಲೆ ಮನೆ ಹುಡುಕಲು ಶುರು ಮಾಡಿದೆವು. ಆದರೆ ಮನೆ ಸಿಗಲೇ ಇಲ್ಲ. ಅವರು ಹೇಳಿದಂತೆಯೇ ಘಟನೆ ನಡೆದು ಹೋಯ್ತು’ ಎಂದು ನಿವೇದಿತಾ ಜೈನ್ ಸಾವು ನೆನೆದು ಕಣ್ಣೀರು ಹಾಕಿದ್ದಾರೆ.