Thursday, July 25, 2024

ಅಣ್ಣಾ ಅಂತ ಕರೆಯೋಕೆ ಒಲ್ಲೆ ಎಂದ ಕರೀನಾ.. ಬಾಯ್ ನಾನ್ ಬಂದೆ ಅಂದ್ರು ನಯನತಾರಾ..!

Most read

ರಾಕಿಂಗ್ ಸ್ಟಾರ್ ಯಶ್ ಈಗ ಸ್ಯಾಂಡಲ್ ವುಡ್ ನ ಮಾಮೂಲಿ ಸ್ಟಾರ್ ಆಗಿ ಉಳಿದಿಲ್ಲ. ಬದಲಿಗೆ ಪ್ಯಾನ್ ಇಂಡಿಯಾದ ಫೇಮಸ್ ಸ್ಟಾರ್ ಆಗಿದ್ದಾರೆ. ರಾಕಿಬಾಯ್ ಜೊತೆಗೆ ನಟಿಸೋಕೆ ನಾ ಮುಂದು ತಾ ಮುಂದು ಅಂತ ನಟಿಮಣಿಯರು ಕ್ಯೂ ನಿಂತಿದ್ದಾರೆ. ಬಾಲಿವುಡ್ ಹೀರೋಯಿನ್ ಗಳು ಕೂಡ ಯಶ್ ಜೊತೆಗೆ ರೊಮ್ಯಾನ್ಸ್ ಮಾಡೋದಕ್ಕೆ ನಾನು ರೆಡಿ ಎನ್ನುತ್ತಿದ್ದಾರೆ. ಕರೀನಾ ಕಪೂರ್ ಕೂಡ ಅದನ್ನೇ ಹೇಳಿದ್ದರು. ಯಶ್ ಜೊತೆಗೊಂದು ಸಿನಿಮಾ ಮಾಡಬೇಕು ಅಂತ. ಆಗಲ ಟಾಕ್ಸಿಕ್ ಸಿನಿಮಾಗೆ ಬೇಬೋಗೆ ಆಫರ್ ನೀಡಲಾಗಿತ್ತು. ಪಾಪ ಬಾಲಿವುಡ್ ಬೇಬೋ ಯಶ್ ಜೊತೆಗೆ ರೊಮ್ಯಾನ್ಸ್ ಮಾಡಬೇಕು ಅಂದ್ರೆ ಅಣ್ಣ ಅಂದ್ರು ಒಪ್ಪುತ್ತಾರಾ. ನೋ ವೇ ಚಾನ್ಸೇ ಇಲ್ಲ‌.

ಕರೀ‌ನಾ ಕಪೂರ್ ಟಾಕ್ಸಿಕ್ ಗೆ ಹಂಗ್ ಬಂದು ಹಿಂಗ್ ಹೋಗಿದ ಕಾರಣ, ಯಶ್ ಗೆ ತಂಗಿಯಾಗಿ ನಟಿಸಲ್ಲ ಅಂತ.‌ ಇದೀಗ ಅಣ್ಣ ತಂಗಿ ಜಾಗ ತುಂಬುವುದಕ್ಕೆ ನಯನಾ ತಾರಾ ಓಡೋಡಿ ಬರುವ ಸಾಧ್ಯತೆ ಇದೆ. ಸದ್ಯದ ಮಾಹಿತಿ ಪ್ರಕಾರ ಟಾಕ್ಸಿಕ್ ನಲ್ಲಿ ಸೂಪರ್ ಬ್ಯೂಟಿ ನಯನಾತಾರಾ, ಯಶ್ ಗೆ ತಂಗಿಯಾಗಿ ನಟಿಸಲು ಅಪ್ರೋಚ್ ಹೋಗಿದೆಯಂತೆ.

ಟಾಕ್ಸಿಕ್ ಗಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಕೆಜಿಎಫ್ ಸಿನಿಮಾ ಆದ್ಮೇಲೆ ಯಶ್ ದೊಡ್ಡ ಪರದೆಯ ಮೇಲೆ ಹೀರೋ ಆಗಿ ಕಾಣಿಸಿಕೊಂಡಿಲ್ಲ. ಹೀಗಾಗಿ ಎಷ್ಟು ಬೇಗ ನಮ್ಮ ಹೀರೋನಾ ನೋಡ್ತಿವೋ ಎಂಬ ಚಿಂತೆ ಅವರದ್ದು. ಅದರ ಜೊತೆಗೆ ರಾಮಾಯಣದಲ್ಲಿ ಹಣ ಹೂಡಿ ಮತ್ತಷ್ಟು ಕ್ರೇಜ್ ಕ್ರಿಯೇಟ್ ಮಾಡಿದ್ದಾರೆ. ಟಾಕ್ಸಿಕ್ ಸಿನಿಮಾಗೆ ಬೇರೆ ಬೇರೆ ಇಂಡಸ್ಟ್ರಿಯಿಂದ ಆರ್ಟಿಸ್ಟ್ ಗಳು ಬರುತ್ತಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

More articles

Latest article