Friday, December 12, 2025

ಪ್ಯಾಶನ್ ಡಿಸೈನ್ ಕೋರ್ಸ್ ಮಾಡಿದ್ದೀರಾ, ಜಾಬ್ ಹುಡುಕುತ್ತಾ ಇದ್ದೀರಾ : ನಟಿ ಸಮಂತಾ ಜೊತೆಗೆ ಕೆಲಸ ಮಾಡುವ ಸುವರ್ಣವಕಾಶ ಇಲ್ಲಿದೆ..!

Most read

ಟಾಲಿವುಡ್ ನಟಿ ಸಮಂತಾ ಸಿನಿಮಾರಂಗದಲ್ಲಿ ಫುಲ್ ಬ್ಯುಸಿಯಾಗಿರುವ ನಟಿ. ಪುಷ್ಪ ಸಿನಿಮಾದಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕುವುದರ ಮೂಲಕ ಎಲ್ಲರ ಗಮನವನ್ನು ಜೋರಾಗಿಯೇ ಸೆಳೆದಿದ್ದರು. ಅದಾದ ಮೇಲೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಆದರೆ ಅದ್ಯಾಕೋ ಅಷ್ಟೊಂದು ಕೈ ಹಿಡಿಯಲಿಲ್ಲ. ಇದರ ನಡುವೆ ಸಮಂತಾ ಆರೋಗ್ಯ ಕೂಡ ಸರಿ ಇಲ್ಲ. ಮಯೋಸೈಟಿಸ್ ಎಂಬ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದಕ್ಕೆ ಚಿಕಿತ್ಸೆಯನ್ನು ಕೂಡ ಪಡೆಯುತ್ತಿದ್ದಾರೆ. ಮನಃಶಾಂತಿಗಾಗಿ ಆಗಾಗ ಪ್ರವಾಸ ಕೂಡ ಹೋಗುತ್ತಾ ಇರುತ್ತಾರೆ. ಈಗ ವಿಚಾರ ಏನಂದ್ರೆ ಅವರ ಜೊತೆಗೆ ಕೆಲಸ ಮಾಡಲು ಆಸೆ ಉಳ್ಳವರಿಗೆ ಅವಕಾಶದ ಬಾಗಿಲು ತೆರೆದಿದೆ.

ನಟಿ ಸಮಂತಾ ಬರೀ ಸಿನಿಮಾ ಮಾತ್ರವಲ್ಲ, ಉದ್ಯಮಿ ಕೂಡ. ಹಲವು ಉದ್ಯಮಗಳ ಮೇಲೆ ಹಣ ಹೂಡಿಕೆ ಮಾಡಿದ್ದಾರೆ. ಟ್ರಾಲಾಲಾ ಮೂವಿಂಗ್ ಪಿಕ್ಚರ್ಸ್ ಅನ್ನೋ ನಿರ್ಮಾಣ ಸಂಸ್ಥೆಯೂ ಇದೆ. ಈ ಸಂಸ್ಥೆಯಡಿ ಈಗಾಗಲೇ ಮಾ ಇಂಟಿ ಬಂಗಾರಂ ಎಂಬ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಸಾಕಿ ಎಂಬ ಗಾರ್ಮೆಂಟ್ ಬ್ರಾಂಡ್ ಅನ್ನು ನಡೆಸುತ್ತಿದ್ದಾರೆ.

ಸದ್ಯ ಈ ಕಂಪನಿಯಲ್ಲಿ ಕೆಲಸ ಖಾಲಿ ಇದೆ. ನೀವೂ ಕೂಡ ಈ ಕಂಪನಿಗೆ ಸೇರಬೇಕೆಂಬ ಆಸಕ್ತಿ ಇದ್ದರೆ ಸಮಂತಾ ಹೇಳಿರುವಂತೆ ಮಾಡಬೇಕಾಗಿದೆ. ನಟಿ ಸಮಂತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪೋಸ್ಟ್ ಒಂದನ್ನು ಹಂಚಿಕೊಂಡು ಮೇಲ್ ಐಡಿ ನೀಡಿದ್ದಾರೆ. ಆ ಮೇಲ್ ಐಡಿಗೆ ಆಸಕ್ತರು ತಮ್ಮ ಸ್ವವಿವರನ್ನು ನೀಡಬಹುದಾಗಿದೆ. ಫ್ಯಾಶನ್ ಡಿಸೈನರ್ ಮ್ಯಾನೇಜ್ಮೆಂಟ್, ಅಸಿಸ್ಟೆಂಟ್ ಮ್ಯಾನೇಜರ್, ಪ್ಯಾಶನ್ ಡಿಸೈನ್ ಎಕ್ಸಿಕ್ಯೂಟಿ, ಬ್ರಾಂಡ್ ಮಾರ್ಕೆಟಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

More articles

Latest article