ಭಾರತ ಆರ್ಥಿಕ ದುರಂತದ ಅಂಚಿನಲ್ಲಿದೆ : ರಾಹುಲ್ ಗಾಂಧಿ ಎಚ್ಚರಿಕೆ

ನಿರುದ್ಯೋಗ, ಶಿಕ್ಷಣ ವ್ಯವಸ್ಥೆಯ ವೈಫಲ್ಯ ಮತ್ತು ದುರ್ಬಲಗೊಂಡ ಉತ್ಪಾದನಾ ವಲಯ : ‘ಮೇಕ್ ಇನ್ ಇಂಡಿಯಾ’, ‘ಸ್ಟಾರ್ಟ್‌ಅಪ್ ಇಂಡಿಯಾ’ ಯೋಜನೆಗಳ ವಿರುದ್ಧ ಟೀಕೆ

ನ್ಯೂಯಾರ್ಕ್: ಭಾರತವು ಬೃಹತ್ ನಿರುದ್ಯೋಗ ಸಮಸ್ಯೆ, ದುರ್ಬಲಗೊಂಡ ಉತ್ಪಾದನಾ ವ್ಯವಸ್ಥೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಆಳವಾದ ಸಮಸ್ಯೆಗಳಿಂದಾಗಿ ‘ಆರ್ಥಿಕ ದುರಂತ’ದ ಸ್ಥಿತಿಯಲ್ಲಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ದೇಶ ಇದೇ ಆರ್ಥಿಕ ಹಾದಿಯಲ್ಲಿ ಮುಂದುವರಿದರೆ ಗಂಭೀರ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಮಂಗಳವಾರ ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಆರ್ಥಿಕ ಮಾದರಿಯು ಸುಮಾರು ಒಂದು ದಶಕದ ಹಿಂದೆಯೇ ನಿರೀಕ್ಷಿತ ಫಲಿತಾಂಶ ನೀಡುವುದನ್ನು ನಿಲ್ಲಿಸಿದೆ ಎಂದು ಅಭಿಪ್ರಾಯಪಟ್ಟರು. ದೇಶದ ಆರ್ಥಿಕತೆಯ ಬೆನ್ನೆಲುಬು ದುರ್ಬಲಗೊಂಡಿದ್ದು, ಅದನ್ನು ಪುನಶ್ಚೇತನಗೊಳಿಸುವಲ್ಲಿ ‘ಮೇಕ್ ಇನ್ ಇಂಡಿಯಾ’ ಮತ್ತು ‘ಸ್ಟಾರ್ಟ್‌ಅಪ್ ಇಂಡಿಯಾ’ ಯೋಜನೆಗಳು ವಿಫಲವಾಗಿವೆ ಎಂದು ಟೀಕಿಸಿದರು.

“ಭಾರತ ಇಂದು ಆರ್ಥಿಕ ದುರಂತದ ಪರಿಸ್ಥಿತಿಯಲ್ಲಿದೆ ಎಂಬುದು ಕಟು ವಾಸ್ತವ. ಮಾಧ್ಯಮಗಳು ಅಥವಾ ಇತರರು ಈ ವಿಚಾರವನ್ನು ನಿರ್ಲಕ್ಷಿಸಬಹುದು. ಆದರೆ ದೇಶದಲ್ಲಿ ಬೃಹತ್ ನಿರುದ್ಯೋಗ ಸಮಸ್ಯೆಯಿದೆ. ಶಿಕ್ಷಣ ವ್ಯವಸ್ಥೆಯಲ್ಲಿಯೂ ಗಂಭೀರ ಸಮಸ್ಯೆಗಳಿವೆ” ಎಂದು ರಾಹುಲ್ ಗಾಂಧಿ ಹೇಳಿದರು.

ಭಾರತದ ಆರ್ಥಿಕತೆಯ ಪ್ರಮುಖ ಆಧಾರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಕೃಷಿ ಕ್ಷೇತ್ರಗಳಾಗಿವೆ. ಇವುಗಳೇ ಉದ್ಯೋಗ ಸೃಷ್ಟಿಯ ಪ್ರಮುಖ ಶಕ್ತಿಗಳಾಗಿವೆ ಎಂದು ಅವರು ಒತ್ತಿ ಹೇಳಿದರು. ದೇಶದ ಉತ್ಪಾದನಾ ವಲಯವನ್ನು ಮತ್ತೆ ಬಲಪಡಿಸುವ ಅಗತ್ಯವಿದೆ ಎಂದರು.

ಸೇವಾ ವಲಯವೊಂದರಿಂದಲೇ ಎಲ್ಲರಿಗೂ ಉದ್ಯೋಗ ಒದಗಿಸಲು ಸಾಧ್ಯವಿಲ್ಲ. ಶೇ.1, 2, 3 ಅಥವಾ 5ರಷ್ಟು ಜನರಿಗೆ ಉದ್ಯೋಗ ನೀಡಬಹುದು. ಆದರೆ ಪ್ರತಿಯೊಬ್ಬರಿಗೂ ಭವಿಷ್ಯ ರೂಪಿಸಿಕೊಡಲು ಸೇವಾ ವಲಯದಿಂದ ಸಾಧ್ಯವಿಲ್ಲ. ಉತ್ಪಾದನಾ ವಲಯದ ಅಗತ್ಯವನ್ನೇ ನಾವು ನಿರ್ಲಕ್ಷಿಸಿದ್ದೇವೆ ಎಂದು ಅವರು ಅಭಿಪ್ರಾಯಪಟ್ಟರು.

ದೇಶದಲ್ಲಿ ಖಾಸಗಿ ಹೂಡಿಕೆ ಏಕೆ ಹೆಚ್ಚುತ್ತಿಲ್ಲ ಎಂಬ ಪ್ರಶ್ನೆಯನ್ನೂ ರಾಹುಲ್ ಗಾಂಧಿ ಎತ್ತಿದರು. ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಅವರಂತಹ ಕೆಲವೇ ಉದ್ಯಮ ಸಮೂಹಗಳು ಬೆಳವಣಿಗೆ ಕಾಣುತ್ತಿವೆ; ಸಣ್ಣ ಮತ್ತು ಮಧ್ಯಮ ಉದ್ಯಮಗಳು ಸಂಕಷ್ಟ ಎದುರಿಸುತ್ತಿವೆ ಎಂದು ಆರೋಪಿಸಿದರು. ಟಾಟಾ ಸಮೂಹದ ಮೇಲೂ ಅದಾನಿ ಪ್ರಭಾವ ಹೆಚ್ಚುತ್ತಿದೆ ಎಂಬರ್ಥದಲ್ಲಿ ಅವರು ಹೇಳಿಕೆ ನೀಡಿದರು.

ಕೊಲಂಬಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭಾರತದ ಆರ್ಥಿಕತೆಯಲ್ಲಿ ಉದ್ಯೋಗ ಸೃಷ್ಟಿಸುವ ಸಣ್ಣ ಉದ್ಯಮಗಳು, ಕೃಷಿ ಮತ್ತು ಉತ್ಪಾದನಾ ವಲಯಗಳಿಗೆ ಆದ್ಯತೆ ನೀಡಬೇಕೆಂದು ಪ್ರತಿಪಾದಿಸಿದರು.

More articles

Latest article

Most read