ಚಲನಚಿತ್ರ ವಾಣಿಜ್ಯ ಮಂಡಳಿ (ಕೆ.ಎಫ್ .ಸಿ .ಸಿ) ಅಧ್ಯಕ್ಷರಾಗಿ ಎಂ. ನರಸಿಂಹಲು ಆಯ್ಕೆ

Most read

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ನರಸಿಂಹಲು. ಎಂ. ಆಯ್ಕೆಯಾಗಿದ್ದಾರೆ. 2024 -25ರ ಸಾಲಿನ ಚುನಾವಣೆ ಕೆ.ಎಫ್ .ಸಿ .ಸಿಗೆ ಚುನಾವಣೆ ನಡೆಯಿತು. ನಿರ್ಮಾಪಕ , ವಿತರಕ ಹಾಗೂ ಪ್ರದರ್ಶಕ ವಲಯಗಳಿಂದ ಒಟ್ಟು 128 ಆಕಾಂಕ್ಷಿಗಳು ಸ್ಪರ್ಧೆಯ ಕಣದಲ್ಲಿದ್ದು, ಇದರಲ್ಲಿ ಈಗಾಗಲೇ 24 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಬಾರಿ ಪ್ರದರ್ಶಕ ವಲಯದಲ್ಲಿ ಅಧ್ಯಕ್ಷ ಸ್ಥಾನ ಮೀಸಲಾಗಿದ್ದು, ವಜೇಶ್ವರಿ ಚಿತ್ರಮಂದಿರದ ಮಾಲೀಕ ಸುಂದರ್ ರಾಜ್. ಆರ್ ವಿರುದ್ಧ ವೈಭವಿ ಚಿತ್ರಮಂದಿರದ ಮಾಲೀಕ ನರಸಿಂಹಲು.ಎಂ ಅವರ ನಡುವೆ ನೇರ ಪೈಪೋಟಿ ನಡೆದಿದ್ದು ಉತ್ತಮ ಅಂತರದಿಂದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ನರಸಿಂಹಲು. ಎಂ.; ನಿರ್ಮಾಪಕ ವಲಯದ ಉಪಾಧ್ಯಕ್ಷರಾಗಿ ವೆಂಕಟೇಶ್ ಕೆ.ವಿ. (ಸಫೇರ್); ವಿತರಕ ವಲಯದ ಉಪಾಧ್ಯಕ್ಷರಾಗಿ ಶಿಲ್ಪ ಶ್ರೀನಿವಾಸ್; ಪ್ರದರ್ಶಕರ ವಲಯದ ಉಪಾಧ್ಯಕ್ಷರಾಗಿ ರಂಗಪ್ಪ ಆಯ್ಕೆಯಾಗಿದ್ದಾರೆ.

ಗೌರವ ಕಾರ್ಯದರ್ಶಿ ರಾಮಕೃಷ್ಣ ಡಿ.ಕೆ. (ನಿರ್ಮಾಪಕರ ವಲಯ); ಎಂ.ಎನ್. ಕುಮಾರ್ (ವಿತರಕ ವಲಯದ ಗೌರವ ಕಾರ್ಯದರ್ಶಿ); ಎಲ್. ಸಿ. ಕುಶಾಲ್ (ಪ್ರದರ್ಶಕರ ವಲಯದ ಗೌರವ ಕಾರ್ಯದರ್ಶಿ) ಮತ್ತು ಖಜಾಂಚಿಯಾಗಿ ಮಾದೇವ್ (ಚಿಂಗಾರಿ) ಆಯ್ಕೆಯಾಗಿದ್ದಾರೆ.

More articles

Latest article