ಬಿಗ್ ಬಾಸ್ ಸೀಸನ್ -10ರ ವಿಜೇತರಾದ ಕಾರ್ತಿಕ್ ಮಹೇಶ್; ಡ್ರೋನ್ ಪ್ರತಾಪ್ ರನ್ನರ್ ಅಪ್

Most read

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಈ ಶೋಗೆ ಅಪಾರ ಜನಮನ್ನಣೆ ದೊರಕಿದೆ. ಇಂದು ಫೈನಲ್ ಶೋ ಇದ್ದು ಬಿಗ್ ಬಾಸ್ 10 ರ ಪಟ್ಟವನ್ನು ಕಾರ್ತಿಕ್ ಮುಡಿಗೇರಿಸಿಕೊಂಡಿದ್ದಾರೆ. ಈ ಸೀಸನ್‌ನಲ್ಲಿ ಅಸಮರ್ಥರಾಗಿ ಬಂದ ಕಾರ್ತಿಕ್ ಮಹೇಶ್ ಅವರು ವಿಜೇತರಾಗಿದ್ದಾರೆ. ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿದ್ದಾರೆ.

ಇಂದು ‘ಬಿಗ್ ಬಾಸ್’ ಕನ್ನಡ ಸೀಸನ್ 10ರ ಫಿನಾಲೆಯಲ್ಲಿ ‘ಟಾಪ್ 3’ ಪಟ್ಟದಲ್ಲಿ ಇರುವುದು ‘ಅಸಮರ್ಥರು’ ಟ್ಯಾಗ್ ಅಡಿಯಲ್ಲಿ ಮನೆಯೊಳಗೆ ಹೋಗಿದ್ದ ಸ್ಪರ್ಧಿಗಳಾಗಿದ್ದರು.

ಹೌದು, ಬಿಗ್ ಬಾಸ್​ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದ್ದು, 6 ಮಂದಿಯಲ್ಲಿ ಒಬ್ಬೊಬ್ಬರೆ ಹೊರಗೆ ಹೋಗ್ತಿದ್ದಾರೆ. ಇಂದು ಮೊದಲು ವರ್ತೂರ್ ಸಂತೋಷ್ ಹೊರಗಡೆ ನಡೆದರೆ. ಅವರಿಂದೆ ವಿನಯ್ ಗೌಡ ಕೂಡ ದೊಡ್ಡ ಮನೆಯಿಂದ ಹೊರಗಡೆ ನಡೆದಿದ್ದಾರೆ. ನಂತರ ಸಂಗೀತ ಎಲಿಮಿನೇಟ್ ಆಗಿದ್ದಾರೆ. ಕಡೆಗೆ ಪಾಪ್ 2 ಸ್ಥಾನದಲ್ಲಿದ್ದ ಕಾರ್ತಿಕ್ ಮತ್ತು ಡ್ರೋನ್ ಪ್ರತಾಪ್ ತಲುಪಿ ನಟ ಕಿಚ್ಚ ಸುದೀಪ್ ಅವರು ಕಾರ್ತಿಕ್ ಅವರ ಕೈ ಮೇಲೆತ್ತಿ ವಿಜೇತರನ್ನು ಘೋಷಿಸಿದ್ದಾರೆ.

ಗೆದ್ದ ವಿಜೇತರಾದ ಕಾರ್ತಿಕ್‌ಗೆ, ಬಿಗ್ ಬಾಸ್ ಸೀಸನ್10 ಕಪ್, ಸೂಜುಕಿ ಬ್ರಿಜಾ ಕಾರು, ಐವತ್ತು ಲಕ್ಷ ಹಣ ಹಾಗೂ ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಇನ್ನಿತರೆ ಬಹುಮಾನಗಳನ್ನು ನೀಡಿದ್ದಾರೆ.

ರನ್ನರ್ ಅಪ್ ಆದ ಪ್ರತಾಪ್ ಗೆ, ಹತ್ತು ಲಕ್ಷ ಹಣ, ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಇನ್ನಿತರೆ ಬಹುಮಾನಗಳನ್ನು ನೀಡಿದ್ದಾರೆ‌.

ಸಂಗೀತಾ, ವಿನಯ್, ಕಾರ್ತಿಕ್​ ಮಹೇಶ್​, ಡ್ರೋನ್ ಪ್ರತಾಪ್​ ಹಾಗೂ ತುಕಾಲಿ ಸಂತೋಷ್, ವರ್ತೂರು ಸಂತೋಷ್ ಬಿಗ್ ಫಿನಾಲೆಗೆ ಬಂದಿದ್ದಾರೆ. ಈ ಬಾರಿ 6 ಮಂದಿ ಫೈನಲಿಸ್ಟ್​ ಆಗಿದ್ದರು.

6 ಫೈನಲಿಸ್ಟ್​ಗಳಲ್ಲಿ ಶನಿವಾರ ಕಾಮಿಡಿ ನಟ ತುಕಾಲಿ ಸಂತೋಷ್ ಮೊದಲು ಎಲಿಮಿನೇಟ್ ಆದರೆ. ಇಂದು ಭಾನುವಾರ ವರ್ತೂರ್ ಸಂತೋಷ್ ಹಾಗೂ ವಿನಯ್ ಗೌಡ, ನಂತರ ಸಂಗೀತ ಎಲಿಮಿನೇಟ್ ಆಗಿದ್ದರು.

More articles

Latest article