‘ಪುನೀತ್‌ ಕೆರೆಹಳ್ಳಿ ಉಪವಾಸದಿಂದ ಸಾಯುತ್ತಿದ್ದಾನೆ’ ಎಂದು ಸುಳ್ಳು ಹರಡಿ, ಶಾಂತಿ ಕದಡಲು ಯತ್ನಿಸಿದವರ ಮೇಲೆ FIR

ಬೆಂಗಳೂರು ಅ. 3: ಕ್ರಿಮಿನಲ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಪುನೀತ್‌ ಕೆರೆಹಳ್ಳಿ ಎಂಬಾತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ಪೋಸ್ಟ್‌ಗಳ ಹಿನ್ನೆಲೆಯಲ್ಲಿ ಬಸವನಗುಡಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ.

ಸೆಪ್ಟೆಂಬರ್‌ 29ರಂದು ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಸಂಖ್ಯೆ 145/2026ರಂತೆ ಪ್ರಕರಣ ದಾಖಲಾಗಿದ್ದು, FIRನಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 192 ಹಾಗೂ 353(1)(b) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಆರೋಪಿಗಳಾಗಿ ಅಪರಿಚಿತ ವ್ಯಕ್ತಿಗಳನ್ನು ನಮೂದಿಸಲಾಗಿದೆ.

ಪೊಲೀಸ್‌ ಠಾಣೆಯ ಸಾಮಾಜಿಕ ಜಾಲತಾಣ ಮೇಲ್ವಿಚಾರಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸೆಪ್ಟೆಂಬರ್‌ 23ರಂದು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಖಾತೆಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಹಲವು ಪೋಸ್ಟ್‌ಗಳು ಗಮನಕ್ಕೆ ಬಂದಿದ್ದಾಗಿ FIRನಲ್ಲಿ ಉಲ್ಲೇಖಿಸಲಾಗಿದೆ.

FIR ಪ್ರಕಾರ, ‘ಪುನೀತ್‌ ಗೌಡ ಹಿಂದೂ’, ‘Samvada’, ‘Ramesh Chavan’, ‘Dileep Gowda Kunigal’, ‘ಶ್ರೀ ಕಾಂತರಾಜ್‌ ರಾಷ್ಟ್ರಪ್ರೇಮಿ’ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪುನೀತ್‌ ಕೆರೆಹಳ್ಳಿ ಎಂಬಾತ ನ್ಯಾಯಕ್ಕಾಗಿ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆ ಎಂಬ ರೀತಿಯ ಪೋಸ್ಟ್‌ಗಳು ಮತ್ತು ವಿಡಿಯೋಗಳು ಪ್ರಕಟವಾಗಿದ್ದವು ಎಂದು ಪೊಲೀಸರು ದಾಖಲಿಸಿದ್ದಾರೆ.

ಕೆಲವು ಪೋಸ್ಟ್‌ಗಳಲ್ಲಿ ಕೆರೆಹಳ್ಳಿ 12 ದಿನಗಳಿಂದ ಉಪವಾಸದಲ್ಲಿದ್ದಾರನೆ ಎಂದು ಹೇಳಲಾಗಿದ್ದು, ಆತನ ಆರೋಗ್ಯಕ್ಕೆ ಯಾವುದೇ ತೊಂದರೆ ಉಂಟಾದರೆ ಅದಕ್ಕೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ದಕ್ಷಿಣ ವಿಭಾಗದ ಡಿಸಿಪಿ ವಂಶಿಕೃಷ್ಣ ನೇರ ಹೊಣೆ ಎಂದು ಆರೋಪಿಸಲಾಗಿತ್ತು ಎಂದು FIRನಲ್ಲಿ ಉಲ್ಲೇಖಿಸಲಾಗಿದೆ. ಮತ್ತೊಂದು ಪೋಸ್ಟ್‌ನಲ್ಲಿ ಕರ್ನಾಟಕ ಸರ್ಕಾರದ ವಿರುದ್ಧವೂ ಆರೋಪಗಳನ್ನು ಮಾಡಲಾಗಿದೆ.

ಈ ನಡುವೆ, ಇಂತಹ ಪೋಸ್ಟ್‌ಗಳ ಸತ್ಯಾಸತ್ಯತೆ ಪರಿಶೀಲಿಸಲು ಪೊಲೀಸರು ಜೈಲು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಪುನೀತ್‌ ಕೆರೆಹಳ್ಳಿ ಉಪವಾಸ ಸತ್ಯಾಗ್ರಹ ನಡೆಸುತ್ತಿಲ್ಲ ಮತ್ತು ಸಾಮಾನ್ಯ ಆಹಾರ ಸೇವಿಸುತ್ತಿದ್ದಾನೆ ಎಂದು ಜೈಲು ಅಧಿಕಾರಿಗಳು ತಿಳಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪೋಸ್ಟ್‌ಗಳು ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಪೋಸ್ಟ್‌ಗಳನ್ನು ಪ್ರಕಟಿಸಿದ ಖಾತೆಗಳ ಹಿಂದಿರುವ ವ್ಯಕ್ತಿಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಸೆಪ್ಟೆಂಬರ್‌ 29ರಂದು ದಾಖಲಾಗಿರುವ ಈ ಪ್ರಕರಣದಲ್ಲಿ, FIRನಲ್ಲಿ ಆರೋಪಿಗಳ ಹೆಸರುಗಳನ್ನು ಸದ್ಯಕ್ಕೆ ಅಪರಿಚಿತ ವ್ಯಕ್ತಿಗಳು ಎಂದು ನಮೂದಿಸಲಾಗಿದೆ.

More articles

Latest article

Most read