ಲೆಬನಾನ್ನಲ್ಲಿ ವಿಶ್ವಸಂಸ್ಥೆ ಶಾಂತಿಸೇನೆ ಮೇಲೆ ಹಲ್ಲೆ: ಭಾರತ ಸೇರಿದಂತೆ 63ಕ್ಕೂ ಹೆಚ್ಚು ದೇಶಗಳ ತೀವ್ರ ಖಂಡನೆ

ನ್ಯೂಯಾರ್ಕ್, ಏಪ್ರಿಲ್ 10: ಲೆಬನಾನ್‌ನ ದಕ್ಷಿಣ ಭಾಗದಲ್ಲಿ ವಿಶ್ವಸಂಸ್ಥೆ  ಶಾಂತಿಸೇನೆ (ಯುಎನ್‌ಐಎಫ್‌ಐಎಲ್) ಮೇಲೆ ನಡೆದ ಗಂಭೀರ ಹಲ್ಲೆಗಳನ್ನು ಫ್ರಾನ್ಸ್, ಇಂಡೋನೇಷ್ಯಾ, ಇಟಲಿ, ಘಾನಾ, ನೇಪಾಳ, ಬಾಂಗ್ಲಾದೇಶ್, ಚೀನಾ, ರಷ್ಯಾ, ಯುಕೆ, ಜರ್ಮನಿ, ಆಸ್ಟ್ರೇಲಿಯಾ, ಜಪಾನ್, ಕೊರಿಯಾ ಸೇರಿದಂತೆ 63 ದೇಶಗಳು ಮತ್ತು ಯುರೋಪಿಯನ್ ಯೂನಿಯನ್ ಬಲವಾಗಿ ಖಂಡಿಸಿವೆ.

ಮಾರ್ಚ್ 29 ಮತ್ತು 30ರಂದು ನಡೆದ ಪ್ರತ್ಯೇಕ ಘಟನೆಗಳಲ್ಲಿ ಇಂಡೋನೇಷ್ಯಾದ ಮೂವರು ಶಾಂತಿಸೇನೆ ಸದಸ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕೆಲವು ಫ್ರಾನ್ಸ್, ಘಾನಾ, ಇಂಡೋನೇಷ್ಯಾ, ನೇಪಾಳ ಮತ್ತು ಪೋಲೆಂಡ್ನ ಶಾಂತಿಸೇನೆ ಸದಸ್ಯರು ಗಾಯಗೊಂಡಿದ್ದಾರೆ.

ಫ್ರಾನ್ಸ್ ಮತ್ತು ಇಂಡೋನೇಷ್ಯಾ ನೇತೃತ್ವದಲ್ಲಿ ಬಿಡುಗಡೆಯಾದ ಸಂಯುಕ್ತ ಹೇಳಿಕೆಯಲ್ಲಿ, “ಶಾಂತಿಸೇನೆಯನ್ನು ಎಂದಿಗೂ ಗುರಿಯಾಗಿಸಬಾರದು. ಅವರ ಸುರಕ್ಷತೆ ಮತ್ತು ಭದ್ರತೆ ಅತ್ಯಂತ ಮುಖ್ಯ” ಎಂದು ಒತ್ತಿ ಹೇಳಲಾಗಿದೆ. ಈ ಹಲ್ಲೆಗಳು ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆಯಾಗಿದ್ದು, ಯುದ್ಧ ಅಪರಾಧವಾಗಬಹುದು ಎಂದು ಆರೋಪಿಸಲಾಗಿದೆ. ಘಟನೆಗಳ ಬಗ್ಗೆ ಪಾರದರ್ಶಕ ತನಿಖೆ ನಡೆಸಿ, ತಪ್ಪಿತಸ್ಥರನ್ನು ಜವಾಬ್ದಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ಭಾರತದ ಸಂಬಂಧ: ಭಾರತವು ಯುಎನ್ ಶಾಂತಿ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿರುವ ಅತ್ಯಂತ ದೊಡ್ಡ ದೇಶಗಳಲ್ಲಿ ಒಂದು. ಪ್ರಸ್ತುತ ಯುಎನ್‌ಐಎಫ್‌ಐಎಲ್‌ನಲ್ಲಿ 642 ಭಾರತೀಯ ಶಾಂತಿಸೇನೆ ಸದಸ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಭಾರತವು ಈ ಹಲ್ಲೆಗಳನ್ನು ಖಂಡಿಸಿದ್ದು, ಶಾಂತಿಸೇನೆಯ ಸುರಕ್ಷತೆಗೆ ಹೆಚ್ಚಿನ ರಕ್ಷಣೆ ನೀಡುವಂತೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಲೆಬನಾನ್‌ನಲ್ಲಿ ಮಾರ್ಚ್ 2ರಿಂದ ಹೆಚ್ಚಾದ ಉದ್ವಿಗ್ನತೆಯಿಂದ ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿರುವ ಕುರಿತು ಆತಂಕ ವ್ಯಕ್ತಪಡಿಸಲಾಗಿದೆ. ವಿಶಸಂಸ್ಥೆ ಭದ್ರತಾ ಮಂಡಳಿ ನಿರ್ಣಯ 1701 ಪೂರ್ಣವಾಗಿ ಅನುಷ್ಠಾನಗೊಳಿಸಿ, ಶಾಂತಿ ಒಪ್ಪಂದಕ್ಕೆ ಮರಳಬೇಕು ಎಂದು ಕರೆ ನೀಡಲಾಗಿದೆ.

ಈ ಸಂಯುಕ್ತ ಹೇಳಿಕೆಯನ್ನು ಇಂಡೋನೇಷ್ಯಾ ಮತ್ತು ಫ್ರಾನ್ಸ್ ರಾಯಭಾರಿಗಳು ಯುಎನ್‌ನಲ್ಲಿ ಸಾರ್ವಜನಿಕವಾಗಿ ಓದಿದ್ದಾರೆ. ವಿಶ್ವಸಂಸ್ಥೆ ಶಾಂತಿಸೇನೆಯ ಕಾರ್ಯವನ್ನು ಮುಂದುವರಿಸಲು ಪೂರ್ಣ ಬೆಂಬಲ ನೀಡುವುದಾಗಿ ತಿಳಿಸಲಾಗಿದೆ.

More articles

Latest article

Most read