ಕೋಲಾರ : 18 ವರ್ಷಗಳಿಂದ ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಇಲ್ಲಿನ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮುನೇಶ್ವರ ನಗರದ ಮುರಳಿ ಪ್ರಸಾದ್ (44 ) ಎನ್ನಲಾಗಿದ್ದು ಈತನ ಮೇಲೆ 2011ರಲ್ಲಿ ಅಕ್ರಮ ಗುಂಪು , ಹಲ್ಲೆ ಹಾಗೂ ತಲವೇ ಗಾಯಗೊಳಿಸುವುದು ಸೇರಿದಂತೆ ಗುಂಪು ಕಟ್ಟಿಕೊಳ್ಳುವ ಪ್ರಕರಣ ಒಂದು ದಾಖಲಾಗಿತ್ತು.
2011 ರಿಂದಲೂ ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆತಪ್ಪಿಸಿಕೊಂಡು ವಿದೇಶಕ್ಕೆ ಹೋಗಿ ತಲೆ ಮರೆಸಿಕೊಂಡು ತಿರುಗಾಡುತ್ತಿದ್ದ ನಿನ್ನ ಲಾಗಿದ್ದು ಕಳೆದ ಎರಡು ದಿನಗಳ ಹಿಂದೆ ಎಷ್ಟೇ ಆರೋಪಿ ಮುರಳಿ ಪ್ರಸಾದ್ ಮುನೇಶ್ವರ ನಗರದ ತನ್ನ ಮನೆಗೆ ಬಂದಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ
ನಗರ ಠಾಣೆ ಪಿಎಸ್ಐ ಸಂಗಪ್ಪ ಮೇಟಿ ಹಾಗೂ ಪೇದೆಗಳಾದ ಎಮ್ ಶೇಖರ್ ಹಾಗೂ ನವೀನ್ ಕುಮಾರ್ ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪೊಲೀಸರ ಈ ಕ್ರಮಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಕನ್ನಿಕಾ ಸುಕ್ರಿ ಪಾಲ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

