ಪ್ರೊ. ಪದ್ಮನಾಭ ಗೌಡರ ವೃತ್ತಿ ಬದುಕಿನ ನೆನಪಿನ ʼಪ್ರಮೇಯʼ ಕೃತಿ ಬಿಡುಗಡೆ

ಕಾರ್ಕಳ : ಕಾರ್ಕಳ ಭುವನೇಂದ್ರ ಕಾಲೇಜಿನ ಗಣಿತ ಪ್ರಾಧ್ಯಾಪಕ, ವಿಶ್ರಾಂತ ಪ್ರಾಂಶುಪಾಲ ಪ್ರೊ. ಬಿ. ಪದ್ಮನಾಭ ಗೌಡರ ವೃತ್ತಿ ಬದುಕಿನ ಪುಟಗಳನ್ನೊಳಗೊಂಡ ʼಪ್ರಮೇಯʼ ಕೃತಿ ಅವರ ಸ್ವಗೃಹ ʼಶ್ರೀಗುರುʼ ವಿನಲ್ಲಿ ಬಿಡುಗೊಂಡಿತು.

ಈ ಕಾರ್ಯಕ್ರಮದ ಕುರಿತು ಮಾತಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆಯವರು   ʼವಾರ್ಡನ್‌ ಆಗಿ ಬಹಳಷ್ಟು ಜನಪ್ರಿಯ ಕೆಲಸಗಳನ್ನು ಮಾಡಿದವರು ನನ್ನಣ್ಣ ಪದ್ಮನಾಭ ಗೌಡರು. ಮಲೇಶಿಯಾ, ಕೊರಿಯಾ ದೇಶದ ವಿದ್ಯಾರ್ಥಿಗಳ ಸಹಿತ ಪೊಲೀಸ್‌ ಸ್ಟೇಶನ್‌, ಹೆತ್ತವರ ದೂರುಗಳು, ವಿದ್ಯಾರ್ಥಿಗಳ ತುಂಟ ವರ್ತನೆಗಳನ್ನು ಎದುರಿಸುತ್ತಲೇ ಹಾಸ್ಟೆಲ್‌ ನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವ ಅವರ ವಾರ್ಡನ್‌ ವ್ಯಾಪ್ತಿ ತುಂಬ ದೊಡ್ಡದು.  ಕನ್ನಡ  ಸಾಹಿತ್ಯಕ್ಕೆ ಆತ್ಮಕತೆ, ಕಾದಂಬರಿಗಳು  ಬೇಕಾದಷ್ಟು ಬಂದಿವೆ. ಆದರೆ  ವಾರ್ಡನ್‌ ಅನುಭವದ ಮೇಲಿನ  ಕೃತಿಗಳು ಬಂದಿಲ್ಲ. ಶ್ರೀನಿವಾಸ ಮೂರ್ತಿಯವರ  ಪ್ರಾಥಮಿಕ ಶಾಲೆಯ ಇನ್‌ಸ್ಪೆಕ್ಟರ್ ಕುರಿತ ಪುಸ್ತಕ ಒಂದು ಮಾತ್ರ ಬಂದಿದೆ. ನೀವು ಬರೆಯಿರಿ ಅಂದೆ.  ಆಸಕ್ತಿಯಲ್ಲಿ ಬರೆದರು. ಹೀಗೆ ರೂಪುಗೊಂಡ  ಈ ಪ್ರಮೇಯ ಪುಸ್ತಕ ಅಪರೂಪದ ಕೃತಿಯಾಗಿದ್ದು ಮುಂದಿನ ತಲೆಮಾರಿಗೆ ಒಂದು ಪಾಠವಾಗಲಿದೆ ಎಂದರು.

ನಿವೃತ್ತ ಪ್ರಾಧ್ಯಾಪಕ ದೇವಿದಾಸ್‌ ಕಾಮತ್  ಪ್ರಮೇಯ ಕೃತಿಯನ್ನು ಬಿಡುಗಡೆ ಮಾಡಿ ಪ್ರೊ. ಗೌಡರ ಜತೆ  ಆತ್ಮೀಯತೆ ಬೆಳೆದದ್ದು ಅವರು ಪ್ರಾಂಶುಪಾಲರಾದ ಮೇಲೆ. ಅವರು ಯಕ್ಷಗಾನ ಕಲಾವಿದನಾಗಿರುವುದು ಯಕ್ಷಗಾನದ  ಹಿನ್ನೆಲೆಯಿಂದ ಬಂದ ನನ್ನನ್ನು ಸಹಜವಾಗಿ ಅವರತ್ತ  ಆಕರ್ಷಿಸಿತು. ಮುಂದೆ ನನ್ನ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಅವರ ಅಪಾರ ಕೊಡುಗೆಯಿದೆ ಎಂದು ಹೇಳಿದರು.

ಕನ್ನಡ ಅಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಕೃತಿಯ ಲೇಖಕರೊಂದಿಗೆ

ಮುಂದುವರಿದು, ಅವರ ಆಸಕ್ತಿಯ ಕ್ಷೇತ್ರ ವಿಸ್ತಾರವಾದುದು. ಕಲೆ,  ಸಂಗೀತ ಸಾಹಿತ್ಯ, ನೈತಿಕ  ಆಧ್ಯಾತ್ಮಿಕ ಚಿಂತನೆಗಳ ಒಲವು ಈ ಎಲ್ಲವನ್ನೂ ಅವರು ಮೈಗೂಡಿಸಿಕೊಂಡಿದ್ದಾರೆ. ಇಷ್ಟೊಂದು  ಕ್ಷೇತ್ರಗಳಲ್ಲಿ  ಆಸಕ್ತಿ ವಹಿಸುತ್ತಾ ಕೌಟುಂಬಿಕ ಹಾಗೂ ಸಾಮಾಜಿಕ ಕಾಳಜಿಯನ್ನು ಸಮತೋಲನ ಮಾಡಿರುವುದು ಅದ್ಭುತ.  ಹೀಗೆ ಸಮತೋಲನ ಮಾಡುವುದು ಓರ್ವ ಮಾನವತಾವಾದಿಗೆ ಮಾತ್ರ ಸಾಧ್ಯ ಎಂದ ಅವರು ಎಷ್ಟೋ ಮಂದಿ ಯಕ್ಷಗಾನ ಕಲಾವಿದರಿಗೆ, ವಿದ್ಯಾರ್ಥಿಗಳಿಗೆ  ಸದ್ದು ಗದ್ದಲವಿಲ್ಲದೆ ಅವರು ಮಾಡಿದ ಆರ್ಥಿಕ ಸಹಾಯವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಇಂದು ಸಮಾಜ, ಕಾರ್ಕಳದ ಜನತೆ  ಅವರನ್ನು ಗುರುತಿಸುವುದು ಓರ್ವ ಮಾನವತಾವಾದಿಯಾಗಿ, ಒಳ್ಳೆಯ ವಾರ್ಡನ್‌ ಆಗಿ, ಕಲಾವಿದನಾಗಿ  ಎಲ್ಲಕ್ಕಿಂತ ಹೆಚ್ಚು ಶ್ರೇಷ್ಠ ಅಧ್ಯಾಪಕನಾಗಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಹುಮುಖ ಪ್ರತಿಭೆಯ ಪ್ರೊಫೆಸರ್‌ ಅವರು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ದಾಟಿಸಲು ಆರಂಭಿಸಿದ ‘ಯಕ್ಷ ಕಲಾರಂಗ’ ಒಂದು ಅದ್ಭುತ ಪ್ರಯತ್ನ ಎಂದ ಬೇಬಿ ಈಶ್ವರ ಮಂಗಲ ಅವರು, “ದೀಪ ಮಾತಾಡುವುದಿಲ್ಲ, ದೀಪದ ಬೆಳಕೇ ಅದನ್ನು ಸಾರುತ್ತದೆ” ಎಂಬ ಮಾತು ಇವರ ವ್ಯಕ್ತಿತ್ವಕ್ಕೆ ಹೆಚ್ಚು ಹೊಂದುತ್ತದೆ ಎಂದು ಶ್ಲಾಘಿಸಿದರು.

ಕೃತಿಯ ಲೇಖಕ ಪ್ರೊ. ಪದ್ಮನಾಭ ಗೌಡರು “ ಇದೊಂದು ರೀತಿಯ ಕೌಟುಂಬಿಕ ಕಾರ್ಯಕ್ರಮ, ಈ ಪುಸ್ತಕವೂ ಕುಟುಂಬಸ್ಥರ ಪುಸ್ತಕ ಅನ್ನುವುದೇ ಹೆಚ್ಚು ಸರಿ. ನನ್ನ ಪುಸ್ತಕಕ್ಕೆ ʼಪ್ರಮೇಯʼ ಎಂದು ಹೆಸರಿಸಿದ್ದೇನೆ. ಪ್ರಮೇಯಗಳು ನನ್ನ ಬದುಕಿಗೂ ಅನ್ವಯವಾಗುತ್ತವೆ. ಗಣಿತದಲ್ಲಿ ಪ್ರತಿದಿನವೂ ಪ್ರಮೇಯಗಳು ಕಾಣುತ್ತವೆ. ಇದರಲ್ಲಿ ವಿದ್ಯಾರ್ಥಿಗಳ ಜೀವನದ ಪ್ರಾರಂಭದಲ್ಲಿ ಶಿಸ್ತುಬದ್ಧತೆ , ಪ್ರಾಮಾಣಿಕತೆ ಕಠಿಣ ಪರಿಶ್ರಮ ಇದ್ದರೆ ಮಾತ್ರ ಒಳ್ಳೆಯ ಫಲಿತಾಂಶ ಸಿಗಲು ಸಾಧ್ಯ ಎಂಬ ಥಿಯರಿ ಇದೆ ಎಂದರು.

ಪ್ರೊ ಗೌಡರ ಸಹೋದ್ಯೋಗಿಗಳಾದ ಪಾಂಡುರಂಗ ನಾಯಕ್‌, ವಿಜಯ ಕುಮಾರಿ, ಶಕುಂತಲ ಮತ್ತು ಕುಟುಂಬ ಮಿತ್ರ ಚಿಕ್ಕಮಗಳೂರಿನ ಸತ್ಯನಾರಾಯಣ  ಮಾತಾಡಿ ಗೌಡರೊಂದಿಗಿನ ಒಡನಾಟದ ಕ್ಷಣಗಳನ್ನು ಹಂಚಿಕೊಂಡರು. ಕುಟುಂಬಸ್ಥರ ಪರವಾಗಿ ಪರಮೇಶ್ವರ ಬಿಳಿಮಲೆ ತನ್ನ ಅಣ್ಣನೊಂದಿಗಿನ ಶಾಲಾ ದಿನಗಳನ್ನು ಮೆಲುಕು ಹಾಕಿದರಲ್ಲದೆ ಕುಟುಂಬದ ಹಿರಿಯನಾಗಿ ಇಂದಿಗೂ ಆತ ಕಾಯ್ದುಕೊಂಡ ಆಪ್ತ ಸಂಬಂಧವನ್ನು ಸ್ಮರಿಸಿದರು.

ಗೌಡರ ಸಹೋದ್ಯೋಗಿಗಳು, ಬಂಧುಗಳು, ಹಿತೈಷಿಗಳು , ಗೆಳೆಯರು ಉಪಸ್ಥಿತರಿದ್ದ ಈ ಕಾರ್ಯಕ್ರಮವನ್ನು ಮಣಿಪಾಲ ಎಂ.ಐ.ಟಿ.ಯ ಸಹ ಪ್ರಾಧ್ಯಾಪಕಿ ಹಾಗೂ ಲೇಖಕರ ಮಗಳು ಸ್ವಾತಿ ಬಿ. ಪಿ. ಗೌಡ ಸಂಯೋಜಿಸಿದರು. ಗುಲಾಬಿ ಬಿಳಿಮಲೆ ವಂದಿಸಿದರು.

More articles

Latest article

Most read