ಕೈಗೆಟುಕದ ದರ : ವಂದೇ ಭಾರತ್‌ ರೈಲು ಪ್ರಯಾಣಿಕರ ಜೇಬಿಗೆ ಕತ್ತರಿ

ವಂದೇ ಭಾರತ್ ರೈಲಿನ ನಿಜವಾದ ಪ್ರಯೋಜನವೇನು? ದುಬಾರಿ ಟಿಕೆಟ್ ದರಕ್ಕೆ ಪ್ರಯಾಣಿಕರಿಗೆ ದೊರೆಯುವ ಹೆಚ್ಚುವರಿ ಸೌಲಭ್ಯ ಮತ್ತು ಸಮಯ ಉಳಿತಾಯ ಎಷ್ಟು? ಈ ಮಾರ್ಗದಲ್ಲಿ ರೈಲಿನ ಸರಾಸರಿ ವೇಗವನ್ನು ಹೆಚ್ಚಿಸಲು ರೈಲ್ವೆ ಇಲಾಖೆ ಏನು ಕ್ರಮ ಕೈಗೊಳ್ಳಲಿದೆ? ಭಾರತೀಯ ರೈಲ್ವೆ ಈ ಬಗ್ಗೆ ಸ್ಪಷ್ಟನೆ ನೀಡಬೇಕು – ಒಲಿವರ್‌ ಡಿʼಸೋಜಾ, ಮುಂಬೈ.

ಭಾರತೀಯ ರೈಲ್ವೆ ಆಧುನಿಕ ತಂತ್ರಜ್ಞಾನ, ವೇಗ ಮತ್ತು ಪ್ರಯಾಣಿಕರ ಸೌಲಭ್ಯಗಳ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿದೆ. ವಂದೇ ಭಾರತ್ ರೈಲನ್ನು ಭಾರತದ ಅತ್ಯಂತ ವೇಗದ ರೈಲು ಎಂದು ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತಿದೆ. ಆದರೆ ವಾಸ್ತವದಲ್ಲಿ ಅದರ ವೇಗ ಮತ್ತು ಪ್ರಯಾಣ ದರವನ್ನು ಹೋಲಿಸಿದಾಗ ಪ್ರಯಾಣಿಕರಲ್ಲಿ ನಿರಾಸೆ ಮೂಡುತ್ತದೆ.

ವೇಗದ ಬಗ್ಗೆ ಪ್ರಚಾರ ಮತ್ತು ವಾಸ್ತವ

ಮಡಗಾವ್‌ನಿಂದ ಹೊರಟು ಮಂಗಳೂರು ಜಂಕ್ಷನ್ ಮೂಲಕ ಬೆಂಗಳೂರಿನ ಯಶವಂತಪುರಕ್ಕೆ ಸಂಚರಿಸುವ, ನವೆಂಬರ್ 1ರಂದು ಆರಂಭವಾದ ವಂದೇ ಭಾರತ್ ರೈಲಿನ ಸರಾಸರಿ ವೇಗ ಗಂಟೆಗೆ ಎಷ್ಟಿದೆ ಗೊತ್ತೇ? ವಂದೇ ಭಾರತ್ ರೈಲು ಗಂಟೆಗೆ 250ರಿಂದ 280 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ ಎಂದು ಪ್ರಚಾರ ಮಾಡಲಾಗುತ್ತದೆ. ಆದರೆ ಈ ಮಾರ್ಗದಲ್ಲಿ ಅದರ ನೈಜ ಸರಾಸರಿ ವೇಗ ಗಂಟೆಗೆ 53 ಕಿ.ಮೀ. ಮಾತ್ರ ಎನ್ನುವುದು ಪ್ರಚಾರ ಮತ್ತು ವಾಸ್ತವದ ನಡುವಿನ ಅಂತರವನ್ನು ತೋರಿಸುತ್ತದೆ.

ಹಳೆಯ ರೈಲು ವೇಗದಲ್ಲಿ ಮುಂದಿದೆ!

1998ರ ಮಾರ್ಚ್ 26ರಿಂದ ಮಂಗಳೂರು ಸೆಂಟ್ರಲ್‌ನಿಂದ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್‌ಗೆ ಸಂಚರಿಸುತ್ತಿರುವ ಮತ್ಸ್ಯಗಂಧಾ ಎಕ್ಸ್‌ಪ್ರೆಸ್ ರೈಲಿನ ಸರಾಸರಿ ವೇಗ ಗಂಟೆಗೆ 55 ಕಿ.ಮೀ. ಈ ರೈಲಿನಲ್ಲಿ ಸುಮಾರು 28 ವರ್ಷಗಳ ಹಿಂದೆ ನಿರ್ಮಿಸಲಾದ ಐಸಿಎಫ್ ಕೋಚ್‌ಗಳಿವೆ.

ಸುಮಾರು 28 ವರ್ಷಗಳ ಹಿಂದೆ ಆರಂಭವಾದ ಮತ್ಸ್ಯಗಂಧಾ ರೈಲು, ಹೊಸ ತಂತ್ರಜ್ಞಾನ ಮತ್ತು ಆಧುನಿಕ ಸೌಲಭ್ಯಗಳ ಹೆಸರಿನಲ್ಲಿ ಪರಿಚಯಿಸಲಾದ ವಂದೇ ಭಾರತ್ ರೈಲಿಗಿಂತ ಹೆಚ್ಚಿನ ಸರಾಸರಿ ವೇಗದಲ್ಲಿ ಸಂಚರಿಸುತ್ತಿರುವುದು ಗಮನಾರ್ಹ.

ಟಿಕೆಟ್ ದರ ನಾಲ್ಕೈದು ಪಟ್ಟು ಹೆಚ್ಚು!

ವಂದೇ ಭಾರತ್ ರೈಲಿನ ಟಿಕೆಟ್ ದರ ಇತರ ರೈಲುಗಳಿಗಿಂತ ನಾಲ್ಕೈದು ಪಟ್ಟು ಹೆಚ್ಚಾಗಿದೆ. ಇಷ್ಟೊಂದು ದುಬಾರಿ ದರ ಪಾವತಿಸುವ ಪ್ರಯಾಣಿಕರಿಗೆ ಹೆಚ್ಚಿನ ವೇಗ ಮತ್ತು ಸಮಯ ಉಳಿತಾಯ ದೊರೆಯಬೇಕಲ್ಲವೇ?

ರೈಲ್ವೆ ಇಲಾಖೆ ಉತ್ತರಿಸಲಿ

ವಂದೇ ಭಾರತ್ ರೈಲಿನ ನಿಜವಾದ ಪ್ರಯೋಜನವೇನು? ದುಬಾರಿ ಟಿಕೆಟ್ ದರಕ್ಕೆ ಪ್ರಯಾಣಿಕರಿಗೆ ದೊರೆಯುವ ಹೆಚ್ಚುವರಿ ಸೌಲಭ್ಯ ಮತ್ತು ಸಮಯ ಉಳಿತಾಯ ಎಷ್ಟು? ಈ ಮಾರ್ಗದಲ್ಲಿ ರೈಲಿನ ಸರಾಸರಿ ವೇಗವನ್ನು ಹೆಚ್ಚಿಸಲು ರೈಲ್ವೆ ಇಲಾಖೆ ಏನು ಕ್ರಮ ಕೈಗೊಳ್ಳಲಿದೆ? ಭಾರತೀಯ ರೈಲ್ವೆ ಈ ಬಗ್ಗೆ ಸ್ಪಷ್ಟನೆ ನೀಡಬೇಕು.

ಒಲಿವರ್‌ ಡಿʼಸೋಜಾ

ರೈಲು ಯಾತ್ರಿಸಂಘದ ಕಾರ್ಯಕಾರಿ ಕಾರ್ಯದರ್ಶಿ, ಮುಂಬೈ.

More articles

Latest article

Most read