ಬಾಂಗ್ಲಾದೇಶಕ್ಕೆ ಮರಳಲು ಸಿದ್ಧತೆ: ಹೊಸ ಪಾಸ್‌ಪೋರ್ಟ್‌ಗೆ ಶೇಖ್ ಹಸೀನಾ ಅರ್ಜಿ

ಢಾಕಾ: ದೇಶದಿಂದ ಪದಚ್ಯುತಗೊಂಡು ಎರಡು ವರ್ಷಗಳ ಬಳಿಕ ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ, ತಾಯ್ನಾಡಿಗೆ ಮರಳುವ ಉದ್ದೇಶದಿಂದ ಸೋಮವಾರ ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಬಾಂಗ್ಲಾದೇಶಕ್ಕೆ ಮರಳಲು ಅಗತ್ಯವಿರುವ ಪಾಸ್‌ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿ ಒದಗಿಸುವಂತೆ ಲಂಡನ್‌ನಲ್ಲಿರುವ ಬಾಂಗ್ಲಾದೇಶದ ಉನ್ನತ ರಾಜತಾಂತ್ರಿಕ ಅಧಿಕಾರಿಗೆ ಹಸೀನಾ ಪರ ವಕೀಲರೊಬ್ಬರು ಪತ್ರ ಬರೆದಿದ್ದಾರೆ. ಈ ಪತ್ರವನ್ನು ಇ-ಮೇಲ್ ಮೂಲಕ ಕಳುಹಿಸಲಾಗಿದ್ದು, ಅದರ ಪ್ರತಿಯನ್ನು ಅಸೋಸಿಯೇಟೆಡ್ ಪ್ರೆಸ್ (ಎಪಿ) ಸುದ್ದಿ ಸಂಸ್ಥೆ ಪರಿಶೀಲಿಸಿದೆ.

“ಇದು ಅವರ ತಾಯ್ನಾಡಿಗೆ ಮರಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಹಿಂದಿನ ಆಡಳಿತವು ಅವರ ದಾಖಲೆಗಳನ್ನು ರದ್ದುಗೊಳಿಸಿತ್ತು. ಬಾಂಗ್ಲಾದೇಶದ ಪ್ರಜೆಯಾಗಿ ತಮ್ಮ ಮೂಲಭೂತ ಹಕ್ಕುಗಳನ್ನು ಮರಳಿ ಪಡೆಯಲು ಹಾಗೂ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಲು ಅವರು ಆಶಿಸುತ್ತಿದ್ದಾರೆ” ಎಂದು ಹಸೀನಾ ಅವರ ಸಹಾಯಕ ಅಬು ಒಬೈದಾ ಆರಿನ್ ತಿಳಿಸಿದ್ದಾರೆ.

“ಡಿಸೆಂಬರ್‌ ವೇಳೆಗೆ ಬಾಂಗ್ಲಾದೇಶಕ್ಕೆ ಮರಳಲು ಅವರು ದೃಢ ನಿರ್ಧಾರ ಕೈಗೊಂಡಿದ್ದಾರೆ. ಅವರು ಖಂಡಿತವಾಗಿಯೂ ತಾಯ್ನಾಡಿಗೆ ವಾಪಸಾಗಲಿದ್ದಾರೆ” ಎಂದೂ ಅವರು ಹೇಳಿದ್ದಾರೆ.

ಈ ಕುರಿತು ಬಾಂಗ್ಲಾದೇಶ ಸರ್ಕಾರದಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಇದೇ ವೇಳೆ, ಭಾರತದಲ್ಲಿರುವ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶ ಸರ್ಕಾರ ಒತ್ತಾಯಿಸುತ್ತಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವೆ ಹಸ್ತಾಂತರ ಒಪ್ಪಂದ ಜಾರಿಯಲ್ಲಿರುವುದರಿಂದ ಅವರನ್ನು ಹಸ್ತಾಂತರಿಸಬೇಕು ಎಂದು ವಿದೇಶಾಂಗ ವ್ಯವಹಾರಗಳ ಕಿರಿಯ ಸಚಿವ ಹುಮಾಯುನ್ ಕಬೀರ್ ಗುರುವಾರ ಢಾಕಾದಲ್ಲಿ ಹೇಳಿಕೆ ನೀಡಿದ್ದಾರೆ.

“ನಮಗೆ ಹಸೀನಾ ಅವರ ಹಸ್ತಾಂತರ ಬೇಕಿದೆ. ಅವರನ್ನು ಹಸ್ತಾಂತರಿಸಲಾಗುತ್ತದೆ. ಅವರು ಭಯೋತ್ಪಾದಕಿ ಮತ್ತು ಪರಾರಿಯಾಗಿರುವ ವ್ಯಕ್ತಿ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಆದರೆ, ಭಾರತ ಸರ್ಕಾರ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಲು ನಿರಾಕರಿಸಿದೆ.

2024ರ ಆಗಸ್ಟ್ 5ರಂದು ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಭಾರೀ ಪ್ರತಿಭಟನೆ ಹಸೀನಾ ಅವರ ಆಡಳಿತ ಪತನಕ್ಕೆ ಕಾರಣವಾಗಿತ್ತು. ಬಳಿಕ ಬಾಂಗ್ಲಾದೇಶದ ಸೇನೆ ಅವರನ್ನು ಭಾರತಕ್ಕೆ ಕಳುಹಿಸಿತ್ತು.

ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದಡಿ 2025ರಲ್ಲಿ ವಿಶೇಷ ನ್ಯಾಯಮಂಡಳಿ ಹಸೀನಾ ಅವರಿಗೆ ಮರಣದಂಡನೆ ವಿಧಿಸಿತ್ತು. ಪ್ರತಿಭಟನೆಯನ್ನು ಹತ್ತಿಕ್ಕಲು ಅವರು ಆದೇಶ ನೀಡಿದ್ದರಿಂದ ನೂರಾರು ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ ಎಂದು ನ್ಯಾಯಮಂಡಳಿ ತೀರ್ಪಿನಲ್ಲಿ ಹೇಳಿತ್ತು. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, ಈ ಹಿಂಸಾಚಾರದಲ್ಲಿ ಸುಮಾರು 1,400 ಮಂದಿ ಮೃತಪಟ್ಟಿದ್ದಾರೆ.

ಆದರೆ, ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ಶೇಖ್ ಹಸೀನಾ ನಿರಾಕರಿಸಿದ್ದಾರೆ. ನ್ಯಾಯಮಂಡಳಿಯ ತೀರ್ಪನ್ನೂ ತಿರಸ್ಕರಿಸಿರುವ ಅವರು, ವಿಚಾರಣೆಯ ನ್ಯಾಯಸಮ್ಮತತೆ ಮತ್ತು ನ್ಯಾಯಮಂಡಳಿಯ ಸಿಂಧುತ್ವವನ್ನೇ ಪ್ರಶ್ನಿಸಿದ್ದಾರೆ.

ಹಸೀನಾ ಅಧಿಕಾರದಿಂದ ಕೆಳಗಿಳಿದ ಬಳಿಕ ಮಧ್ಯಂತರ ಸರ್ಕಾರ ಬಾಂಗ್ಲಾದೇಶದ ಆಡಳಿತ ನಡೆಸಿತ್ತು. ಫೆಬ್ರವರಿಯಲ್ಲಿ ನಡೆದ ಚುನಾವಣೆಯಲ್ಲಿ ಹಸೀನಾ ಅವರ ಅವಾಮಿ ಲೀಗ್ ಪಕ್ಷಕ್ಕೆ ಸ್ಪರ್ಧಿಸಲು ಅವಕಾಶ ನೀಡಿರಲಿಲ್ಲ. ಅವರ ದೀರ್ಘಕಾಲದ ರಾಜಕೀಯ ಎದುರಾಳಿಯ ಪುತ್ರ ತಾರಿಕ್ ರೆಹಮಾನ್ ಭರ್ಜರಿ ಗೆಲುವಿನೊಂದಿಗೆ ಅಧಿಕಾರಕ್ಕೆ ಬಂದಿದ್ದಾರೆ.

More articles

Latest article

Most read