30 ಐಟಿ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಖುದ್ದಾಗಿ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರು

ಐಟಿ ಸಂಸ್ಥೆಗಳಿಂದ ನಿರೀಕ್ಷೆಗೂ ಮೀರಿದ ಸಕಾರಾತ್ಮಕ ಪ್ರತಿಕ್ರಿಯೆ

ಬೆಂಗಳೂರು : ಮಹದೇವಪುರ ವ್ಯಾಪ್ತಿಯ ಬ್ರಿಗೇಡ್ ಸಂಕೀರ್ಣದಲ್ಲಿ ಇಂದು ಸುಮಾರು ಮೂವತ್ತು ಐಟಿ ಸಂಸ್ಥೆಗಳ ಮಾನವ ಸಂಪನ್ಮೂಲ ಅಧಿಕಾರಿಗಳ ಜೊತೆ ಕರವೇ ನಿಯೋಗ ಸಭೆ ನಡೆಸಿ ಎಲ್ಲಾ ಸಂಸ್ಥೆಗಳಿಗೂ ಆಗ್ರಹ ಪತ್ರ ಸಲ್ಲಿಸಿತು. 

ಎಲ್ಲಾ ಸಂಸ್ಥೆಗಳ ಪ್ರತಿನಿಧಿಗಳು ಕರವೇ ಮುಖಂಡರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ವಿಶೇಷವೆಂದರೆ ಕರವೇ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣ ಗೌಡರು ವೀಡಿಯೋ ಕಾಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡು ಆಗ್ರಹ ಅಭಿಯಾನದ ಉದ್ದೇಶವನ್ನು ವಿವರಿಸಿದರು. ಕರವೇ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸುವುದಾಗಿ ಎಲ್ಲಾ ಸಂಸ್ಥೆಗಳ ಪ್ರತಿನಿಧಿಗಳು ಭರವಸೆ ನೀಡಿದರು.

ಗೂಗಲ್ ಸಂಸ್ಥೆ, ಜೆ. ಪಿ. ಮಾರ್ಗನ್,   ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್,   ಎಕ್ಸ್ಸೆಂಚರ್ ಪ್ರೈವೇಟ್ ಲಿಮಿಟೆಡ್,   ಬನ್ನೇರುಘಟ್ಟ ರಸ್ತೆಯ ಒರಾಕಲ್ ಸಂಸ್ಥೆಗೆ ಮನವಿ ಸಲ್ಲಿಸಲಾಯಿತು

 ಕರವೇ ರಾಜ್ಯ ಉಪಾಧ್ಯಕ್ಷ ವೀರಭದ್ರ  ನೇತೃತ್ವ ವಹಿಸಿದ್ದರು. ಕರವೇ ಮಹದೇವಪುರ ಕ್ಷೇತ್ರದ ಅಧ್ಯಕ್ಷ ಲೋಹಿತ್, ಕೆ. ಆರ್. ಪುರ ಕ್ಷೇತ್ರದ ಅಧ್ಯಕ್ಷ ಮಂಜುನಾಥ್ , ಮುಖಂಡರಾದ ರಾಮ, ಲಕ್ಷ್ಮಣ, ಆನಂದ್, ನಾಗರಾಜ್ ಮುಂತಾದವರು ತಂಡದಲ್ಲಿ ಇದ್ದರು.

More articles

Latest article

Most read