ನಟ ಧನ್ವೀರ್ ವಿರುದ್ಧ ವಿಜಯಲಕ್ಷ್ಮೀ ಖಾಸಗಿ ದೂರು: ನವೆಂಬರ್ 30ಕ್ಕೆ ವಿಚಾರಣೆ ಮುಂದೂಡಿಕೆ

ಮಾನಹಾನಿಕಾರಕ ಹೇಳಿಕೆ ನೀಡಿದ ಆರೋಪ; ಆಡಿಯೋ, ಸಂದೇಶಗಳು ಸೇರಿದಂತೆ ಸಾಕ್ಷ್ಯ ಸಲ್ಲಿಸಲು ಸಿದ್ಧ ಎಂದ ದರ್ಶನ್ ಪತ್ನಿ

ಬೆಂಗಳೂರು, ನ.02 : ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ನಟ ಧನ್ವೀರ್ ವಿರುದ್ಧ ಮಾನಹಾನಿ ಆರೋಪದಡಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವ ಆರೋಪದ ಮೇಲೆ ಧನ್ವೀರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನಗರದ 37ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದಾರೆ.

ಅಕ್ಟೋಬರ್ 31ರಂದು ಸಲ್ಲಿಸಿರುವ ದೂರಿನಲ್ಲಿ, ಧನ್ವೀರ್ ಅವರು ಧ್ವನಿಮುದ್ರಿಕೆ ಹಾಗೂ ಸಂದೇಶಗಳ ಮೂಲಕ ತಮ್ಮ ವಿರುದ್ಧ ಮಾನಹಾನಿಕಾರಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ವಿಜಯಲಕ್ಷ್ಮೀ ಆರೋಪಿಸಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಆಡಿಯೋ ರೆಕಾರ್ಡಿಂಗ್‌ಗಳು, ಎಲೆಕ್ಟ್ರಾನಿಕ್ ದಾಖಲೆಗಳು ಸೇರಿದಂತೆ ಅಗತ್ಯ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.

ಬಿಎನ್‌ಎಸ್‌ಎಸ್ ಸೆಕ್ಷನ್ 222(1)ರ ಅಡಿಯಲ್ಲಿ ತಮ್ಮ ದೂರನ್ನು ನೊಂದ ವ್ಯಕ್ತಿಯ ಖಾಸಗಿ ದೂರಾಗಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ವಿಚಾರಣೆಯಲ್ಲಿ ಆರೋಪಕ್ಕೆ ಪ್ರಾಥಮಿಕ ಆಧಾರಗಳು ಕಂಡುಬಂದಲ್ಲಿ, ಬಿಎನ್‌ಎಸ್‌ಎಸ್ ಸೆಕ್ಷನ್ 222ರ ಅಡಿಯಲ್ಲಿ ಧನ್ವೀರ್‌ಗೆ ಸಮನ್ಸ್ ಜಾರಿಗೊಳಿಸುವಂತೆಯೂ ಅರ್ಜಿಯಲ್ಲಿ ಕೋರಿದ್ದಾರೆ.

ವಿಜಯಲಕ್ಷ್ಮೀ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆಯನ್ನು

More articles

Latest article

Most read