ಬಿಎಂಟಿಸಿ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾಮಾನ್ಯ ಹಾಗೂ ವಜ್ರ ಬಸ್‌ಗಳ ಟಿಕೆಟ್ ದರ ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ಬಸ್ ಪ್ರಯಾಣ ದರ ಹೆಚ್ಚಳದ ಬೆನ್ನಲ್ಲೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕೂಡ ವಿವಿಧ ಮಾರ್ಗಗಳ ಪ್ರಯಾಣ ದರವನ್ನು ಪರಿಷ್ಕರಿಸಿದೆ. ಸಾಮಾನ್ಯ ಸೇವೆಗಳು ಹಾಗೂ ಹವಾನಿಯಂತ್ರಿತ ವಜ್ರ ಬಸ್‌ಗಳ ಪ್ರಯಾಣ ದರದಲ್ಲಿ ಹೆಚ್ಚಳ ಮಾಡಲಾಗಿದ್ದು, ದೂರ ಮತ್ತು ಪ್ರಯಾಣದ ಹಂತಕ್ಕೆ ಅನುಗುಣವಾಗಿ ಹೆಚ್ಚುವರಿ ಮೊತ್ತ ನಿಗದಿಪಡಿಸಲಾಗಿದೆ.

ಸಾಮಾನ್ಯ ಬಸ್‌ಗಳಲ್ಲಿ ಸಮೀಪದ ಪ್ರಯಾಣಕ್ಕೆ 2 ಕಿ.ಮೀ.ವರೆಗೆ ₹4 ಹಾಗೂ 2ರಿಂದ 4 ಕಿ.ಮೀ.ವರೆಗಿನ ಪ್ರಯಾಣಕ್ಕೆ ₹6ರಷ್ಟು ದರ ಹೆಚ್ಚಳ ಮಾಡಲಾಗಿದೆ. ದೂರದ ಪ್ರಯಾಣದಲ್ಲಿ ಗರಿಷ್ಠ ₹12ರವರೆಗೆ ದರ ಹೆಚ್ಚಳವಾಗಲಿದೆ.

ಪ್ರಮುಖ ಮಾರ್ಗಗಳ ಪರಿಷ್ಕೃತ ದರ

ಬಿಎಂಟಿಸಿ ಪ್ರಕಟಿಸಿರುವ ದರ ಪಟ್ಟಿಯ ಪ್ರಕಾರ, ಕೆಂಪೇಗೌಡ ಬಸ್ ನಿಲ್ದಾಣದಿಂದ ವಿವಿಧ ಸ್ಥಳಗಳಿಗೆ ತೆರಳುವ ಪ್ರಯಾಣಿಕರಿಗೆ ಹೊಸ ದರಗಳು ಹೀಗಿವೆ:

ಮಾರ್ಗಹಳೆಯ ದರಪರಿಷ್ಕೃತ ದರ
ಕೆಂಪೇಗೌಡ ಬಸ್ ನಿಲ್ದಾಣ–ಶಿವಾಜಿನಗರ₹12₹18
ಕೆಂಪೇಗೌಡ ಬಸ್ ನಿಲ್ದಾಣ–ಯಶವಂತಪುರ₹18₹25
ಕೆಂಪೇಗೌಡ ಬಸ್ ನಿಲ್ದಾಣ–ಬಸವನಗುಡಿ₹23₹35
ಕೆಂಪೇಗೌಡ ಬಸ್ ನಿಲ್ದಾಣ–ಅತ್ತಿಬೆಲೆ₹30₹42
ಕೆಂಪೇಗೌಡ ಬಸ್ ನಿಲ್ದಾಣ–ವಿಜಯನಗರ₹18₹25
ಕೆಂಪೇಗೌಡ ಬಸ್ ನಿಲ್ದಾಣ–ಕಾಡುಗೋಡಿ₹30₹40
ಕೆ.ಆರ್. ಮಾರುಕಟ್ಟೆ–ನೆಲಮಂಗಲ₹30₹40
ಕೆ.ಆರ್. ಮಾರುಕಟ್ಟೆ–ಹೊಸಕೋಟೆ₹30₹40

ಇನ್ನು ಪ್ರಮುಖ ಮಾರ್ಗಗಳ ಪೈಕಿ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳಕ್ಕೆ ಇದ್ದ ₹55ರ ದರ ₹65ಕ್ಕೆ, ಬನಶಂಕರಿಯಿಂದ ಬಿಡಿಟಿಎಮ್‌ಗೆ ಇದ್ದ ₹50ರ ದರ ₹60ಕ್ಕೆ ಏರಿಕೆಯಾಗಿದೆ. ಕೆ.ಆರ್.ಪುರಂನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ ₹40ರಿಂದ ₹55ಕ್ಕೆ, ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕಾಡುಗೋಡಿಗೆ ₹50ರಿಂದ ₹60ಕ್ಕೆ ಹಾಗೂ ಕೆಂಪೇಗೌಡ ಬಸ್ ನಿಲ್ದಾಣದಿಂದ ಅತ್ತಿಬೆಲೆಗೆ ₹60ರಿಂದ ₹70ಕ್ಕೆ ದರ ಪರಿಷ್ಕರಿಸಲಾಗಿದೆ.

ವಜ್ರ ಬಸ್‌ಗಳಿಗೂ ದರ ಹೆಚ್ಚಳ

ಹವಾನಿಯಂತ್ರಿತ ವಜ್ರ ಬಸ್‌ಗಳ ಪ್ರಯಾಣ ದರವನ್ನೂ ಹೆಚ್ಚಿಸಲಾಗಿದೆ. 6 ಕಿ.ಮೀ.ವರೆಗಿನ ಪ್ರಯಾಣಕ್ಕೆ ₹5 ಹಾಗೂ 6ರಿಂದ 18 ಕಿ.ಮೀ.ವರೆಗಿನ ಪ್ರಯಾಣಕ್ಕೆ ₹10 ಹೆಚ್ಚುವರಿ ದರ ವಿಧಿಸಲಾಗುತ್ತದೆ. ದೂರದ ಪ್ರಯಾಣದಲ್ಲಿ ಗರಿಷ್ಠ ₹15ರಷ್ಟು ದರ ಏರಿಕೆ ಮಾಡಲಾಗಿದೆ.

ದರ ಪರಿಷ್ಕರಣೆಯಿಂದ ಪ್ರತಿನಿತ್ಯ ಬಿಎಂಟಿಸಿ ಬಸ್‌ಗಳನ್ನು ಅವಲಂಬಿಸಿರುವ ಸಾವಿರಾರು ಪ್ರಯಾಣಿಕರ ಪ್ರಯಾಣ ವೆಚ್ಚ ಹೆಚ್ಚಾಗಲಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ನಿತ್ಯ ಸಂಚರಿಸುವ ಸಾರ್ವಜನಿಕರ ಮೇಲೆ ಈ ದರ ಏರಿಕೆಯ ಪರಿಣಾಮ ಬೀರಲಿದೆ.

More articles

Latest article

Most read