ಕೋಲಾರ : ನಗರದ ಗಲ್ಪೇಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಇಬ್ಬರು ದ್ವಿಚಕ್ರ ವಾಹನಗಳ ಬಂಧಿಸಿದ್ದಾರಲ್ಲದೆ ಅವರಿಂದ 10 ಲಕ್ಷ ರೂ ಮೌಲ್ಯದ 18 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ಸ್ಪೆಕ್ಟರ್ ಸದಾ ನಂದ ಹಾಗೂ ಪಿಎಸ್ಐ ವಿಟ್ಟಲ್ ವೈ ತಳವಾರ್ ಮತ್ತು ಅವರ ತಂಡ ರಹಮತ್ ನಗರದ ಸುಬೇಬ್ ಪಾಷಾ ಹಾಗೂ ಶಹಂಷಾ ನಗರದ ಮುಷಾಹಿದ್ ಉಲ್ಲಾ ಖಾನ್ ಎಂಬಾತನನ್ನು ಬಂಧಿಸಿದ್ದಾರೆ.
ಕಳೆದ 15ರಂದು ಸಂತೆ ಮೈದಾನದ ಸಮೀಪ ನಂಜುಂಡ ಗೌಡ ಎಂಬುವರಿಗೆ ಸೇರಿದ ದ್ವಿಚಕ್ರ ವಾಹನ ಕಳುವಿಗೆ ಸಂಬಂಧಪಟ್ಟಂತೆ ದೂರು ದಾಖಲಿಸಿಕೊಂಡಿದ್ದ ಗಲ್ಪೇಟೆ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂದಿಸ ವಿಚಾರಣೆ ನಡೆಸಲಾಗಿದೆ.
ಆರೋಪಿಗಳು ಗಲ್ಪೇಟೆ ಪೊಲೀಸ್ ಠಾಣೆ ಸೇರಿದಂತೆ ಕೋಲಾರ ಗ್ರಾಮಾಂತರ, ಪೊಲೀಸ್ ಠಾಣೆ, ಹಾಗೂ ನಂಗಲಿ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಸಾಕಷ್ಟು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದೇವೆಂದು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

