ಆದಿಕವಿ ವಾಲ್ಮೀಕಿ: ರಾಮಾಯಣ ಮತ್ತು ಸಮಕಾಲೀನ ಸಮಾಜದ ವಿಪರ್ಯಾಸಗಳು

ವಾಲ್ಮೀಕಿಯನ್ನು ಆರಾಧಿಸುತ್ತಲೇ ಜಾತಿಯ ಅಸಮಾನತೆಯನ್ನು ಮುಂದುವರಿಸಿದರೆ, ಅದು ಪರಂಪರೆಯ ಆತ್ಮಕ್ಕೆ ವಿರುದ್ಧವಾದ ವಿಪರ್ಯಾಸ. ರಾಮನನ್ನು ಗೌರವಿಸುತ್ತಲೇ ಅವರ ಹೆಸರಿನಲ್ಲಿ ಜನರನ್ನು ವಿಭಜಿಸಿದರೆ, ಆ ಗೌರವದ ನೈತಿಕ ಅರ್ಥವನ್ನೇ ಮರುಪರಿಶೀಲಿಸಬೇಕಾಗುತ್ತದೆ. ಹನುಮಂತನ ಶಕ್ತಿಯನ್ನು ಕೊಂಡಾಡುತ್ತಲೇ ದುರ್ಬಲರ ಧ್ವನಿಯನ್ನು ಹತ್ತಿಕ್ಕಿದರೆ, ಸೇವೆ ಮತ್ತು ಧೈರ್ಯದ ಮೌಲ್ಯಗಳು ಕೇವಲ ಘೋಷಣೆಗಳಾಗಿ ಉಳಿಯುತ್ತವೆ – ಭಾಗ್ಯ ಮರವಾಸಿ, ಉಪನ್ಯಾಸಕರು.

ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ರಾಮಾಯಣವೆಂಬುದು ಕೇವಲ ಒಂದು ಮಹಾಕಾವ್ಯವಲ್ಲ; ಅದು ಈ ನೆಲದ ಸಂಸ್ಕೃತಿ, ಮಾನವ ಸಂಬಂಧಗಳು, ಅಧಿಕಾರದ ಸಂಘರ್ಷಗಳು, ನೈತಿಕ ಸಂದಿಗ್ಧತೆಗಳು ಮತ್ತು ಬಹುಸಂಸ್ಕೃತಿಯ ನೆಲೆಗಳನ್ನು ಅನಾವರಣಗೊಳಿಸುವ ಮಹತ್ವದ ಸೃಜನಶೀಲ ಕೃತಿ. ಆದಿಕವಿ ವಾಲ್ಮೀಕಿ ರಚಿಸಿದ ರಾಮಾಯಣ ಶತಮಾನಗಳಿಂದ ಭಾರತೀಯ ಸಮಾಜದ ಕಲ್ಪನೆ, ಕಲೆ, ಸಾಹಿತ್ಯ, ಜನಪದ ಮತ್ತು ಜೀವನಮೌಲ್ಯಗಳ ಮೇಲೆ ಪ್ರಭಾವ ಬೀರಿದೆ. ಆದರೆ ಇಷ್ಟೊಂದು ವಿಶಾಲವಾದ ಸಾಂಸ್ಕೃತಿಕ ಪರಂಪರೆಯನ್ನು ಇಂದು ನಾವು ಯಾವ ದೃಷ್ಟಿಯಿಂದ ಗ್ರಹಿಸುತ್ತಿದ್ದೇವೆ ಎಂಬ ಪ್ರಶ್ನೆ ಅತ್ಯಂತ ಮಹತ್ವದ್ದು.

ರಾಮಾಯಣವನ್ನು ಓದುವುದು ಒಂದು ಸಾಹಿತ್ಯಿಕ ಕ್ರಿಯೆ. ಅದನ್ನು ಅರ್ಥೈಸುವುದು ಸಾಂಸ್ಕೃತಿಕ ಜವಾಬ್ದಾರಿ. ಆದರೆ ಅದರ ಪಾತ್ರಗಳನ್ನು ನಿರ್ದಿಷ್ಟ ರಾಜಕೀಯ ಸಿದ್ಧಾಂತಗಳ ಪ್ರತಿನಿಧಿಗಳನ್ನಾಗಿ ಮಾಡಿ, ಜನರನ್ನು ಧರ್ಮ, ಜಾತಿ ಮತ್ತು ಸಮುದಾಯಗಳ ಆಧಾರದಲ್ಲಿ ವಿಭಜಿಸುವ ಸಾಧನವನ್ನಾಗಿ ಬಳಸಿದಾಗ, ಮಹಾಕಾವ್ಯದ ವಿಶಾಲ ಮಾನವೀಯ ಆಶಯಗಳೇ ಸಂಕುಚಿತಗೊಳ್ಳುವ ಅಪಾಯ ಎದುರಾಗುತ್ತಿದೆ.

ವಾಲ್ಮೀಕಿಯ ವ್ಯಕ್ತಿತ್ವದ ಕುರಿತು ಭಾರತೀಯ ಪರಂಪರೆಯಲ್ಲಿ ಹಲವು ಕಥನಗಳು ಪ್ರಚಲಿತದಲ್ಲಿವೆ. ಬೇಟೆಗಾರನಿಂದ ಮಹರ್ಷಿಯಾದ ವಾಲ್ಮೀಕಿಯ ಕಥೆ ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು. ಕಾಡಿನೊಂದಿಗೆ ಬದುಕಿನ ಸಂಬಂಧ ಹೊಂದಿದ್ದ ಬೇಟೆಗಾರನೊಬ್ಬ ಮಹಾಕವಿಯಾಗಿ ರೂಪಾಂತರಗೊಳ್ಳುವ ಕಥೆ, ಅನುಭವವು ಜ್ಞಾನವಾಗಿ, ಜ್ಞಾನವು ಸೃಜನಶೀಲತೆಯಾಗಿ ಪರಿವರ್ತನೆಯಾಗುವ ಪ್ರಕ್ರಿಯೆಯನ್ನು ಪ್ರತಿನಿಧಿಸುತ್ತದೆ. ಪ್ರಕೃತಿಯೊಂದಿಗೆ ಒಡನಾಡಿದ ಬದುಕು, ಮಾನವೀಯ ಅನುಭವಗಳ ಗ್ರಹಿಕೆ, ಅಧ್ಯಯನ, ಚಿಂತನೆ ತಪಸ್ಸಿನ ಸಾಂಕೇತಿಕ ಅರ್ಥ—ಇವೆಲ್ಲವೂ ವಾಲ್ಮೀಕಿಯ ವ್ಯಕ್ತಿತ್ವವನ್ನು ವಿಶಾಲವಾಗಿ ಅರ್ಥೈಸಲು ನೆರವಾಗುತ್ತವೆ.

ಐತಿಹಾಸಿಕವಾಗಿ ಅಂಚಿನಲ್ಲಿಟ್ಟ ಸಮುದಾಯಗಳು ತಮ್ಮ ಸಾಂಸ್ಕೃತಿಕ ನಾಯಕರನ್ನು ಮರುಪಡೆಯುವುದು, ತಮ್ಮ ಅಸ್ಮಿತೆಯನ್ನು ಸ್ಥಾಪಿಸುವುದು ಮತ್ತು ಇತಿಹಾಸದಲ್ಲಿ ತಮ್ಮ ಸ್ಥಾನವನ್ನು ಗುರುತಿಸಿಕೊಳ್ಳುವುದು ನ್ಯಾಯಸಮ್ಮತವಾದ ಸಾಮಾಜಿಕ ಪ್ರಕ್ರಿಯೆ. ಆದರೆ ಆ ಮರುಸ್ಥಾಪನೆಯೇ ಒಂದು ವ್ಯಕ್ತಿತ್ವವನ್ನು ನಿರ್ದಿಷ್ಟ ಜಾತಿಯ ಗಡಿಗಳೊಳಗೆ ಬಂಧಿಸಿದರೆ, ಅದರ ವಿಶಾಲವಾದ ಸೃಜನಶೀಲ ಪರಂಪರೆಯನ್ನು ಅರ್ಥೈಸುವ ಅವಕಾಶ ಕುಗ್ಗುತ್ತದೆ. ಅದೇ ರೀತಿ, ಅವರನ್ನು ಕೇವಲ ದೈವತ್ವದ ಪೀಠದ ಮೇಲೆ ಕೂರಿಸಿ, ಅವರ ಸೃಜನಶೀಲತೆ, ಸಾಮಾಜಿಕ ಹಿನ್ನೆಲೆ ಮತ್ತು ಮಾನವೀಯ ಚಿಂತನೆಗಳ ಕುರಿತು ಪ್ರಶ್ನಿಸುವ ಅವಕಾಶವನ್ನು ಮುಚ್ಚುವುದೂ ಸರಿಯಲ್ಲ.

ರಾಮಾಯಣವನ್ನು ಕೇವಲ ರಾಮನ ವಿಜಯದ ಕಥೆಯಾಗಿ ಓದಿದಾಗ ಅದರೊಳಗಿನ ಅನೇಕ ಬದುಕುಗಳು ಮತ್ತು ಸಂಘರ್ಷಗಳು ನಮ್ಮ ಗಮನದಿಂದ ಮರೆಯಾಗುತ್ತವೆ. ರಾಮ, ಸೀತೆ, ಲಕ್ಷ್ಮಣ, ಊರ್ಮಿಳೆ, ಭರತ, ರಾವಣ, ಮಂಡೋದರಿ, ಹನುಮಂತ, ಸುಗ್ರೀವ, ಶಬರಿ—ಪ್ರತಿಯೊಂದು ಪಾತ್ರವೂ ವಿಭಿನ್ನ ಸಾಮಾಜಿಕ ಮತ್ತು ನೈತಿಕ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ.

ರಾಮನ ಬದುಕಿನಲ್ಲಿ ರಾಜಧರ್ಮ ಮತ್ತು ವೈಯಕ್ತಿಕ ಸಂಬಂಧಗಳ ನಡುವಿನ ಸಂಘರ್ಷವಿದೆ. ಸೀತೆಯ ಬದುಕಿನಲ್ಲಿ ಗೌರವ, ಸ್ವಾಯತ್ತತೆ, ಸಾಮಾಜಿಕ ನಿರೀಕ್ಷೆ ಮತ್ತು ಸ್ತ್ರೀಯ ಮೇಲಿನ ಅಧಿಕಾರದ ಪ್ರಶ್ನೆಗಳಿವೆ. ಊರ್ಮಿಳೆಯ ಮೌನದ ಹಿಂದೆ ಕುಟುಂಬದ ಕರ್ತವ್ಯ ಮತ್ತು ಕಾಣದ ತ್ಯಾಗದ ಚರ್ಚೆಗೆ ಅವಕಾಶವಿದೆ. ಭರತನ ಪಾತ್ರದಲ್ಲಿ ಅಧಿಕಾರವನ್ನು ಸ್ವೀಕರಿಸುವುದಕ್ಕಿಂತ ಅದನ್ನು ತ್ಯಜಿಸುವ ನೈತಿಕ ಸಂಕೀರ್ಣತೆಯಿದೆ. ರಾವಣ ಮತ್ತು ಮಂಡೋದರಿಯ ಪಾತ್ರಗಳು ಅಧಿಕಾರ, ಅಹಂಕಾರ, ವಿವೇಕ  ಚಿಂತನೆಗೆ ದಾರಿ ಮಾಡಿಕೊಡುತ್ತವೆ. ಶಬರಿಯ ಪಾತ್ರವು ಭಕ್ತಿ ಮತ್ತು ಸಾಮಾಜಿಕ ಸ್ಥಾನಮಾನದ ನಡುವಿನ ಸಂಬಂಧವನ್ನು  ಕಲ್ಪಿಸುತ್ತದೆ. ಹೀಗೆ. ಅವುಗಳ ನಡುವಿನ ಭಿನ್ನತೆಗಳೇ ಮಹಾಕಾವ್ಯವನ್ನು ಜೀವಂತವಾಗಿರಿಸುತ್ತವೆ. ಒಂದೇ ಕಥೆಯನ್ನು ವಿವಿಧ ಭಾಷೆಗಳು, ಪ್ರದೇಶಗಳು ಮತ್ತು ಸಮುದಾಯಗಳು ತಮ್ಮ ಅನುಭವಗಳಿಗೆ ಅನುಗುಣವಾಗಿ ಮರುಕಥನ ಮಾಡಿವೆ. ಕನ್ನಡದ ಸಾಹಿತ್ಯಿಕ ಪರಂಪರೆಯಲ್ಲಿಯೂ ನಾಗಚಂದ್ರನ ಪಂಪರಾಮಾಯಣದಂತಹ ಕೃತಿಗಳು ರಾಮಕಥೆಯನ್ನು ಹೊಸ ಸೃಜನಶೀಲ ನೆಲೆಯಲ್ಲಿ ಮರುರೂಪಿಸಿವೆ. ಜಾನಪದ ಕಥನಗಳು, ಯಕ್ಷಗಾನ, ತಾಳಮದ್ದಳೆ, ರಂಗಭೂಮಿ ಮತ್ತು ಆಧುನಿಕ ಸಾಹಿತ್ಯವೂ ಈ ಕಥೆಯನ್ನು ವಿವಿಧ ದೃಷ್ಟಿಕೋನಗಳಿಂದ ನಿರಂತರವಾಗಿ ಮರುಸೃಷ್ಟಿಸಿವೆ. ಹೀಗಾಗಿ ರಾಮಾಯಣವು ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ರಚನೆಯಾಗಿ ಮುಗಿದುಹೋದ ಕೃತಿಯಲ್ಲ. ಅದು ಅನೇಕ ತಲೆಮಾರುಗಳ ಕಲ್ಪನೆ, ವಿಮರ್ಶೆ ಮತ್ತು ಸಾಂಸ್ಕೃತಿಕ ಸಂವಾದಗಳ ಮೂಲಕ ವಿಸ್ತರಿಸುತ್ತ ಬಂದ ಪರಂಪರೆ.

ಭಾರತೀಯ ಸಮಾಜದ ಇತಿಹಾಸದಲ್ಲಿ ಜ್ಞಾನ, ಶಿಕ್ಷಣ ಮತ್ತು ಧಾರ್ಮಿಕ ಅಧಿಕಾರಗಳ ಹಂಚಿಕೆ ಸಮಾನವಾಗಿರಲಿಲ್ಲ. ಜಾತಿ ವ್ಯವಸ್ಥೆಯ ವಿವಿಧ ರೂಪಗಳು ಅನೇಕ ಸಮುದಾಯಗಳಿಗೆ ಶಿಕ್ಷಣ ಮತ್ತು ಜ್ಞಾನಸಂಪತ್ತಿನ ಪ್ರವೇಶವನ್ನು ನಿರ್ಬಂಧಿಸಿದವು. ಈ ಹಿನ್ನೆಲೆಯಲ್ಲಿ ವಾಲ್ಮೀಕಿಯಂತಹ ವ್ಯಕ್ತಿತ್ವದ ಕಥನವು ವಿಶಿಷ್ಟವಾದ ಸಾಂಕೇತಿಕ ಅರ್ಥವನ್ನು ಪಡೆದುಕೊಳ್ಳುತ್ತದೆ.

ಒಂದು ಕಡೆ, ವಾಲ್ಮೀಕಿಯನ್ನು ಜ್ಞಾನದ ಶಿಖರವನ್ನು ತಲುಪಿದ ಮಹರ್ಷಿಯಾಗಿ ಆರಾಧಿಸಲಾಗುತ್ತದೆ. ಇನ್ನೊಂದು ಕಡೆ, ಇತಿಹಾಸದ ವಿವಿಧ ಹಂತಗಳಲ್ಲಿ ಜಾತಿಯ ಆಧಾರದ ಮೇಲೆ ಜ್ಞಾನವನ್ನು ನಿರಾಕರಿಸಿದ ಸಾಮಾಜಿಕ ವ್ಯವಸ್ಥೆಗಳೂ ಅಸ್ತಿತ್ವದಲ್ಲಿದ್ದವು. ಈ ಎರಡರ ನಡುವಿನ ವೈರುಧ್ಯವನ್ನು ಪ್ರಶ್ನಿಸದೆ ಹೋದರೆ, ವಾಲ್ಮೀಕಿಯ ಆರಾಧನೆ ಕೇವಲ ಆಚರಣೆಯಾಗಿ ಉಳಿಯುವ ಸಾಧ್ಯತೆ ಇದೆ.

ವಾಲ್ಮೀಕಿಯ ಹೆಸರಿನಲ್ಲಿ ನಡೆಯುವ ಯಾವುದೇ ಸಾಂಸ್ಕೃತಿಕ ಆಚರಣೆ, ಅವರ ಹೆಸರಿನಲ್ಲಿ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸಿದಾಗ, ಜಾತಿ ತಾರತಮ್ಯವನ್ನು ಪ್ರಶ್ನಿಸಿದಾಗ ಮತ್ತು ಅಂಚಿನಲ್ಲಿರುವವರ ಧ್ವನಿಗೆ ಅವಕಾಶ ನೀಡಿದಾಗ ಹೆಚ್ಚು ಅರ್ಥಪೂರ್ಣವಾಗುತ್ತದೆ. ಜ್ಞಾನವನ್ನು ಜನ್ಮದ ಆಧಾರದಲ್ಲಿ ಹಂಚುವ ಮನೋಭಾವವನ್ನು ಪ್ರಶ್ನಿಸುವುದು ವಾಲ್ಮೀಕಿಯ ಸೃಜನಶೀಲ ಪರಂಪರೆಗೆ ಸಲ್ಲಿಸುವ ಮಹತ್ವದ ಗೌರವವಾಗಿದೆ.

ಸಮಕಾಲೀನ ಭಾರತದ ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ರಾಮ ಮತ್ತು ಹನುಮಂತನಂತಹ ಸಾಂಸ್ಕೃತಿಕ ಸಂಕೇತಗಳು ಮಹತ್ವದ ಸ್ಥಾನ ಪಡೆದಿವೆ. ಅನೇಕರಿಗೆ ರಾಮನು ನೈತಿಕತೆ, ಕರ್ತವ್ಯ, ಆದರ್ಶ ಮತ್ತು ಭಕ್ತಿಯ ಸಂಕೇತ. ಹನುಮಂತನು ಶಕ್ತಿ, ನಿಷ್ಠೆ, ಸೇವೆ ಮತ್ತು ಧೈರ್ಯದ ಪ್ರತೀಕ. ಈ ನಂಬಿಕೆಗಳು ಜನರ ವೈಯಕ್ತಿಕ ಮತ್ತು ಸಮುದಾಯ ಜೀವನದ ಭಾಗವಾಗಿವೆ.‌ ಆದರೆ ಈ ಪಾತ್ರಗಳು ಧಾರ್ಮಿಕ ನಂಬಿಕೆ ಮತ್ತು ರಾಜಕೀಯ ಬಳಕೆಯಲ್ಲಿ ಒಂದೇ ರೀತಿಯಲ್ಲಿ ನಿಂತಿಲ್ಲ.

ಹನುಮಂತನ ಪ್ರತಿಮೆ

ಒಬ್ಬ ವ್ಯಕ್ತಿ ರಾಮನನ್ನು ಭಕ್ತಿಯಿಂದ ಆರಾಧಿಸುವುದು ಆತನ ವೈಯಕ್ತಿಕ ನಂಬಿಕೆಯ ಸ್ವಾತಂತ್ರ್ಯ. ಹನುಮಂತನನ್ನು ಶಕ್ತಿಯ ಸಂಕೇತವಾಗಿ ಕಾಣುವುದು ಆತನ ಸಾಂಸ್ಕೃತಿಕ ಅಭಿವ್ಯಕ್ತಿ. ಆದರೆ ಈ ಸಂಕೇತಗಳ ಮೇಲಿನ ತನ್ನದೇ ವ್ಯಾಖ್ಯಾನವನ್ನು ಮಾತ್ರ ರಾಷ್ಟ್ರಪ್ರೇಮದ ಏಕೈಕ ಮಾನದಂಡವನ್ನಾಗಿ ಮಾಡುವುದಾಗಲಿ, ವಿಭಿನ್ನ ನಂಬಿಕೆಯುಳ್ಳವರನ್ನು ಅನುಮಾನದಿಂದ ನೋಡುವುದಾಗಲಿ, ಇತರ ಸಮುದಾಯಗಳ ವಿರುದ್ಧ ದ್ವೇಷವನ್ನು ಬೆಳೆಸುವುದಾಗಲಿ ನಡೆದರೆ, ಅದು ಭಕ್ತಿಯ ವ್ಯಾಪ್ತಿಯನ್ನು ಮೀರಿ ರಾಜಕೀಯ ಪ್ರಾಬಲ್ಯದ ಪ್ರಶ್ನೆಯಾಗುತ್ತದೆ. ರಾಮಾಯಣದ ಪಾತ್ರಗಳನ್ನು ಸಮಕಾಲೀನ ರಾಜಕೀಯದ ಪ್ರತಿನಿಧಿಗಳನ್ನಾಗಿ ರೂಪಿಸುವಾಗ ಒಂದು ಅಪಾಯವಿದೆ.

ಪ್ರಜಾಪ್ರಭುತ್ವವು ಕೇವಲ ಚುನಾವಣೆಗಳ ಮೂಲಕ ಸರ್ಕಾರವನ್ನು ಆಯ್ಕೆ ಮಾಡುವ ವ್ಯವಸ್ಥೆಯಲ್ಲ. ಅದು ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡುವ, ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ, ಅಧಿಕಾರವನ್ನು ಪ್ರಶ್ನಿಸಲು ಅವಕಾಶ ಕಲ್ಪಿಸುವ ಮತ್ತು ನಾಗರೀಕರ ಸಮಾನತೆಯನ್ನು ಒಪ್ಪಿಕೊಳ್ಳುವ ವ್ಯವಸ್ಥೆ.

ಇಂತಹ ವ್ಯವಸ್ಥೆಯಲ್ಲಿ ಧಾರ್ಮಿಕ ಸಂಕೇತಗಳು ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುವುದು ಸಹಜ. ಭಾರತದ ಸಾಂಸ್ಕೃತಿಕ ಪರಂಪರೆಯಲ್ಲಿ ಧರ್ಮ, ಸಾಹಿತ್ಯ, ಕಲೆ ಮತ್ತು ರಾಜಕೀಯಗಳ ನಡುವೆ ದೀರ್ಘಕಾಲದ ಸಂಬಂಧವಿದೆ. ಆದರೆ ರಾಜ್ಯದ ಅಧಿಕಾರ ಮತ್ತು ನಾಗರಿಕರ ಹಕ್ಕುಗಳು ನಿರ್ದಿಷ್ಟ ಧಾರ್ಮಿಕ ಗುರುತಿನ ಆಧಾರದಲ್ಲಿ ನಿರ್ಧಾರವಾಗಲು ಆರಂಭಿಸಿದರೆ, ಪ್ರಜಾಪ್ರಭುತ್ವದ ಸಮಾನತೆಯ ತತ್ವಕ್ಕೆ ಸವಾಲು ಎದುರಾಗುತ್ತದೆ

ರಾಮಾಯಣದ ಮತ್ತೊಂದು ಮುಖ್ಯ ನೆಲೆ ಮಹಿಳೆಯರ ಅನುಭವ. ಸೀತೆಯ ಪಾತ್ರ ಭಾರತೀಯ ಸಾಹಿತ್ಯ ಮತ್ತು ಜನಜೀವನದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದೆ. ಆದರೆ ಸೀತೆಯನ್ನು ಕೇವಲ ತ್ಯಾಗ, ಸಹನೆ ಮತ್ತು ಪಾತಿವ್ರತ್ಯದ ಏಕೈಕ ಮಾದರಿಯಾಗಿ ಮಾತ್ರ ಅರ್ಥೈಸಿದರೆ, ಆ ಪಾತ್ರದೊಳಗಿನ ಮಾನವೀಯ ನೋವು, ಆತ್ಮಗೌರವ ಮತ್ತು ಆಯ್ಕೆಗಳ ಪ್ರಶ್ನೆಗಳು ಮರೆಯಾಗುತ್ತವೆ. ಊರ್ಮಿಳೆಯ ಮೌನ ಪಾತ್ರವು ಇನ್ನೊಂದು ರೀತಿಯ ಪ್ರಶ್ನೆಯನ್ನು ಎತ್ತುತ್ತದೆ. ಮಂಡೋದರಿಯಂತಹ ಪಾತ್ರವನ್ನು ಅಧಿಕಾರದ ಕೇಂದ್ರದಲ್ಲಿರುವ ಪುರುಷರ ನಿರ್ಧಾರಗಳು ಮಹಿಳೆಯರ ಬದುಕಿನ ಮೇಲೆ ಬೀರುವ ಪರಿಣಾಮದಲ್ಲಿ ಪರಿಶೀಲಿಸಬಹುದು. ಆದುದರಿಂದ ರಾಮಾಯಣದ ಮಹಿಳಾ ಪಾತ್ರಗಳನ್ನು ಭಕ್ತಿಯ ಚೌಕಟ್ಟಿನಲ್ಲಷ್ಟೇ ಅಲ್ಲದೆ, ಸ್ವಾಯತ್ತತೆ, ನ್ಯಾಯ, ಗೌರವ ಮತ್ತು ಸಾಮಾಜಿಕ ಸಮಾನತೆಯ ನೆಲೆಯಲ್ಲಿಯೂ ಓದಬೇಕು. ಅದು ತಲೆಮಾರುಗಳಿಂದ ಮರುಕಥನಗೊಳ್ಳುವ, ಪ್ರಶ್ನೆಗಳಿಗೆ ಒಳಗಾಗುವ, ಹೊಸ ಅರ್ಥಗಳನ್ನು ಪಡೆಯುವ ಸಾಂಸ್ಕೃತಿಕ ಸಂಪತ್ತು. ಪರಂಪರೆಯನ್ನು ಉಳಿಸುವುದು ಎಂದರೆ ಅದನ್ನು ಪ್ರಶ್ನೆಗಳಿಂದ ರಕ್ಷಿಸುವುದಲ್ಲ; ಪ್ರಶ್ನೆಗಳ ಮೂಲಕ ಅದರ ಅರ್ಥವನ್ನು ವಿಸ್ತರಿಸುವುದು.

ಆದರೆ ವಾಲ್ಮೀಕಿಯನ್ನು ಆರಾಧಿಸುತ್ತಲೇ ಜಾತಿಯ ಅಸಮಾನತೆಯನ್ನು ಮುಂದುವರಿಸಿದರೆ, ಅದು ಪರಂಪರೆಯ ಆತ್ಮಕ್ಕೆ ವಿರುದ್ಧವಾದ ವಿಪರ್ಯಾಸ. ರಾಮನನ್ನು ಗೌರವಿಸುತ್ತಲೇ ಅವರ ಹೆಸರಿನಲ್ಲಿ ಜನರನ್ನು ವಿಭಜಿಸಿದರೆ, ಆ ಗೌರವದ ನೈತಿಕ ಅರ್ಥವನ್ನೇ ಮರುಪರಿಶೀಲಿಸಬೇಕಾಗುತ್ತದೆ. ಹನುಮಂತನ ಶಕ್ತಿಯನ್ನು ಕೊಂಡಾಡುತ್ತಲೇ ದುರ್ಬಲರ ಧ್ವನಿಯನ್ನು ಹತ್ತಿಕ್ಕಿದರೆ, ಸೇವೆ ಮತ್ತು ಧೈರ್ಯದ ಮೌಲ್ಯಗಳು ಕೇವಲ ಘೋಷಣೆಗಳಾಗಿ ಉಳಿಯುತ್ತವೆ.

ಮಹಾಕಾವ್ಯವನ್ನು ಬದುಕಿನೊಳಗೆ ತರುವುದು ಎಂದರೆ ಅದರ ಪಾತ್ರಗಳನ್ನು ರಾಜಕೀಯದ ಮುಖವಾಡಗಳನ್ನಾಗಿ ಮಾಡುವುದಲ್ಲ. ಅದರೊಳಗಿನ ನೈತಿಕ ಸಂಘರ್ಷಗಳನ್ನು, ಅಧಿಕಾರದ ಮಿತಿಗಳನ್ನು, ಮಹಿಳೆಯರ ಅನುಭವಗಳನ್ನು ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳನ್ನು ಸಮಕಾಲೀನ ಬದುಕಿನೊಂದಿಗೆ ಸಂವಾದಕ್ಕೆ ತರುವುದು. ರಾಮಾಯಣವು ಭಾರತೀಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಇತಿಹಾಸದ ಮಹತ್ವದ ಭಾಗವೂ ಹೌದು. ಅದನ್ನು ಗೌರವಿಸುವುದೆಂದರೆ ಅದರ ಬಹುತ್ವವನ್ನು ಒಪ್ಪಿಕೊಳ್ಳುವುದು, ಅದರ ಹೆಸರಿನಲ್ಲಿ ನಡೆಯುವ ಸಾಮಾಜಿಕ ಅನ್ಯಾಯವನ್ನು ವಿಮರ್ಶಿಸುವುದು. ಮಹಾಕಾವ್ಯದ ನಿಜವಾದ ಜೀವಂತಿಕೆ ದೇವಾಲಯದ ಗೋಡೆಗಳಲ್ಲಿ ಮಾತ್ರವಲ್ಲ; ಮನುಷ್ಯರ ನಡುವಿನ ಸಮಾನತೆ, ನ್ಯಾಯ, ಸಹಬಾಳ್ವೆ ಮತ್ತು ಸ್ವಾತಂತ್ರ್ಯದಲ್ಲಿ ನೆಲೆಸಿದೆ.

ಧಾರ್ಮಿಕ ನಂಬಿಕೆಯನ್ನು ರಾಜಕೀಯ ದ್ವೇಷದಿಂದ ಪ್ರತ್ಯೇಕಿಸಿ ನೋಡುವ ಪ್ರಜ್ಞೆ ಬೆಳೆದಾಗ ಮಾತ್ರ ಈ ನೆಲದ ಮಹಾಕಾವ್ಯವು ಸಮಕಾಲೀನ ಸಮಾಜಕ್ಕೆ ನಿಜವಾದ ಬೆಳಕಾಗಬಲ್ಲದು.

ಭಾಗ್ಯ ಮರವಾಸಿ

ಉಪನ್ಯಾಸಕರು.

ಇದನ್ನೂ ಓದಿ- ವಾಲ್ಮೀಕಿ ರಾಮಾಯಣ: ಮಾನವಕುಲದ ದೀಪಸ್ತಂಭ

More articles

Latest article

Most read