‘ಅರ್ನಬ್’ ಚಂಡಮಾರುತದ ಅ. 28ರಂದು ಆಂಧ್ರ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ; ಗಂಟೆಗೆ 140 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆ

ನವದೆಹಲಿ, ಅ. 26: ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ‘ಅರ್ನಬ್’ ಚಂಡಮಾರುತದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಚುರುಕುಗೊಳಿಸಿದೆ. ಅಕ್ಟೋಬರ್ 28ರ ಬೆಳಿಗ್ಗೆ ಆಂಧ್ರಪ್ರದೇಶದ ಕರಾವಳಿಗೆ ಅತ್ಯಂತ ತೀವ್ರ ಚಂಡಮಾರುತವಾಗಿ ಅಪ್ಪಳಿಸುವ ಸಾಧ್ಯತೆಯಿದ್ದು, ಗಂಟೆಗೆ 140 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ನಿರೀಕ್ಷೆಯಿದೆ.

ಕ್ಯಾಬಿನೆಟ್ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಸೋಮವಾರ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯ (NCMC) ಸಭೆ ನಡೆಸಿ ಸಿದ್ಧತೆಗಳನ್ನು ಪರಿಶೀಲಿಸಿದರು. ಜೀವಹಾನಿ ಶೂನ್ಯಕ್ಕೆ ಇಳಿಸುವುದು, ಆಸ್ತಿ ಮತ್ತು ಮೂಲಸೌಕರ್ಯಗಳ ಹಾನಿ ತಗ್ಗಿಸುವುದು ಹಾಗೂ ಚಂಡಮಾರುತದ ಬಳಿಕ ಅಗತ್ಯ ಸೇವೆಗಳನ್ನು ತ್ವರಿತವಾಗಿ ಪುನಃಸ್ಥಾಪಿಸುವುದು ಪ್ರಮುಖ ಆದ್ಯತೆಗಳಾಗಿರಬೇಕು ಎಂದು ಕೇಂದ್ರ ಮತ್ತು ರಾಜ್ಯದ ಅಧಿಕಾರಿಗಳಿಗೆ ಸೂಚಿಸಿದರು.

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಬಂಗಾಳ ಕೊಲ್ಲಿಯ ಪೂರ್ವ-ಮಧ್ಯ ಭಾಗದಲ್ಲಿ ಕೇಂದ್ರೀಕೃತವಾಗಿದ್ದ ವಾಯುಭಾರ ಕುಸಿತವು ‘ಅರ್ನಬ್’ ಚಂಡಮಾರುತವಾಗಿ ತೀವ್ರಗೊಂಡಿದೆ. ಸೋಮವಾರ ಬೆಳಿಗ್ಗೆ 5.30ರ ವೇಳೆಗೆ ಇದು ವಿಶಾಖಪಟ್ಟಣಂನಿಂದ ಸುಮಾರು 650 ಕಿ.ಮೀ. ಮತ್ತು ಕಾಕಿನಾಡದಿಂದ 730 ಕಿ.ಮೀ. ದೂರದಲ್ಲಿತ್ತು.

ಚಂಡಮಾರುತವು ಅಕ್ಟೋಬರ್ 27ರವರೆಗೆ ಪಶ್ಚಿಮ-ವಾಯವ್ಯ ದಿಕ್ಕಿನಲ್ಲಿ ಚಲಿಸಿ, ಬಳಿಕ ವಾಯವ್ಯ ದಿಕ್ಕಿಗೆ ತಿರುಗಿ ಅಕ್ಟೋಬರ್ 28ರಂದು ಬಾಪಟ್ಲಾ ಮತ್ತು ವಿಶಾಖಪಟ್ಟಣಂ ನಡುವಿನ ಆಂಧ್ರಪ್ರದೇಶ ಹಾಗೂ ಯಾನಂ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ.

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಚಂಡಮಾರುತದ ಪರಿಣಾಮ ತೆಲಂಗಾಣ, ದಕ್ಷಿಣ ಒಡಿಶಾ ಹಾಗೂ ಛತ್ತೀಸ್‌ಗಢದ ದಕ್ಷಿಣ ಮತ್ತು ಮಧ್ಯ ಭಾಗಗಳಲ್ಲಿ ಪ್ರತಿಕೂಲ ಹವಾಮಾನ ಉಂಟಾಗುವ ಸಾಧ್ಯತೆಯಿದೆ. ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಸೂಕ್ತ ಎಚ್ಚರಿಕೆಗಳನ್ನು ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಮತ್ತು ಹವಾಮಾನ ಇಲಾಖೆಗೆ ಸೂಚಿಸಲಾಗಿದೆ.

ಆಂಧ್ರಪ್ರದೇಶ, ಒಡಿಶಾ, ತೆಲಂಗಾಣ, ಛತ್ತೀಸ್‌ಗಢ ಹಾಗೂ ಪುದುಚೇರಿ ಆಡಳಿತಗಳು ತಮ್ಮ ಸಿದ್ಧತೆಗಳ ಕುರಿತು ಸಭೆಯಲ್ಲಿ ಮಾಹಿತಿ ನೀಡಿವೆ. ಸುರಕ್ಷಿತ ಆಶ್ರಯ ಕೇಂದ್ರಗಳು, ಸ್ಥಳಾಂತರ ವ್ಯವಸ್ಥೆಗಳು ಹಾಗೂ ಜಿಲ್ಲಾ ನಿಯಂತ್ರಣ ಕೊಠಡಿಗಳನ್ನು ಸಜ್ಜುಗೊಳಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ (SDRF) ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ಸೇನೆ, ನೌಕಾಪಡೆ, ವಾಯುಪಡೆ ಮತ್ತು ಭಾರತೀಯ ಕರಾವಳಿ ಕಾವಲು ಪಡೆಗಳ ರಕ್ಷಣಾ ತಂಡಗಳು, ಹಡಗುಗಳು ಹಾಗೂ ವಿಮಾನಗಳನ್ನೂ ತುರ್ತು ಕಾರ್ಯಾಚರಣೆಗೆ ಸಿದ್ಧವಾಗಿಡಲಾಗಿದೆ. ಕರಾವಳಿ ಕಾವಲು ಪಡೆ ಹಲವು ಹಡಗುಗಳು ಮತ್ತು ದೋಣಿಗಳನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದು, ಉಳಿದ ಹಡಗುಗಳಿಗೂ ಕರಾವಳಿಗೆ ಮರಳುವಂತೆ ಎಚ್ಚರಿಕೆ ನೀಡಿದೆ.

More articles

Latest article

Most read