ವಾಲ್ಮೀಕಿ ರಾಮಾಯಣ: ಮಾನವಕುಲದ ದೀಪಸ್ತಂಭ

ಮನುಷ್ಯನಿಗೆ ಬದುಕಿನ ಮೌಲ್ಯಗಳನ್ನು ಕಲಿಸುವ, ಅಧರ್ಮದ ವಿರುದ್ಧ ಧರ್ಮದ ಗೆಲುವನ್ನು ಸಾರುವ ಮತ್ತು ಪ್ರತಿಯೊಂದು ಯುಗದಲ್ಲೂ ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸುವ ಸಾರ್ವಕಾಲಿಕ ದೀಪಸ್ತಂಭವಾಗಿದೆ – ಡಾ.ಕೃಷ್ಣಮೂರ್ತಿ.ಆರ್ ಉಡೇವಾ, ಸಹಾಯಕ ಪ್ರಾಧ್ಯಾಪಕರು.

ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಯ ಇತಿಹಾಸದಲ್ಲಿ ಮಹರ್ಷಿ ವಾಲ್ಮೀಕಿಯವರ ಜನ್ಮದಿನವು ಅತ್ಯಂತ ಮಹತ್ವದ ಹಾಗೂ ಸ್ಮರಣೀಯ ದಿನವಾಗಿದೆ. ದೇಶಾದ್ಯಂತ ಆದಿಕವಿ ವಾಲ್ಮೀಕಿ ಜಯಂತಿಯನ್ನು ರಾಷ್ಟ್ರೀಯ ಉತ್ಸವದಂತೆ ಆಚರಿಸುತ್ತಿರುವುದು ಆ ಮಹಾನ್ ಚೇತನಕ್ಕೆ ಸಲ್ಲುವ ಸರಿಯಾದ ಗೌರವವೇ ಆಗಿದೆ. ಯಾವುದೇ ಪೂರ್ವಸೂರಿಗಳ ಮಾದರಿಯಿಲ್ಲದೆ, ಸಂಪೂರ್ಣವಾಗಿ ತಮ್ಮ ಸ್ವಂತ ಸೃಜನಶೀಲತೆ ಮತ್ತು ಸ್ವಪರಿಶ್ರಮದ ಬಲದಿಂದ ಇಪ್ಪತ್ನಾಲ್ಕು ಸಾವಿರ ಸಂಸ್ಕೃತ ಶ್ಲೋಕಗಳ ಬೃಹತ್ ಮಹಾಕಾವ್ಯವಾದ ‘ರಾಮಾಯಣ’ವನ್ನು ಸೃಷ್ಟಿಸಿದ ವಾಲ್ಮೀಕಿಯ ಅಪ್ರತಿಮ ವಿದ್ವತ್ತು ಜಗತ್ತಿಗೆ ಮಾದರಿ. ಆದರೆ, ಇಂತಹ ಮಹಾನ್  ವ್ಯಕ್ತಿತ್ವ, ಹಿನ್ನೆಲೆ ಮತ್ತು ಸಾಧನೆಯನ್ನು ಗ್ರಹಿಸುವ ಮತ್ತು ವ್ಯಾಖ್ಯಾನಿಸುವ ನಮ್ಮ ಸಮಾಜದ ದೃಷ್ಟಿಕೋನದ ಕುರಿತು ಮರುಚಿಂತನೆ ಹಾಗೂ ಆತ್ಮಾವಲೋಕನ ನಡೆಯಬೇಕಿದೆ.

ತಳವರ್ಗದ, ಬೇಡ ಸಮುದಾಯದಿಂದ ಬಂದ ಓರ್ವ ಪ್ರತಿಭಾವಂತ ಕವಿಗೆ ಜಾಗತಿಕ ಮಟ್ಟದಲ್ಲಿ ಸಿಕ್ಕ ಮಾನ್ಯತೆಯನ್ನು ಜೀರ್ಣಿಸಿಕೊಳ್ಳಲಾಗದ ಸಾಂಪ್ರದಾಯಿಕ ವ್ಯವಸ್ಥೆ, ಅವರ ಹಿನ್ನೆಲೆಯನ್ನು ಹತ್ತಾರು ಪುರಾಣ ಕತೆಗಳ ಮುಖಾಂತರ ಮರೆಮಾಚುವ ಪ್ರಯತ್ನ ಮಾಡಿದೆ. ವಾಲ್ಮೀಕಿ ಹಿಂದೆ ನರಹಂತಕ ಅಥವಾ ದರೋಡೆಕೋರನಾಗಿದ್ದನೆಂದೂ, ಕ್ರೌಂಚ ಪಕ್ಷಿಯ ವಿಲಾಪದಿಂದ ಅವನಲ್ಲಿ ದಿಢೀರ್ ಮನಃಪರಿವರ್ತನೆಯಾಯಿತೆಂದೂ ಹೇಳಲಾಗುತ್ತದೆ. ನಾರದರ ಭೇಟಿ, ‘ಮರ ಮರ’ ಜಪದ ಪ್ರಭಾವ, ತಪಸ್ಸಿನಿಂದ ಮೈಮೇಲೆ ಬೆಳೆದ ಹುತ್ತದಿಂದ ಬಂದ ‘ವಾಲ್ಮೀಕಿ’ ಎಂಬ ಹೆಸರು—ಹೀಗೆ ನಾನಾ ರೀತಿಯ ಕಲ್ಪನಾಶೀಲ ಕತೆಗಳನ್ನು ಸೃಷ್ಟಿಸಿ ಬಿಂಬಿಸಲಾಗಿದೆ. ಇಂತಹ ಕತೆಗಳ ಹಿಂದಿನ ಉದ್ದೇಶವೇನು ಎಂಬುದ ತಿಳಿಯುವ ಅವಶ್ಯಕತೆಯೂ ನಮ್ಮ ಮೇಲಿದೆ.

ಸಂಸ್ಕೃತ ಸಾಹಿತ್ಯ ಲೋಕದಲ್ಲಿ ವಾಲ್ಮೀಕಿ ರಾಮಾಯಣವನ್ನು ‘ಆದಿಕಾವ್ಯ’ ಎಂದು ಕರೆಯಲಾಗುತ್ತದೆ. ಇದರ ರಚನೆಯ ಹಿಂದಿನ ಹಿನ್ನೆಲೆಯೂ ಅತ್ಯಂತ ಮಹತ್ವದ್ದಾಗಿದೆ. ಕಾಡಿನಲ್ಲಿ ಪ್ರಣಯದಲ್ಲಿದ್ದ ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ ಒಂದನ್ನು ಬೇಡನೊಬ್ಬ ಬಾಣದಿಂದ ಹತ್ಯೆ ಮಾಡಿದಾಗ, ಆ ಹೆಣ್ಣು ಪಕ್ಷಿಯ ವಿಲಾಪವನ್ನು ಕಂಡು ಕವಿಯ ಮನಸ್ಸು ಮರುಕಗೊಂಡಿತು. ಆ ನೋವಿನಿಂದ ಅವರ ಬಾಯಿಂದ ಹೊರಬಂದ ಶೋಕವೇ ಮುಂದೆ ‘ಅನುಷ್ಟುಪ್’ ಛಂದಸ್ಸು ಮತ್ತು ಸಂಸ್ಕೃತದ ಹೊಸ ಕಾವ್ಯ ಶೈಲಿಗೆ ನಾಂದಿಯಾಯಿತು. ಯಾವುದೇ ಲಿಖಿತ ರೂಪದ ಮಾದರಿಗಳಿಲ್ಲದ ಕಾಲದಲ್ಲಿ, ಕಾವ್ಯ ರಚನೆಯ ನಿಯಮಗಳನ್ನೇ ತಾವೇ ರೂಪಿಸಿ ಇಪ್ಪತ್ನಾಲ್ಕು ಸಾವಿರ ಶ್ಲೋಕಗಳ ಬೃಹತ್ ಗ್ರಂಥವನ್ನು ರಚಿಸುವುದು ಸಾಮಾನ್ಯ ಸಾಧನೆಯಲ್ಲ. ಈ ಕಾವ್ಯವು ಮುಂದಿನ ಸಾವಿರಾರು ವರ್ಷಗಳ ಭಾರತೀಯ ಸಾಹಿತ್ಯಕ್ಕೆ ಭದ್ರವಾದ ಅಡಿಪಾಯವಾಯಿತು. ಕಾಳಿದಾಸ, ಭಾಸ, ಭವಭೂತಿಯಂತಹ ಸಂಸ್ಕೃತ ಮಹಾಕವಿಗಳಿಂದ ಹಿಡಿದು, ಪ್ರಾದೇಶಿಕ ಭಾಷೆಗಳಾದ ತಮಿಳಿನ ಕಂಬನ್, ಹಿಂದಿಯ ತುಳಸೀದಾಸ್, ಮತ್ತು ಕನ್ನಡದ ಪಂಪ, ಕುಮಾರವ್ಯಾಸ, ಹಾಗೂ ರಾಷ್ಟ್ರಕವಿ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ವರೆಗಿನ ನೂರಾರು ಮಹಾನ್ ಕವಿಗಳಿಗೆ ರಾಮಾಯಣವೇ ಮೂಲ ಪ್ರೇರಣೆಯಾಯಿತು. ಇಂದಿಗೂ ಸುಮಾರು 300ಕ್ಕೂ ಹೆಚ್ಚು ರಾಮಾಯಣಗಳಿರುವುದು ಅಚ್ಚರಿಯಾಗುತ್ತದೆ. ಇದೆಲ್ಲದಕ್ಕೂ ಮೂಲ ಸತ್ವ ವಾಲ್ಮೀಕಿ ಕೃತ ರಾಮಾಯಣವಾಗಿದೆ. ಈ ನೆಲೆಯಲ್ಲಿ ರಾಮಾಯಣ ಒಂದು ಕೃತಿಯಾಗದೆ, ಒಂದು ಸಮಾಜದ ಸಂಬಂಧಗಳ ಗಟ್ಟಿಗೊಳಿಸುವ ಆಲದ ಮರದ ಬೇರಿನಂತಾಗಿದೆ.

ರಾಮಾಯಣವು ಮನುಷ್ಯ ಬದುಕಿನ ಪ್ರತಿಯೊಂದು ಮೈಲಿಗಲ್ಲನ್ನೂ ಅತ್ಯಂತ ಸೂಕ್ಷ್ಮವಾಗಿ ವಿವರಿಸುತ್ತದೆ. ಕಷ್ಟ-ಸುಖಗಳೆರಡನ್ನೂ ಸಮಾನವಾಗಿ ಸ್ವೀಕರಿಸಿ, ತಂದೆಯ ಮಾತಿಗೆ ಕಟ್ಟುಬಿದ್ದು ಸಿಂಹಾಸನವನ್ನು ತ್ಯಜಿಸಿ ವನವಾಸಕ್ಕೆ ತೆರಳುವ ರಾಮನ ಕರ್ತವ್ಯ ಪ್ರಜ್ಞೆ, ಕಷ್ಟದ ಕಾಲದಲ್ಲೂ ಪತಿಯ ಜತೆಗಿದ್ದು ತ್ಯಾಗದ ಪ್ರತೀಕವಾದ ಸೀತೆ, ಅಣ್ಣನ ಸೇವೆಗಾಗಿ ತನ್ನ ಸುಖಗಳನ್ನು ಬಲಿಗೈಯುವ ಲಕ್ಷ್ಮಣ ಮತ್ತು ಭರತರ ಸಹೋದರ ವಾತ್ಸಲ್ಯ—ಇವೆಲ್ಲವೂ ಮಾನವ ಸಂಬಂಧಗಳ ಮಹತ್ವವನ್ನು ಸಾರುತ್ತವೆ. ರಾಮ-ಸೀತೆಯರ ಅಚಲ ಪ್ರೀತಿ ಮತ್ತು ಹನುಮಂತನು ರಾಮನಿಗೆ ತೋರಿದ ಅನನ್ಯ ಭಕ್ತಿ ಹಾಗೂ ನಿಸ್ವಾರ್ಥ ಸೇವೆಯು ಪ್ರತಿಯೊಬ್ಬ ವ್ಯಕ್ತಿಗೂ ಆದರ್ಶ ಜೀವನದ ಪಾಠಗಳನ್ನು ಕಲಿಸುತ್ತವೆ. ಇದು ಕೇವಲ ದೇವತೆಗಳ ಕಥೆಯಲ್ಲ, ಬದಲಾಗಿ ಮನುಷ್ಯರ ನಡುವಿನ ಭಾವನೆಗಳ, ಧರ್ಮ ಮತ್ತು ಅಧರ್ಮದ ನಡುವಿನ ಶಾಶ್ವತ ಸಂಘರ್ಷದ ದರ್ಪಣವಾಗಿದೆ.

ರಾಮಾಯಣವು ಕೇವಲ ಕಾವ್ಯಮಯ ಕಥೆಯಷ್ಟೇ ಅಲ್ಲ, ಅದರಲ್ಲಿ ಅತ್ಯುತ್ತಮ ರಾಜನೀತಿ ಮತ್ತು ಆಡಳಿತದ ಸೂತ್ರಗಳಿವೆ. ರಾಜನಾದವನು ಪ್ರಜೆಗಳ ಕಷ್ಟ-ನಷ್ಟಗಳಿಗೆ ಹೇಗೆ ಸ್ಪಂದಿಸಬೇಕು, ಸಮಾಜದಲ್ಲಿ ಧರ್ಮ ಮತ್ತು ನ್ಯಾಯ ಹೇಗೆ ನೆಲೆಸಬೇಕು ಎಂಬುದನ್ನು ವಾಲ್ಮೀಕಿಯವರು ರಾಮಾಯಣದ ವಿವಿಧ ಕಾಂಡಗಳಲ್ಲಿ (ವಿಶೇಷವಾಗಿ ಅಯೋಧ್ಯಾ ಕಾಂಡ) ಅತ್ಯಂತ ಸ್ಪಷ್ಟವಾಗಿ ಚಿತ್ರಿಸಿದ್ದಾರೆ. ಪ್ರಜೆಗಳ ಕ್ಷೇಮವೇ ರಾಜನ ಅಂತಿಮ ಗುರಿಯಾಗಿರಬೇಕು ಎನ್ನುವ ‘ರಾಮರಾಜ್ಯ’ದ ಪರಿಕಲ್ಪನೆಯು ಭಾರತೀಯ ರಾಜಕೀಯ ಚಿಂತನೆಯಲ್ಲಿ ಸಾರ್ವಕಾಲಿಕ ಆದರ್ಶವಾಗಿದೆ. ಆಧುನಿಕ ಭಾರತದಲ್ಲಿ ಮಹಾತ್ಮ ಗಾಂಧೀಜಿಯವರು ಕೂಡ ಸ್ವಾತಂತ್ರ್ಯಾನಂತರದ ಭಾರತ ಹೇಗಿರಬೇಕು ಎಂಬುದನ್ನು ವಿವರಿಸಲು ‘ರಾಮರಾಜ್ಯ’ದ ಕನಸನ್ನು ಪದೇ ಪದೇ ಉದಾಹರಿಸುತ್ತಿದ್ದರು. ಇದು ಉತ್ತಮ ಪ್ರಜಾಪ್ರಭುತ್ವ ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಇಂದಿಗೂ ದಾರಿದೀಪವಾಗಿದೆ.

ವಾಲ್ಮೀಕಿ ರಾಮಾಯಣದ ಬಹುದೊಡ್ಡ ಮಹತ್ವವಿರುವುದು ಅದರ ಅತಿ ಎತ್ತರದ ಮಾನವತಾವಾದಿ ದೃಷ್ಟಿಕೋನದಲ್ಲಿದೆ. ಸಮಾಜದ ಉನ್ನತ ವರ್ಗಗಳಿಂದ ಅಥವಾ ರಾಜಸತ್ತೆಯಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಆಶ್ರಯ ನೀಡುವುದು ಮತ್ತು ಅವರನ್ನು ಗೌರವಿಸುವುದು ಮಹಾನ್ ದಾರ್ಶನಿಕನ ಕರ್ತವ್ಯ ಎಂಬುದನ್ನು ವಾಲ್ಮೀಕಿ ತಮ್ಮ ಬದುಕಿನಲ್ಲಿ ಹಾಗೂ ಕಾವ್ಯದಲ್ಲಿ ತೋರಿಸಿ ಕೊಟ್ಟಿದ್ದಾರೆ. ರಾಮನು ಸೀತೆಯನ್ನು ತ್ಯಜಿಸಿದಾಗ, ಅಯೋಧ್ಯೆಯ ಪುರುಷ ಪ್ರಧಾನ ವ್ಯವಸ್ಥೆಯು ಅವಳ ಚಾರಿತ್ರ್ಯವನ್ನು ಶಂಕಿಸಿದಾಗ, ಅಂತಹ ಕಠಿಣ ಪರಿಸ್ಥಿತಿಯಲ್ಲಿ ಅವಳಿಗೆ ಅಭಯ ನೀಡಿ ತನ್ನ ಆಶ್ರಮದಲ್ಲಿ ಆಶ್ರಯ ನೀಡಿದವರು ಸ್ವತಃ ವಾಲ್ಮೀಕಿ ಮಹರ್ಷಿ. ಅಷ್ಟೇ ಅಲ್ಲದೆ, ವನವಾಸದ ಹಾದಿಯಲ್ಲಿದ್ದ ಸೀತೆಯನ್ನು ಮತ್ತು ಅವಳ ಅವಳಿ ಮಕ್ಕಳಾದ ಲವ-ಕುಶರನ್ನು ತಮ್ಮ ಆಶ್ರಮದಲ್ಲಿ  ಪ್ರೀತಿಯಿಂದ ಪಾಲನೆ ಪೋಷಣೆ ಮಾಡಿ, ಶಸ್ತ್ರ-ಶಾಸ್ತ್ರ ಹಾಗೂ ವೇದ-ಪುರಾಣಗಳಲ್ಲಿ ಅತ್ಯಂತ ಪ್ರವೀಣರನ್ನಾಗಿ ರೂಪಿಸಿದರು. ಇದು ಸ್ತ್ರೀಪರ ಕಾಳಜಿ ಮತ್ತು ಮಾನವೀಯತೆಯ ಅತ್ಯುನ್ನತ ನಿದರ್ಶನವಾಗಿದೆ.

ರಾಮಾಯಣದ ಪ್ರಭಾವ ಕೇವಲ ಭಾರತೀಯ ಉಪಖಂಡಕ್ಕೆ ಮಾತ್ರ ಸೀಮಿತವಾಗಿಲ್ಲ; ಇದು ವಿಶ್ವದಾದ್ಯಂತ ತನ್ನ ಸಾಂಸ್ಕೃತಿಕ ಬೇರುಗಳನ್ನು ಹೊಂದಿದೆ. ಆಗ್ನೇಯ ಏಷ್ಯದ ದೇಶಗಳಾದ ಥೈಲ್ಯಾಂಡ್ (ಅಲ್ಲಿ ಇದನ್ನು ‘ರಾಮಕೀನ್’ ಎನ್ನಲಾಗುತ್ತದೆ), ಇಂಡೋನೇಷ್ಯಾ (ಜಾವಾ ಮತ್ತು ಬಾಲಿಯಲ್ಲಿ ರಾಮಾಯಣ ನೃತ್ಯರೂಪಕಗಳು ವಿಶ್ವಪ್ರಸಿದ್ಧ), ಕಾಂಬೋಡಿಯಾ (ಅಂಕೋರ್ ವಾಟ್ ದೇವಾಲಯದಲ್ಲಿ ರಾಮಾಯಣದ ಕೆತ್ತನೆಗಳಿವೆ), ಲಾವೋಸ್ ಮತ್ತು ಮ್ಯಾನ್ಮಾರ್ ದೇಶಗಳಲ್ಲಿ ರಾಮಾಯಣವು ಅವರ ಜಾನಪದ, ಕಲೆ, ಸಾಹಿತ್ಯ ಮತ್ತು ಧರ್ಮದ ಲಭ್ಯ ಭಾಗವಾಗಿದೆ. ಭಾಷೆ, ದೇಶ ಮತ್ತು ಗಡಿಗಳಾಚೆಗೂ ಮಾನವ ಮನಸ್ಸುಗಳನ್ನು ಬೆಸೆಯುವ ಅಪರೂಪದ ಶಕ್ತಿ ರಾಮಾಯಣಕ್ಕಿದೆ. ಆದ್ದರಿಂದಲೇ ರಾಮಾಯಾಣ ಕೃತಿಗೆ ಈ ಪ್ರಸಿದ್ದಿ ಬಂದಿದೆ:

“ಈ ಭೂಮಿಯ ಮೇಲೆ ಎಲ್ಲಿಯವರೆಗೆ ಪರ್ವತಗಳು ನಿಲ್ಲುತ್ತವೆಯೋ ಮತ್ತು ನದಿಗಳು ಹರಿಯುತ್ತವೆಯೋ, ಅಲ್ಲಿಯವರೆಗೆ ರಾಮಾಯಣದ ಕಥೆಯು ಮಾನವಕುಲದ ಹೃದಯದಲ್ಲಿ ಪ್ರಚಲಿತದಲ್ಲಿರುತ್ತದೆ.”

ಅಂತಿಮವಾಗಿ ಒಂದಿಷ್ಟು ವಾಲ್ಮೀಕಿ ರಾಮಾಯಣ ಕುರಿತು ಯೋಚಿಸುವುದಾದರೆ, ಕೇವಲ ಹಿಂದಿನ ಕಾಲದ ಕಥೆಗಳ ಸಂಕಲನವಲ್ಲ. ಬದಲಾಗಿ, ಮನುಷ್ಯನಿಗೆ ಬದುಕಿನ ಮೌಲ್ಯಗಳನ್ನು ಕಲಿಸುವ, ಅಧರ್ಮದ ವಿರುದ್ಧ ಧರ್ಮದ ಗೆಲುವನ್ನು ಸಾರುವ ಮತ್ತು ಪ್ರತಿಯೊಂದು ಯುಗದಲ್ಲೂ ಸಮಾಜಕ್ಕೆ ಹೊಸ ದಿಕ್ಕನ್ನು ತೋರಿಸುವ ಸಾರ್ವಕಾಲಿಕ ದೀಪಸ್ತಂಭವಾಗಿದೆ.

ಡಾ.ಕೃಷ್ಣಮೂರ್ತಿ.ಆರ್ ಉಡೇವಾ, ಸಹಾಯಕ ಪ್ರಾಧ್ಯಾಪಕರು

ಸಿ.ಜಿ ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ಅಕ್ಕಿ ಆಲೂರು. ಮೊಬೈಲ್:9611184944

More articles

Latest article

Most read