ನುಡಿ ನಮನ | ನೆಲದ ಸೊಗಡಿನ ಖಡಕ್ ನಟ: ನಾನಾ ಪಾಟೇಕರ್

ಎಂದೂ ಆಳುವವರಿಗೆ ಜೈಕಾರ ಹಾಕದೆ ತನಗನಿಸಿದ್ದನ್ನು ಅನಿಸಿದಂತೆ ಹೇಳುತ್ತಿದ್ದ ನಾನಾ ಎಂಬ ಅಪ್ಪಟ ಮನುಷ್ಯನೊಬ್ಬ ನಮ್ಮಿಂದ ಭೌತಿಕವಾಗಿ ಮರೆಯಾಗಿದ್ದಾನೆ. ಆತನಿಗೆ ಸರ್ಕಾರ ನೀಡಿದ ನಾಗರಿಕ ಬಹುಮಾನಗಳಿಗಿಂತ ದೊಡ್ಡವೆಂದರೆ ಸಿನೆಮಾ ನಟನೆಯಲ್ಲಿ ಹೀರೋ- ವಿಲ್ಲನ್- ಪೋಷಕ ಪಾತ್ರ ಮೂರಕ್ಕೂ ಬಂದಿರುವ ನ್ಯಾಶನಲ್ ಅವಾರ್ಡಗಳು ಆತನ ನಟನಾ ಶಕ್ತಿಯನ್ನು ನೆನಪಿಸುತ್ತವೆ ಎನ್ನಬಹುದು. ಉಪನ್ಯಾಸಕರಾದ ರೋಹಿತ್‌ ಅಗಸರಹಳ್ಳಿ ಅವರು ಬರೆದ ನುಡಿನಮನ ಇಲ್ಲಿದೆ.

ಸುಮಾರು ಮೂರು ದಶಕಗಳಿಗೂ ಹಿಂದೆ ಬಿಡುಗಡೆಯಾದ ಕ್ರಾಂತಿವೀರ್ ಎಂಬ ಹಿಂದಿ ಸಿನೆಮಾ ಭರ್ಜರಿ ಹಿಟ್ ಆಗಿತ್ತು. ಆಗಷ್ಟೇ ನಾನು ಶಿವಮೊಗ್ಗದಿಂದ ಮೈಸೂರಿಗೆ ಶಿಫ್ಟ್ ಆಗಿದ್ದೆ. ಗೆಳೆಯ ರುದ್ರ ‘ ಸಾಲಾ ಏಕ್ ಮಚ್ಚರ್ ….’ ಡಯಲಾಗಿನ ಅರ್ಥ ಹೇಳಿಕೊಟ್ಟಿದ್ದ. ಮಂಡಿ ಮೊಹಲ್ಲಾದಲ್ಲೇ ಹುಟ್ಟಿ ಬೆಳೆದಿದ್ದ ರುದ್ರ ಬೈ ಲಿಂಗ್ವಿಯಲ್ ಆಗಿಬಿಟ್ಟಿದ್ದ. ಅವನಿಗೆ ಉರ್ದು ಕೂಡ ಕನ್ನಡದಷ್ಟೇ ಸಲೀಸು.

 ತೊಂಬತ್ತರ ದಶಕ ಭಾರತೀಯ ರಾಜಕೀಯ, ಸಾಮಾಜಿಕ ಲೋಕದ ಸ್ಥಿತ್ಯಂತರ ದ ಕಾಲ. ಒಂದೆಡೆ ಅಡ್ವಾನಿಯ ರಥಯಾತ್ರೆ, ನರಸಿಂಗರಾಯರ ಬೋರಿಂಗ್ ರಾಜಕಾರಣ. ಲಂಕೇಶ್ ಪತ್ರಿಕೆಯ ಎಚ್ಚರಿಸುವ ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ. ಎಲ್ಲವೂ ಸೇರಿ ನನ್ನ ಪೀಳಿಗೆಯವರಲ್ಲಿ ಕೆಲವರು ಚೆಡ್ಡಿಗಳಾಗಿ ಹೋದರೆ, ನಮ್ಮಂಥವರು ಆ ಅಪಾಯದಿಂದ ಪಾರಾಗಿಯೂ ಬಿಟ್ಟೆವು! ಆ ಪಾರುಮಾಡುವ ಕ್ರಿಯೆಯಲ್ಲಿ ನಾನಾ ಪಾಟೇಕರ್ ನ ‘ಕ್ರಾಂತಿವೀರ’ದ್ದೂ ಪಾಲಿಲ್ಲವೆಂದು ಹೇಳಲಾಗದು. ಆ ಸಿನೆಮಾದಲ್ಲಿ ಬಹಳ ರೂಕ್ಷವಾಗಿ ಹಿಂದೂ ಮತ್ತು ಮುಸ್ಲಿಮರ ರಕ್ತ ಒಂದೇ ಎಂದು ತೋರುವ ದೃಷ್ಯವೊಂದಿದೆ. ಈಗ ನೋಡಿದರೆ ಅದು ತಮಾಷೆ ಎನಿಸೀತೋ ಏನೊ. ಆದರೆ ಆಗ ಕೋಮುಗಲಭೆಗಳಲ್ಲಿ ಸಾವಿರಾರು ಜನ ಸಾಯುವಾಗ ಜನಪ್ರಿಯ ಶೈಲಿಯಲ್ಲಿ ಹಾಗೇ ಹೇಳಬೇಕಿತ್ತೋ ಏನೊ.

 ನಾನಾ ಮೊನ್ನೆ ತೀರಿಕೊಂಡಾಗಲೇ ಅವನಿಗೆ ಎಪ್ಪತ್ತೈದು ವರ್ಷಗಳೆಂದು ತಿಳಿದದ್ದು. ಅವನೊಬ್ಬ ಹುಟ್ಟು ನಟ ಎಂಬುದು ಅವನ‌ ಒಂದೆರಡೇ ಸಿನೆಮಾ ನೋಡಿದ ಪ್ರೇಕ್ಷಕನಿಗೂ ಅರ್ಥವಾಗಿಬಿಡುತ್ತದೆ. ಹೀರೋ ,ವಿಲನ್ , ಪೋಷಕ ಪಾತ್ರ ಎಂಬ ಕೃತಕ ವಿಭಾಗ ಮಾಡದೆ ಇಮೇಜಿಗೆ ಕಟ್ಟುಬೀಳದೆ ನಟನೆಯನ್ನು ಜೀವಿಸಿದ ನಟ ವಿಶ್ವನಾಥ್ ಪಾಟೇಕರ್. ಹುಟ್ಟಿದ್ದು 1951 ರಲ್ಲಿ. ಸುಖದ ಬದುಕನ್ನು ಕಾಣಲಾರದ ಆತ ಚಿಕ್ಕ ವಯಸಿನಿಂದಲೂ ನಟನೆ ಮತ್ತು ಚಿತ್ರಕತೆಯಿಂದ ಸೆಳೆಯಲ್ಪಟ್ಟವನು. ಸಂಸಾರದ ನೊಗ ಹೊರಬೇಕಾದಾಗ ಸಿನೆಮಾ ಪೋಸ್ಟರುಗಳನ್ನು ಬರೆಯುತ್ತಿದ್ದನಂತೆ. ( ಮೂರ್ನಾಕು ದಶಕಗಳ ಹಿಂದೆ ಈಗಿನಂತೆ ಸಿನೆಮಾ ಪೋಸ್ಟರುಗಳನ್ನು ಅಚ್ಚು ಹಾಕುವ ಪದ್ಧತಿ ಇದ್ದಿರಲಿಲ್ಲ. ಪೋಸ್ಟರುಗಳನ್ನು ಬರೆದೇ ಸಾವಿರಾರು ಕಲಾವಿದರು ಬದುಕಿದ್ದರು. ಮುದ್ರಣ ತಂತ್ರಜ್ಞಾನ ಚಿತ್ರಗಳ ಆಕರ್ಷಣೆ ಹೆಚ್ಚಿಸಿದಂತೆ ಆ ಕಲಾವಿದರ ಬಾಯಿಗೆ ಮಣ್ಣು ಹಾಕಿದ್ದೂ ನಿಜವೆ)

 ನಾಟಕಗಳಲ್ಲಿ ಅಭಿನಯಿಸುತ್ತಲೇ ಬದುಕಿನ ಬಂಡಿ ನಡೆಸುವಾಗ ಅವನ ಕೈಹಿಡಿದ ಹುಡುಗಿ ಸಂಬಳ ತರುತ್ತಿದ್ದವಳಂತೆ. ನಟನೆಯಿಂದ ಅವನ ಮೇಲೆ ಚಪ್ಪಲಿ ಬೀಳುತ್ತಿದ್ದವಂತೆ. ಅದಕ್ಕವನು ಬೀಗುತ್ತಿದ್ದನಂತೆ! ಹೌದು. ಚಪ್ಪಲಿ ಬೀಳಲು  ಕಾರಣ ಅವ ಅಭಿನಯಿಸುತ್ತಿದ್ದ ನೆಗೆಟಿವ್ ರೋಲುಗಳು. ಅಲ್ಲಿ ಚಪ್ಪಲಿ ಬಹುಮಾನವೇ ತಾನೆ?

ನಾನಾ ಪಾಟೇಕರ್

ಸಿನೆಮಾ ಲೋಕಕ್ಕೆ ನಾನಾನನ್ನು ಪರಿಚಯಿಸಿದ್ದು ಶಬಾನಾ ಆಜ್ಮಿ. ಬಹುಶಃ ಗಮನ್ ಆತನ ಮೊದಲ ಸಿನೆಮಾ. ಆನಂತರ ಸಾಲು ಸಾಲು ಚಿತ್ರಗಳೇನೂ ಬರಲಿಲ್ಲ‌. ನಾನಾ ನ ಫಿಲ್ಮೋಗ್ರಫಿ ನೋಡಿದರೆ ಆತನ ನಟನಾ ಅವಧಿ ಮತ್ತು ಚಿತ್ರಗಳ ಸಂಖ್ಯೆಗೆ ತಾಳ ಮೇಳವಿಲ್ಲ‌. ಎಲ್ಲ ಭಾಷೆಗಳೂ ಸೇರಿ ಒಂದು ನೂರರಷ್ಟು ಸಿನೆಮಾಗಳಲ್ಲಿ ನಟಿಸಿರಬಹುದು. ಹೀಗಾಗಿ ಪಾತ್ರಗಳನ್ನು ಒಪ್ಪಿಕೊಳ್ಳುವ ವಿಷಯದಲ್ಲಿ ಆತ ಚ್ಯೂಸಿ ಎಂದು ನಿರ್ವಿವಾದವಾಗಿ ಹೇಳಬಹುದು.‌ ನಿರ್ವಿವಾದ ಎಂದ ಕೂಡಲೆ ವಿವಾದ ಮರೆಯಲೇಬಾರದು. ನಾನಾ ಇದ್ದ ಕಡೆ ಗಲಾಟೆಗಳಿಗೇನೂ ಕೊರತೆ ಇಲ್ಲ. ಅವನು ಕೆಲಸ ಮಾಡಿದ ಬಹುತೇಕ ನಿರ್ದೇಶಕರೊಂದಿಗೆ ಅವನಿಗೆ ತಕರಾರು ಇತ್ತಂತೆ. ಬಹುಶಃ ವ್ಯಕ್ತಿ ಸೃಜನಶೀಲನಾಗಿದ್ದಷ್ಟೂ ಇತರರ ಆಲೋಚನೆಗಳೊಂದಿಗೆ ಹೊಂದಾಣಿಕೆ ಕಷ್ಟವೆಂದು‌ಕಾಣುತ್ತದೆ. ನಟನೆಯನ್ನು ವೃತ್ತಿಪರ ಎಂದಷ್ಟೇ ಅರ್ಥೈಸಿಕೊಂಡವರಿಗೆ ಪಾತ್ರಗಳ ಆಚೆಗೆ ಅವುಗಳೊಂದಿಗೆ  ಯಾವುದೇ ಲೇನಾ ದೇನಾ ಇರುವುದಿಲ್ಲ. ಆದರೆ ನಾನಾ ಹಾಗಲ್ಲ. ಏಕಕಾಲಕ್ಕೆ ಚಿತ್ರಕಲಾವಿದ, ನಿರ್ದೇಶಕ, ನಟ, ಬರೆಹಗಾರ ಎಲ್ಲವೂ ಆಗಿದ್ದ ಅವನಿಗೆ ತಪ್ಪುಗಳು ಎದ್ದು ಕಾಣುತ್ತಿದ್ದಿರಬೇಕು.

 ಹೊಸತನ್ನು ಕಲಿಯುವುದರಲ್ಲಿ ನಾನಾ ಯಾವಾಗಲೂ ಮುಂದು. ಪ್ರಹಾರ್ ಚಿತ್ರದ ಮಿಲಿಟರಿ ಪಾತ್ರ ಅಭಿನಯಿಸಲು ಆತ ವರ್ಷಗಟ್ಟಲೆ ತರಬೇತಿಯಲ್ಲಿ ನಿರತನಾಗಿದ್ದನಂತೆ. ಅದೇ ಇನ್ಫ್ಲೂಯೆನ್ಸ್ ನಲ್ಲಿ ಆತ ನಾಗರಿಕ ಮಿಲಿಟರಿಗೂ ಸೇರ್ಪಡೆಗೊಂಡು ಅಲ್ಲಿಯೂ ಸೇವೆ ಸಲ್ಲಿಸಿ ಬಂದನೆಂಬುದು ಆತನ ವೃತ್ತಿಪರತೆಯ ಮತ್ತೊಂದು ಮಜಲನ್ನೇ ತೆರೆದಿಡುತ್ತದೆ.

ನಾನಾ ಮರಾಠಿ ನೆಲದ ನಟ. ಆತ ಹಿಂದಿ ಮೇನ್ ಸ್ಟ್ರೀಮ್ ಸಿನೆಮಾಗೆ ಬಂದು ನೆಲೆ ಕಂಡುಕೊಳ್ಳುವ ಕಾಲದಲ್ಲಿಯೇ ಖಾನ್ ತ್ರಯರು ತಮ್ಮ ನೆಲೆಯನ್ನು ಗಟ್ಟಿಮಾಡಿಕೊಳ್ಳುತ್ತಿದ್ದರು. ಹೀಗಾಗಿ ಚಾಕೋಲೇಟ್ ಹೀರೋ ಆಗಿ ಅವನು ಅವರೊಂದಿಗೆ ಸ್ಫರ್ಧಿಸಲು ಸಾಧ್ಯವಿರಲಿಲ್ಲ. ಆತ ಹಾಗೆ ಮಾಡಲೂ ಇಲ್ಲ. ತನ್ನ ವ್ಯಕ್ತಿತ್ವಕ್ಕೆ ಹೊಂದುವಂತ ಪಾತ್ರಗಳನ್ನಷ್ಟೇ ಆಯ್ಕೆ ಮಾಡಿಕೊಂಡ. ಲೋಕದ ಸೌಂದರ್ಯದ ಲೆಕ್ಕಾಚಾರ ಗೊತ್ತಿದ್ದ ಅವನೊಮ್ಮೆ , ಕಂಟೆಸ್ಸಾ ಕಾರಿನ ಪಕ್ಕ ನಿಂತ ನನ್ನನ್ನು ಬಹಳ ಮಂದಿ ಅದರ ಡ್ರೈವರ್ ಎಂದೇ ತಿಳಿಯುವರೇ ಹೊರತು ಯಜಮಾನನೆಂದಲ್ಲ ಎಂದು ಹೇಳಿಕೆ ನೀಡಿದ್ದು ನೆನಪು.

 ವೈಯಕ್ತಿಕ ಬದುಕಿನಲ್ಲಿ ನಾನಾ ನಾನಾ ನೋವುಗಳನ್ನು ಅನುಭವಿಸಿದವನೆ. ಅದರಲ್ಲೂ ಮುಖ್ಯವಾಗಿ ತನ್ನ ಮೊದಲ ಮಗನ ಸಾವು. ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದಿದ್ದ ಅವನಿಗೆ ನೆಲದ ಕೂಗು ಅರ್ಥವಾಗುತ್ತಿತ್ತೆಂದು ಕಾಣುತ್ತದೆ. ಹೀಗಾಗಿಯೇ ಮಾರಾಠವಾಡ ಪ್ರದೇಶದಲ್ಲಿ ಭೀಕರ ಬರ ಬಂದಾಗ ಜಡ ಸರ್ಕಾರಗಳ ನಡುವೆ ʼನಾಮ್ ʼ ಎಂಬ ಫೌಂಡೇಷನ್ನು ಸ್ಥಾಪಿಸಿ ಗೆಳೆಯ ಮಕರಂದ್ ಅವರೊಂದಿಗೆ ಸೇರಿ ಚಾರಿಟಿಯ ಕೆಲಸವನ್ನೂ‌ ಮಾಡಿದ. ಇದಕ್ಕೆ ಮುಂಚೆ ವಿದೇಶೀ ಕಾರು‌ ಖರೀದಿಗೆಂದು ಒಂದೂವರೆ ಕೋಟಿ ಹಣ ಕಟ್ಟಿದ್ದವನು ಅದನ್ನು ವಾಪಾಸು‌ ತಂದು ಬಡ ರೈತರಿಗೆ ಹಂಚಿದನಂತೆ. ಇದೇ ಕಾರಣಕ್ಕೆ ನಾನಾ ಹತ್ತರಲ್ಲಿ ಹನ್ನೊಂದು ನಟರಲ್ಲಿ ಒಬ್ಬನಲ್ಲ.

  ನಾನಾನಾ ಚೂಪಾದ ಮೂಗು, ಕಪ್ಪು ಬಣ್ಣ, ಒರಟಾದ ಕೂದಲು, ಅಷ್ಟೇ ಒರಟಾದ ಧ್ವನಿ ಮರಸುತ್ತುವ ಪಾತ್ರಕ್ಕಿಂತ ಖಡಕ್ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಇಲ್ಲವೇ ಅಗ್ನಿಸಾಕ್ಷಿಯ ವಿಕ್ಷಿಪ್ತ ಗಂಡನಂಥ ಪಾತ್ರಗಳಿಗೆ ಹೇಳಿ ಮಾಡಿಸಿದಂತಿರುತ್ತಿತ್ತು.  ಅವನಿಗೆ ಮರಾಠಿ, ಕೊಂಕಣಿ, ಹಿಂದಿಗಳ ಜೊತೆ ಕನ್ನಡ ಭಾಷೆಯೂ ತಿಳಿದಿತ್ತೆಂದು ಕೇಳಿರುವೆ‌. ಅದಕ್ಕೆ ಕಾರಣ , ಆತನ ಬೆಳಗಾಂ ನಂಟು.

ಅವನ ಸಿನೆಮಾವೊಂದರಲ್ಲಿ ಉತ್ತರ ಭಾರತೀಯರು ಉಚ್ಚರಿಸುವ ವೆಶಾಲಿ( ವೈಶಾಲಿ ) ಎಂಬ ಹೆಸರಿನ ಉಚ್ಚಾರಣೆಯನ್ನು ಕೀಟಲೆ ಮಾಡುವ ಸಂಭಾಷಣೆಯೊಂದಿದೆ. ಅದನ್ನೂ ಅವನೇ ಬರೆದಿರಲಿಕ್ಕೂ ಸಾಕು. ಆತನ ಹಲವು ಸಿನೆಮಾಗಳಲ್ಲಿ ತನ್ನ ಭಾಗದ ಸಂಭಾಷಣೆಗಳನ್ನು ಒಂದೋ ತಾನೇ ಬರೆದುಕೊಳ್ಳುವ ಇಲ್ಲವೆ ಫೈನ್‌ಟ್ಯೂನ್ ಮಾಡಿಕೊಳ್ಳುವ ಅಭ್ಯಾಸ ಅವನಿಗಿತ್ತಂತೆ. ಬಹುಶಃ ಅವನು‌ ಮಾಡಿದ ಮೂಗ ಮತ್ತು ಕಿವುಡನ ಪಾತ್ರ ಮಾಡಿದ ಕಾಮೋಶ್ ನಲ್ಲಿ ಆ ಅವಕಾಶ ಆಗಿರಲಿಕ್ಕಿಲ್ಲ! ಏನಾಶ್ಚರ್ಯ ಎಂದರೆ ಆ ನಿರ್ದೇಶಕನೊಂದಿಗೆ ಕೂಡ ನಾನಾ ಇನ್ನೊಂದು ಸಿನೆಮಾ ಮಾಡಲಿಲ್ಲ‌.

ನಾನಾ ಮತ್ತು ನಿರ್ದೇಶಕರ ಜಗಳದ ರೋಚಕ ಕತೆಗಳೇ ಇವೆ. ಸಿನೆಮಾ ಒಂದರ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಮುಂಚೆ ನಾನಾ ಮತ್ತು ನಿರ್ದೇಶಕ ಅಂಗಿ ಹರಿದುಕೊಳ್ಳುವ ಮಟ್ಟಿಗೆ ಕಚ್ಚಾಡಿದರಂತೆ. ಹರಿದ ಅಂಗಿಯಲ್ಲಿ ಶೂಟ್ ಮಾಡಲಾಗದೆ ಕಂಟಿನ್ಯೂಟಿ ಕಾರಣಕ್ಕೆ ಬೇರೆ ಅಂಗಿ ತೊಡಿಸಲೂ ಆಗದೆ ಬನಿಯನ್ನಿನಲ್ಲೇ ಶೂಟಿಂಗ್ ಮುಗಿಸಿದರಂತೆ!

 ನಾನಾ ಹಿಂದಿ  ಮರಾಠಿ ಅಲ್ಲದೆ ಕನ್ನಡ ತಮಿಳು ತೆಲುಗಿನಲ್ಲೂ ಒಂದೆರಡು ಸಿನೆಮಾಗಳಲ್ಲಿ ನಟಿಸಿದ್ದಿದೆ. ತಮಿಳಿನ ಬೊಮ್ಮಲಾಟಂ ಮತ್ತು ಕಾಲಾ ಬಹಳ ಮುಖ್ಯ ಪಾತ್ರಗಳು. ಬೊಮ್ಮಲಾಟಂನಲ್ಲಿ ಹುಡುಗನನ್ನು ಹುಡುಗಿಯಾಗಿ ಮೇಕಪ್ ಮಾಡಿ ಹೀರೋಯಿನ್ ಮಾಡುವ ನಿರ್ದೇಶಕನ ಪಾತ್ರಕ್ಕೆ ಜೀವ ತುಂಬಿದ್ದಾನೆ. ಇನ್ನು ಕಾಲಾದ ಪಾತ್ರವಂತೂ ರಜನಿಕಾಂತ್ ಇಮೇಜಿನ ಮುಂದೆಯೂ ಕುಗ್ಗದ ಗಟ್ಟಿ ನಟನೆ.

ನಾನು ಈ ಮುಂಚೆಯೆ ಹೇಳಿದಂತೆ ವಯಸ್ಸಿಗೆ ತಕ್ಕ ಪಾತ್ರಗಳನ್ನು ಜೀವಿಸಿದ ನಟ ನಾನಾ. ಅದರಲ್ಲಿ ಮುಖ್ಯವಾಗಿ ಯಾತ್ರಾ, ವನವಾಸ್ ಮತ್ತು ನಟಸಾಮ್ರಾಟ್ ಈ ಮೂರೂ ಸಿನೆಮಾಗಳನ್ನು ಹೆಚ್ಚಿನವರು ನೋಡಿರಲಾರರು. ನಟಸಾಮ್ರಾಟ್ ಮರಾಠಿಯಲ್ಲಿ ಗಲ್ಲಾ ಪೆಟ್ಟಿಗೆ ಸೂರೆ ಮಾಡಿದ ಸಿನೆಮಾ. ಇನ್ನು ಯಾತ್ರಾ ಮತ್ತು ವನವಾಸ್ ಎಂಬವು ವೃದ್ಧರ ತವಕ ತಲ್ಲಣ ಹೇಳುವ ಕತೆಗಳು. ನಟಸಾಮ್ರಾಟ್ ಕೂಡ ಇದೇ ಜಾನರ್ ಸಿನೆಮಾ. ಆದರೆ ಅದು ಶೇಕ್ಸ್ ಪಿಯರ್ ನ ನಾಟಕದ ಅಡಾಪ್ಶನ್.

 ಭಾರತದಂತ ದೇಶ ತಲೆಮಾರುಗಳ ಅಂತರವನ್ನು ನಿರ್ವಹಿಸಲಾರದೆ ಒದ್ದಾಡುತ್ತಿರುವುದು ದಿನವೂ ಕಣ್ಣಿಗೆ ಬೀಳುತ್ತಿದೆ. ನಾವು ಬದುಕುವ ರೀತಿಯಲ್ಲಿ ಯೂರೋಪು ಅಮೇರಿಕವನ್ನು ಅನುಕರಿಸಲು ಹೋಗುತ್ತೇವೆ. ನಮ್ಮಿಂದ ಅದೂ ಆಗದು, ಭಾರತೀಯರಂತೆ ಬದುಕಲೂ ಆಗದು. ಈ ಎಡಬಿಡಂಗಿ ಸ್ಥಿತಿಯನ್ನು ಹೇಳುವ ಸಿನೆಮಾಗಳಿವು. ಈ ಮೂರೂ ಸಿನೆಮಾಗಳಲ್ಲಿ ವೃದ್ಧರ ತುಮುಲಗಳನ್ನು ನಾನಾ ನಟಿಸದೆ ಪ್ರೇಕ್ಷಕರಿಗೆ ದಾಟಿಸಿ ಬಿಟ್ಟಿದ್ದಾರೆ. ಒಂದೊಂದೂ ಅಪರೂಪದ ಅಭಿನಯದ ಸಿನೆಮಾಗಳು.

 ಇತ್ತೀಚೆಗೆ ಬಂದ ಸಂಕಲ್ಪ್( ನಿರ್ದೇಶಕ ಪ್ರಕಾಶ್ ಝಾ) ಸಿರೀಸ್  ಹೆಚ್ಚು ಗಮನ ಸೆಳೆಯದೇ ಹೋದರೂ ಮಹತ್ವದ ಪ್ರಯೋಗ. ಪ್ರಕಾಶ್ ಝಾ ಕೂಡೆ ರಾಜ್ ನೀತಿ ಸಿನೆಮಾ ಟೈಮಿನಲ್ಲಿ ಜಗಳವಾಡಿಕೊಂಡಿದ್ದರೂ ಈ ಸಿರೀಸ್ ಹೇಗೆ ನಿರ್ಮಾಣವಾಯಿತೋ‌ ಕಾಣೆ!

 ನಾನಾ ನಟನೆಯ ವಿಷಯದಲ್ಲಿ ನಾನಾ ಹೊಗಳಿಕೆಗಳಿರುವಂತೆ ತೆಗಳಿಕೆಯೂ ಇವೆಯೆನ್ನಿ. ತನುಶ್ರೀ ದತ್ತ ಎಂಬ ಸಮಕಾಲೀನ ನಟಿ ಅವರ ಮೇಲೆ ಮಿ ಟೂ ( ಲೈಂಗಿಕ ಶೋಷಣೆ) ಆರೋಪ ಹೊರಿಸಿದ್ದರು. ನಮ್ಮ ಪೇಟ್ರಿಯಾರ್ಕಿಕಲ್ ಸೊಸೈಟಿಯಲ್ಲಿ ಸಹಜವಾಗಿ ಜರುಗುವಂತೆ ನಾನಾ ಅಭಿಮಾನಗಳು ಎಂದು ಹೇಳಿಕೊಳ್ಳುವವರು ಗಲಾಟೆಯನ್ನು ಎಬ್ಬಿಸಿದರು. ಆ ಕೇಸು‌ ಕೂಡ ಸಾಕ್ಷ್ಯಗಳ ಅಭಾವದಿಂದ ಬಿದ್ದು ಹೋಯ್ತು. ಆದರೆ ಆಕೆ ಮೊನ್ನೆ ಕೂಡ ದೆವ್ವವೊಂದು ಸತ್ತಿತು ಎಂದು ಹೇಳಿ ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ.

 ಒಂದು ಮರೆತ ವಿಷಯ. ನಾನಾ ಎಂದ ಕೂಡಲೆ ಬಹುತೇಕ ಗಂಭೀರ, ಪೊಲೀಸ್ ಅಧಿಕಾರಿ, ವಿಕ್ಷಿಪ್ತ, ವಿಲನ್ ರೋಲ್ ಗಳೇ ಕಣ್ಮುಂದೆ ಬರುವುದು. ಆದರೆ ವೆಲ್ಕಂ ಸಿರೀಸ್ ಸಿನೆಮಾಗಳು ಅವನ ನಟನಾ ಕೌಶಲದ ಮತ್ತೊಂದು ಮಜಲನ್ನು ಪ್ರೇಕ್ಷಕರ ಮುಂದೆ ತೆರದಿಟ್ಟವು. ಬಹುಶಃ ರೀಲ್ಸ್ ಯುಗದಲ್ಲಿ ನಾನಾ ನಗುವ ಒಂದು ಕ್ಲಿಪ್ಪನ್ನು ಎಲ್ಲರೂ ನೋಡಿಯೇ ಇರುತ್ತಾರೆ. ಇದು ಆತನ ನಟನಾ ಕೌಶಲದ ದ್ಯೋತಕ. ಬಹುಶಃ ಎಂದೂ ಆಳುವವರಿಗೆ ಜೈಕಾರ ಹಾಕದೆ ತನಗನಿಸಿದ್ದನ್ನು ಅನಿಸಿದಂತೆ ಹೇಳುತ್ತಿದ್ದ ಅಪ್ಪಟ ಮನುಷ್ಯನೊಬ್ಬ ನಮ್ಮಿಂದ ಭೌತಿಕವಾಗಿ ಮರೆಯಾಗಿದ್ದಾನೆ. ಆತನಿಗೆ ಸರ್ಕಾರ ನೀಡಿದ ನಾಗರಿಕ ಬಹುಮಾನಗಳಿಗಿಂತ ದೊಡ್ಡವೆಂದರೆ ಸಿನೆಮಾ ನಟನೆಯಲ್ಲಿ ಹೀರೋ- ವಿಲ್ಲನ್- ಪೋಷಕ ಪಾತ್ರ ಮೂರಕ್ಕೂ ಬಂದಿರುವ ನ್ಯಾಶನಲ್ ಅವಾರ್ಡಗಳು ಆತನ ನಟನಾ ಶಕ್ತಿಯನ್ನು ನೆನಪಿಸುತ್ತವೆ ಎನ್ನಬಹುದು.

ರೋಹಿತ್ ಅಗಸರಹಳ್ಳಿ‌

ಹಾಸನದ ನಿವಾಸಿಯಾದ ಇವರು ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.

More articles

Latest article

Most read