ಮಾದಕ ದ್ರವ್ಯ ವಿರೋಧಿ ಹೋರಾಟಗಾರನ ಗುಂಡಿಕ್ಕಿ ಹತ್ಯೆ

ಚಂಡೀಗಢ : ಪಂಜಾಬ್‌ನ ಮಾನ್ಸಾದಲ್ಲಿ ಮಾದಕ ದ್ರವ್ಯಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವೈದ್ಯಕೀಯ ಅಂಗಡಿಯ ಮಾಲೀಕರನ್ನು ಪ್ರಶ್ನಿಸಿದ ಮಾದಕ ದ್ರವ್ಯ ವಿರೋಧಿ ಹೋರಾಟಗಾರರೊಬ್ಬರನ್ನು ಮಂಗಳವಾರ ಗುಂಡಿಕ್ಕಿ ಕೊಲ್ಲಲಾಗಿದೆ.

ಔಷಧದ ಅಂಗಡಿಗಳಲ್ಲಿ ವ್ಯಸನಕಾರಿ ಮಾದಕ ದ್ರವ್ಯಗಳ ಅಕ್ರಮ ಮಾರಾಟವನ್ನು ಬಯಲಿಗೆಳೆಯುವಲ್ಲಿ ಹೆಸರುವಾಸಿಯಾಗಿದ್ದ ಹೋರಾಟಗಾರ ಪರ್ವಿಂದರ್ ಸಿಂಗ್ ಜೋತಾ, ತಮ್ಮ ಫೇಸ್‌ಬುಕ್ ಖಾತೆಯ ಲೈವ್ ಸೆಷನ್‌ನಲ್ಲಿ ಅಂಗಡಿಯ ಮಾಲೀಕರನ್ನು “ಮಾದಕ ದ್ರವ್ಯ ಮಾರಾಟ”ದ ವಿಷಯವಾಗಿ ಪ್ರಶ್ನಿಸುತ್ತಿರುವುದು ಕಂಡುಬಂದಿತ್ತು.

ಐದು ನಿಮಿಷಗಳ ವಿಡಿಯೋದಲ್ಲಿ, ಜೋತಾ ಅವರು ವೃದ್ಧರೊಬ್ಬರ ಪಕ್ಕದಲ್ಲಿ ನಿಂತು, ಆ ವೃದ್ಧರು ಸದರಿ ಅಂಗಡಿಯಿಂದ ಮಾದಕ ದ್ರವ್ಯಗಳನ್ನು ಖರೀದಿಸಿದ್ದಾರೆ ಎಂದು ಹೇಳುತ್ತಿರುವುದು ಕಂಡುಬಂದಿದೆ.

ನಂತರ ಜೋತಾ ಮತ್ತು ಅಂಗಡಿ ಮಾಲೀಕರ ನಡುವೆ ತೀವ್ರ ವಾಗ್ವಾದ ನಡೆಯಿತು. ವಿಡಿಯೋದಲ್ಲಿ ಮಾಲೀಕರು ಪಿಸ್ತೂಲ್ ಹಿಡಿದಿರುವುದು ಕಾಣಿಸುತ್ತದೆ.

“ನನ್ನನ್ನು ಕೊಲ್ಲು, ನನ್ನನ್ನು ಕೊಲ್ಲು” ಎಂದು ಅವರು ಪದೇ ಪದೇ ಮಾಲೀಕರಿಗೆ ಹೇಳುತ್ತಿದ್ದರು. “ನೀವು ಏಕೆ ಪಿಸ್ತೂಲ್ ಇಟ್ಟುಕೊಂಡಿದ್ದೀರಿ?” ಎಂದು ಅವರು ಮಾಲೀಕರನ್ನು ಪ್ರಶ್ನಿಸಿದರು. ಪೊಲೀಸರಿಗೆ ಕರೆ ಮಾಡಲು ಮತ್ತು ಹೆಚ್ಚಿನ ಜನರನ್ನು ಕರೆಸಿಕೊಳ್ಳಲು ಅವರು ತಮ್ಮ ಸಹಚರಿಗೆ ಹೇಳುತ್ತಿರುವುದು ಕೂಡ ಕೇಳಿಬಂದಿದೆ. ವಿಡಿಯೋದಲ್ಲಿ, ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸುವಂತೆ ಜೋತಾ ಅಂಗಡಿಯವರನ್ನು ಕೇಳುತ್ತಿರುವುದು ಕೇಳಿಸುತ್ತದೆ.

ಆಗ ಅಂಗಡಿಯವರು ಆ ವೃದ್ಧರನ್ನು ತಮ್ಮಿಂದ ‘ಮಾದಕ ದ್ರವ್ಯ’ ಪಡೆದಿದ್ದೀರಾ ಎಂದು ಕೇಳಿದರು, ಅದಕ್ಕೆ ಜೋತಾ, “ಹೌದು, ನಮ್ಮ ಬಳಿ ರೆಕಾರ್ಡಿಂಗ್ ಇದೆ” ಎಂದು ಉತ್ತರಿಸಿದರು. ಸುಮಾರು ನಾಲ್ಕು ನಿಮಿಷಗಳ ಕಾಲ ವಾಗ್ವಾದ ಮುಂದುವರಿದ ನಂತರ, ಅಂಗಡಿಯವರು ಗುಂಡು ಹಾರಿಸಿದರು, ಇದರಿಂದ ಜೋತಾ ಮೃತಪಟ್ಟರು.

More articles

Latest article

Most read