ರಷ್ಯಾದ ಸಮುದ್ರದಲ್ಲಿ ಡ್ರೋನ್‌ ದಾಳಿ : ತೈಲ ಟ್ಯಾಂಕರ್‌ನಲ್ಲಿದ್ದ 23 ಭಾರತೀಯ ಸಿಬ್ಬಂದಿ ರಕ್ಷಣೆ

ರಷ್ಯಾ : 23 ಭಾರತೀಯ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಲೈಬೀರಿಯಾ ಧ್ವಜದ ತೈಲ ಟ್ಯಾಂಕರ್ ಒಂದಕ್ಕೆ ರಷ್ಯಾದ ಕಪ್ಪು ಸಮುದ್ರದ ಕರಾವಳಿಯಲ್ಲಿ ಬೆಂಕಿ ತಗುಲಿದೆ. ರಷ್ಯಾದ ಅಧಿಕಾರಿಗಳು ಇದನ್ನು ನೌಕಾ ಡ್ರೋನ್‌ಗಳ ದಾಳಿ ಎಂದಿದ್ದು, ಸಿಬ್ಬಂದಿಯನ್ನು ರಕ್ಷಿಸಲಾಗಿದೆ.

‘ಅಫ್ರಾಮ್ಯಾಕ್ಸ್ ರಿಯೊ’ ಎಂದು ಗುರುತಿಸಲಾದ ಈ ಟ್ಯಾಂಕರ್ ಮೇಲೆ ಮಂಗಳವಾರ ನೌಕಾ ಡ್ರೋನ್‌ಗಳಿಂದ ದಾಳಿ ನಡೆದಿದೆ. ಇದರಿಂದ ರಷ್ಯಾದ ಪ್ರವಾಸಿ ನಗರವಾದ ಸೋಚಿಯ ಸಮೀಪ ಬೆಂಕಿ ಕಾಣಿಸಿಕೊಂಡಿದೆ ಎಂದು ರಷ್ಯಾದ ಸಾರಿಗೆ ಸಚಿವಾಲಯ ತಿಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಟ್ಯಾಂಕರ್‌ನಲ್ಲಿದ್ದ ಎಲ್ಲಾ 23 ಸಿಬ್ಬಂದಿ ಭಾರತೀಯ ಪ್ರಜೆಗಳಾಗಿದ್ದು, ದಾಳಿಯ ನಂತರ ಅವರನ್ನು ರಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ. ಸಿಬ್ಬಂದಿಗೆ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಆರಂಭದಲ್ಲಿ ಬೆಂಕಿಯ ತೀವ್ರತೆಯು ಅತಿಯಾಗಿದ್ದರಿಂದ ಅಗ್ನಿಶಾಮಕ ಸಿಬ್ಬಂದಿಗೆ ಟ್ಯಾಂಕರ್‌ನ ಹತ್ತಿರ ಹೋಗಲು ಸಾಧ್ಯವಾಗಲಿಲ್ಲ ಎಂದು ರಷ್ಯಾದ ಸಾರಿಗೆ ಸಚಿವಾಲಯ ಹೇಳಿದೆ. ಬೆಂಕಿಯ ತೀವ್ರತೆ ಕಡಿಮೆಯಾದ ನಂತರ ಅದನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ಸಿಬ್ಬಂದಿ ಮತ್ತೊಂದು ಪ್ರಯತ್ನ ನಡೆಸುವ ನಿರೀಕ್ಷೆಯಿತ್ತು.

ದಾಳಿಯ ನಂತರ ಕಚ್ಚಾ ತೈಲವು ಉರಿಯುತ್ತಿತ್ತು ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಾವಳಿಗಳಲ್ಲಿ ಸಮುದ್ರದಲ್ಲಿ ಪ್ರಜ್ವಲಿಸುತ್ತಿರುವ ಬೆಂಕಿ ಮತ್ತು ಸೋಚಿಯ ಸಮೀಪ ದಟ್ಟವಾದ ಕಪ್ಪು ಹೊಗೆಯ ರಾಶಿ ಏಳುತ್ತಿರುವುದು ಕಂಡುಬಂದಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಘಟನೆಯ ನಂತರ ಸೋಚಿಯ ಅಧಿಕಾರಿಗಳು ಕರಾವಳಿ ಮತ್ತು ಕಡಲತೀರಗಳಿಗೆ ಪ್ರವೇಶವನ್ನು ನಿರ್ಬಂಧಿಸಿದ್ದಾರೆ.

More articles

Latest article

Most read