ಒಣದರ್ಪ ತೋರಬೇಡಿ, ಪೌರ ಕಾರ್ಮಿಕರನ್ನು ಖಾಯಂ ಮಾಡಿ : ಕೃಷ್ಣ ಭೈರೇಗೌಡರಿಗೆ ಎಸ್ ಕೆ ಕೆ ಎಸ್ ಆಗ್ರಹ

ಬೆಂಗಳೂರು ಸೆ. 8: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಪೌರಕಾರ್ಮಿಕರ ವಿರುದ್ಧ ಮಾಡಿದ ಹೇಳಿಕೆಗೆ ಸಫಾಯಿ ಕರ್ಮಚಾರಿ ಕಾವಲು ಸಮಿತಿ-ಕರ್ನಾಟಕ (ಎಸ್‌ಕೆಕೆಎಸ್) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಸಂಘಟನೆಯ ರಾಜ್ಯ ಸಂಚಾಲಕ ಡಾ. ಕೆ.ಬಿ.ಓಬಳೇಶ್ , ಸಚಿವರು ಕಾರ್ಮಿಕರನ್ನು ಹೀಯಾಳಿಸುವ ಬದಲು ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ, ವೇತನ ಅನಿಶ್ಚಿತತೆ ಮತ್ತು ಆರೋಗ್ಯ ಭದ್ರತೆಯ ಕೊರತೆಯನ್ನು ನೋಡಬೇಕು ಎಂದು ಆರೋಪಿಸಿದ್ದಾರೆ.

“ಪೌರಕಾರ್ಮಿಕರು ಶೇ. 30 ಜನ ಕೆಲಸಕ್ಕೆ ಬರಲ್ಲ, ನಿಮ್ಮನ್ನು ಏಕೆ ಖಾಯಂ ಮಾಡಬೇಕು ಎಂದು ನಮ್ಮ ಕಾರ್ಮಿಕರ ಮುಂದೆ ದರ್ಪ ತೋರಿಸಿದ್ದೀರಿ. ಹೌದು ನಿಜ, 30 ಅಲ್ಲ, ಇನ್ನೂ ಜಾಸ್ತಿ ಜನ ಬೆಳಗ್ಗೆ ಎದ್ದು ಕೆಲಸಕ್ಕೆ ಬರುತ್ತಿಲ್ಲ. ಅದಕ್ಕೆ ನಿಜವಾದ ಕಾರಣ ನಿಮಗೆ ಗೊತ್ತಾ?” ಎಂದು ಓಬಳೇಶ್ ಪ್ರಶ್ನಿಸಿದ್ದಾರೆ.

ಸಂಘಟನೆಯ ಪ್ರಕಾರ ಸಮಸ್ಯೆ ಕಾರ್ಮಿಕರು ಕಾರಣರಲ್ಲ, ಆಡಳಿತ ವ್ಯವಸ್ಥೆಯಲ್ಲಿನ ಲಂಚ, ವಿಭಜಿತ ಉದ್ಯೋಗ ಮಾದರಿ ಮತ್ತು ಮೂಲಭೂತ ಸೌಕರ್ಯದ ಕೊರತೆಯೇ ಕಾರಣ ಎಂದು ಅವರು ವಿವರಿಸಿದ್ದಾರೆ.

ಪೌರಕಾರ್ಮಿಕರಿಗೆ ದೊಡ್ಡ ಮಾಮೂಲು, ಚಿಕ್ಕ ಮಾಮೂಲು, ತಡವಾಗಿ ಬಂದರೆ ಇನ್ನೊಂದು ಮಾಮೂಲು ಸೃಷ್ಟಿಸಿ ಪ್ರತಿದಿನ ಲಂಚ ಕಿತ್ತುಕೊಳ್ಳುವ ಅಧಿಕಾರಿಗಳ ಬಗ್ಗೆ ಸಚಿವರಿಗೆ ತಿಳಿದಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಕಸ ಮತ್ತು ಘನತ್ಯಾಜ್ಯದ ಹೆಸರಿನಲ್ಲಿ ಅಧಿಕಾರಿಗಳು, ಸಚಿವರು, ಶಾಸಕರು ಎಷ್ಟು ಹಣ ಮಾಡಿದ್ದಾರೆ ಎಂಬುದು ಸಾರ್ವಜನಿಕರಿಗೆ ತಿಳಿಯಬೇಕು.

ಸರ್ಕಾರಿ ಲೆಕ್ಕದಲ್ಲಿ ಪ್ರತಿದಿನ ಸುಮಾರು 5,500 ಆಟೋಗಳು ಕಸ ಸಾಗಾಣಿಕೆ ಮಾಡಬೇಕು. ನಿಜಕ್ಕೂ ಎಷ್ಟು ಆಟೋಗಳು ರಸ್ತೆಯಲ್ಲಿವೆ ಎಂದು ಸಚಿವರು ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಲೋಡರ್, ಕ್ಲೀನರ್ ಮತ್ತು ಮನೆಮನೆ ಕಸ ಸಂಗ್ರಹಿಸುವವರಿಗೆ ಪ್ರತಿ ತಿಂಗಳು ನಿಜವಾಗಿ ಎಷ್ಟು ಸಂಬಳ ಸಿಗುತ್ತದೆ ಎಂಬುದು ಸಚಿವರಿಗೆ ಗೊತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ವರ್ಷಗಳಿಂದ ಪೌರಕಾರ್ಮಿಕರು ಸರ್ಕಾರ ಮತ್ತು ಬಿಬಿಎಂಪಿಗೆ ಆರೋಗ್ಯ ಕಾರ್ಡ್ ಕೇಳುತ್ತಿದ್ದಾರೆ. ಅದು ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರವಿಲ್ಲ
ಬೆಂಗಳೂರು ಮತ್ತು ರಾಜ್ಯದ ಇತರ ನಗರಗಳಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಲ್ಲಿ ಶೇ. 90ರಷ್ಟು ಮಹಿಳೆಯರಿದ್ದಾರೆ. ಅವರಿಗಾಗಿ ಎಷ್ಟು ಶೌಚಾಲಯಗಳನ್ನು ಕಟ್ಟಿಸಲಾಗಿದೆಯೇ ಎಂದು ಸಚಿವರನ್ನು ಪ್ರಶ್ನಿಸಿದ್ದಾರೆ.

ಪೌರಕಾರ್ಮಿಕ, ಔಟ್‌ಸೋರ್ಸ್, ಸ್ವಚ್ಛ ಮಾಡುವವರು, ಕಸ ಸಂಗ್ರಹಕರು, ಲೋಡರ್, ಕ್ಲೀನರ್, ವಾಹನ ಚಾಲಕರು ಎಂದು ಕಾರ್ಮಿಕರನ್ನು ಹಲವು ವರ್ಗಗಳಾಗಿ ಒಡೆದು ಎಲ್ಲರನ್ನೂ ಮೋಸ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ ಶೇ. 24ರ ಎಸ್‌ಸಿ ಮೀಸಲಿನಡಿ ಇರುವ ಹಣದಲ್ಲಿ ಪೌರಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಎಷ್ಟು ವಿನಿಯೋಗವಾಗುತ್ತದೆ ಎಂಬುದೂ ಸಾರ್ವಜನಿಕ ಲೆಕ್ಕಪರಿಶೋಧನೆಗೆ ಬರಬೇಕು.

“ಪೌರಕಾರ್ಮಿಕರು, ಕಸ ಸಾಗಾಣಿಕೆ ವಿಷಯದಲ್ಲಿ ಪ್ರತಿ ಇಂಚಿಗೂ ಮೋಸ, ಭ್ರಷ್ಟಾಚಾರ, ವಂಚನೆ ನಡೆಯುತ್ತಿದೆ. ಇದಾವತ್ತೂ ನಿಮಗೆ ಗೊತ್ತಿಲ್ಲ, ಆದರೆ ಬೆಳಗ್ಗೆ ಚೆಕ್ ಮಾಡಲು ಬಂದು ಪೌರಕಾರ್ಮಿಕರನ್ನು ಹೀಯಾಳಿಸಿ ಬೈಯುತ್ತೀರಾ. ನಿಮ್ಮ ದೌರ್ಜನ್ಯ ನಿಮ್ಮ ಮನೆಯಲ್ಲಿಟ್ಟುಕೊಳ್ಳಿ.” ಎಂದು ಅವರು ಖಾರವಾಗಿ ಟೀಕಿಸಿದ್ದಾರೆ.

ಬೆಂಗಳೂರಿನಲ್ಲಿ ಮನೆಮನೆ ಕಸ ಸಂಗ್ರಹಿಸುವ ಸ್ವಚ್ಛತಾ ಕಾರ್ಮಿಕರು, ಆಟೋ ಹಾಗೂ ಟಿಪ್ಪರ್‌ನ ಲೋಡರ್-ಕ್ಲೀನರ್ ಮತ್ತು ಚಾಲಕರನ್ನು ಬಿಬಿಎಂಪಿ ಖಾಯಂ ಕಾರ್ಮಿಕರೆಂದು ಇಂದೇ ಘೋಷಿಸಬೇಕು. ಪೌರಕಾರ್ಮಿಕರಿಗೆ ನ್ಯಾಯಯುತ ಗೌರವ ಸಲ್ಲಿಸಿ, ಸುತ್ತಮುತ್ತಲಿನ ಭ್ರಷ್ಟ ಅಧಿಕಾರಿಗಳನ್ನು ನಿಯಂತ್ರಿಸಿ, ಒಬ್ಬೊಬ್ಬರನ್ನು ಒಂದೊಂದು ಜಿಲ್ಲೆಗೆ ವರ್ಗಾಯಿಸಿದರೆ ಮಾತ್ರ ನಗರ ಸ್ವಚ್ಛವಾಗುತ್ತದೆ. ಅದನ್ನು ಬಿಟ್ಟು ಒಣ ದರ್ಪ ತೋರಿಸುವುದು ನ್ಯಾಯವಲ್ಲ ಎಂದು ಓಬಳೇಶ್ ಹೇಳಿದ್ದಾರೆ.

More articles

Latest article

Most read