KPSC ಹಗರಣ : ಜ್ಞಾನೇಂದ್ರ, ಕನ್ನಾಳೆ, ಪವನ್ ನಡುವೆ ದಿಲ್ಲಿಯಲ್ಲೇ ದೋಸ್ತಿ, ತನಿಖೆಯಲ್ಲಿ ಬಹಿರಂಗ

ಬೆಂಗಳೂರು ಸೆ. 4 : KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದ ತನಿಖೆ ಮತ್ತಷ್ಟು ತೀವ್ರಗೊಂಡಿದ್ದು, ಪ್ರಕರಣದ ಆರೋಪಿಗಳ ನಡುವಿನ ಹಳೆಯ ಸ್ನೇಹ ಮತ್ತು ಸಂಪರ್ಕಗಳು ಇದೀಗ CID ತನಿಖೆಯ ಕೇಂದ್ರಬಿಂದುವಾಗಿವೆ. 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪದ ಕುರಿತು CID ತನಿಖೆ ನಡೆಸುತ್ತಿದ್ದು, ಈಗಾಗಲೇ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ಬಂಧನಕ್ಕೊಳಗಾಗಿದ್ದಾರೆ.

ದೆಹಲಿ ಕೋಚಿಂಗ್‌ನಲ್ಲೇ ಮೂವರ ಸ್ನೇಹ?

ಜ್ಞಾನೇಂದ್ರ ಕುಮಾರ್, ಬಸವರಾಜ್ ಕನ್ನಾಳೆ ಹಾಗೂ ಪವನ್ ರೆಡ್ಡಿ 2015ಕ್ಕೂ ಮೊದಲೇ UPSC ಪರೀಕ್ಷೆ ತಯಾರಿಗಾಗಿ ದೆಹಲಿಯಲ್ಲಿ ಒಟ್ಟಿಗೆ ಕೋಚಿಂಗ್ ಪಡೆದಿದ್ದರು ಎನ್ನಲಾಗಿದೆ. ಮೂವರೂ ಸ್ನೇಹಿತರಾಗಿದ್ದು, ಬಳಿಕ KPSC ನೇಮಕಾತಿ ಪ್ರಕ್ರಿಯೆಯಲ್ಲೂ ಇವರ ಸಂಪರ್ಕ ಮುಂದುವರಿದಿತ್ತು ಎಂಬ ಆರೋಪ ಇದೀಗ ತನಿಖೆಯಲ್ಲಿ ಮಹತ್ವ ಪಡೆದಿದೆ.

ಕನ್ನಾಳೆ ಮತ್ತು ಪವನ್ ರೆಡ್ಡಿ UPSC ಪರೀಕ್ಷೆಯಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಜ್ಞಾನೇಂದ್ರ ಕುಮಾರ್ UPSC ತೇರ್ಗಡೆಯಾಗಿ ಬಳಿಕ ಬಸವಕಲ್ಯಾಣದಲ್ಲಿ AC ಆಗಿ ಸೇವೆ ಸಲ್ಲಿಸಿದ್ದರು. 2019ರಲ್ಲಿ ಅವರು ಬೀದರ್ ಜಿಲ್ಲಾ ಪಂಚಾಯತ್ CEO ಆಗಿಯೂ ಕಾರ್ಯನಿರ್ವಹಿಸಿದ್ದರು. ಜ್ಞಾನೇಂದ್ರ ಕುಮಾರ್ 2024ರಿಂದ 2026ರವರೆಗೆ KPSC ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯೂ ಈಗ CID ತನಿಖೆಯ ಪ್ರಮುಖ ಅಂಶವಾಗಿದೆ.

ಈ ಸ್ನೇಹವೇ KPSC ಹಗರಣದ ಜಾಲಕ್ಕೆ ಸಂಪರ್ಕ ಕಲ್ಪಿಸಿತೇ ಎಂಬುದನ್ನು CID ಪರಿಶೀಲಿಸುತ್ತಿದೆ. ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಅಭ್ಯರ್ಥಿಗಳಿಂದ ಹಣ ಪಡೆಯುವುದು, ರಹಸ್ಯ ಸ್ಥಳಗಳಲ್ಲಿ ಪರೀಕ್ಷೆ ನಡೆಸುವುದು ಹಾಗೂ OMR ಉತ್ತರ ಪತ್ರಿಕೆಗಳಲ್ಲಿ ಅಕ್ರಮದ ಆರೋಪಗಳು ತನಿಖೆಯಲ್ಲಿವೆ.

ಪವನ್ ರೆಡ್ಡಿ ನಾಪತ್ತೆ?

ತನಿಖೆ ಚುರುಕುಗೊಂಡ ಬೆನ್ನಲ್ಲೇ ಕನ್ನಾಳೆಯ ಆಪ್ತ ಸ್ನೇಹಿತ ಎನ್ನಲಾಗಿರುವ ಬೀದರ್‌ನ ಪವನ್ ರೆಡ್ಡಿ ನಾಪತ್ತೆಯಾಗಿರುವ ಮಾಹಿತಿ ಹೊರಬಿದ್ದಿದೆ. ನಿನ್ನೆ CID ಅಧಿಕಾರಿಗಳು ಪವನ್ ರೆಡ್ಡಿ ಮನೆ ಮೇಲೂ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಜ್ಞಾನೇಂದ್ರ–ಕನ್ನಾಳೆ–ಪವನ್ ರೆಡ್ಡಿ ನಡುವಿನ ಸಂಪರ್ಕದ ಬಗ್ಗೆ ತನಿಖೆ ಮತ್ತಷ್ಟು ಕುತೂಹಲ ಮೂಡಿಸಿದೆ.

ಈ ನಡುವೆ ಪ್ರಕರಣದಲ್ಲಿ ಹುದ್ದೆ ಕೊಡಿಸುವುದಾಗಿ ₹40 ಲಕ್ಷದಿಂದ ₹80 ಲಕ್ಷದವರೆಗೆ ಹಣದ ಬೇಡಿಕೆ ಇಡಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ. ಕೆಲವು ಅಭ್ಯರ್ಥಿಗಳನ್ನು ರೆಸಾರ್ಟ್‌ಗಳಲ್ಲಿ ಇರಿಸಿ ಪರೀಕ್ಷೆಗೆ ಸಿದ್ಧಪಡಿಸಲಾಗಿತ್ತು ಎಂಬ ಆರೋಪಗಳನ್ನೂ CID ಪರಿಶೀಲಿಸುತ್ತಿದೆ. 329 ಅಭ್ಯರ್ಥಿಗಳ OMR ಉತ್ತರ ಪತ್ರಿಕೆಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.

ಶಿವಶಂಕರಪ್ಪಗೂ ಬಂಧನದ ಭೀತಿ

ಇತ್ತ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣದ ತನಿಖೆ KPSC ಮಾಜಿ ಅಧ್ಯಕ್ಷ ಎಸ್. ಶಿವಶಂಕರಪ್ಪ ಸಾಹುಕಾರ್ ಅವರಿಗೂ ಬಿಸಿ ಮುಟ್ಟಿಸಿದೆ. ವಿಚಾರಣೆಗೆ ಹಾಜರಾಗುವಂತೆ CID ಸೂಚಿಸಿದ್ದರೂ ಈ ಹಿಂದೆ ಗೈರಾಗಿದ್ದ ಶಿವಶಂಕರಪ್ಪ ಅವರಿಗೆ ಹೈಕೋರ್ಟ್ ಜಾಮೀನು ಅರ್ಜಿ ವಿಚಾರಣೆ ವೇಳೆ ತರಾಟೆಗೆ ತೆಗೆದುಕೊಂಡಿತ್ತು.

ಹೈಕೋರ್ಟ್ ಮಧ್ಯಂತರ ರಕ್ಷಣೆ ನೀಡದ ಹಿನ್ನೆಲೆಯಲ್ಲಿ ಇದೀಗ ಅನಿವಾರ್ಯವಾಗಿ CID ಮುಂದೆ ಹಾಜರಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ವಿಚಾರಣೆಯ ಬಳಿಕ ಶಿವಶಂಕರಪ್ಪ ಅವರನ್ನೂ ಬಂಧಿಸುವ ಸಾಧ್ಯತೆ ಇದೆ.

ಪ್ರಕರಣದಲ್ಲಿ ಶಿವಶಂಕರಪ್ಪ ಸೇರಿದಂತೆ KPSCಯ ಅಧಿಕಾರಿಗಳು, ಸದಸ್ಯರು, ಆಯ್ಕೆಯಾದ ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳ ಪಾತ್ರದ ಬಗ್ಗೆ CID ತನಿಖೆ ಮುಂದುವರಿಸಿದೆ.

ಒಟ್ಟಿನಲ್ಲಿ, UPSC ಕೋಚಿಂಗ್ ದಿನಗಳ ಸ್ನೇಹಿತರಾಗಿದ್ದರೆನ್ನಲಾದ ಜ್ಞಾನೇಂದ್ರ–ಕನ್ನಾಳೆ–ಪವನ್ ರೆಡ್ಡಿ ಸಂಪರ್ಕ, KPSCಯಲ್ಲಿ ನಡೆದಿರುವ ಅಕ್ರಮದೊಂದಿಗೆ ಹೇಗೆ ಬೆಸೆದುಕೊಂಡಿದೆ ಎಂಬುದೇ ಈಗ CID ಮುಂದಿರುವ ಪ್ರಮುಖ ಪ್ರಶ್ನೆಯಾಗಿದೆ.

More articles

Latest article

Most read