ಮತ್ತೆ ವಂದೇ ಮಾತರಂ ವಿವಾದ

ದೇಶಾದ್ಯಂತ ವಿದ್ಯಾರ್ಥಿ ಯುವಕರು ಬಿಜೆಪಿಯ ಕೇಂದ್ರ ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ‌ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಹಿಂಸಾತ್ಮಕ ಕ್ರಮ ತೆಗೆದುಕೊಂಡು ಪ್ಯಾಲೆಟ್ ಗುಂಡು ಹಾರಿಸಿದ್ದಕ್ಕೆ ಸರಕಾರದ ವಿರುದ್ಧ ಪೋಷಕರು ಸಿಟ್ಟಿಗೆದ್ದಿದ್ದಾರೆ. ಸಂಸತ್ತಿನಲ್ಲಿ ಉತ್ತರ ಕೊಡಬೇಕಾದ ಪ್ರಧಾನ ಮಂತ್ರಿ ಮತ್ತು ಗೃಹ ಮಂತ್ರಿ ಉತ್ತರಿಸಲಾಗದೇ  ಪಲಾಯನ ಮಾಡಿದ್ದಾರೆ. ದೇಶಾದ್ಯಂತ ಮೋದಿ ವಿರೋಧಿ ಅಲೆ ಜೋರಾಗಿದೆ. ಬಿಜೆಪಿ ಸರಕಾರದ ಬುನಾದಿ ಅಪಾಯದಲ್ಲಿದೆ. ಹೀಗಿರುವಾಗ ಜನರ ಗಮನವನ್ನು ದೇಶಪ್ರೇಮದತ್ತ ಸೆಳೆಯಲು ಬಿಜೆಪಿಯು ಮತ್ತೆ ತನ್ನ ಭಾವನಾತ್ಮಕ ಅಸ್ತ್ರ ಬಳಸಲು ಮುಂದಾಗಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ವಿದ್ಯಾರ್ಥಿ ಯುವಜನರಿಗೆ ಆತಂಕ ಕಾಡುತ್ತಿದೆ. ಶಾಲೆಗಳು ಮುಚ್ಚುತ್ತಿವೆ, ಬೆಲೆ ಏರಿಕೆ ಹೆಚ್ಚುತ್ತಿದೆ. ಸಾವಿರಾರು ಸಮಸ್ಯೆಗಳು ಜನಸಾಮಾನ್ಯರನ್ನು ಕಾಡುತ್ತಿವೆ. ಈ ಕುರಿತು ಗಮನ ಹರಿಸುವುದನ್ನು ಬಿಟ್ಟು ಪ್ರಭುತ್ವ ಎನ್ನುವುದು ಜನರ ಭಾವನೆಗಳನ್ನು ಬಡಿದೆಬ್ಬಿಸುವ ಅವಕಾಶವನ್ನು ಉಲ್ಬಣಗೊಳಿಸುತ್ತಿದೆ. ಮತ್ತೆ ವಂದೇ ಮಾತರಂ ವಿವಾದವನ್ನು ಮುನ್ನಲೆಗೆ ತಂದಿದೆ.

ಈಗಾಗಲೇ ನಮ್ಮ ದೇಶಕ್ಕೆ ರವಿಂದ್ರನಾಥ ಟ್ಯಾಗೋರರ ಜನಮನಗಣ ಗೀತೆ ರಾಷ್ಟ್ರಗೀತೆ ಇದೆ. ಆದರೂ ‘ವಂದೇ ಮಾತರಂ’  ಕೂಡಾ ಜನಮನಗಿಂತಾ ಮೊದಲೇ ಹಾಡಲೇಬೇಕಾದ ಇನ್ನೊಂದು ರಾಷ್ಟ್ರಗೀತೆ ಎಂದು ಬಿಜೆಪಿ ದೇಶದ ಜನರ ಮೇಲೆ ಕಡ್ಡಾಯದ ಹೇರಿಕೆ ಮಾಡಿದೆ. ಅದಕ್ಕಾಗಿಯೇ ‘ವಂದೇ ಮಾತರಂ’ ಗೆ ರಾಷ್ಟ್ರಗೀತೆಯ ಸಮಾನ ಗೌರವ ನೀಡುವ ಮತ್ತು ಅವಮಾನಿಸಿದರೆ ತಕ್ಕ ಶಿಕ್ಷೆ ನೀಡುವ ಕಾನೂನನ್ನು ಕೇಂದ್ರ ಸರಕಾರ ತಂದಿದೆ. ಅದಕ್ಕೆ “Prevention of Insult to National Honour (Amendment) Bill 2026” ಎಂದು ಮರುನಾಮಕರಣ ಮಾಡಲಾಗಿದೆ.‌  ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಗಟ್ಟುವ 1971 ರ ಕಾಯಿದೆಗೆ ತಿದ್ದುಪಡಿ ತಂದಿದೆ. 

ಆರೆಸ್ಸೆಸ್ ಎನ್ನುವ ಹಿಂದುತ್ವವಾದಿ ಬೇನಾಮಿ ಸಂಘದ ರಾಜಕೀಯ ಅಂಗವಾಗಿರುವ ಬಿಜೆಪಿ ಪಕ್ಷಕ್ಕೆ ತನ್ನ ಮಾತೃ ಸಂಘಟನೆಯ ಸೈದ್ಧಾಂತಿಕ ರಾಜಕೀಯ ಉದ್ದೇಶವನ್ನು ಜಾರಿಗೆ ತರುವ ಆತುರ. ಅದಕ್ಕಾಗಿಯೇ ಈ “ವಂದೇ ಮಾತರಂ” ಕಡ್ಡಾಯ ಕಾರ್ಯಾಚರಣೆ. ಯಾವುದೇ ಮಸೂದೆ ಜಾರಿಯಾಗಬೇಕಾದರೆ ಅಥವಾ ತಿದ್ದುಪಡಿಯಾಗಬೇಕಾದರೆ ಸಂಸತ್ತಿನಲ್ಲಿ ಆ ಕುರಿತು ಸಮಗ್ರ ಚರ್ಚೆ ಮಾಡಿ ಬಹುಮತದ ನಿರ್ಣಯ ತೆಗೆದುಕೊಳ್ಳಲೇಬೇಕು. ಆದರೆ ಪೂರ್ಣ ಪ್ರಮಾಣದಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯ ಮಾಡುವ ಮಸೂದೆ ಜಾರಿ ಕುರಿತು ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆ 2026 ಜುಲೈ 30 ರಂದು ಕೇವಲ 15 ನಿಮಿಷದಲ್ಲಿ ಅನುಮೋದನೆ ಮಾಡಿಕೊಂಡ ಬಿಜೆಪಿ ಸರಕಾರ 2026 ಆಗಸ್ಟ್ 11 ರಂದು ರಾಷ್ಟ್ರಪತಿಗಳ ಅಂಕಿತವನ್ನೂ ಪಡೆದು ಮಸೂದೆಯನ್ನು ಕಾಯಿದೆಯಾಗಿ ಜಾರಿಗೊಳಿಸಿತು.  ಸಂಖ್ಯಾಬಲವನ್ನು ದುರುಪಯೋಗ ಪಡಿಸಿಕೊಂಡಿತು. ಉದ್ದೇಶಪೂರ್ವಕವಾಗಿ ವಂದೇ ಮಾತರಂ ಹಾಡುವುದನ್ನು ತಡೆಯುವುದು ಅಥವಾ ಅಡ್ಡಿಪಡಿಸುವುದನ್ನು ಅಪರಾಧವಾಗಿ ಪರಿಗಣಿಸಿ ಗರಿಷ್ಠ ಮೂರು ವರ್ಷ ಜೈಲು, ದಂಡ ಅಥವಾ ಎರಡನ್ನೂ ನಿಗದಿಪಡಿಸಲಾಯ್ತು.

ವಂದೇ ಮಾತರಂ ಇತಿಹಾಸ

ವಂದೇ ಮಾತರಂ ಅಂದರೆ ತಾಯಿಗೆ ನಮಸ್ಕಾರ ಎಂದರ್ಥ. ಇಲ್ಲಿ ತಾಯಿ ಅಂದರೆ ಮಾತೃಭೂಮಿ, ದೇಶ ಎಂದೂ ಅರ್ಥ. ಬಂಗಾಳಿ ಸಾಹಿತಿ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ರವರು 1875 ರಲ್ಲಿ ವಂದೇ ಮಾತರಂ ಕವಿತೆಯನ್ನು ಸಂಸ್ಕತೀಕೃತ ಬೆಂಗಾಳಿ ಭಾಷೆಯಲ್ಲಿ ರಚಿಸಿದರು. ನಂತರ 1882 ರಲ್ಲಿ ಅವರ ‘ಆನಂದಮಠ’ ಎನ್ನುವ ಕಾದಂಬರಿಯಲ್ಲಿ ಈ ಕವಿತೆಯನ್ನು ಸೇರಿಸಿದರು. ಈ ಕಾದಂಬರಿಯು 18 ನೇ ಶತಮಾನದಲ್ಲಿ ಬಂಗಾಳದಲ್ಲಿ ನಡೆದ ಸನ್ಯಾಸಿ ದಂಗೆ ಕುರಿತದ್ದಾಗಿದ್ದು ಅದರಲ್ಲಿ ಸನ್ಯಾಸಿಗಳು ಮಾತೃಭೂಮಿಯನ್ನು ದೇವತೆಯಂತೆ ಪೂಜಿಸಿ ಹೋರಾಡುವ ಕಥೆ ಇದೆ. ಈ ಹಾಡಿನ ಮೊದಲ ಎರಡು ಚರಣಗಳು ಮಾತೃಭೂಮಿಯ ಸೌಂದರ್ಯ ಸಮೃದ್ಧಿ ಮತ್ತು ಶಕ್ತಿಯನ್ನು ವರ್ಣಿಸಿದರೆ ಉಳಿದ ನಾಲ್ಕು ಚರಣಗಳಲ್ಲಿ ದುರ್ಗಾ ಲಕ್ಷ್ಮಿ ಸರಸ್ವತಿ ದೇವತೆಗಳ ಉಲ್ಲೇಖವಿದೆ.

1905 ರ ಬಂಗಾಳ ವಿಭಜನೆಯ ವಿರುದ್ಧ ನಡೆದ ಸ್ವದೇಶಿ ಚಳುವಳಿಯಲ್ಲಿ ವಂದೇ ಮಾತರಂ ಎನ್ನುವುದು ಪ್ರಮುಖ ಘೋಷಣೆ ಮತ್ತು ಹಾಡಾಗಿ ಮಾರ್ಪಡುತ್ತದೆ. ಬ್ರಿಟೀಷ್ ಸರಕಾರ ಇದನ್ನು ನಿಷೇಧಿಸುತ್ತದೆ. ದೇಶಭಕ್ತಿಯ ಪ್ರತೀಕವಾಗಿ ವಂದೇ ಮಾತರಂ ಪ್ರತಿಧ್ವನಿಸುತ್ತದೆ.

1937 ರಲ್ಲಿ ಕೊಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ಸಿನ ವರ್ಕಿಂಗ್ ಕಮಿಟಿ ಅಧಿವೇಶನದಲ್ಲಿ ರವೀಂದ್ರನಾಥ ಟಾಗೋರರವರ ಸಲಹೆ ಮೇರೆಗೆ “ವಂದೇ  ಮಾತರಂ” ಹಾಡಿನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು  ಗಾಂಧೀಜಿ, ನೆಹರು, ಸುಭಾಷಚಂದ್ರ ಭೋಸ್, ಮೌಲಾನಾ ಅಜಾದ್ ಮುಂತಾದ ನಾಯಕರ ಸಮ್ಮುಖದಲ್ಲಿ ನಿರ್ಧರಿಸಲಾಯಿತು. ಬಾಕಿ ನಾಲ್ಕು ಚರಣಗಳನ್ನು ಕೈಬಿಡಲಾಯ್ತು.

ಆದರೆ ದೇಶದ ಸ್ವಾತಂತ್ರ್ಯಕ್ಕೆ ಯಾವುದೇ ಕೊಡುಗೆ ನೀಡದೆ ಬ್ರಿಟೀಷರ ಜೊತೆ ಶಾಮೀಲಾಗಿದ್ದ ಇತಿಹಾಸ ಇರುವ ಆರೆಸ್ಸೆಸ್ ಹಾಗೂ ಬಿಜೆಪಿ ಸರಕಾರಕ್ಕೆ ವಂದೇ ಮಾತರಂ ಮೇಲೆ ಇದ್ದಕ್ಕಿದ್ದಂತೆ ಪ್ರೀತಿ ಉಕ್ಕೇರಿತು. ಈ ಹಾಡನ್ನು ಇಡಿಯಾಗಿ ಹಾಡಲೇಬೇಕೆಂದು ಕಾಯಿದೆ ತಂದಿತು.

ಈ ಕಾಯಿದೆ ಜಾರಿಯ ಹಿಂದಿರುವ ಶಕ್ತಿ ಆರೆಸ್ಸೆಸ್ ಎನ್ನುವುದು ನಿರ್ವಿವಾದ. ಈ ಹುಸಿ ರಾಷ್ಟ್ರೀಯವಾದಿ ಸಂಘವೇ 1950 ರಿಂದ 2002 ರ ವರೆಗೆ 52 ವರ್ಷಗಳ ಕಾಲ ಒಂದೇ ಒಂದು ಸಲವೂ ತನ್ನ ನಾಗಪುರದ ಕೇಂದ್ರ ಕಚೇರಿಯಾದ ಸ್ಮೃತಿ ಭವನದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ. ಆಗ ಖಾಸಗಿ ಸಂಸ್ಥೆಗಳಿಗೆ ರಾಷ್ಟ್ರದ್ವಜ ಕಡ್ಡಾಯ ಇರಲಿಲ್ಲ ಎಂದು ಸಬೂಬು ಹೇಳಿ ಸಮರ್ಥಿಸಿಕೊಳ್ಳುತ್ತಾರೆ. ಜನವರಿ 26, 2002 ರ ಗಣರಾಜ್ಯೋತ್ಸವದಂದು ರಾಷ್ಟ್ರಪ್ರೇಮಿ ಯುವದಳದ ಮೂವರು ಕಾರ್ಯಕರ್ತರು ಆರೆಸ್ಸೆಸ್ ಕೇಂದ್ರ ಕಚೇರಿಯನ್ನು ಬಲವಂತವಾಗಿ ಪ್ರವೇಶಿಸಿ ತ್ರಿವರ್ಣ ಧ್ವಜವನ್ನು ಹಾರಿಸಿದಾಗ ಅವರ ಮೇಲೆ ದೂರು ಕೊಟ್ಟು ಜೈಲಿಗೆ ಹಾಕಿಸಿದವರು ಇದೇ ಸಂಘದವರು. 11 ವರ್ಷ ಕೋರ್ಟ್‌ ಲ್ಲಿ ವಿಚಾರಣೆ ನಡೆದಾದ ನಂತರ ಆ ನಿಜವಾದ ದೇಶಪ್ರೇಮಿಗಳಿಗೆ ಬಿಡುಗಡೆ ಸಿಕ್ಕಿತ್ತು.

ಅದೇ ಆರೆಸ್ಸೆಸ್ ಸಂಘದ ಪಿತಾಮಹರಾದ ಎಂ.ಎಸ್.ಗೋಳ್ವಾಲ್ಕರ್ ರವರು ತಮ್ಮ “Bunch of thoughts” ಪುಸ್ತಕದಲ್ಲಿ ತ್ರಿವರ್ಣ ಧ್ವಜವನ್ನು ‘ಡ್ರಿಪ್ಟಿಂಗ್ ಮತ್ತು ಇಮಿಟೇಟಿಂಗ್” ಎಂದು ಆರೋಪಿಸುತ್ತಾರೆ. 1947 ರಲ್ಲಿ ಆರೆಸ್ಸೆಸ್ ಮುಖವಾಣಿ ಪತ್ರಿಕೆ ಆರ್ಗನೈಸರ್ ನಲ್ಲಿ “ಮೂರು ವರ್ಣದ ಬಾವುಟ ಅಪಶಕುನ, ಭಗವಾಧ್ವಜವೇ ರಾಷ್ಟ್ರಧ್ವಜ ಆಗಬೇಕೆಂದು” ಬರೆಯಲಾಗಿದೆ. ಬ್ರಿಟಿಷರನ್ನು ಹಾಡಿ ಹೊಗಳಲೆಂದೇ ರವೀಂದ್ರನಾಥ ಟಾಗೋರರು ಜನಗಣಮನ ಗೀತೆ ರಚಿಸಿದ್ದರಿಂದ ಅದು ರಾಷ್ಟ್ರ ಗೀತೆ ಆಗಬಾರದು ಎಂದು ಇದೇ ಸಂಘಿಗಳು ವಿರೋಧಿಸಿದ್ದರು.

ಈಗಲೂ ಆರೆಸ್ಸೆಸ್ ಶಾಖೆಗಳಲ್ಲಿ ತ್ರಿವರ್ಣ ದ್ವಜವನ್ನು ಹಾರಿಸದೇ ಭಗವಾಧ್ವಜವನ್ನೇ ಹಾರಿಸಲಾಗುತ್ತಿದ್ದು, “ನಮಸ್ತೆ ಸದಾ ವತ್ಸಲೇ”ಎನ್ನುವ ಹಾಡನ್ನು ಹಾಡಲಾಗುತ್ತದೆಯೇ ಹೊರತು ಜನಗಣಮನ ಇಲ್ಲವೇ ವಂದೇ ಮಾತರಂ ಗೀತೆಗಳನ್ನು ನಿಯಮಿತವಾಗಿ ಹಾಡುವುದಿಲ್ಲ.

ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯ ಬಗ್ಗೆ ಇಷ್ಟೊಂದು ಅಸಮಾಧಾನ ಹೊಂದಿರುವ ಈ ಆರೆಸ್ಸೆಸ್ ಮತ್ತು ಬಿಜೆಪಿ ಗರು ಈಗ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಲೇಬೇಕೆಂದು ಹೇರಿಕೆ ಮಾಡುತ್ತಿದ್ದಾರೆ.

ಯಾಕೆಂದರೆ ಈ ಆರೆಸ್ಸೆಸ್ ಹಾಗೂ ಬಿಜೆಪಿಗೆ ಜ್ಯಾತ್ಯತೀತ ಬಹುತ್ವ ಭಾರತವನ್ನು ಹಿಂದುತ್ವವಾದಿ ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕೆಂಬ ಗುರಿ ಇದೆ. ತಮ್ಮ ಗುರಿ ಸಾಧಿಸುವ ನಿಟ್ಟಿನಲ್ಲಿ ವಂದೇ ಮಾತರಂ ಹಾಡನ್ನು ಮೆಟ್ಟಿಲಾಗಿ ಬಳಸುತ್ತಿದ್ದಾರೆ. ಈ ದೇಶ ಯಾವುದೇ ಒಂದು ಧರ್ಮ, ಮತಕ್ಕೆ ಸೀಮಿತವಾಗಿಲ್ಲ. ಭಾರತದ ಎಲ್ಲಾ ಜಾತಿ ಧರ್ಮೀಯರಿಗೂ ಸೇರಿದ್ದಾಗಿದೆ. ಹೀಗಿರುವಾಗ ಒಂದು ಧರ್ಮದ ಅದರಲ್ಲೂ ಬ್ರಾಹ್ಮಣ್ಯ ಕಲ್ಪಿತ ದೇವರುಗಳ ಸ್ತುತಿ ಗೀತೆಯನ್ನು ಎಲ್ಲಾ ಜನಸಮುದಾಯಗಳ ಮೇಲೆ ಬಲವಂತವಾಗಿ ಹೇರಿಕೆ ಮಾಡುವುದು ಸಂವಿಧಾನದ ಧರ್ಮನಿರಪೇಕ್ಷ ಆಶಯಕ್ಕೆ ವಿರುದ್ಧವಾಗಿದೆ.  ಮನುಸ್ಮೃತಿ ಪ್ರಣೀತ ಹಿಂದೂ ರಾಷ್ಟ್ರ ನಿರ್ಮಾಣದ ಗುರಿಯನ್ನು ಸಾಧಿಸಲು ಈ ಸಂಘಿ ಸನಾತನಿಗಳು ಈಗ ವಂದೇ ಮಾತರಂ ಅಸ್ತ್ರವನ್ನು ಅಧಿಕೃತವಾಗಿ ಬಳಸುತ್ತಿದ್ದಾರೆ. ಮಾತೃಭೂಮಿ ಕುರಿತ ಎರಡು ಚರಣಗಳಿಗೆ ಸೀಮಿತವಾದ ವಂದೇ ಮಾತರಂ ಗೀತೆಯನ್ನು ವೈದಿಕರು ಸೃಷ್ಟಿಸಿದ ದೇವತೆಗಳ ಸ್ತುತಿ ಚರಣಗಳಿಗೆ ವಿಸ್ತರಿಸಿದ್ದಾರೆ, ರಾಷ್ಟ್ರಗೀತೆಯಾಗಿ ಕಡ್ಡಾಯಗೊಳಿಸಿದ್ದಾರೆ.

2026 ಆಗಸ್ಟ್ 15 ರಂದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ರಾಷ್ಟ್ರದ್ವಜವನ್ನು ಹಾರಿಸಲಾಗಿತ್ತು. ಆಗ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ನುಡಿಸಿದ ನಂತರ ಸೋನಿಯಾ ಗಾಂಧಿಯವರು ಅದೇನೋ ಸನ್ನೆ ಮಾಡಿದರು ಎನ್ನುವ ವಿಷಯವನ್ನು ಬಿಜೆಪಿಯು ರಾಷ್ಟ್ರೀಯ ವಿವಾದವಾಗಿಸಿದೆ. ವಯೋವೃದ್ಧ ಮಲ್ಲಿಕಾರ್ಜುನ ಖರ್ಗೆಯವರಿಗೆ ಖುರ್ಚಿ ತರಲು ಸನ್ನೆ ಮಾಡಿದರು ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡರೆ, ರಾಷ್ಟ್ರಗೀತೆ ವಂದೇ ಮಾತರಂ ಗೆ ಅವಮಾನ ಮಾಡಿದರು ಎಂದು ಬಿಜೆಪಿ ಕಾಂಗ್ರೆಸ್ಸಿನ ದೇಶಭಕ್ತಿಯನ್ನು ಪ್ರಶ್ನಿಸುತ್ತಿದೆ. ಸೋನಿಯಾ ಗಾಂಧಿಯವರ ಮೇಲೆ ದೂರು ದಾಖಲಿಸಲಾಗಿದೆ. ಇದರಿಂದಾಗಿ ಕೆರಳಿದ ಕಾಂಗ್ರೆಸ್ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದೆ. “ನಾವು ಹಾಡುವುದೇ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ. ಅದೇನು ಕ್ರಮ ತೆಗೆದುಕೊಳ್ತೀರೊ ತೆಗೆದುಕೊಳ್ಳಿ” ಎಂದು ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದರವರು ಹೇಳಿದ್ದಾರೆ.

ದೇಶಾದ್ಯಂತ ವಿದ್ಯಾರ್ಥಿ ಯುವಕರು ಬಿಜೆಪಿಯ ಕೇಂದ್ರ ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ‌ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಹಿಂಸಾತ್ಮಕ ಕ್ರಮ ತೆಗೆದುಕೊಂಡು ಪ್ಯಾಲೆಟ್ ಗುಂಡು ಹಾರಿಸಿದ್ದಕ್ಕೆ ಸರಕಾರದ ವಿರುದ್ಧ ಪೋಷಕರು ಸಿಟ್ಟಿಗೆದ್ದಿದ್ದಾರೆ. ಸಂಸತ್ತಿನಲ್ಲಿ ಉತ್ತರ ಕೊಡಬೇಕಾದ ಪ್ರಧಾನ ಮಂತ್ರಿ ಮತ್ತು ಗೃಹ ಮಂತ್ರಿ ಉತ್ತರಿಸಲಾಗದೇ  ಪಲಾಯನ ಮಾಡಿದ್ದಾರೆ. ದೇಶಾದ್ಯಂತ ಮೋದಿ ವಿರೋಧಿ ಅಲೆ ಜೋರಾಗಿದೆ. ಬಿಜೆಪಿ ಸರಕಾರದ ಬುನಾದಿ ಅಪಾಯದಲ್ಲಿದೆ. ಹೀಗಿರುವಾಗ ಜನರ ಗಮನವನ್ನು ದೇಶಪ್ರೇಮದತ್ತ ಸೆಳೆಯಲು ಬಿಜೆಪಿಯು ಮತ್ತೆ ತನ್ನ ಭಾವನಾತ್ಮಕ ಅಸ್ತ್ರ ಬಳಸಲು ಮುಂದಾಗಿದೆ. ವಂದೇ ಮಾತರಂ ವಿವಾದವನ್ನು ಮುಂಚೂಣಿಗೆ ತಂದು, ವಿರೋಧ ಪಕ್ಷಗಳ ಮೇಲೆ  ರಾಷ್ಟ್ರಗೀತೆಯ ವಿರೋಧಿಗಳು ಎನ್ನುವ ಆರೋಪ ಹೊರೆಸಿ ತಮ್ಮ ಹುಸಿ ದೇಶಪ್ರೇಮದ ಭ್ರಮೆಯನ್ನು ಜನರಲ್ಲಿ ಜಾಗೃತಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಪ್ರಶ್ನಿಸುವವರನ್ನು ಮೋದಿಯವರು ವೈಚಾರಿಕ ನಕ್ಸಲರು ಎಂದು ನಿಂದಿಸುತ್ತಿದ್ದಾರೆ‌. ಅಂಧಭಕ್ತರು ದೇಶದ ದುಸ್ಥಿತಿಯನ್ನು ಮರೆತು ಮೋದಿ ಭಜನೆಯಲ್ಲಿ ನಿರತರಾಗಿದ್ದಾರೆ. ಸನಾತನಿಗಳ ಭಾವನಾತ್ಮಕ ಪ್ರಚೋದನಕಾರಿ ಹುನ್ನಾರಗಳ ಬಗ್ಗೆ ಸಾಕಷ್ಟು ಜನರು ಎಚ್ಚರಗೊಂಡಿದ್ದಾರೆ. ವಾಸ್ತವವನ್ನು ಮರೆಮಾಚಿ ಭ್ರಮೆಯನ್ನು ಸೃಷ್ಟಿಸುತ್ತಾ ಬಂದಿರುವ ಮೋದಿ ಸರಕಾರಕ್ಕೆ ಮುಂದಿನ ಚುನಾವಣೆಗಳಲ್ಲಿ ಪಾಠ ಕಲಿಸಲು ನಿರ್ಧರಿಸಿದ್ದಾರೆ.

ಶಶಿಕಾಂತ ಯಡಹಳ್ಳಿ

ಇವರು ಕನ್ನಡದ ಪ್ರಮುಖ ರಂಗಕರ್ಮಿಗಳು, ಪತ್ರಕರ್ತರು, ಅಂಕಣಕಾರರು. ಪ್ರಚಲಿತ ಸಾಮಾಜಿಕ ಹಾಗೂ ರಾಜಕೀಯ ವಿದ್ಯಮಾನಗಳ ಬಗ್ಗೆ ತಮ್ಮ ವಿಚಾರಗಳನ್ನು ಪ್ರಖರವಾಗಿ ಮಂಡಿಸುತ್ತಾ ಬಂದಿದ್ದಾರೆ.

ಇದನ್ನೂ ಓದಿ- ದಾಬೋಲ್ಕರ್ ಕೊಲೆಗಾರನ ಶಿಕ್ಷೆ ಅಮಾನತ್ತು, ಏನಿದರ ಹಿಂದಿನ ಅಸಲಿಯತ್ತು

More articles

Latest article

Most read