ಒಂದು ವಿಡಿಯೋ ಒಂದು ಲಕ್ಷ ವೀಕ್ಷಣೆಗೆ ₹10 ಸಾವಿರ : ಇನ್‌ಫ್ಲುಯೆನ್ಸರ್‌ಗಳಿಗೆ ಬಂಪರ್ ಆಫರ್!

ಪಾಟ್ನಾ, ಆ.20: ಸರ್ಕಾರಿ ಯೋಜನೆಗಳು, ಕಾರ್ಯಕ್ರಮಗಳು ಹಾಗೂ ಸರ್ಕಾರದ ಸಾಧನೆಗಳ ಕುರಿತು ವೀಡಿಯೊ ಮಾಡುವ ಇನ್‌ಫ್ಲುಯೆನ್ಸರ್‌ಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳಿಗೆ ಬಿಹಾರ ಸರ್ಕಾರ ಹಣ ಪಾವತಿಸುವ ಹೊಸ ಯೋಜನೆ ಜಾರಿಗೆ ತಂದಿದೆ. ಒಂದು ವೀಡಿಯೊ 1 ಲಕ್ಷ ವೀಕ್ಷಣೆ ಪಡೆದರೆ ₹10 ಸಾವಿರ, ಗರಿಷ್ಠ ₹1 ಲಕ್ಷದವರೆಗೆ ಪಾವತಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ.

ಮುಖ್ಯಮಂತ್ರಿ ಸಮ್ರಾಟ್ ಚೌಧರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಹಾರ ಸಾಮಾಜಿಕ ಮಾಧ್ಯಮ ಮತ್ತು ಇತರೆ ಆನ್‌ಲೈನ್ ಮಾಧ್ಯಮ ನಿಯಮಗಳು, 2026ಕ್ಕೆ ತಿದ್ದುಪಡಿ ತಂದು ಈ ನಿರ್ಧಾರ ಕೈಗೊಳ್ಳಲಾಗಿದೆ.

ಪರಿಷ್ಕೃತ ನಿಯಮಗಳ ಪ್ರಕಾರ, ರಾಜ್ಯ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಮತ್ತು ಸಾಧನೆಗಳ ಕುರಿತು ವೀಡಿಯೊಗಳನ್ನು ಸಿದ್ಧಪಡಿಸುವ ಎಂಪ್ಯಾನೆಲ್ಡ್ ಕಂಟೆಂಟ್ ಕ್ರಿಯೇಟರ್‌ಗಳಿಗೆ 30 ದಿನಗಳ ಅವಧಿಯಲ್ಲಿ 1 ಲಕ್ಷ ವೀಕ್ಷಣೆ ಬಂದರೆ ₹10 ಸಾವಿರ ಪಾವತಿಸಲಾಗುತ್ತದೆ. ಪ್ರತಿ ಹೆಚ್ಚುವರಿ 1 ಲಕ್ಷ ವೀಕ್ಷಣೆಗೆ ಹೆಚ್ಚುವರಿ ಮೊತ್ತ ದೊರೆಯಲಿದ್ದು, ಒಂದು ವೀಡಿಯೊಗೆ ಗರಿಷ್ಠ ₹1 ಲಕ್ಷ ಪಾವತಿ ಮಿತಿ ನಿಗದಿಪಡಿಸಲಾಗಿದೆ.

ಆದರೆ ಯಾವುದೇ ವೀಡಿಯೊ ವೈರಲ್ ಆದ ತಕ್ಷಣ ಹಣ ಸಿಗುವುದಿಲ್ಲ. ಈ ಯೋಜನೆಯ ಪ್ರಯೋಜನ ಪಡೆಯಲು ಕ್ರಿಯೇಟರ್‌ಗಳು ಬಿಹಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ (IPRD) ನೋಂದಾಯಿಸಿಕೊಂಡು ಎಂಪ್ಯಾನೆಲ್ ಆಗಿರಬೇಕು. ಅಲ್ಲದೆ, ಸರ್ಕಾರ ನಿಗದಿಪಡಿಸುವ ಮಾರ್ಗಸೂಚಿಗಳನ್ನು ಪಾಲಿಸಿರುವ ವೀಡಿಯೊಗಳಿಗೆ ಮಾತ್ರ ಹಣ ಪಾವತಿಸಲಾಗುತ್ತದೆ.

ಈ ಯೋಜನೆಗೆ ಸಂಬಂಧಿಸಿದಂತೆ ವಿವರವಾದ ಅಧಿಸೂಚನೆಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.

More articles

Latest article

Most read