ದರ್ಶನ್ ಫೋಟೋ ಹಾಕಿ ವಿಜಯಲಕ್ಷ್ಮಿ ಭಾವುಕ ಪೋಸ್ಟ್ : “ಒಂದು ವರ್ಷ ಕಳೆಯಿತು, ಗಾಯ ಇನ್ನೂ ಮಾಸಿಲ್ಲ”

ಬೆಂಗಳೂರು: ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಅವರ ಫೋಟೋವನ್ನು ಹಂಚಿಕೊಂಡು ಭಾವುಕ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

“ಒಂದು ವರ್ಷ ಕಳೆಯಿತು, ಗಾಯ ಇನ್ನೂ ಮಾಸಿಲ್ಲ. ಆ ನೋವು ಇನ್ನೂ ಭರಿಸಲಾಗದಂತಿದೆ. ನನಗೆ ಅರ್ಥವಾಗದ್ದನ್ನು ಜಗತ್ತು ನಿರ್ಣಯಿಸಬಹುದು. ಆದರೆ ನಾನು ವಿವರಣೆ ನೀಡುವುದನ್ನು ನಿಲ್ಲಿಸಿದ್ದೇನೆ. ನಾನು ಎಲ್ಲವನ್ನೂ ದೇವರಿಗೇ ಬಿಡುತ್ತಿದ್ದೇನೆ” ಎಂಬ ಅರ್ಥದ ಭಾವನಾತ್ಮಕ ಸಂದೇಶವನ್ನು ಅವರು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ದರ್ಶನ್ ಅವರ ಫೋಟೋ ಜೊತೆಗೆ ವಿಜಯಲಕ್ಷ್ಮಿ ಅವರು ಈ ಸಂದೇಶವನ್ನು ಹಂಚಿಕೊಂಡಿದ್ದು, ಅವರ ಅಭಿಮಾನಿಗಳು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದಿದೆ.

ಕಳೆದ ಒಂದು ವರ್ಷದಲ್ಲಿ ದರ್ಶನ್ ಕುಟುಂಬ ಎದುರಿಸಿದ ಹಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ಅವರ ಈ ಪೋಸ್ಟ್ ಮಹತ್ವ ಪಡೆದುಕೊಂಡಿದೆ. ತಮ್ಮ ಮನಸ್ಸಿನ ನೋವು, ಎದುರಿಸುತ್ತಿರುವ ಪರಿಸ್ಥಿತಿ ಹಾಗೂ ಜನರ ತೀರ್ಪಿನ ಬಗ್ಗೆ ಪರೋಕ್ಷವಾಗಿ ಅವರು ಭಾವನೆಗಳನ್ನು ವ್ಯಕ್ತಪಡಿಸಿರುವಂತೆ ಪೋಸ್ಟ್ ಕಂಡುಬರುತ್ತಿದೆ.

“ಜಗತ್ತು ತನ್ನದೇ ಆದ ರೀತಿಯಲ್ಲಿ ನಿರ್ಣಯಿಸಬಹುದು. ಆದರೆ ಎಲ್ಲದಕ್ಕೂ ವಿವರಣೆ ನೀಡುವ ಬದಲು ದೇವರ ಮೇಲೆ ನಂಬಿಕೆ ಇಟ್ಟು ಮುಂದುವರಿಯುತ್ತೇನೆ” ಎಂಬ ಸಂದೇಶವನ್ನು ವಿಜಯಲಕ್ಷ್ಮಿ ಅವರು ನೀಡಿದ್ದಾರೆ.

ಈ ಭಾವುಕ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದ್ದು, ದರ್ಶನ್ ಅಭಿಮಾನಿಗಳು ವಿಜಯಲಕ್ಷ್ಮಿ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

More articles

Latest article

Most read