ಕಾರ್ಪೊರೇಟ್ ಕ್ಯಾಂಪಸ್‌ನಲ್ಲಿ ‘ಕನ್ನಡ’ ಅಪರಾಧವೇ?

ಕಾರ್ಪೊರೇಟ್ ಗೋಡೆಗಳ ನಡುವೆ ‘ಕನ್ನಡ’ ಎನ್ನುವುದು ಕೀಳರಿಮೆಯಲ್ಲ, ಅದು ನಮ್ಮ ಅಸ್ತಿತ್ವದ ಗತ್ತು ಮತ್ತು ಹಕ್ಕು ಎಂಬ ಸತ್ಯ ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಥವಾಗಬೇಕಿದೆ. ನಾವು ನಮ್ಮ ಸೌಮ್ಯತೆಯ ಮುಖವಾಡ ಕಳಚಿ ಧ್ವನಿ ಎತ್ತದಿದ್ದರೆ, ಸ್ವಂತ ಊರಲ್ಲೇ ಅನಾಥರಾಗುವುದು ನಿಶ್ಚಿತ ಸುಜಾತ ನಾಯಕ್‌, ಯುವ ಬರಹಗಾರ್ತಿ

ಬೆಳಿಗ್ಗೆ ಒಂಬತ್ತು ಗಂಟೆಗೆ ಬೆಂಗಳೂರಿನ ಸಾಫ್ಟ್‌ವೇರ್ ಸಾಮ್ರಾಜ್ಯಗಳ ಕಾಂಕ್ರೀಟ್ ಕೋಟೆಗಳ ಒಳಗಡೆ ಹೆಜ್ಜೆ ಇಡುತ್ತಿದ್ದಂತೆ, ಒಬ್ಬ ಕನ್ನಡಿಗ ತನ್ನ ಶೂ ಜೊತೆಗೆ ತನ್ನ ಭಾಷಿಕ ಅಸ್ಮಿತೆಯನ್ನೂ ಆಫೀಸ್ ಗೇಟ್ ಹೊರಗಡೆಯೇ ಬಿಟ್ಟು ಬರಬೇಕು. ಇದು ಸಿಲಿಕಾನ್ ಸಿಟಿಯ ಬಹುರಾಷ್ಟ್ರೀಯ ಕಂಪನಿಗಳ ಗೋಡೆಗಳ ನಡುವೆ ನಡೆಯುತ್ತಿರುವ ಅಲಿಖಿತ, ಆದರೆ ಅತ್ಯಂತ ಕ್ರೂರ ​ನಿಯಮ. ಅಂದರೆ ದಿನಕ್ಕೆ 8 ಗಂಟೆ ಕೋಡಿಂಗ್ ಮಾಡಿ ವಿದೇಶಿ ಕ್ಲೈಂಟ್‌ಗೆ ಸೊಲ್ಯೂಷನ್ ಕೊಡುವ ಕನ್ನಡಿಗ ಟೆಕ್ಕಿಗೆ ತನ್ನದೇ ಊರಿನ ಆಫೀಸಿನಲ್ಲಿ ಐದು ನಿಮಿಷ ಕನ್ನಡ ಮಾತನಾಡಲು ಅಪ್ಪಣೆ ಬೇಕಂತೆ! ಕೋಡಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಕ್ಲೌಡ್ ತಂತ್ರಜ್ಞಾನಗಳನ್ನು ಸೃಷ್ಟಿಸಿ ಜಗತ್ತಿಗೆಲ್ಲ ಡಿಜಿಟಲ್ ಬೆಳಕು ನೀಡುವ ಕನ್ನಡಿಗರು ತನ್ನದೇ ಊರಿನ ಹೈಟೆಕ್ ಆಫೀಸಿನ ಒಳಗಡೆ ಮಾತ್ರ ಭಾಷಿಕ ಕೀಳರಿಮೆಯ ಕತ್ತಲಲ್ಲಿ ಉಸಿರುಗಟ್ಟುತ್ತಿದ್ದಾರೆ.

​ಆಫೀಸಿನ ಲಂಚ್ ಟೇಬಲ್‌ನಲ್ಲಿ ಅಥವಾ ಟೀ ಬ್ರೇಕ್‌ನಲ್ಲಿ ನಾಲ್ವರು ಕನ್ನಡಿಗರು ಸೇರಿ ಸಹಜವಾಗಿ ತಮ್ಮ ಮಾತೃಭಾಷೆಯಲ್ಲಿ ಮಾತನಾಡಲು ಶುರು ಮಾಡಿದರೆ, ಪಕ್ಕದಲ್ಲಿರುವ ಪರಭಾಷಾ ಸಹೋದ್ಯೋಗಿ ತಕ್ಷಣ ಪ್ಲೀಸ್ ಸ್ಪೀಕ್ ಇನ್ ಇಂಗ್ಲಿಷ್ ಗೈಸ್, ವಿ ಡೋಂಟ್ ಅಂಡರ್‌ಸ್ಟ್ಯಾಂಡ್ ಎಂದು ಆದೇಶಿಸುತ್ತಾನೆ. ಆದರೆ ಅದೇ ಕ್ಯಾಂಪಸ್‌ನಲ್ಲಿ ಉತ್ತರ ಭಾರತದವರಾಗಲಿ ಅಥವಾ ಇತರ ರಾಜ್ಯದವರಾಗಲಿ ಗಂಟೆಗಟ್ಟಲೆ ತಮ್ಮ ಮಾತೃಭಾಷೆಯಲ್ಲೇ ಹರಟಿದರೆ, ಅದು ಮ್ಯಾನೇಜ್‌ಮೆಂಟ್ ಕಣ್ಣಿಗೆ ಟೀಮ್ ಬಾಂಧವ್ಯ ಮತ್ತು ಆತ್ಮೀಯತೆಯಂತೆ ಕಾಣಿಸುತ್ತದೆ! ಕನ್ನಡ ಮಾತನಾಡಿದರೆ ಲೋಕಲ್ ಮತ್ತು ಅನ್‌ಪ್ರೊಫೆಷನಲ್, ಅದೇ ಪರಭಾಷೆ ಮಾತನಾಡಿದರೆ ಗ್ಲೋಬಲ್ ಮತ್ತು ಕ್ಲಾಸಿ ಎನ್ನುವ ಈ ಮನಸ್ಥಿತಿ ಆಧುನಿಕ ಸಾಂಸ್ಕೃತಿಕ ಗುಲಾಮಗಿರಿಯಲ್ಲದೆ ಇನ್ನೇನು?

​ಇನ್ನು ಆಂತರಿಕ ನೇಮಕಾತಿ ಮತ್ತು ಪ್ರೊಮೋಷನ್ ಸಂದರ್ಭಗಳಲ್ಲಿ ಕನ್ನಡಿಗರಿಗೆ ಆಗುವ ಅಪಮಾನ ತೀರಾ ಸೂಕ್ಷ್ಮ ಹಾಗೂ ಭೀಕರವಾದದ್ದು. ಹಿ ಈಸ್ ನಾಟ್ ಕಲ್ಚರಲಿ ಫಿಟ್ ಅಥವಾ ಲ್ಯಾಕ್ ಆಫ್ ಲೀಡರ್‌ಶಿಪ್ ಅಂಡ್ ಕಮ್ಯುನಿಕೇಷನ್ ಸ್ಕಿಲ್ಸ್ ಎಂಬ ಹೈಟೆಕ್ ನೆಪಗಳನ್ನು ಹೇಳಿ ಅರ್ಹತೆ ಇರುವ ಕನ್ನಡಿಗರನ್ನು ಅತ್ಯಂತ ಚಾಣಾಕ್ಷತನದಿಂದ ಪಕ್ಕಕ್ಕೆ ತಳ್ಳಲಾಗುತ್ತದೆ. ಕನ್ನಡಿಗರ ಸಹನೆ, ಸೌಮ್ಯ ಸ್ವಭಾವ ಮತ್ತು ಶಾಂತ ರೀತಿಯ ನಡೆನುಡಿಯನ್ನೇ ಅವರ ದೌರ್ಬಲ್ಯವೆಂದು ಭಾವಿಸಿ, ಕಾರ್ಪೊರೇಟ್ ರಾಜಕೀಯದ ಮೂಲಕ ಉನ್ನತ ಮ್ಯಾನೇಜ್‌ಮೆಂಟ್ ಹುದ್ದೆಗಳನ್ನು ಪರಭಾಷಿಕರೇ ಕಬಳಿಸುತ್ತಿದ್ದಾರೆ.

​ಪ್ರತಿಯೊಂದು ಬಹುರಾಷ್ಟ್ರೀಯ ಕಂಪನಿಯೂ ಜಾಗತಿಕವಾಗಿ ಸ್ಥಳೀಯ ಸಂಸ್ಕೃತಿ ಮತ್ತು ವೈವಿಧ್ಯತೆಗೆ ಗೌರವ ನೀಡುತ್ತೇವೆ ಎಂದು ದೊಡ್ಡ ದೊಡ್ಡ ಭಾಷಣ ಮಾಡುತ್ತದೆ. ಆದರೆ ಆಫೀಸ್ ಕ್ಯಾಂಪಸ್‌ನಲ್ಲಿ ಉತ್ತರ ಭಾರತೀಯ ಹಬ್ಬಗಳಿಗೆ ಅಥವಾ ವೆಸ್ಟರ್ನ್ ನ್ಯೂ ಇಯರ್‌ಗೆ ಲಕ್ಷಾಂತರ ರೂಪಾಯಿ ನೀರು ತರಹ ಚೆಲ್ಲುವ ಇದೇ ಕಂಪನಿಗಳು, ಕನ್ನಡ ರಾಜ್ಯೋತ್ಸವ ಅಥವಾ ಕನ್ನಡಿಗರ ಹಬ್ಬ ಆಚರಿಸಲು ಅನುಮತಿ ಕೇಳಿದರೆ ಕೆಲ ಕಂಪನಿಗಳು ಇದು ನಮ್ಮ ಕಂಪನಿ ಪಾಲಿಸಿಗೆ ವಿರುದ್ಧ, ಇಂತಹ ಪ್ರಾದೇಶಿಕ ಆಚರಣೆಗಳಿಗೆ ಆಸ್ಪದವಿಲ್ಲ ಎಂದು ಉಲ್ಟಾ ಬುದ್ಧಿವಂತಿಕೆ ಪ್ರದರ್ಶಿಸುತ್ತವೆ.

​ಆಫೀಸಿನಲ್ಲಿ ಗಲಾಟೆ ನಮಗೇಕೆ ಬೇಕು ನಮಗೆ ಕೆಲಸ ಮುಖ್ಯ ಎಂದು ಕನ್ನಡಿಗರು ತೋರುವ ಅತಿಯಾದ ಸೌಮ್ಯತೆ ಮತ್ತು ಮೌನವೇ ಇಂದು ಶೋಷಕರಿಗೆ ಬಹುದೊಡ್ಡ ಅಸ್ತ್ರವಾಗಿದೆ. ನಮ್ಮ ಕನ್ನಡಿಗ ಟೆಕ್ಕಿ ದಿನನಿತ್ಯ ತನ್ನದೇ ಕಂಪನಿಯಲ್ಲಿ, ತನ್ನದೇ ಊರಿನಲ್ಲಿ ಎರಡನೇ ದರ್ಜೆಯ ಪ್ರಜೆಯಂತೆ ಬದುಕುವಂತಹ ದುಸ್ಥಿತಿ ನಿರ್ಮಾಣವಾಗಿದೆ.

​ಪ್ರೊಫೆಷನಲಿಸಂ ಎಂದರೆ ಇಂಗ್ಲಿಷ್‌ನಲ್ಲಿ ಕೋಟಿ ಕೋಟಿ ಡೈಲಾಗ್ ಹೊಡೆಯುವುದಲ್ಲ. ವಹಿಸಿದ ಕೆಲಸವನ್ನು ದಕ್ಷತೆಯಿಂದ ಮುಗಿಸುವುದು. ನೆಲ ನಮ್ಮದು, ಶ್ರಮ ನಮ್ಮದು. ಈ ಕಂಪನಿಗಳಿಗೆ ಸಿಗುವ ಮೂಲ ಸೌಕರ್ಯ, ನೀರು, ರಸ್ತೆ ಮತ್ತು ಸರ್ಕಾರದ ಅತ್ಯಮೂಲ್ಯ ತೆರಿಗೆ ವಿನಾಯಿತಿಗಳೂ ನಮ್ಮ ನಾಡಿನ ಆಸ್ತಿಯಾಗಿರುವಾಗ, ನಮ್ಮದೇ ನೆಲದ ಆಫೀಸ್‌ಗಳಲ್ಲಿ ಕನ್ನಡ ಮಾತನಾಡಲು ನಾವೇಕೆ ಯಾರದ್ದೋ ಅಪ್ಪಣೆ ಕೇಳಬೇಕು?

ಕಾರ್ಪೊರೇಟ್ ಗೋಡೆಗಳ ನಡುವೆ ‘ಕನ್ನಡ’ ಎನ್ನುವುದು ಕೀಳರಿಮೆಯಲ್ಲ, ಅದು ನಮ್ಮ ಅಸ್ತಿತ್ವದ ಗತ್ತು ಮತ್ತು ಹಕ್ಕು ಎಂಬ ಸತ್ಯ ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಥವಾಗಬೇಕಿದೆ. ನಾವು ನಮ್ಮ ಸೌಮ್ಯತೆಯ ಮುಖವಾಡ ಕಳಚಿ ಧ್ವನಿ ಎತ್ತದಿದ್ದರೆ, ಸ್ವಂತ ಊರಲ್ಲೇ ಅನಾಥರಾಗುವುದು ನಿಶ್ಚಿತ.

ಸುಜಾತ ನಾಯಕ್‌,

ಯುವ ಬರಹಗಾರ್ತಿ

ಇದನ್ನೂ ಓದಿ – ಶ್ಮಶಾನ ಕುರುಕ್ಷೇತ್ರಂ: ಯುದ್ಧ ಮಾನವ ಅಸ್ತಿತ್ವದ ಕಾಲಾತೀತ ದ್ವಂದ್ವ

More articles

Latest article

Most read