ಇತಿಹಾಸ-ವರ್ತಮಾನ ಎರಡೂ ಆಗಬಲ್ಲ ಆತ್ಮಕತೆ ʼಬಚ್ಚಿಟ್ಟ ಸತ್ಯಗಳುʼ

ತಮ್ಮ ಮಾತುಗಾರಿಕೆಯಿಂದಲೇ ಪತ್ರಿಕೋದ್ಯಮವನ್ನು ಹಳ್ಳ ಹಿಡಿಸುತ್ತಿದ್ದ ಪಬ್ಲಿಕ್ ಟಿವಿ ರಂಗನಾಥ್ ಎನ್ನುವ ವ್ಯಕ್ತಿಯನ್ನು ಗುರಾಣಿಯಾಗಿ ಹಿಡಿದು, ಕೋಮುವಾದಿ ಸಂಸದ ತೇಜಸ್ವಿ ಸೂರ್ಯ ಎನ್ನುವ ವ್ಯಕ್ತಿಯನ್ನು ಬೈದಿದ್ದೆ. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ ಎನ್ನುವ ಗಾದೆಮಾತಿನಂತೆ ರಂಗಣ್ಣನಂತವರ ಬಗ್ಗೆ ಗೊತ್ತಿದ್ದರೂ ಅಥವಾ ತಿಳಿಯದೆಯೋ ಸಮರ್ಥನೆ ಮಾಡುವ ರೀತಿಯಲ್ಲಿ ವಿಡಿಯೋ ಮಾಡಿದ್ದೆ. ಅದಾಗಿ ವಾರದ ನಂತರ ನನ್ನ ಸಂಪಾದಕರಿಂದ ʼಮನೋಜ್, ಬಿಡುವಿದ್ದರೆ ಬನ್ನಿʼ ಎಂದು ವಾಟ್ಸಾಪ್‌ಗೆ ಮೆಸೇಜ್ ಬಂತು.

ಖುಷಿಯಿಂದ ʼಒಳಗೆ ಬರಲೇ ಸರ್ʼ ಎಂದಿದ್ದಕ್ಕೆ, ಕುಳಿತುಕೊಳ್ಳಿ ಎಂದು ತಲೆ ಬಗ್ಗಿಸಿಯೇ ಆಗ್ರಹಿಸಿದರು. ʼರಂಗನಾಥ್‌ ನನ್ನು ಗುರಾಣಿ ತರ ಬಳಸಿ ತೇಜಸ್ವಿ ಸೂರ್ಯ ಜೊತೆ ಕತ್ತಿವರಸೆ ಮಾಡೋಕೆ ಹೋಗಿದ್ದು ಯಾಕೆ?ʼ ಎಂದರು. ಏನು ಹೇಳಬೇಕೋ ತಿಳಿಯದೆ ಮೌನವಾದೆ. ಅವರೇ ಮತ್ತೆ ʼಕನ್ನಡ ಪತ್ರಿಕೋದ್ಯಮದ ಬಗ್ಗೆ ಸಣ್ಣ ಅರಿವಿದೆಯೇ ನಿಮ್ಗೆ?ʼ ಎಂದು ಗಡಸು ಧ್ವನಿಯಲ್ಲಿ ಪ್ರಶ್ನಿಸಿದರು. ʼಪತ್ರಿಕೋದ್ಯಮಕ್ಕೊಂದು ಇತಿಹಾಸವಿದೆ. ಅದನ್ನು ಲಂಕೇಶ್ ತರದ ಅನೇಕರು ದೊಡ್ಡ ಆಲದ ಮರದಂತೆ ಬೆಳೆಸಿದ್ದಾರೆ. ಅದನ್ನು ಹಾಳುಗೆಡವಿದವರು ರಂಗನಾಥ್ ತರದ ಪತ್ರಕರ್ತರುʼ ಎಂದು ಕೂಗಿದರು.

ಈಗಿನ್ನೂ ಪತ್ರಿಕೋದ್ಯಮದಲ್ಲಿ ಕಣ್ಣು ತೆರೆಯುತ್ತಿರುವ ನನ್ನಂತಹ ಹಸುಗೂಸುಗಳು ತಪ್ಪು ಮಾಡುವುದು ಸಹಜ ಎಂಬ ಭಾವನೆ ಮೂಡಿಸುವ ಸಂಭಾಷಣೆ ಅದು ಅನಿಸಲಿಲ್ಲ. ಒಬ್ಬ ಮತಾಂಧನ ಜೊತೆ ಹೋರಾಡಲು ಮತ್ತೊಬ್ಬ ಮತಾಂಧನನ್ನು ಗುರಾಣಿಯಾಗಿ ಬಳಸಿದ್ದು ತಪ್ಪು ಎಂದು ಅರಿವಾಗಿ ಕಣ್ಣೀರಾಕಿದ್ದೆ. ಬಿ.ಚಂದ್ರೇಗೌಡ ಅವರ ʼಬಚ್ಚಿಟ್ಟ ಸತ್ಯಗಳುʼ ಪುಸ್ತಕ ಓದುವಾಗ ಈ ಘಟನೆ ನೆನಪಾಯ್ತು. ಓದುತ್ತಾ ಹೋದಂತೆ ಪತ್ರಕರ್ತರಿಗೆ ಇರಬೇಕಾದ ಅರಿವು, ವಿಚಾರದ ಜ್ಞಾನ, ಮತೀಯವಾದದಿಂದ ದೂರ ಉಳಿಯುವ ಹಾಗೂ ಪತ್ರಕರ್ತನಿಗೆ ಇರಬೇಕಾದ ಪ್ರಾಮಾಣಿಕತೆ ತೆರೆದುಕೊಳ್ಳುತ್ತ ಹೋಗುತ್ತದೆ.

ಇದೊಂದು ಕೇವಲ ಆತ್ಮಕತೆ ಅನ್ನುವುದಕ್ಕಿಂತ ತಮ್ಮ ಬದುಕನ್ನು ಪ್ರಾಮಾಣಿಕವಾಗಿ ಕಟ್ಟಿಕೊಡುವ, ಅದರಲ್ಲೂ ಪತ್ರಕರ್ತರಿಗೆ ಇರಬೇಕಾದ ಸಂವೇದನೆಯನ್ನು ಸ್ಪಷ್ಟಪಡಿಸುತ್ತದೆ. ಅವರೊಬ್ಬ ಸರ್ಕಾರಿ ನೌಕರನಾಗಿ ʼಲಂಕೇಶ್ ಪತ್ರಿಕೆʼ ವರದಿಗಾರನಾಗಿ, ತಮ್ಮ ಬದುಕನ್ನು ಪ್ರಾಮಾಣಿಕವಾಗಿ, ಎಲ್ಲಿಯೂ ತಮ್ಮ ಇಮೇಜ್‌ಗೆ ಬಿಲ್ಡ್ ಅಪ್ ಕೊಟ್ಟುಕೊಳ್ಳದೆ, ಆಗಿದ್ದ ಅವಮಾನಗಳು, ಅಸಹಾಯಕತೆ, ದೌರ್ಬಲ್ಯ, ತಪ್ಪು ನಿರ್ಧಾರಗಳು ಎಲ್ಲವನ್ನೂ ಬಿಡಿಬಿಡಿಯಾಗಿ ಇಲ್ಲಿ ಬಿಚ್ಚಿಟ್ಟಿದ್ದಾರೆ.

ಪುಸ್ತಕ ಓದುವಾಗ ಅತೀ ಕುತೂಹಲವೆನಿಸುವುದು ಸರ್ಕಾರಿ ನೌಕರ ಪತ್ರಕರ್ತನಾಗಿಯೂ ದುಡಿದಿರುವ ಬಗ್ಗೆ. ಪುಸ್ತಕದ ಬಹುತೇಕ ಕಡೆ ಲಂಕೇಶ್ ಪತ್ರಿಕೆಯ ಅನುಭವಗಳ ಜೊತೆಗೆ, ʼಲಂಕೇಶ್ʼ ಅವರ ನೇರ, ಪ್ರಾಮಾಣಿಕ, ನಿಷ್ಠುರ ಗುಣ ಕಾಣುತ್ತದೆ. ಚಂದ್ರೇಗೌಡರು ಒಮ್ಮೆ ಲಂಕೇಶರಿಗೆ ಆತ್ಮೀಯರಾದವರ ವರದಿ ಬರೆದರು. ಅದನ್ನು ಪ್ರಕಟಿಸುವುದೋ ಬೇಡವೋ ಎಂದು ಬೇರೊಬ್ಬರು ಲಂಕೇಶರನ್ನು ಕೇಳಲು ಹೋದಾಗ ʼಆತ್ಮೀಯ-ಗೀತ್ಮೀಯʼ ಯಾವುದನ್ನು ನೋಡದ ಲಂಕೇಶ್ ʼಅದನ್ನು ಹಾಕಲೇ, ಅದೇನ್ ಕೇಳ್ತಿಯಾʼ ಎಂದಿದ್ದರಂತೆ.

ಒಮ್ಮೆ ಸಣ್ಣರಾಮಣ್ಣ ಎಂಬವನ ತೋಟದಿಂದ ತೆಂಗಿನಕಾಯಿಯನ್ನು ಹಿಡಿದುಕೊಂಡು ಹೋಗುತ್ತಿದ್ದ ಹೆಣ್ಣುಮಗಳೊಬ್ಬಳನ್ನು ಸಣ್ಣರಾಮಣ್ಣ ಹಿಡಿದು ಸೀರೆ ಬಿಚ್ಚಿ ಅವಮಾನ ಮಾಡಿದ್ದ. ಹೆಣ್ಣು ಮಗಳಿಗೆ ಅವಮಾನ ಮಾಡಿದವರಿಗೆ ತಕ್ಕ ಶಾಸ್ತಿ ಮಾಡಲೆಂದು ಯುದ್ಧಕ್ಕೆ ಬಂದವರಂತೆ ಬಂದ ಒಂದಷ್ಟು ಜನರು ಮಾಂಸದಂಗಡಿಯ ರುಚಿ ನೋಡಿ ವಾಪಸ್ಸು ಹೋಗಿದ್ದರು. ಎಲ್ಲರ ಪಾಲಿಗೂ ಇದೊಂದು ಬಗೆಹರಿದ ಸಮಸ್ಯೆಯಾಗಿತ್ತು. ಆದರೆ ಗಂಗಾಧರಮೂರ್ತಿ ಎಂಬ ವಕೀಲ ಮತ್ತು ಪತ್ರಕರ್ತ, “ಲಾಳನಕೆರೆ ದುಶ್ಯಾಸನರು” ಎಂಬ ಲೇಖನ ಬರೆದು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟಿಸಿದರು. ಆ ವರದಿಯಿಂದ ಕೋಪಗೊಂಡ ಲೋಕೇಶ್ ಎಂಬಾತ ʼಎಷ್ಟು ರೋಷದಿಂದ ಮಚ್ಚು ಬೀಸಿದ್ದ ಎಂದರೆ, ಆ ಕೊಲೆ ನೋಡಿದ ಪೊಲೀಸರು ಇದು ನುರಿತ ಕೊಲೆಗಾರರ ಹೊಡೆತ ಎಂದು ಉದ್ಗರಿಸಿದ್ದರು!.ʼ ಎಂದು ಚಂದ್ರೇಗೌಡರು ಬರೆಯುತ್ತಾರೆ.

ಆ ಕೊಲೆ ಲಂಕೇಶ್ ಪತ್ರಿಕೆಯಿಂದ ನಡೆದ ಕೊಲೆ ಎಂದು ನಾಡಿನ ತುಂಬಾ ಚರ್ಚೆಯಾಯಿತು. ಸ್ವತಃ ಲಂಕೇಶರು ಕೂಡ ಜವಾಬ್ದಾರಿಯಿಂದ ವರ್ತಿಸಿದರು. ಪತ್ರಕೋದ್ಯಮಕ್ಕೆ ಮತ್ತು ಪತ್ರಕರ್ತರಿಗೆ ಭಯಪಡುತ್ತಿದ್ದ ಕಾಲವದು. ಲಂಕೇಶರು ಪತ್ರಿಕೆ ನಡೆಸುವ ಸಂದರ್ಭದಲ್ಲಿ ರಾಜಕಾರಣಿಗಳಂತೂ ಹೆದರಿಕೊಳ್ಳುತ್ತಿದ್ದರು ಎಂಬುದನ್ನು ಈ ಪುಸ್ತಕವು ವಿವರಿಸುತ್ತದೆ.

ಈ ಆತ್ಮಕತೆಯ ಇನ್ನೊಂದು ಇಂಟ್ರೆಸ್ಟಿಂಗ್ ಅಂಶವೇ ʼದೇವೇಗೌಡರʼ ರಾಜಕಾರಣ. ಒಮ್ಮೆ  ದೇವೇಗೌಡರು ಹೊಳೆನರಸೀಪುರ ಮತ್ತು ಕನಕಪುರ ಎರಡೂ ಕ್ಷೇತ್ರದ ಚುನಾವಣೆಯಲ್ಲಿ ಸೋಲಬೇಕಾಗುತ್ತದೆ. ಆಗ ಲಂಕೇಶರು ʼಜನ ಕಾಯ್ತಾಯಿರತರೆ ಕಣಯ್ಯ. ನೀನು ಹೆಂಡತಿನ ಕೆಟ್ಟದಾಗಿ ನಡೆಸಿಕೊಂಡು ರೇಷ್ಮೆ ಸೀರೆ ತಂದುಕೊಟ್ರಾಯ್ತದಾ. ಅಂಗೆ ಈ ದ್ಯಾವೇಗೌಡʼ ಎಂದು ಕಟುವಾಗಿ ಹೇಳಿದ್ದರಂತೆ. ದೇವೇಗೌಡರ ರಾಜಕಾರಣ ಶೈಲಿ ಹೇಗೆಂದರೆ ತಮ್ಮ ಹಿತಕ್ಕಾಗಿ ಎತ್ತರಕ್ಕೆ ಬೆಳೆಸಿ ನಂತರ ಅವರ ವಿರುದ್ಧ ಹೋರಾಡುವುದು. ಕರ್ನಾಟಕದಲ್ಲಿ ಅವಸಾನ ಹೊಂದಲಿದ್ದ ಬಿಜೆಪಿಯನ್ನು ಪ್ರತಿಷ್ಠಾಪಿಸಿದ ಕೀರ್ತಿ ದೇವೇಗೌಡರಿಗೆ ಸಲ್ಲಬೇಕು ಎಂದು ಚಂದ್ರೇಗೌಡರು ಬರೆಯುತ್ತಾರೆ.

ಮೊನ್ನೆ ಕಾರ್ಯಕ್ರಮವೊಂದರಲ್ಲಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್ ಎನ್ ಮುಕುಂದರಾಜ್ ಅವರು ಮಾತನಾಡುವ ವೇಳೆ, “ಬಂಗಾರಪ್ಪ ಯಾವುದೇ ಪಕ್ಷಕ್ಕೆ ಸೇರಿದರು ನಾನು ಇಂಜಿನ್ನೇ ಹೊರತು ಬೋಗಿಯಲ್ಲ ಎಂದು ಹೇಳುತ್ತಿದ್ದರು. ಅವರು ಬಿಜೆಪಿ ಸೇರಿ ಹೊರಬರುವಾಗ ಇಂಜಿನ್ ಮಾತ್ರ ಹೊರಬಂದಿತು. ಅನೇಕ ಬೋಗಿಗಳು ಅಲ್ಲೆ ಉಳಿದುಕೊಂಡವು. ಅದೇ ರೀತಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಸೇರಿದ್ದಾರೆ. ಆದರೆ ಹೊರಬರುವಾಗ ಅಪ್ಪ-ಮಗ ಮಾತ್ರ ಬರುತ್ತಾರೆ. ಉಳಿದ ಬೋಗಿಗಳೆಲ್ಲ ಅಲ್ಲೆ ಇರುತ್ತವೆʼ ಎಂದು ಕಟುವಾಗಿ ನುಡಿದಿದ್ದರು. ಬಿಜೆಪಿ ಇಡೀ ದೇಶದಲ್ಲಿ ಸೃಷ್ಟಿಸಿದ ಅರಾಜಕತೆಯು ಪುಸ್ತಕ ಓದುವಾಗ ನೆನಪಿಗೆ ಬಂತು.

ಚಿಕ್ಕಮಗಳೂರು ಗ್ರಂಥಾಲಯದಲ್ಲಿ ಕಸ ಗುಡಿಸಲು, ನೀರು ತಂದುಕೊಡುವ ಕೆಲಸ ಮಾಡಿದ ಚಂದ್ರೇಗೌಡರು, ನಂತರ ಅದೇ ಗ್ರಂಥಾಲಯಕ್ಕೆ ಗ್ರಂಥಪಾಲಕ ಅಧಿಕಾರಿಯಾಗಿ ಹೋಗುತ್ತಾರೆ. ಸರ್ಕಾರಿ ನೌಕರ ಪತ್ರಕರ್ತನಾಗಿ ಇದ್ದಿದ್ದರಿಂದ ಅವರ ಮೇಲೆ, ಮೇಲಿನ ಅಧಿಕಾರಿಗಳು ವಿಚಾರಣೆಗೆ ಹಾಕಿದಾಗ ಲಂಕೇಶ್ ಪತ್ರಿಕೆಯ ಹೆಸರೇ ಸಾಕಿತ್ತು. ಭ್ರಷ್ಟರು, ಲಂಚಕೋರರು ಹಾಗೂ ಅಪ್ರಾಮಾಣಿಕ ರಾಜಕಾರಣಿಗಳು ಇದ್ದ (ಈಗಲೂ ಇರುವ) ಕಾಲದಲ್ಲಿ ಲಂಕೇಶ್ ಪತ್ರಿಕೆ ವರದಿಯೆಂದರೆ ಹೆದರುತ್ತಿದ್ದರು.

ʼಆಗಲೇ ಹೇಳಿದಂತೆ ಚಂದ್ರೇಗೌಡರಿಗೆ  ತಾವು ಅಸಾಮಾನ್ಯ ಧೈರ್ಯದ, ಹುತಾತ್ಮನಾಗಲು ಸಿದ್ಧನಿರುವ ನಾಯಕ ಎನ್ನುವ ಯಾವ ಭ್ರಮೆಯೂ ಇಲ್ಲ. ಅಭದ್ರತೆಯ ಭಯದಲ್ಲಿ ಯಾರ ಸಹಾಯವನ್ನು ಬೇಕಾದರೂ ಕೇಳಬಲ್ಲವರು. ಸೂಕ್ಷ್ಮವಾಗಿ ನೋಡಿದರೆ ಇಷ್ಟು ದುರ್ಬಲರಾಗಿ ಕಾಣುವ ಈ ವ್ಯಕ್ತಿ ಉದ್ದಕ್ಕೂ ಭ್ರಷ್ಟರನ್ನು, ಪ್ರತಿಷ್ಠಿತರನ್ನು, ಪ್ರಭಾವಿಗಳನ್ನು ಲೇವಡಿ ಮಾಡಿ, ಠೀಕೆ ಮಾಡಿ ಅವರನ್ನು ಬಯಲಿಗೆಳೆಯುವ ಅಪಾರ ನೈತಿಕ ಧೈರ್ಯವನ್ನು ತೋರುತ್ತಾರೆ. ಇದೇ ಮುಂದೆ ಅವರ ಬರಹದ ಜೀವಾಳವಾಗುತ್ತದೆ.ʼ – ಮುನ್ನುಡಿಯಲ್ಲಿ ಮೇಷ್ಟ್ರು ಡಾ.ರಾಜೇಂದ್ರ ಚೆನ್ನಿ ಅವರು ಹೀಗೆ ಹೇಳುತ್ತಾರೆ.

ಇದೇ ರೀತಿಯಲ್ಲಿ ಚಂದ್ರೇಗೌಡರು ಇದ್ದಿರಬಹುದು ಎಂದು ಪುಸ್ತಕ ಓದಿದವರ ಅರಿವಿಗೆ ಬರುತ್ತದೆ. ಲಂಕೇಶರ ಬಗ್ಗೆ ವಸ್ತುನಿಷ್ಠವಾಗಿದ್ದ ಚಂದ್ರೇಗೌಡರು, ಗೌರಿ ಲಂಕೇಶ್ ಅವರ ಬಗ್ಗೆಯೂ ಕಟುವಾಗಿ ಬರೆದಿದ್ದಾರೆ. ಲಂಕೇಶ್ ಕಾಲವಾದ ನಂತರ ಗೌರಿ ಪತ್ರಿಕೆಯನ್ನು ವಹಿಸಿಕೊಂಡಿದ್ದು, ಅಣ್ಣ-ತಂಗಿಯ ನಡುವಿನ ಜಗಳ, ನಂತರ ಗೌರಿಯೇ ಸೆಪರೇಟ್ ಪತ್ರಿಕೆ ನಡೆಸಿದ್ದು ಎಲ್ಲವೂ ಇತಿಹಾಸ. ಆ ಎಲ್ಲಾ ಇತಿಹಾಸದಲ್ಲಿ ಚಂದ್ರೇಗೌಡರು ವರ್ತಮಾನವಾಗಿದ್ದರು.

ಈ ಪುಸ್ತಕ ಕೇವಲ ಆತ್ಮಕತೆಯಲ್ಲ. ಪತ್ರಿಕೋದ್ಯಮ ಮತ್ತು ರಾಜಕಾರಣದ ಇತಿಹಾಸವೂ ಹೌದು. ವರ್ತಮಾನವೂ ಹೌದು.

ಮನೋಜ್‌ ಆರ್‌ ಕಂಬಳಿ

ಪತ್ರಕರ್ತರು

ಇದನ್ನೂ ಓದಿ- ಕೆಪಿಎಸ್ ಸಿ ಕರ್ಮಕಾಂಡ

More articles

Latest article

Most read