ಮತಾಂಧತೆ ಮತ್ತೇರಿದಾಗ…

ಈ ದ್ವೇಷ ಭಾಷಣ ಮಾಡುವ, ಅನ್ಯ ಸಮುದಾಯಗಳ ಮೇಲೆ ನಂಜು ಕಾರುವ, ರಾಜಕೀಯ ವಿರೋಧಿಗಳನ್ನು ಹತ್ಯೆ ಮಾಡಲು ಪ್ರಚೋದಿಸುವವರ ವಿರುದ್ಧ ಕೇವಲ ದೂರು ಎಫ್‌ ಐ ಆರ್ ಗಳು ಯಾವುದೇ ಕೆಲಸ ಮಾಡುತ್ತಿಲ್ಲ. ಕೋರ್ಟುಗಳ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ. ಬಂಧನ, ತೀವ್ರ ವಿಚಾರಣೆ ಹಾಗೂ ಶಿಕ್ಷೆಯ ಭಯವೇ ಇಲ್ಲದ ಮೇಲೆ ಈ ಮತಾಂಧರು ದ್ವೇಷ ಭಾಷಣಗಳ ಮೂಲಕ ತಮ್ಮ ಅಂಧಭಕ್ತರನ್ನು ಪ್ರಚೋದಿಸುತ್ತಲೇ ಇರುತ್ತಾರೆ ಶಶಿಕಾಂತ  ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಈ ಮತಾಂಧರಿಗೆ ಮತಿಗೆಟ್ಟು ಹೋದಂತಿದೆ. ಈ ದೇಶದಲ್ಲಿ ಕಾನೂನು ಸಂವಿಧಾನ ಇದೆ ಎಂಬುದನ್ನೂ ನಿರ್ಲಕ್ಷಿಸಿ ದ್ವೇಷ ಭಾಷಣಗಳ ಮೂಲಕ ಪ್ರಚೋದನೆ ಮಾಡುತ್ತಲೇ ಇರುತ್ತಾರೆ.

ಕಳೆದ ವಾರ ಬಿಜೆಪಿ ಎಂಎಲ್ಸಿ ಸಿ.ಟಿ ರವಿ ಎನ್ನುವ ಮತಾಂಧ ಮುಸ್ಲಿಂ ಸಮುದಾಯದ ಬಗ್ಗೆ ಅವಮಾನಕಾರಿಯಾಗಿ ಮಾತಾಡಿದ್ದ. ಈಗ ಉಡುಪಿ ಶಾಸಕ ಯಶ್‌ ಪಾಲ್‌ ಸುವರ್ಣ ಎನ್ನುವ ಇನ್ನೊಬ್ಬ ಕೋಮುಕ್ರಿಮಿ ತನ್ನ ನಂಜಿನ ನಾಲಿಗೆ ಹರಿಬಿಟ್ಟಿದ್ದಾನೆ. ನೇರವಾಗಿ ರಾಹುಲ್ ಗಾಂಧಿಯವರ ಕುಟುಂಬವನ್ನೇ ನಾಶ ಮಾಡುವುದಾಗಿ ಬಹಿರಂಗ ಬೆದರಿಕೆ ಹಾಕಿದ್ದಾನೆ.

ಜುಲೈ 28 ರಂದು ಉಡುಪಿಯಲ್ಲಿ ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪ್ರಚೋದನಕಾರಿಯಾಗಿ ಮಾತಾಡಿದ ಈ ಸಂಘಿ ಶಾಸಕ “ರಾಹುಲ್ ಗಾಂಧಿ ಡ್ರಗ್ಸ್ ಅಡಿಕ್ಟ್, 24 ಗಂಟೆಯೂ ಮಾದಕದ ಪ್ರಭಾವದಲ್ಲಿ ಇರುತ್ತಾನೆ” ಎಂದು ನಿಂದಿಸಿದ್ದನ್ನು ನಿರ್ಲಕ್ಷಿಸಬಹುದಾಗಿತ್ತು. ಆದರೆ ಯಾವಾಗ “ಕಾರ್ಯಕರ್ತರು ಬಾಬರಿ ಮಸೀದಿ ಧ್ವಂಸ ಗೊಳಿಸಿದಂತೆ ರಾಹುಲ್ ಗಾಂಧಿ ಕುಟುಂಬ / ವಂಶವನ್ನೇ ನಾಶಮಾಡುತ್ತೇವೆ” ಎಂದು ಹೊಲಸು ನಾಲಿಗೆ ಹರಿಬಿಟ್ಟರೋ ಆಗ ಈ ಅಸುರಿ ಶಾಸಕನ ಕ್ರೌರ್ಯ ಬಯಲಾಯಿತು. “ಲೋಕಸಭೆಯ ವಿರೋಧ ಪಕ್ಷದ ನಾಯಕನ ಕುಟುಂಬವನ್ನೇ ನಾಶ ಮಾಡುತ್ತೇನೆ” ಎಂದು ಸಾರ್ವಜನಿಕವಾಗಿ ಕೊಲೆ ಬೆದರಿಕೆ ಹಾಕುವುದು ಅಕ್ಷಮ್ಯ ಅಪರಾಧ. ಈ ಹೇಳಿಕೆ ವಿರುದ್ಧ ಈಗಾಗಲೇ ದೂರು ದಾಖಲಾಗಿದೆ, ಬಿಎನ್ ಎಸ್ 57, 192, 196(2), 352, 353(2), 351 (2) ಅಡಿಯಲ್ಲಿ ಸಾರ್ವಜನಿಕರನ್ನು ಅಪರಾಧಕ್ಕೆ ಪ್ರೇರೇಪಿಸುವುದು, ಗಲಭೆಗೆ ಪ್ರಚೋದನೆ, ಗುಂಪುಗಳ ನಡುವೆ ಶತ್ರುತ್ವ ಬೆಳೆಸುವುದು, ಕ್ರಿಮಿನಲ್ ಬೆದರಿಕೆ, ಶಾಂತಿ ಭಂಗ, ದ್ವೇಷ ಹರಡುವ ಹೇಳಿಕೆಗಳು.. ಮುಂತಾದ ಕಲಂ ನಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.

ಆದರೆ ಜನಪ್ರತಿನಿಧಿಯಾಗಿ ಕಾನೂನನ್ನು ಕಾಪಾಡಬೇಕಾದ ಶಾಸಕನೇ ಹೀಗೆ ಯಾವ ಧೈರ್ಯದ ಮೇಲೆ ಕಾನೂನು ಭಂಗ ಮಾಡುತ್ತಾನೆ? ಕಾನೂನಿಗೆ ಕವಡೆ ಕಿಮ್ಮತ್ತನ್ನೂ ಕೊಡದ ಈ ಸಂಘಿಗಳಿಗೆ ಪಕ್ಕಾ ಗೊತ್ತಿದೆ ಈ ಕಾನೂನು ತಮಗೇನೂ ಮಾಡಲು ಸಾಧ್ಯವಿಲ್ಲ ಎಂದು. ನಾಳೆ ಹೈಕೋರ್ಟ್‌ನಲ್ಲಿ ಚಾಲೆಂಜ್ ಮಾಡಲಾಗುತ್ತದೆ. ಯಥಾ ಪ್ರಕಾರ “ಬಲವಂತದ ಕ್ರಮ ಕೈಗೊಳ್ಳಬಾರದು” ಎಂದು ನ್ಯಾಯಾಧೀಶರು ಪೊಲೀಸರಿಗೆ ಆದೇಶಿಸುತ್ತಾರೆ. ಕೆಲವಾರು ವರ್ಷ ಕೇಸು ನಡೆಯುತ್ತದೆ,  ಸುಪ್ರೀಂ ಕೋರ್ಟ್‌ ಲ್ಲಿ ಈ ಹೇಟ್ ಸ್ಪೀಚ್ ಕೇಸುಗಳು ಬಿದ್ದು ಹೋಗುತ್ತವೆ. ಮುಂದೆ ಇವರ ಕೋಮುವಾದಿ ಸರಕಾರ ಬಂದಾಗ ಎಲ್ಲಾ ಕೇಸುಗಳನ್ನೂ ವಾಪಸ್ ಪಡೆಯಲಾಗುತ್ತದೆ ಎಂಬುದು ಚೆನ್ನಾಗಿ ಗೊತ್ತಿರುವುದರಿಂದಲೇ ಯಾವ ಕಾನೂನಿನ ಭಯವೇ ಇಲ್ಲದೆ  ಕೊಲೆ ಬೆದರಿಕೆ ಹಾಕುವ ಮಟ್ಟಕ್ಕೆ ಈ ಸಂಘಿಗಳು ಹೆಚ್ಚಿಕೊಂಡಿದ್ದಾರೆ.

ಇದೇ ಯಶ್‌ ಪಾಲ್‌ ಸುವರ್ಣ ಎನ್ನುವ ಶಾಸಕ 2022 ರಲ್ಲಿ ಹಿಜಾಬ್ ವಿವಾದದಲ್ಲಿ ಹಿಂದೂಗಳನ್ನು ಎತ್ತಿಕಟ್ಟಿ ಕೋಮುದ್ವೇಷದ ಭಾಷಣ ಮಾಡಿದ್ದ. ನ್ಯಾಯಾಲಯಕ್ಕೆ ಹೋದ ವಿದ್ಯಾರ್ಥಿನಿಯರನ್ನು  ದೇಶದ್ರೋಹಿಗಳು ಮತ್ತು ಭಯೋತ್ಪಾದಕರು ಎಂದು ನಿಂದಿಸಿದ್ದ.

ಇತ್ತೀಚೆಗೆ ನೀಟ್ ಪೇಪರ್ ಲೀಕ್ ಹೋರಾಟದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಕಾಕ್ರೋಚ್ ಜನತಾ ಪಾರ್ಟಿಯನ್ನು ಜಿರಲೆಗಳಂತೆ ಹೊಸಕಿ ಹಾಕಬೇಕು ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ.

ಈಗ ಪ್ರಜ್ಞಾವಂತ ಕಲಾವಿದ ಪ್ರಕಾಶ್ ರೈರವರನ್ನು “ಸಮುದ್ರದ ಮೀನುಗಳಿಗೆ ಆಹಾರವಾಗಿ ಹಾಕುತ್ತೇನೆ” ಎಂದು ಪರೋಕ್ಷವಾಗಿ ಕೊಲೆ ಬೆದರಿಕೆಯನ್ನೂ ಈ ಗೂಂಡಾ ಶಾಸಕ ಹಾಕಿದ್ದು ಇಂತವರು ಜನಪ್ರತಿನಿಧಿಗಳು ಆಗುವುದಕ್ಕೇ ಯೋಗ್ಯರಲ್ಲ.

ಯಶ್‌ ಪಾಲ್‌ ಸುವರ್ಣ

ಎಂತಹ ರಾಜಕೀಯ ಸೈದ್ಧಾಂತಿಕ ವಿರೋಧಿಯೇ ಆಗಿದ್ದರೂ ಅವರನ್ನು ರಾಜಕೀಯವಾಗಿ ವಿರೋಧಿಸುವುದನ್ನು ಬಿಟ್ಟು ಹೀಗೆ ಕೊಲೆ ಬೆದರಿಕೆ ಹಾಕುವುದು ಈ ಕೋಮುವಾದಿ ಖದೀಮರ ಕ್ರೌರ್ಯವನ್ನು ಬಿಂಬಿಸುತ್ತದೆ. ಕೇಂದ್ರದಲ್ಲಿ ತಮ್ಮದೇ ಸರಕಾರ ಇದೆ, ಹೀಗಾಗಿ ಏನು ಬೇಕಾದರೂ ಹೇಳಿ ದಕ್ಕಿಸಿಕೊಳ್ಳಬಹುದು ಎನ್ನುವ ದುರಹಂಕಾರ ಈ ರೌಡಿ ಶಾಸಕರದ್ದಾಗಿದೆ.

ಹೀಗೆ ಬಹಿರಂಗವಾಗಿ ಹತ್ಯೆಗೆ ಬೆದರಿಕೆ ಹಾಕುವುದು ಅಪರಾಧ ಅಲ್ವಾ? ಎಂದು ಈ ಬಿಜೆಪಿಗರನ್ನು ಕೇಳಿದರೆ “ಅಲ್ಲಿ ನೋಡಿ ಸಂಸತ್ತಿನ ಅಧಿವೇಶನದಲ್ಲಿ ರಾಹುಲ್ ಗಾಂಧಿ ಈಡಿಯೆಟ್ ಎಂದಿದ್ದಾರೆ. ಇದು ಅಪರಾಧ ಅಲ್ವಾ” ಎಂದು ಈ ಸಂಘಿ ಸಂತಾನಗಳು ಪ್ರತ್ಯಾರೋಪ ಮಾಡುತ್ತವೆ. ಮೂರ್ಖ ಎನ್ನುವುದಕ್ಕೂ ವಂಶವನ್ನೇ ನಿರ್ವಂಶ ಮಾಡುತ್ತೇನೆಂದು ಬೆದರಿಕೆ ಹಾಕುವುದಕ್ಕೂ ವ್ಯತ್ಯಾಸ ಇಲ್ವಾ? ಈ ಶಿಸ್ತಿನ ಪಕ್ಷವೆಂದು ಹೇಳಿಕೊಳ್ಳುವವರ ಚರಂಡಿ ಬಾಯಿಗೆ ಬೀಗ ಹಾಕುವವರು ಈ ಬಿಜೆಪಿಯಲ್ಲಿ ಯಾರೂ ಇಲ್ವಾ? ಇಂತಹ ಭಯೋತ್ಪಾದಕ ಹೇಳಿಕೆಗಳಿಗೆ ಆರೆಸ್ಸೆಸ್ಸಿನ ಸಮ್ಮತಿಯೂ ಇದೆಯಾ?

ಯಶ್‌ ಪಾಲ್‌ ಸುವರ್ಣನಂತಹ ಕೋಮುವ್ಯಾಧಿ ಪೀಡಿತ ಬಿಜೆಪಿ ನಾಯಕರು ತಮ್ಮ ಅಂಧಾಭಿಮಾನಿಗಳಿಗೆ ಹೊಡಿ ಬಡಿ ಕಡಿ ಹತ್ಯೆ ಮಾಡು ಎಂದು ಪ್ರಚೋದಿಸುತ್ತಿರುವುದು ಖಂಡನೀಯವಾಗಿದೆ. ಇಂತವರಿಗೆ ಆಯಾ ಮತಕ್ಷೇತ್ರದ ಮತದಾರರೇ ಮುಂದಿನ ಚುನಾವಣೆಯಲ್ಲಿ ಸೋಲಿಸಿ ತಕ್ಕ ಪಾಠ ಕಲಿಸಬೇಕಿದೆ. ಇಲ್ಲದೇ ಹೋದರೆ ಇಂತಹ ಮತಾಂಧರು ಇದ್ದಲ್ಲೆಲ್ಲಾ ಸೌಹಾರ್ದತೆ ಸರ್ವನಾಶವಾಗುತ್ತದೆ.

ಯಶ್‌ ಪಾಲ್‌ ಸುವರ್ಣ ಹಾಗೂ ಸಿಟಿ ರವಿಯಂತಹ ದ್ವೇಷ ಭಾಷಣ ಪೀಡಿತರನ್ನು ನಿಯಂತ್ರಿಸಲು ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ  “ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ- 2025” ಜಾರಿಗೆ ಮಾಡಲು ಸರ್ವ ಪ್ರಯತ್ನ ಮಾಡಿತು. ಕ್ಯಾಬಿನೆಟ್ ನಲ್ಲಿ ಡಿಸೆಂಬರ್ 10 ರಂದು ಅನುಮೋದನೆ ಮಾಡಲಾಯ್ತು. ವಿಧಾನಸಭೆಯಲ್ಲಿ ಡಿಸೆಂಬರ್ 18 ರಂದು ಅಂಗೀಕಾರ ಪಡೆಯಲಾಯ್ತು. ವಿಧಾನ ಪರಿಷತ್ತಿನಲ್ಲೂ ಡಿ.19 ರಂದು ಮಸೂದೆ ಅಂಗೀಕಾರವಾಯ್ತು. ಆದರೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ತಕರಾರು ತೆಗೆದರು. ರಾಜ್ಯಪಾಲ ಥಾವರ್ ಚಂದ್ ಈ ಮಸೂದೆಗೆ ಅನುಮೋದನೆ ನೀಡದೇ ರಾಷ್ಟ್ರಪತಿಯವರ ಪರಿಗಣನೆಗೆ ಕಳುಹಿಸಿದರು. ಅವರು “ರಾಜಕೀಯ ದುರುಪಯೋಗದ ಸಾಧ್ಯತೆ ಇದೆ” ವಾಕ್ ಸ್ವಾತಂತ್ರ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ” ಎಂದು ಪ್ರಸ್ತಾವಿತ ಮಸೂದೆಯನ್ನು ತಿರಸ್ಕರಿಸಿದರು. ಕೇಂದ್ರ ಸರಕಾರ ಈ ಕಾನೂನು ಅಗತ್ಯವಿಲ್ಲ ಎಂದು ಹೇಳಿತು. ಹೀಗಾಗಿ ಆ ಕಾನೂನು ಜಾರಿಯಾಗಲೇ ಇಲ್ಲ. ದ್ವೇಷ ಭಾಷಣಕೋರರಿಗೆ ಮೂಗುದಾರ ಹಾಕುವವರಿಲ್ಲ.

ಹಾಗಾದರೆ ವಾಕ್ ಸ್ವಾತಂತ್ರ್ಯ ಅಂದ್ರೆ ಇದೇನಾ? ಸೈದ್ಧಾಂತಿಕ ವಿರೋಧಿಗಳ ಕೈ ಕಾಲು ನಾಲಿಗೆ ಕತ್ತರಿಸಿ ಎನ್ನುವುದು, ವಂಶವನ್ನೇ ನಿರ್ವಂಶಮಾಡಿ ಎಂದು ಪ್ರಚೋದಿಸುವುದು, ವಿರೋಧಿಸಿದವರನ್ನು ಮೀನುಗಳಿಗೆ ಆಹಾರವಾಗಿಸುತ್ತೇನೆ ಎಂದು ದ್ವೇಷ ಭಾಷಣ ಮಾಡುವುದೆಲ್ಲಾ ವಾಕ್ ಸ್ವಾತಂತ್ರ್ಯವಾ?

ಹೋಗಲಿ ಈ ದ್ವೇಷ ಭಾಷಣ ಮಾಡುವ, ಅನ್ಯ ಸಮುದಾಯಗಳ ಮೇಲೆ ನಂಜು ಕಾರುವ, ರಾಜಕೀಯ ವಿರೋಧಿಗಳನ್ನು ಹತ್ಯೆ ಮಾಡಲು ಪ್ರಚೋದಿಸುವವರ ವಿರುದ್ಧ ಕೇವಲ ದೂರು ಎಫ್‌ ಐ ಆರ್ ಗಳು ಯಾವುದೇ ಕೆಲಸ ಮಾಡುತ್ತಿಲ್ಲ. ಕೋರ್ಟುಗಳ ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ. ಬಂಧನ, ತೀವ್ರ ವಿಚಾರಣೆ ಹಾಗೂ ಶಿಕ್ಷೆಯ ಭಯವೇ ಇಲ್ಲದ ಮೇಲೆ ಈ ಮತಾಂಧರು ದ್ವೇಷ ಭಾಷಣಗಳ ಮೂಲಕ ತಮ್ಮ ಅಂಧಭಕ್ತರನ್ನು ಪ್ರಚೋದಿಸುತ್ತಲೇ ಇರುತ್ತಾರೆ. ಕೋಮು ಭಾವನೆಗಳನ್ನು ಕೆರಳಿಸುತ್ತಲೇ ಇರುತ್ತಾರೆ. ಸಮಾಜದ ಸೌಹಾರ್ದತೆಯನ್ನು ಕದಡುತ್ತಲೇ ಇರುತ್ತಾರೆ.

ಶಶಿಕಾಂತ ಯಡಹಳ್ಳಿ

ಇದನ್ನೂ ಓದಿ- ವೀರಗೊಲ್ಲಾಳರ ಹಿಕ್ಕೆಯೊಳಗಿನ ಇಷ್ಟಲಿಂಗ

More articles

Latest article

Most read