ನಾಡಗೀತೆ ವಿವಾದ; ಬೌದ್ಧ ಪದ ಸೇರ್ಪಡೆಗೆ ಯಾಕೆ ಅಪಸ್ವರ?

ಮೂಲ ಕವಿತೆ ಅದನ್ನು ಬರೆದ ಕಾಲಕ್ಕೆ ಸೂಕ್ತವಾಗಿರಬಹುದು. ಆದರೆ ಬದಲಾದ ಕಾಲದ ಅಗತ್ಯಕ್ಕೆ ತಕ್ಕಂತೆ ಸೂಕ್ತ ಬದಲಾವಣೆ ಮಾಡಬಾರದು ಅಂದೇನೂ ಇಲ್ಲ. ನಾಡಗೀತೆಗೆ ಸಮಕಾಲೀನತೆಯ ಸ್ಪರ್ಶ ನೀಡುವುದರಲ್ಲಿ ತಪ್ಪೇನೂ ಇಲ್ಲ. ಇಷ್ಟಕ್ಕೂ ಬೌದ್ಧ ಧರ್ಮ ಸಮಾನತೆಯನ್ನು ಸಾರುವ, ಮೌಢ್ಯನಂಬಿಕೆಗಳನ್ನು ಪ್ರಶ್ನಿಸುವ, ಅಹಿಂಸೆಯನ್ನು ಒತ್ತಿಹೇಳುವ ಅತ್ಯಂತ ಮಾನವೀಯ ಧರ್ಮವಾಗಿದೆ. ಅದನ್ನು ನಾಡಗೀತೆಯಲ್ಲಿ ಸೇರಿಸುವುದು ಅತ್ಯಂತ ಸೂಕ್ತವಾದ ನಿರ್ಧಾರವಾಗಿದೆ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಕುವೆಂಪುರವರು 1924 ರಲ್ಲಿ ಕಿಶೋರಚಂದ್ರವಾಣಿ ಕಾವ್ಯನಾಮದಡಿ “ಜಯಭಾರತ ಜನನಿಯ ತನುಜಾತೆ” ಕವನ ಬರೆದಿದ್ದು ಅದು ಅವರ ಕೊಳಲು ಕವನ ಸಂಕಲನದಲ್ಲಿ ಪ್ರಕಟವಾಗಿದೆ.

ಕುವೆಂಪುರವರ ಕವಿತೆ ತುಂಬಾ ಸೊಗಸಾಗಿದೆ. “ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ” ಎಂಬುದು ಪಲ್ಲವಿಯಾಗಿದೆ. ನಂತರದ ಚರಣದಲ್ಲಿ ಪ್ರಕೃತಿ ಹಾಗೂ ಸಂಸ್ಕೃತಿ ಕುರಿತ ಉಲ್ಲೇಖವಿದೆ. ಆಮೇಲೆ ಋಷಿಗಳು ಹಾಗೂ ಧರ್ಮಗುರುಗಳ ಪ್ರಸ್ತಾಪಗಳಿವೆ. ತದನಂತರ ಧರ್ಮ ಸಮನ್ವಯದ ಸಾಲುಗಳಿವೆ. ಕೊನೆಯ ಚರಣದಲ್ಲಿ ಕವಿ, ನದಿ, ಶಾಂತಿಯ ತೋಟದ ನೋಟಗಳಿವೆ. ಒಟ್ಟಾರೆಯಾಗಿ ಕರ್ನಾಟಕದ ಹೆಗ್ಗುರುತುಗಳ ಉಲ್ಲೇಖಗಳಿದ್ದು, ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಸಾರ್ವಕಾಲಿಕ ಸಂದೇಶವೂ ಇದೆ. ನಾಡಗೀತೆಯಾಗಲು ಎಲ್ಲಾ ಮಾನದಂಡಗಳೂ ಇಲ್ಲಿವೆ. ಆದರೆ ಧರ್ಮಗುರು (ಮಾಧ್ವ ) ಹಾಗೂ ಬೌದ್ಧ ಧರ್ಮದ ಕುರಿತು ವಿವಾದವಾಗಿದೆ.

ತಿದ್ದುಪಡಿ ವಿರೋಧಿಸಿದ್ದರು ಕುವೆಂಪು ಹಾಗೂ ತೇಜಸ್ವಿ

ಕುವೆಂಪು ಅವರ ‘ನಾಡಗೀತೆ’ಗೆ ಕವಿಯ ಒಪ್ಪಿಗೆಯಿಲ್ಲದೆ ‘ಮಧ್ವರ’ ಎಂಬ ಪದವನ್ನು ಸೇರಿಸಿದ್ದನ್ನು ಕುವೆಂಪುರವರ ಪುತ್ರರಾದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಉಗ್ರವಾಗಿ ವಿರೋಧಿಸಿ 2006 ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದರು. ಅದರಲ್ಲಿ “ನಾಡಗೀತೆಯನ್ನು ಆಯಾಕಾಲದ ಮತೀಯ ಮತ್ತು ರಾಜಕೀಯ ಒತ್ತಡಗಳಿಗನುಗುಣವಾಗಿ ತಿದ್ದುತ್ತಾ ಹೋಗುವುದು ಬಹಳ ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗುತ್ತದೆ,… 1977 ರಲ್ಲಿ ಜಿ.ನಾರಾಯಣರವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಮೊದಲ ಆವೃತ್ತಿಯಲ್ಲಿ ‘ಮಧ್ವರ’ ಎನ್ನುವ ಪದ ಸೇರಿಸಲಾಗಿತ್ತು. ಅದಕ್ಕೆ ಕುವೆಂಪುರವರು ತೀವ್ರವಾಗಿ ಆಕ್ಷೇಪಿಸಿದ್ದರು. ನಂತರ ಅದೇ ಜಿ.ನಾರಾಯಣರವರು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ 1994 ರಲ್ಲಿ ಪ್ರಕಟಿಸಿದ ರತ್ನಕೋಶದ ಆವೃತ್ತಿಯಲ್ಲಿ ಈ ತಿದ್ದುಪಡಿಯನ್ನು ಕೈಬಿಟ್ಟು ಮೂಲ ಕವಿತೆಯನ್ನೇ ಪ್ರಕಟಿಸಿದ್ದರು.  ಕುವೆಂಪುರವರ ನಿಧನಾನಂತರ 2001 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆವೃತ್ತಿಯಲ್ಲಿ ಕೊಳಲು ಸಂಕಲನದ ಮೂಲ ಕವಿತೆಯನ್ನೇ ಬಳಸಲಾಗಿತ್ತು. ಆದರೆ ಪುನರೂರು ಅಧ್ಯಕ್ಷರಾದ ನಂತರ ಆ ಮುದ್ರಿತ ಆವೃತ್ತಿಯನ್ನು ಬಿಚ್ಚಿ ನಾಡಗೀತೆ ಮುದ್ರಿತವಾದ ಹಾಳೆಗಳನ್ನು ಕಿತ್ತು ಮಧ್ವರ ಎಂಬ ತಿದ್ದುಪಡಿಯಿರುವ ಹಾಳೆಯನ್ನು ಸೇರಿಸಿ ಹೊಸದಾಗಿ ಬೈಂಡ್ ಮಾಡಲಾಗಿತ್ತು” ಎನ್ನುವ ವಿವರಗಳನ್ನು ಸವಿಸ್ತಾರವಾಗಿ ಪತ್ರದ ಮೂಲಕ ಬರೆದು ಮಧ್ವರ ಪದ ತಿದ್ದುಪಡಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. ಆದರೆ 2004 ರಲ್ಲಿ ನಾಡಗೀತೆಯನ್ನು ಅಂಗೀಕರಿಸುವಾಗ ಸರಕಾರವು ಈ ಮಧ್ವರ ಎನ್ನುವ ಪದವನ್ನು ಸೇರಿಸಿದ್ದು ಅದೇ ಜಾರಿಗೆ ಬಂದಿತು.

ಈಗ ಚಾಲ್ತಿಯಲ್ಲಿರುವ ನಾಡಗೀತೆ

2004 ರಲ್ಲಿ ನಾಡಗೀತೆಯಾಗಿ ಅಂಗೀಕರಿಸುವಾಗ ಕೆಲವು ಬದಲಾವಣೆಗಳನ್ನು ಮಾಡಲಾಗಿತ್ತು.

“ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ” ಎಂಬ ಸಾಲನ್ನು ಅಂತಿಮಗೊಳಿಸಲಾಗಿತ್ತು. ಕುವೆಂಪುರವರ ಹಸ್ತಪ್ರತಿಯಲ್ಲಿ ಬೌದ್ಧರುದ್ಯಾನ ಎಂಬುದು ಇದ್ದು ನಂತರದ 1970ರ ಪರಿಷ್ಕರಣೆಯಲ್ಲಿ ಅದನ್ನು ಬದಲಾಯಿಸಲಾಗಿದೆ ಎಂಬ ವಾದವೂ ಇದೆ.

ಪ್ರಸ್ತುತ ಹಾಡಲಾಗುತ್ತಿರುವ ನಾಡಗೀತೆಯಲ್ಲಿ ಬೌದ್ಧ ಧರ್ಮದ ಉಲ್ಲೇಖ ಇಲ್ಲವಾಗಿದೆ ಅದನ್ನು ಸೇರಿಸಬೇಕು ಎನ್ನುವುದು ಬೌದ್ಧ ಸಮುದಾಯ ಹಾಗೂ ಕೆಲವಾರು ಸಾಹಿತಿಗಳು ಮತ್ತು ಹಲವಾರು ಪ್ರಗತಿಪರರ ಒತ್ತಾಯ ಕೇಳಿಬಂದಿತ್ತು. ಅವರ ವಾದ ಏನೆಂದರೆ..

* ಕುವೆಂಪುರವರ ಮೂಲ ಕವನದಲ್ಲಿ ಬೌದ್ಧರುದ್ಯಾನ ಎಂಬ ಶಬ್ದವಿತ್ತು 1970 ರ ದಶಕದಲ್ಲಿ ಆ ಶಬ್ದವನ್ನು ತೆಗೆದು ಹಾಕಲಾಯ್ತು.

* ನಾಡಗೀತೆಯಲ್ಲಿ ಬೌದ್ಧ ಸಂಸ್ಕೃತಿಯನ್ನು ನಿರ್ಲಕ್ಷಿಸಲಾಗಿದೆ. ಬೌದ್ಧ ಅಸ್ಮಿತೆಯನ್ನು ಅಳಿಸಲಾಗಿದೆ.

* ಮೂಲ ಪಠ್ಯದಲ್ಲಿಲ್ಲದ ಮಾಧ್ವ ಶಬ್ದವನ್ನು ಆ ನಂತರ ಸೇರಿಸಲಾಗಿದೆ. ಈಗ ಬೌದ್ಧ ಶಬ್ದದ ಸೇರ್ಪಡೆ ಮಾಡಬೇಕಿದೆ.

ಈ ಬೇಡಿಕೆಗೆ ಸ್ಪಂದಿಸಿದ ಸಿದ್ದರಾಮಯ್ಯನವರ ಸರಕಾರವು ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿರುವ ಪುರುಷೋತ್ತಮ ಬಿಳಿಮಲೆಯವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಕೂಲಂಕಷವಾಗಿ ಪರಿಶೀಲಿಸಿದ ಸಮಿತಿಯು ಇತ್ತೀಚೆಗೆ ತಮ್ಮ ಶಿಫಾರಸ್ಸನ್ನು ಸರಕಾರಕ್ಕೆ ಸಲ್ಲಿಸಿತು. ಅವುಗಳೇನೆಂದರೆ-

* ಜೈನರುದ್ಯಾನ ಶಬ್ದವನ್ನು ಬದಲಾಯಿಸಿ ಜೈನ ಬೌದ್ಧರುದ್ಯಾನ ಎಂದು ಬದಲಾಯಿಸಿ ನಾಡಗೀತೆಯಲ್ಲಿ ಬೌದ್ಧ ಧರ್ಮವನ್ನು ಸೇರಿಸಬೇಕು.

* ಇದು ಕರ್ನಾಟಕದ ಧಾರ್ಮಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ.

* ಬೌದ್ಧರ ಐತಿಹಾಸಿಕ ಪಾತ್ರವನ್ನು ಗುರುತಿಸುತ್ತದೆ.

* ಕುವೆಂಪುರವರ ಬರಹಗಳಲ್ಲಿ ಬೌದ್ಧ ತತ್ತ್ವಗಳಿಗೆ ಮಹತ್ವವಿದೆ.

* ನಾಡಗೀತೆಯಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎನ್ನುವಾಗ ಅದರಲ್ಲಿ ಬೌದ್ಧ ಧರ್ಮ ಇಲ್ಲದೇ ಹೋದರೆ ಆ ಆಶಯಕ್ಕೆ ಅಪಚಾರವಾಗುತ್ತದೆ.

* ಬೌದ್ಧ ಪದ ಬಳಕೆ ಇಲ್ಲದೇ ಇರುವುದು ಬೌದ್ಧ ಸಂಸ್ಕೃತಿಯನ್ನು ನಾಶಪಡಿಸುವ ಹುನ್ನಾರ.

* ಬೌದ್ಧ ಸಮ್ಮೇಳನಗಳು ಮನವಿಯನ್ನು ಮಾಡಿದ್ದು ಸಚಿವರು ಪರಿಶೀಲಿಸುತ್ತೇನೆ ಎಂದಿದ್ದಾರೆ.

ಬೌದ್ಧರುದ್ಯಾನ ಪದ ಸೇರ್ಪಡೆಗೆ ಕೆಲವರು ಆಕ್ಷೇಪಿಸುತ್ತಿದ್ದಾರೆ. ಅವರ ವಾದವೇನೆಂದರೆ..

* ಕುವೆಂಪುರವರ ಮೂಲ ಪಠ್ಯವನ್ನು ಬದಲಾಯಿಸಬಾರದು

* ಕುವೆಂಪುರವರೇ ಪರಿಷ್ಕರಣೆಗೆ ಬೇಸರಗೊಂಡಿದ್ದರು.

* ಕುವೆಂಪುರವರ ಆಶಯಕ್ಕೆ ಧಕ್ಕೆಯಾಗುತ್ತದೆ.

* ನಾಡಗೀತೆಯನ್ನು ಹೀಗೆ ಬದಲಾಯಿಸಿದರೆ ಅದು ಸ್ತುತಿಗೀತೆಯಾಗುತ್ತದೆ.

* ನಾಡಗೀತೆಯ ಮೇಲೆ ಅನಗತ್ಯ ಹಸ್ತಕ್ಷೇಪ ಮಾಡಬಾರದು.

* ನಾಡಗೀತೆಯಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕೆ ಹೊರತು ಅನಗತ್ಯ ವಿವಾದ ಮಾಡಬಾರದು.

* ಧಾರ್ಮಿಕ ಸಮತೋಲನದ ಹೆಸರಿನಲ್ಲಿ ಹೆಚ್ಚು ಬದಲಾವಣೆ ಮಾಡಬಾರದು ಎಂದು ಸಂಪ್ರದಾಯವಾದಿ ಹಿಂದೂ ಸಂಘಟನೆಗಳವರ ವಾದ.

ನಾಡಗೀತೆಗೆ ವಿವಾದಗಳು ಹೊಸದೇನಲ್ಲ. ಆಗಾಗ ಏನಾದರೂ ತಕರಾರು ಇದ್ದೇ ಇದೆ. ಈ ಹಿಂದೆ ಕೂಡಾ..

* ಪೂರ್ಣ ಪಠ್ಯವನ್ನು ಹಾಡಬೇಕಾ ಇಲ್ಲಾ ಸಂಕ್ಷಿಪ್ತಗೊಳಿಸಿ ಹಾಡಬೇಕಾ?

* ನಾಡಗೀತೆಗೆ ಅಶ್ವಥ್ ರವರ ರಾಗಸಂಯೋಜನೆಯನ್ನು ಬಳಸಬೇಕಾ ಇಲ್ಲಾ ಅನಂತಸ್ವಾಮಿಯವರದ್ದಾ?

* ಇತರ ಧರ್ಮಗುರುಗಳ ಹೆಸರುಗಳನ್ನು ಸೇರಿಸಬೇಕಾ ಇಲ್ಲಾ ತೆಗೆಯಬೇಕಾ?

ಎನ್ನುವ ಕುರಿತು ವಾದ ವಿವಾದಗಳಾಗಿವೆ. ಹಾಡಿನ ಕೆಲವು ಸಾಲುಗಳನ್ನು ಕೈಬಿಡಲಾಗಿದೆ, ಮೂಲ ಪಠ್ಯದಲ್ಲಿಲ್ಲದ ಮಾಧ್ವ ಹೆಸರನ್ನು ಸೇರಿಸಲಾಗಿದೆ, ಅನಂತಸ್ವಾಮಿಯವರ ರಾಗ ಸಂಯೋಜನೆ ಇರಲಿ ಎನ್ನುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಈ ಬೌದ್ಧ ಶಬ್ದ ಸೇರ್ಪಡೆ ಕುರಿತು ವಿವಾದ ಮುಂದುವರೆದಿದೆ. ಅದನ್ನೂ ಸೇರಿಸಬೇಕು ಎಂದು ಬಿಳಿಮಲೆಯವರ ಸಮಿತಿ ಶಿಫಾರಸ್ಸು ಮಾಡಿದ್ದಕ್ಕೂ ಸುಗಮ ಸಂಗೀತದ ಮುದ್ದುಕೃಷ್ಣರವರು ತಕರಾರು ತೆಗೆದಿದ್ದಾರೆ. ಈಗಿರುವ ಪಠ್ಯದಲ್ಲಿ ಬದಲಾವಣೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ. ಮೂಲ ಪಠ್ಯದಲ್ಲಿಲ್ಲದ ಮಾಧ್ವ ಹೆಸರನ್ನು ಸೇರಿಸಬಹುದಾದರೆ ಬೌದ್ಧ ಹೆಸರನ್ನು ಯಾಕೆ ಸೇರಿಸಬಾರದು ಎಂದು ಹಲವಾರು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.

ಮೂಲ ಕವಿತೆ ಅದನ್ನು ಬರೆದ ಕಾಲಕ್ಕೆ ಸೂಕ್ತವಾಗಿರಬಹುದು. ಆದರೆ ಬದಲಾದ ಕಾಲದ ಅಗತ್ಯಕ್ಕೆ ತಕ್ಕಂತೆ ಸೂಕ್ತ ಬದಲಾವಣೆ ಮಾಡಬಾರದು ಅಂದೇನೂ ಇಲ್ಲ. ನಾಡಗೀತೆಗೆ ಸಮಕಾಲೀನತೆಯ ಸ್ಪರ್ಶ ನೀಡುವುದರಲ್ಲಿ ತಪ್ಪೇನೂ ಇಲ್ಲ. ಇಷ್ಟಕ್ಕೂ ಬೌದ್ಧ ಧರ್ಮ ಸಮಾನತೆಯನ್ನು ಸಾರುವ, ಮೌಢ್ಯನಂಬಿಕೆಗಳನ್ನು ಪ್ರಶ್ನಿಸುವ, ಅಹಿಂಸೆಯನ್ನು ಒತ್ತಿಹೇಳುವ ಅತ್ಯಂತ ಮಾನವೀಯ ಧರ್ಮವಾಗಿದೆ. ಅದನ್ನು ನಾಡಗೀತೆಯಲ್ಲಿ ಸೇರಿಸುವುದು ಅತ್ಯಂತ ಸೂಕ್ತವಾದ ನಿರ್ಧಾರವಾಗಿದೆ. ಆದಷ್ಟು ಬೇಗ ಕರ್ನಾಟಕ ಸರಕಾರ ಪುರುಷೋತ್ತಮ ಬಿಳಿಮಲೆಯವರ ಸಮಿತಿಯ ಶಿಫಾರಸ್ಸನ್ನು ಅಂಗೀಕರಿಸಿ ನಾಡಗೀತೆಯಲ್ಲಿ ಬೌದ್ಧ ಪದವನ್ನು ಸೇರಿಸಬೇಕೆಂಬುದು ಪ್ರಜ್ಞಾವಂತರ ಆಗ್ರಹವಾಗಿದೆ. ಇನ್ನೂ ಅಂತಿಮ ಅನುಮೋದನೆ ಆಗಿಲ್ಲ. ಶಾಲೆಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ‌ ಈಗಿರುವಂತೆ ನಾಡಗೀತೆಯನ್ನು ಹಾಡಲಾಗುತ್ತಿದೆ.

ಶಶಿಕಾಂತ ಯಡಹಳ್ಳಿ

ಇವರು ಕನ್ನಡದ ಪ್ರಮುಖ ರಂಗಕರ್ಮಿಗಳು, ಪತ್ರಕರ್ತರು, ಅಂಕಣಕಾರರು. ಪ್ರಚಲಿತ ಸಾಮಾಜಿಕ ಹಾಗೂ ರಾಜಕೀಯ  ವಿದ್ಯಮಾನಗಳ ಬಗ್ಗೆ ತಮ್ಮ ವಿಚಾರಗಳನ್ನು ಪ್ರಖರವಾಗಿ ಮಂಡಿಸುತ್ತಾ ಬಂದಿದ್ದಾರೆ.

ಇದನ್ನೂ ಓದಿ- https://kannadaplanet.com/another-collage-style-play-my-ambedkar/ ರಂಗಪ್ರಯೋಗ ವಿಮರ್ಶೆ | ಮತ್ತೊಂದು ಕೊಲ್ಯಾಜ್ ಮಾದರಿಯ ನಾಟಕ “ನನ್ನ ಅಂಬೇಡ್ಕರ್”

More articles

Latest article

Most read