ರಂಗ ಪ್ರಯೋಗ ವಿಮರ್ಶೆ- ಸ್ವಾತಂತ್ರ್ಯದ ಓಟದಲಿ ಮಾನವೀಯ ಸಂಬಂಧಗಳ ತಾಕಲಾಟ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸರಕಾರ ಕೊಟ್ಟ 1 ಕೋಟಿ ವಿಶೇಷ ಅನುದಾನದಲ್ಲಿ ಶಿವಮೊಗ್ಗ ರಂಗಾಯಣವು ನಿರ್ಮಿಸಿದ ನಾಟಕ “ಸ್ವಾತಂತ್ರ್ಯದ ಓಟ”. ಬೋಳುವಾರು ಮಹಮದ್ ಕುಂಞ ಯವರು ಬರೆದ ಬೃಹತ್‌ ಕಾದಂಬರಿ ಆಧರಿಸಿದ ಈ ನಾಟಕವನ್ನು ನಟರಾಜ ಹೊನ್ನವಳ್ಳಿಯವರು ನಿರ್ದೇಶಿಸಿದ್ದಾರೆ. ಈ ನಾಟಕದ 25 ನೇ ಪ್ರದರ್ಶನವನ್ನು ಕರ್ನಾಟಕ ನಾಟಕ ಅಕಾಡೆಮಿಯು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಿಜಿಕೆ ಯವರ 75 ನೇ ಜನ್ಮದಿನೋತ್ಸವದ ನೆನಪಿನ ಕಾರ್ಯಕ್ರಮದಲ್ಲಿ ಜೂನ್ 27 ರಂದು ಪ್ರದರ್ಶಿಸಲಾಯ್ತು.

ಬೊಳುವಾರು ರವರ 1111  ಪುಟಗಳ ಬೃಹತ್ ಎಪಿಕ್ ಕಾದಂಬರಿಯನ್ನು ಮೂರೂವರೆ ಗಂಟೆಯ ನಾಟಕವಾಗಿ ಕಟ್ಟಿಕೊಡುವುದು ಸುಲಭ ಸಾಧ್ಯವಲ್ಲ. ಆ ಕಾದಂಬರಿಯ ಹರಿವು, ವಿಸ್ತಾರ, ಚಲನಶೀಲತೆ ಅಗಾಧವಾದದ್ದು. ಆದರೂ  ಕಾಲಮಿತಿಯಲ್ಲಿ ಸಿಕ್ಕಷ್ಟು ದಕ್ಕಿಸಿಕೊಂಡ ಮಂಜುನಾಥ್ ಗೋಮಾರದಹಳ್ಳಿಯವರು ನಾಟಕ ರೂಪದಲ್ಲಿ ಇದನ್ನು ಕಟ್ಟಿಕೊಟ್ಟಿದ್ದಾರೆ. ಅದಕ್ಕೆ ತಮ್ಮದೇ ಆದ ಕ್ರಿಯಾಶೀಲತೆಯನ್ನು ಸೇರಿಸಿ ದೃಶ್ಯರೂಪಗಳ ಚೌಕಟ್ಟಿನಲ್ಲಿ “ಸ್ವಾತಂತ್ರ್ಯದ ಓಟ”ವನ್ನು ನಟರಾಜ ಹೊನ್ನವಳ್ಳಿಯವರು ಹಿಡಿದಿಟ್ಟು ನಿರ್ದೇಶಿಸಿದ್ದಾರೆ. ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಪ್ರಸನ್ನ ಸಾಗರರವರ ಪರಿಕಲ್ಪನೆಯನ್ನು ಹೊನ್ನವಳ್ಳಿಯವರು ಸಾಧ್ಯವಾದಷ್ಟೂ ಸಾಕಾರಗೊಳಿಸಿದ್ದಾರೆ.

ದೇಶ ವಿಭಜನೆಯ ಸಂದರ್ಭದ ಹಿಂಸೆ ಕ್ರೌರ್ಯ ಹಾಗೂ ಕರಾಳತೆಯನ್ನು ತೆರೆದಿಡುವ ಮೂಲಕ ಸ್ವಾತಂತ್ರ್ಯದ ಓಟ ಆರಂಭವಾಗುತ್ತದೆ. ದೇಶ ಇಬ್ಬಾಗವಾದಾಗ ಪಾಕಿಸ್ಥಾನದ ಲಾಹೋರಿನಲ್ಲಿದ್ದ ಸಿಖ್ ಕುಟುಂಬ ಅಲ್ಲಿನ ಧರ್ಮಾಂಧರ ದಬ್ಬಾಳಿಕೆಗೆ ಹೆದರಿ ಊರು ಬಿಡಬೇಕಾಗುತ್ತದೆ. ಆ ಕುಟುಂಬದ ಕುಲುಮೆ ಕೆಲಸ ಮಾಡಿಕೊಂಡಿದ್ದ ಚಾಂದ್ ಅಲಿಯು ಮಾಲೀಕರ ಮನೆಯ ಮೊಹಿಂದರ್ ಬಾಬಿ ಹಾಗೂ ಆಕೆಯ ತಂಗಿ ತನ್ವೀರ್ ಈ ಇಬ್ಬರು ಸಹೋದರಿಯರನ್ನು ಹಿಂದೂ ನಿರಾಶ್ರಿತರ ಶಿಬಿರಕ್ಕೆ ಸುರಕ್ಷಿತವಾಗಿ ತಲುಪಿಸಲು ಲಾರಿ ಹತ್ತಿ ಹೋಗಿ ಪಾಕಿಸ್ಥಾನದ ಗಡಿ ದಾಟಿ ಭಾರತಕ್ಕೆ ತಲುಪುತ್ತಾನೆ. ಆತಂಕಗೊಂಡ ಸಹೋದರಿಯರು ತಮ್ಮೆಲ್ಲಾ ಬೆಲೆಬಾಳುವ ಆಭರಣಗಳನ್ನು  ಅಲಿ ಕೈಗೆ ನೀಡುತ್ತಾರೆ. ರೈಲು ನಿಲ್ದಾಣದಲ್ಲಿ ಅನಿರೀಕ್ಷಿತವಾಗಿ ಅಲಿ ಬೇರ್ಪಡುತ್ತಾನೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡುತ್ತಾನೆ. ಆಭರಣಗಳ ರಕ್ಷಣೆಗೆ ದರ್ಗಾ ಮುಂದೆ ಭಿಕ್ಷೆ ಬೇಡುತ್ತಾನೆ. ಸೂಫಿ ಬದ್ರುದ್ದೀನ್ ಸಲಹೆ ಮೇರೆಗೆ ಗಾಂಧೀಜಿಯವರನ್ನು ಭೇಟಿಯಾಗಲು ಬಂದಾಗ ಮಹಾತ್ಮರ ಹತ್ಯೆಯಾಗುತ್ತದೆ. ಸೂಫಿ ಜೊತೆ ಊರೂರು ಸುತ್ತುತ್ತಾನೆ. ಕೊನೆಗೆ ಆ ಸೂಫಿ ತುಳುನಾಡಿನ ಮುತ್ತುಪ್ಪಾಡಿಯ ತನ್ನ ಮನೆಗೆ ಅಲಿಯನ್ನು ಕರೆತಂದು ತಂದೆ ಮೂಸಜ್ಜನ ಸಹಾಯಕ್ಕೆ ಬಿಡುತ್ತಾನೆ. ಇಲ್ಲಿಗೆ ನಾಟಕದ ಅರ್ಧ ಭಾಗ ಮುಗಿಯುತ್ತದೆ. ಚಾಂದ್ ಅಲಿಯ ಓಟ ಅಲೆದಾಟವೂ ಕೊನೆಯಾಗುತ್ತದೆ.

ಮಧ್ಯಂತರದ ನಂತರ ಕಥೆಯ ದಿಕ್ಕೇ ಬದಲಾಗುತ್ತದೆ. ಮುತ್ತುಪ್ಪಾಡಿ ಊರಿನ ಕಥಾನಕ ತೆರೆದುಕೊಳ್ಳುತ್ತದೆ. ಮುಸ್ಲಿಂ ಕುಟುಂಬದ ಮೂಸಜ್ಜ ಹಾವು ಕಚ್ಚಿ ಸಾಯುತ್ತಾನೆ. ಆತನ ಪತ್ನಿ ಕೈಜಮ್ಮನ ಪಾಲನೆ ಚಾಂದ್ ಅಲಿ ಹೆಗಲಿಗೇರುತ್ತದೆ. ಮೂಸಜ್ಜನ ಆಸ್ತಿಯನ್ನು ಕಬಳಿಸುವ ಪ್ರಯತ್ನವೂ ನಡೆಯುತ್ತದೆ.‌ ಕೊನೆಗೂ ಕೈಜಮ್ಮಳ ಆಸೆಯಂತೆ ಚಾಂದ್ ಅಲಿ ಆಯಿಶಾಳನ್ನು ಮದುವೆಯಾಗಿ, ಮೂರು ಮಕ್ಕಳ ತಂದೆಯಾಗಿ, ಚಾಂದಜ್ಜನಾಗಿ ಮುತ್ತುಪ್ಪಾಡಿಯಲ್ಲಿ ನೆಲೆ ಊರುತ್ತಾನೆ. ದೇಶವಿಭಜನೆಯ ಸಮಯದಲ್ಲಿ ಅಗಲಿದವರ ಮರುಭೇಟಿಗೆ ವಾಘಾ ಗಡಿಯಲ್ಲಿ ಅವಕಾಶವಿದೆ ಎಂದು ತಿಳಿದ ಚಾಂದಜ್ಜ ಅಲ್ಲಿಗೆ ಧಾವಿಸಿ ಹೊರಟು ಎಂದೋ ಅಗಲಿದ್ದ ತನ್ವೀರ್ ಳನ್ನು ನೋಡಿ ಅವಳ ಆಭರಣಗಳನ್ನು ಹಿಂತಿರುಗಿಸುವ ಭಾವನಾತ್ಮಕ ಸನ್ನಿವೇಶದೊಂದಿಗೆ ಈ ನಾಟಕ ಮುಗಿಯುತ್ತದೆ. ನಾಟಕ ಮುಗಿದ ಮೇಲೂ ಪ್ರೇಕ್ಷಕರನ್ನು ಕಾಡುತ್ತದೆ.

ಶ್ರೀರಾಮಮಂದಿರದ ದೇಣಿಗೆ ಆಭರಣಗಳನ್ನ ರಕ್ಷಿಸಬೇಕಿದ್ದವರೇ ಕಳ್ಳತನ ಮಾಡುವಂತಹ ಇಂದಿನ ಪ್ರಸ್ತುತ ಸಂದರ್ಭದಲ್ಲಿ ನಿಂತು ಯೋಚಿಸಿದಾಗ, ಬೇರೆಯವರು ಕೊಟ್ಟ ನಗನಾಣ್ಯಗಳನ್ನು 40 ವರ್ಷಗಳ ಕಾಲ ಕಾಪಿಟ್ಟು ರಕ್ಷಿಸಿ ಅವರಿಗೆ ಮರಳಿಸುವ ಚಾಂದಜ್ಜನ ಬದ್ಧತೆ ಹಾಗೂ ಪ್ರಾಮಾಣಿಕತೆ ಆದರ್ಶನೀಯ. ಇದೇ ಈ ನಾಟಕದ ಮೂಲದ್ರವ್ಯ. ಮುಸಲ್ಮಾನರು ನಂಬಿಕೆಗೆ ಅರ್ಹರಲ್ಲ ಎನ್ನುವ ಹಿಂದುತ್ವವಾದಿಗಳ ಅಪಪ್ರಚಾರದ ಕಾಲಘಟ್ಟದಲ್ಲಿ ಈ ನಾಟಕದ ಪಾಕಿಸ್ಥಾನಿ ಮೂಲದ ಮುಸಲ್ಮಾನ ವ್ಯಕ್ತಿಯ ಅಪಾರ ನಿಷ್ಠೆ ಉತ್ತರ ಕೊಡುವಂತಿದೆ.

ಬೇರೆಯವರ ಸಂಪತ್ತು ತನಗೆ ಬೇಡ ಎನ್ನುವ ನೆಲೆ ಇಲ್ಲದ ನಿರಾಶ್ರಿತ ಚಾಂದ್ ಅಲಿ ಒಂದು ಕಡೆ ಹಾಗೂ ನೆಲೆ ಇದ್ದರೂ ತನ್ನದೇ ಕುಟುಂಬದ ಹಂಗುಹರಿದು ಜೋಳಿಗೆ ಬಾಬಾ ಹೆಸರಲ್ಲಿ ಏಕತಾರಿ ಹಿಡಿದು ಅಲೆಮಾರಿಯಾದ ಸೂಫಿ ಇನ್ನೊಂದು ಕಡೆ. ಈ ಇಬ್ಬರೂ ಅಲೆಮಾರಿಗಳ ಸಮಾಗಮವೇ ಈ ನಾಟಕದ ಚಲನಶೀಲತೆಗೆ ಕಾರಣವಾಗಿದೆ. ತಾನಿರಬೇಕಾದ ನೆಲೆಯಲ್ಲಿ ಅಲಿಯನ್ನು ಇರಿಸಿ ಸೂಫಿ ಜಂಗಮನಂತಾದರೆ, ಸಿಕ್ಕ ನೆಲೆಯಲ್ಲಿ ಅನಿವಾರ್ಯವಾಗಿ ವಾಸ್ತವ್ಯ ಹೂಡಿದ ಚಾಂದ್ ಅಲಿ ಸ್ಥಾವರ ಬದುಕನ್ನು ಒಪ್ಪಿಕೊಳ್ಳುತ್ತಾನೆ. ಜಂಗಮ ಹಾಗೂ ಸ್ಥಾವರ ಬದುಕಿನ ಪ್ರತೀಕವಾಗಿ ಈ ಎರಡೂ ಪ್ರಮುಖ ಪಾತ್ರಗಳು ಮೂಡಿ ಬಂದಿವೆ. ಇದ್ದ ತನ್ನ ಕುಟುಂಬ ತೊರೆದು ಬದ್ರುದ್ದೀನ್ ಅಲೆಮಾರಿ ಸೂಫಿಯಾದರೆ, ತನ್ನದಲ್ಲದ ಕುಟುಂಬದ ಭಾಗವಾಗಿ ಕೌಟುಂಬಿಕ ಜವಾಬ್ದಾರಿ ಹೊತ್ತು ಜೀವನದ ನೋವು ನಲಿವುಗಳಿಗೆ ಚಾಂದಜ್ಜ ಸಾಕ್ಷಿಯಾಗುತ್ತಾನೆ. ಈ ಎರಡೂ ಕೇಂದ್ರ ಪಾತ್ರಗಳ ಪರಿಧಿಯಲ್ಲಿ ಈ ನಾಟಕದ ಅನೇಕ ಸನ್ನಿವೇಶಗಳು ತಳುಕು ಹಾಕಿಕೊಳ್ಳುತ್ತವೆ.

ಮುತ್ತುಪ್ಪಾಡಿ ಎಂಬುದು ಕಾದಂಬರಿಕಾರರ ಕಾಲ್ಪನಿಕ ಊರಾದರೂ ಅಲ್ಲಿ ಇರುವ ಕೋಮು ಸೌಹಾರ್ದತೆ ಗಮನ ಸೆಳೆಯುತ್ತದೆ. ಮುಸಲ್ಮಾನ ಮೂಸಜ್ಜನ ಮನೆಯಲ್ಲಿ ಹಿಂದೂ ಮಹಿಳೆ ಕೆಲಸ ಮಾಡಿದರೆ, ಅವರ ತೋಟವನ್ನು ಹಿಂದೂ ಯುವಕರು ನೋಡಿಕೊಳ್ಳುತ್ತಾರೆ. ಚಾಂದ್ ಅಲಿಗೆ ಹಿಂದೂ ಗೆಳೆಯರು ಸಾತ್ ಕೊಡುತ್ತಾರೆ. ಮುಸಲ್ಮಾನರ ಅನಾರೋಗ್ಯಕ್ಕೆ ಹಿಂದೂ ಪಂಡಿತ ವೈದ್ಯರು ಚಿಕಿತ್ಸೆ ನೀಡುತ್ತಾರೆ. ಮುಸ್ಲಿಂ ಕುಟುಂಬದಲ್ಲಿ ಮದುವೆಯಾದರೆ ಊರ ಜನರು ಸಂಭ್ರಮಿಸುತ್ತಾರೆ. ಈ ರೀತಿಯ ಧಾರ್ಮಿಕ ಸಂಬಂಧ ಮತ್ತು ಸೌಹಾರ್ದತೆ ದೇಶದೆಲ್ಲೆಡೆ ಇದ್ದಿದ್ದರೆ ಎಷ್ಟೊಂದು ಚೆಂದ ಎನ್ನುವುದು ಈ ನಾಟಕದ ಆಶಯವೂ ಆಗಿದೆ.

ನಿರ್ದೇಶಕರು ಸೌಹಾರ್ದತೆ ಸಾರುವ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ಚಾಂದ್ ಅಲಿ ಮದುವೆಯಾಗಿ ಬಂದಾಗ ಆರತಿ ಮಾಡಿಸಿ ಹೊಸ್ತಿಲಲ್ಲಿ ಚೆಂಬನ್ನಿಟ್ಟು ಒದೆಸಿ ನವ ವಧುವರರನ್ನು ಮನೆ ತುಂಬಿಸಿ ಕೊಳ್ಳುವ ಶಾಸ್ತ್ರವನ್ನು ಮಾಡಿಸುತ್ತಾರೆ. ಇದು ಕಾದಂಬರಿಯಲ್ಲಾಗಲಿ ಇಲ್ಲಾ ರಂಗ ರೂಪಾಂತರದಲ್ಲಾಗಲಿ ಇಲ್ಲವಾದರೂ ನಿರ್ದೇಶಕರ ವಿವೇಚನೆಯಂತೆ ಮೂಡಿ ಬಂದಿದೆ. ಒಂದು ಧರ್ಮದ ಕಾರ್ಯಕ್ರಮದಲ್ಲಿ ಇನ್ನೊಂದು ಧರ್ಮದ ಶಾಸ್ತ್ರ ಸಂಪ್ರದಾಯವನ್ನು ಹೇರಿಕೆ ಮಾಡುವುದು ಬೇಕಿರಲಿಲ್ಲ.

ಅಸಲಿ ಕಾದಂಬರಿಯಲ್ಲಿ ಕೋಮುವಾದಿ ಮತಾಂಧರ ಕುರಿತು ಕೆಲವು ಸನ್ನಿವೇಶಗಳೂ ಬರುತ್ತವೆ. ಮತಾಂಧತೆ ಮಿತಿಮೀರಿದ ಪ್ರಸ್ತುತ ಸನ್ನಿವೇಶದಲ್ಲಿ ವಿವಾದಗಳು ಆಗಬಾರದೆಂದೇ ಈ ನಾಟಕದಲ್ಲಿ ಮತೀಯವಾದಿ ಸಂದರ್ಭಗಳನ್ನು ಕೈಬಿಡಲಾಗಿದೆ.

ಬೊಳುವಾರರವರು ತಮ್ಮ ಬರವಣಿಗೆಗಳಲ್ಲಿ ಸೂಕ್ಷ್ಮವಾಗಿ ಮುಸ್ಲಿಂ ಸಮಾಜದ ಅಮಾನವೀಯ ಆಚರಣೆಗಳ ಕುರಿತು ಪ್ರಶ್ನಿಸುತ್ತಾರೆ. ಅದೇ ರೀತಿ ಸ್ವಾಂತಂತ್ರ್ಯದ ಓಟದಲ್ಲಿ ಮುಸ್ಲಿಂ ಮಹಿಳೆಯರ ಮೇಲೆ ಹೇರಲಾದ ತಲ್ಲಾಖ್ ಹೇಗೆ ದಾಂಪತ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದನ್ನು ಈ ನಾಟಕದಲ್ಲಿ ತೋರಿಸಲಾಗಿದೆ. ಅದೇ ರೀತಿ ಗಂಡ ಸತ್ತ ನಂತರ ಹೆಂಡತಿ ತಿಂಗಳುಗಳ ಕಾಲ ಪುರುಷರ ಮುಖ ನೋಡಬಾರದು ಎನ್ನುವ ಜೀವವಿರೋಧಿ ಧಾರ್ಮಿಕ ನಿಬಂಧನೆ ಕುರಿತೂ ಪ್ರಸ್ತಾಪ ಇದೆ.

ಮೊದಲಾರ್ಧ ವೇಗವಾಗಿ ಸಾಗಿ ನೋಡುಗರಲ್ಲಿ ಕುತೂಹಲವನ್ನು ಹುಟ್ಟಿಸುವ “ಸ್ವಾತಂತ್ರ್ಯದ ಓಟ”ವು ಮಧ್ಯಂತರದ ನಂತರ ಕೌಟುಂಬಿಕ ನೋಟವಾಗಿ ಬದಲಾಗಿ ಫ್ಯಾಮಿಲಿ ಡ್ರಾಮಾ ಎನ್ನಿಸತೊಡಗಿತು. ಆಗಾಗ ದೃಶ್ಯ ಬದಲಾವಣೆಗಳ ನಡುವೆ ಬರುವ ನೃತ್ಯ ಹಾಗೂ ಹಾಡುಗಳು ಸಂಚಲನವನ್ನುಂಟು ಮಾಡಿವೆ.

ನಾಟಕದ ವಸ್ತುವಿನ ಕುರಿತು ಚರ್ಚೆಗಳೇನೇ ಇರಲಿ, ಅದನ್ನು ದೃಶ್ಯಗಳ ಮೂಲಕ ಕಟ್ಟಿಕೊಟ್ಟ ನಿರ್ದೇಶಕ ಹೊನ್ನವಳ್ಳಿಯವರ ಕ್ರಿಯಾಶೀಲತೆಗೆ ಪ್ರತಿಯೊಂದು ದೃಶ್ಯ ಸೃಷ್ಟಿ ಗಳೇ ಸಾಕ್ಷಿಯಾಗಿದ್ದವು. ಪ್ರತಿ ಪಾತ್ರಧಾರಿಗಳ ಮೂವ್‌ ಮೆಂಟ್, ಪ್ರತಿ ದೃಶ್ಯಗಳ ಬ್ಲಾಕಿಂಗ್ ಹಾಗೂ ಸನ್ನಿವೇಶಗಳ ಸಂಯೋಜನೆ ಇಡೀ ನಾಟಕದ ಹೈಲೈಟ್ ಆಗಿದ್ದವು. ಬಹುಷಃ ನಟರಾಜ ಹೊನ್ನವಳ್ಳಿಯವರ ರಂಗಬದುಕಿನ ಮಾಸ್ಟರ್ ಪೀಸ್ ಆಗಿ ಈ ನಾಟಕವನ್ನು ಪರಿಗಣಿಸಬಹುದಾಗಿದೆ. ಈಗಾಗಲೇ ಬೇರೆ ಬೇರೆ ರಂಗಶಾಲೆಗಳಲ್ಲಿ ತರಬೇತಾದ ದಿನದ 24 ಗಂಟೆ ಜೊತೆಯಲ್ಲೇ ಇರುವ ನಟನಟಿಯರಿದ್ದಾರೆ, ಸಾಕು ಬೇಕಾದಷ್ಟು ಸರಕಾರಿ ಬಜೆಟ್ ಇದೆ. ರೆಫರೆನ್ಸಿಗೆ ಸಿದ್ಧವಾದ ಪ್ರಸಿದ್ದ ಕಾದಂಬರಿ ಇದೆ. ಕೇಳಿದ್ದನ್ನು ಕೇಳಿದ ಸಮಯಕ್ಕೆ ಸರಿಯಾಗಿ ಒದಗಿಸುವ ರಂಗಸಂಘಟಕ ರಂಗಾಯಣದ ನಿರ್ದೇಶಕರಾದ ಪ್ರಸನ್ನರವರಿದ್ದಾರೆ. ಇವೆಲ್ಲಾ ಅನುಕೂಲತೆಗಳನ್ನು ಸಮರ್ಥವಾಗಿ ಬಳಸಿಕೊಂಡು, ತಮ್ಮ ನಾಲ್ಕಾರು ದಶಕದ ಕ್ರಿಯಾಶೀಲತೆಯ ಅನುಭವವನ್ನು ಉಪಯೋಗಿಸಿಕೊಂಡು ಅಪರೂಪದ ನಾಟಕವನ್ನು ಕಟ್ಟಿಕೊಡುವ ದಿಟ್ಟ ಕೆಲಸವನ್ನು ನಟರಾಜ ಹೊನ್ನವಳ್ಳಿಯವರು ಮಾಡಿದ್ದಾರೆ. ಅಡುಗೆಗೆ ಬೇಕಾದ ಎಲ್ಲಾ ಪದಾರ್ಥ ಸಲಕರಣೆಗಳು ಸಿದ್ಧವಾಗಿದ್ದಾಗ ಕಸಬುದಾರ ಶೆಪ್ ರಸಪಾಕವನ್ನು ತಯಾರಿಸಿ ಬಡಿಸುವಂತೆ ಹೊನ್ನವಳ್ಳಿಯವರು ದೃಶ್ಯಕಾವ್ಯ ರಸಾಯನವನ್ನು ತಯಾರಿಸಿ ನೋಡುಗರಿಗೆ ಬಡಿಸಿದ್ದಾರೆ.

ನಾಟಕದಾದ್ಯಂತ ಇರುವುದು ನಿರೀಕ್ಷೆ ಹಾಗೂ ಅದು ತಂದೊಡ್ಡುವ ಬದುಕಿನ ಪರೀಕ್ಷೆ. ಚಾಂದ್ ಅಲಿಗೆ ತನ್ನ ಹುಟ್ಟಿದ ಊರು ಸೇರುವ ನಿರೀಕ್ಷೆ, ದೇಶ ವಿಭಜನೆಯ ಸಂತ್ರಸ್ತರಿಗೆ ನಾಶವಾದ ಬದುಕು ಕಟ್ಟಿಕೊಳ್ಳುವ ನಿರೀಕ್ಷೆ, ನಿರಾಶ್ರಿತರಿಗೆ ಕೋಮು ಪ್ರೇರಿತ ಹಿಂಸೆಯಲ್ಲಿ ಮತಾಂಧರಿಂದ ಬದುಕುಳಿಯುವ ನಿರೀಕ್ಷೆ, ಚಾಂದಜ್ಜನಿಗೆ ಹೇಗಾದರೂ ಮಾಡಿ ಒಡವೆಗಳನ್ನು ಅದರ ಮಾಲೀಕರಿಗೆ ತಲುಪಿಸುವ ನಿರೀಕ್ಷೆ. ಸೂಫಿಗೆ ಕೌಟುಂಬಿಕ ಜಂಜಡದಿಂದ ದೂರಾಗಿ ಬದುಕುವ ನಿರೀಕ್ಷೆ. ಹೀಗೆ ನಿರೀಕ್ಷೆಯಲ್ಲಿರುವ ಎಲ್ಲ ಪಾತ್ರಗಳಿಗೂ ಬದುಕು ಅನಿರೀಕ್ಷಿತ ಪರೀಕ್ಷೆಗಳಿಗೆ ಒಳಪಡಿಸುತ್ತದೆ.

ಸ್ವಾತಂತ್ರ್ಯದ ಓಟ ನಾಟಕದ ಅತ್ಯಂತ ಪ್ರಮುಖ ಆಕರ್ಷಣೆ ಅಂದರೆ ಬಳಸಲಾದ ಲೈವ್ ಸಂಗೀತ. ಹಾಡು ಸಂಗೀತ ರಾಗ ತಾಳ ಆಲಾಪಗಳಲ್ಲಿ ಅನೇಕ ಪ್ರಯೋಗಗಳನ್ನು ಮಾಡಲಾಗಿದೆ. ಅಮಿರ್ ಖುಸ್ರುರವರ ಹಾಡು, ಕಬೀರ್ ದಾಸರ ನಿರ್ಗುಣಿ ಭಜನ್, ರವೀಂದ್ರನಾಥ ಟ್ಯಾಗೋರರವರ ಗೀತೆ, ಆಲಾವಿ ಪದಗಳು ಹೀಗೆ ವಿಭಿನ್ನ ಸ್ತರಗಳು ಹಾಗೂ ವಿಶಿಷ್ಟ ಸ್ವರಗಳಿಗೆ ರಾಘವ ಕಮ್ಮಾರರವರು ಸಂಗೀತ ನಿರ್ದೇಶನ ಮಾಡಿದ್ದಾರೆ. ನಾಟಕದ ದೃಶ್ಯಗಳಿಗೆ ಕಾವ್ಯಾತ್ಮಕ ಸ್ಪರ್ಶವನ್ನು ಕೊಟ್ಟಿದ್ದಾರೆ. ಸಂಗೀತವು ನಾಟಕದ ಹೈಲೈಟ್ ಆಗಿದ್ದು ಆರಂಭದಿಂದ ಅಂತ್ಯದ ವರೆಗೂ ನಾಟಕದ ಜೊತೆಯೇ ಪಯಣಿಸುತ್ತದೆ ಹಾಗೂ ಪ್ರತಿ ಸನ್ನಿವೇಶದಲ್ಲೂ ಅಗತ್ಯ ಮೂಡ್ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಆದರೆ.. ಸಂಗೀತದ ಅಬ್ಬರದಲ್ಲಿ ಹಾಡಿನ ಸಾಹಿತ್ಯಕ್ಕೆ ಹಿನ್ನಡೆಯಾಗಿದೆ. ಯಾವೊಂದು ಹಾಡಿನ ಪದಗಳು ಕೇಳುಗರಿಗೆ ಸ್ಪಷ್ಟತೆಯನ್ನು ಒದಗಿಸುವಲ್ಲಿ ವಿಫಲವಾಗಿವೆ. ಯಾವ ಭಾಷೆಯ ಹಾಡಿದು ಎನ್ನುವ ಗೊಂದಲವನ್ನೂ ಪ್ರೇಕ್ಷಕರು ಅನುಭವಿಸುವಂತಾಗಿದೆ. “ಸಂಗೀತ ಅದ್ಭುತ, ಆದರೆ ಹಾಡುಗಳೇ ಅರ್ಥವಾಗಿಲ್ಲ” ಎನ್ನುವುದು ಕೇಳುಗರ ಕಂಪ್ಲೆಂಟ್ ಆಗಿದೆ. ಇದಕ್ಕೆ ರವೀಂದ್ರ ಕಲಾಕ್ಷೇತ್ರದ ಸೌಂಡ್ ಸಿಸ್ಟಮ್ ಸಹ ತನ್ನ ಕೊಡುಗೆ ನೀಡಿದೆ. ಸಂಗೀತ ಹಾಗೂ ಸಾಹಿತ್ಯ ಎರಡನ್ನೂ ಬ್ಯಾಲೆನ್ಸ್ ಮಾಡಿದ್ದರೆ ನೋಡುಗರಲ್ಲಿ ಮೂಡ್ ಹುಟ್ಟಿಸುವ ಜೊತೆಗೆ ಪದ ಪದಾರ್ಥಗಳ ಅರ್ಥಗಳನ್ನೂ ತಲುಪಿಸಬಹುದಾಗಿತ್ತು.

ಕಾದಂಬರಿಯನ್ನು ನಾಟಕವಾಗಿಸುವಾಗ ಕಥಾನಕದ ವಿವರ ಕೊಡಲು ನಿರೂಪಕರ ಅಗತ್ಯವಿದೆ. ಅದಕ್ಕಾಗಿ ಈ ನಾಟಕದಲ್ಲಿ ಬಳಸಲಾದ ಗುಂಪು ನಿರೂಪಣಾ ತಂತ್ರ ವಿಶಿಷ್ಟವಾಗಿದೆ. ಮೂರೂ ವಯೋಮಾನದ ಮೂವರು ಚಾಂದ್ ಅಲಿಗಳನ್ನು ಏಕಕಾಲಕ್ಕೆ ರಂಗದ ಮೇಲೆ ತಂದಿದ್ದು, ಚಾಂದಜ್ಜನ ಭಾವನೆಗಳಿಗೆ ಇನ್ನಿಬ್ಬರು ಚಾಂದ್ ಅಲಿಗಳು ಸ್ಪಂದಿಸಿದ ರಂಗತಂತ್ರವೂ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

‘ಸ್ವಾತಂತ್ರ್ಯದ ಓಟ’ದ ನೋಟವನ್ನು ಚೆಂದಗಾಣಿಸಿದ್ದು ಮಂಜು ನಾರಾಯಣರವರ ಬೆಳಕಿನ ವಿನ್ಯಾಸ. ಸೈಕ್ ಬಳಕೆ ಮತ್ತು ಬೆಳಕಿನ ಬಣ್ಣಗಳು ದೃಶ್ಯಗಳಿಗೆ ಅಗೋಚರ ಅರ್ಥ ವ್ಯಾಪ್ತಿಯನ್ನು ವಿಸ್ತರಿಸಿವೆ. ಪ್ರತಿ ದೃಶ್ಯದ ಪ್ರತಿ ಫ್ರೇಮ್ ಕೂಡಾ ಬೆಳಕಿನ ಹೊನಲಲ್ಲಿ ಮಿಂದೆದ್ದು ಮೂಡ್ ಸೃಷ್ಟಿಸಿವೆ.

ಬಹುತೇಕ ತರಬೇತಾದ ಅನುಭವಿ ಕಲಾವಿದರ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಪ್ರತಿಯೊಬ್ಬ ನಟ ನಟಿಯರೂ ತಮಗೆ ವಹಿಸಿದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಾಟಕದಾದ್ಯಂತ ವೃತ್ತಿಪರತೆಯನ್ನು ಸಾಬೀತುಪಡಿಸಿದ್ದಾರೆ. ಚಾಂದಜ್ಜನ ಪಾತ್ರ ಮಾತ್ರ ಒಂಚೂರು ಓವರ್ ಆಕ್ಟಿಂಗ್ ಆಯ್ತು ಎನ್ನುವುದನ್ನು ಬಿಟ್ಟರೆ, ಜಮಾತ್ ಸಭೆಯಲ್ಲಿ ಒಂದಿಷ್ಟು ವಾದವಿವಾದಗಳು ಅತಿಯಾದವು ಎನ್ನುವುದನ್ನು ನಿರ್ಲಕ್ಷಿಸಿದರೆ ಬಹುತೇಕ ನಟ ನಟಿಯರ ಸಹಜಾಭಿನಯ ಗಮನ ಸೆಳೆಯುತ್ತದೆ. ಡಾ.ಸಹನಾ ಪಿಂಜಾರರವರ ವಸ್ತ್ರವಿನ್ಯಾಸ ನೋಡುಗರ ಕಣ್ಮನ ಸೆಳೆಯುವಂತಿದೆ. ರಂಗ ಸಜ್ಜಿಕೆ, ವಿನ್ಯಾಸ ಹಾಗೂ ಪರಿಕರಗಳು ನಾಟಕಕ್ಕೆ ವಿಶೇಷ ಆಕರ್ಷಣೆಯನ್ನುಂಟು ಮಾಡಿವೆ.

ಬೃಹತ್ ಕಾದಂಬರಿಯನ್ನು ನಾಟಕವಾಗಿಸುವಾಗ ದೃಶ್ಯೀಕರಿಸಲಾಗದ ಕಥಾನಕದ ವಿವರ ಕೊಡಲು ನಿರೂಪಕರ ಅಗತ್ಯವಿದೆ. ಅದಕ್ಕಾಗಿ ಈ ನಾಟಕದಲ್ಲಿ ಬಳಸಲಾದ ಗುಂಪು ನಿರೂಪಣಾ ತಂತ್ರ ವಿಶಿಷ್ಟವಾಗಿದೆ. ಮೂರೂ ವಯೋಮಾನದ ಮೂವರು ಚಾಂದ್ ಅಲಿಗಳನ್ನು ಏಕಕಾಲಕ್ಕೆ ರಂಗದ ಮೇಲೆ ತಂದಿದ್ದು, ಚಾಂದಜ್ಜನ ಭಾವನೆಗಳಿಗೆ ಇನ್ನಿಬ್ಬರು ಚಾಂದ್‌ ಅಲಿಗಳು ಸ್ಪಂದಿಸಿದ ರಂಗತಂತ್ರವೂ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

ನಾಟಕದಾದ್ಯಂತ ಇರುವುದು ನಿರೀಕ್ಷೆ ಹಾಗೂ ಅದು ತಂದೊಡ್ಡುವ ಬದುಕಿನ ಪರೀಕ್ಷೆ. ಚಾಂದ್ ಅಲಿಗೆ ತನ್ನ ಹುಟ್ಟಿದ ಊರು ಸೇರುವ ನಿರೀಕ್ಷೆ, ದೇಶ ವಿಭಜನೆಯ ಸಂತ್ರಸ್ತರಿಗೆ ನಾಶವಾದ ಬದುಕು ಕಟ್ಟಿಕೊಳ್ಳುವ ನಿರೀಕ್ಷೆ, ನಿರಾಶ್ರಿತರಿಗೆ ಕೋಮು ಪ್ರೇರಿತ ಹಿಂಸೆಯಲ್ಲಿ ಮತಾಂಧರಿಂದ ಬದುಕುಳಿಯುವ ನಿರೀಕ್ಷೆ. ಚಾಂದಜ್ಜನಿಗೆ ಹೇಗಾದರೂ ಮಾಡಿ ಒಡವೆಗಳನ್ನು ಅದರ ಮಾಲೀಕರಿಗೆ ತಲುಪಿಸುವ ನಿರೀಕ್ಷೆ. ಸೂಫಿಗೆ ಕೌಟುಂಬಿಕ ಜಂಜಡದಿಂದ ದೂರಾಗಿ ಬದುಕುವ ನಿರೀಕ್ಷೆ. ಹೀಗೆ ನಿರೀಕ್ಷೆಯಲ್ಲಿರುವ ಎಲ್ಲ ಪಾತ್ರಗಳಿಗೂ ಬದುಕು ಅನಿರೀಕ್ಷಿತ ಪರೀಕ್ಷೆಗಳಿಗೆ ಒಳಪಡಿಸುತ್ತದೆ.

ಅಲೆಮಾರಿ ಅನಾಥ ಚಾಂದ್ ಅಲಿಯನ್ನು ಕೈಜಮ್ಮನ ಮೊದಲ ಗಂಡನ ಮಗ ಎಂದು ಜಮಾತ್ ಸಭೆಯಲ್ಲಿ ಪ್ರಸ್ತಾಪಿಸುವುದು ಹಾಗೂ ಹೆಚ್ಚಿನ ವಿಚಾರಣೆ ಮಾಡದೇ ಜಮಾತ್ ಮುಖ್ಯಸ್ಥರು ಒಪ್ಪಿಕೊಂಡಿದ್ದು ನಂಬಲಾಗದಂತಹ ನಾಟಕೀಯ ದೃಶ್ಯವಾಗಿದೆ. ಕೈಜಮ್ಮನ ತೋಟದ ಮೇಲೆ ದುರಾಸೆಪಟ್ಟು ತನ್ನ ಮಗಳನ್ನು ಚಾಂದ್ ಅಲಿಗೆ ಮದುವೆ ಮಾಡಿಸಲು ಬಯಸಿದಾತ ಇದ್ದಕ್ಕಿದ್ದಂತೆ ಮನಸ್ಸು ಬದಲಿಸಿದ್ದು ಒಪ್ಪಲಾಗದ ಇನ್ನೊಂದು ನಾಟಕೀಯತೆಯಾಗಿದೆ. ಇವೆರಡೂ ಘಟನೆಗಳಿಗೆ ಸಮರ್ಥನೆಗಳನ್ನು ಕೊಟ್ಟಿದ್ದರೆ ಇನ್ನೂ ಚೆನ್ನಾಗಿತ್ತು. ನಾಟಕದ ಕೊನೆಯ ಹಂತದಲ್ಲಿ ಚಾಂದಜ್ಜನು ಮೊಮ್ಮಗಳ ಜೊತೆ ವಾಘಾ ಗಡಿಗೆ ತನ್ವೀರ್ ಸಹೋದರಿಯರನ್ನು ಹುಡುಕಲು ಹೊರಟವನು ನೇರವಾಗಿ ಗುರುದ್ವಾರಕ್ಕೆ ಹೋಗಿದ್ದು ಯಾಕೆ ಎಂಬುದಕ್ಕೆ ಸಮರ್ಥನೆ ಕೊಡಬೇಕಾಗಿತ್ತು ಕೊಟ್ಟಿಲ್ಲ. ನಾಟಕದ ಅಂತ್ಯದಲ್ಲಿ ಚಾಂದಜ್ಜ ಆಭರಣಗಳ ಗಂಟನ್ನು ನೆಲದ ಮೇಲಿರಿಸಿ  ಭೇಟಿಯಾಗದೇ ಹೊರಡುವ ಬದಲಾಗಿ ತನ್ವೀರ್ ಳ ಕೈಗಿತ್ತಿದ್ದರೆ ಭಾವತೀವ್ರತೆಯ ಪುಳಕವನ್ನು ಪ್ರೇಕ್ಷಕರ ಮೆದುಳಲ್ಲಿ ಬಿತ್ತಬಹುದಾಗಿತ್ತು.

ಇಂತಹ ಕೆಲವಾರು ಸಂದೇಹಗಳಿಗೆ ಉತ್ತರಿಸುವ ಕೃಪೆಯನ್ನು ಮುಂದಿನ ಪ್ರದರ್ಶನಗಳಲ್ಲಿ ನಿರ್ದೇಶಕರು ಮಾಡಬಹುದಾಗಿದೆ.

ಧಾರ್ಮಿಕ ಮತಾಂಧತೆಯ ಕ್ರೌರ್ಯ, ಹಿಂಸೆ ಹಾಗೂ ಸೌಹಾರ್ದತೆಯಿಂದಾಗುವ ಅಹಿಂಸೆಯನ್ನು ನಾಟಕ ಹೇಳುತ್ತದೆ. ಈಗ ದೇಶಾದ್ಯಂತ ಮತೀಯ ಭಾವನೆಗಳನ್ನು ಕೆರಳಿಸುವ ಕೋಮುವಾದಿ ಪ್ರಯತ್ನಗಳು ಹೆಚ್ಚಾಗಿವೆ. ಮುಸ್ಲಿಂ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡಿ ಹಿಂದೂ ಧ್ರುವೀಕರಣ ಮಾಡುವ ಕೋಮುಶಕ್ತಿಗಳು ಸಕ್ರಿಯವಾಗಿವೆ. ಇವುಗಳಿಗೆ ಅಹಿಂಸಾತ್ಮಕ ಪ್ರತಿರೋಧ ತೋರುವ ಗಾಂಧೀ ಇಲ್ಲವಾಗಿದ್ದಾರೆ. ದೇಶಾದ್ಯಂತ ಮುತ್ತುಪ್ಪಾಡಿಯ ಮತೀಯ ಸೌಹಾರ್ದತೆ ಮಾದರಿಯಾಗಬೇಕಿದೆ. ಕೂಡಿ ಬಾಳುವ ಆದರ್ಶಗಳು ಜಾರಿಗೆ ಬರಬೇಕಿದೆ. ಅದೇ ಈ ನಾಟಕದ ಆಶಯವೂ ಆಗಿದೆ.‌ “ಮನುಷ್ಯ ಕುಲಂ ತಾನೊಂದೇ ವಲಂ” ಆಗಬೇಕಿದೆ. ಇಟ್ಟಿಗೆ ಪವಿತ್ರವಲ್ಲ ಪ್ರಾಣ ಪವಿತ್ರ ಎಂದು ಸಾರಬೇಕಿದೆ..

ನಾಟಕ ನೋಡಿದ ನಂತರ ಉಳಿಯುವ ಕಟ್ಟ ಕಡೆಯ ಪ್ರಶ್ನೆ “ಈ ನಾಟಕದ ‘ ಸ್ವಾತಂತ್ರ್ಯದ ಓಟ’ ಎನ್ನುವ ಶೀರ್ಷಿಕೆಗೂ ಹಾಗೂ ನಾಟಕದ ವಸ್ತು ವಿಷಯಕ್ಕೂ ಏನು ಸಂಬಂಧ ಇದೆಯಾ?”. ಯಾಕೆಂದರೆ ಈ ನಾಟಕ ಆರಂಭವಾಗುವುದೇ ಭಾರತಕ್ಕೆ ಸ್ವಾತಂತ್ರ್ಯಘೋಷಣೆಯಾದ ನಂತರ. ಹಾಗೂ ಈ ನಾಟಕದ ಕೇಂದ್ರ ಪಾತ್ರವಾದ ಚಾಂದ್ ಅಲಿ ತನ್ನ ಮಾಲೀಕರನ್ನು ಕಾಪಾಡಲು, ಬದುಕಿನ ನೆಲೆಯನ್ನು ಅರಸಲು ಪ್ರಯತ್ನಿಸಿದನೇ ಹೊರತು ಸ್ವಾತಂತ್ರ್ಯಕ್ಕಾಗಿ ಅಲ್ಲ. ನಿರಾಶ್ರಿತರು  ಸೂಕ್ತ ಆಶ್ರಯಕ್ಕಾಗಿ ಪರದಾಡುತ್ತಾರೆ. ಬಹುತೇಕ ಪಾತ್ರಗಳು ಹೇಗಾದರೂ ಮಾಡಿ ಬದುಕುಳಿಯುವ ಆತಂಕ ಹಾಗೂ ಧಾವಂತಕ್ಕೆ ಸಾಕ್ಷಿಯಾಗಿವೆ.  ಹೀಗಿರುವಾಗ ಸ್ವಾತಂತ್ರ್ಯಕ್ಕಾಗಿ ಓಡುವ  ಒಂದೇ ಒಂದು ಪಾತ್ರವೂ ನಾಟಕದಲ್ಲಿಲ್ಲ. ಆದರೂ  ಸ್ವಾತಂತ್ರ್ಯದ ಹೆಸರನ್ನು ಯಾಕಿಡಲಾಗಿದೆಯೋ ಗೊತ್ತಿಲ್ಲ. ಏನೇ ಆದರೂ ನಾಟಕ ಪ್ರೇಕ್ಷಕರಲ್ಲಿ ಸಂಚಲನವನ್ನುಂಟು ಮಾಡುವಲ್ಲಿ ಸಫಲವಾಗಿದೆ. ಚಿಕ್ಕ ಪುಟ್ಟ ಸಮಸ್ಯೆಗಳನ್ನು ಸರಿಪಡಿಸಿಕೊಂಡರೆ ಕನ್ನಡ ರಂಗಭೂಮಿಯಲ್ಲಿ ಮೈಲುಗಲ್ಲಾಗುವಂತಹ ರಂಗಪ್ರಯೋಗ ಇದಾಗಿದೆ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ- ಸಹಬಾಳ್ವೆಯ ಸುಂದರ ನೇಯ್ಗೆಯ ನಾಟಕ ʼಸ್ವಾತಂತ್ರ್ಯದ ಓಟʼ

More articles

Latest article

Most read