ಮೈಸೂರಿನಲ್ಲಿ ಪತಿಯನ್ನು **ದು ಹೃದಯಾಘಾತ ಎಂದು ಬಿಂಬಿಸಿದ ಪತ್ನಿ, ಬೆಂಗಳೂರಿನಲ್ಲಿ ಪ್ರೇಯಸಿಯ *ಲೆ

ಮೈಸೂರು : ಪತ್ನಿಯೇ ಪತಿಯನ್ನಿ ಹತ್ಯೆಗೈದು ಹೃದಯಾಘಾತ ಎಂದು ಬಿಂಬಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ನಗರದ ಹುಡ್ಕೋ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.
ಕಳೆದ ರಾತ್ರಿ ನಿತ್ಯಾನಂದ ಎಂಬುವರು ಪಾರ್ಟಿ ಮುಗಿಸಿ ಮನೆಗೆ ಬಂದಿದ್ದರು. ಮಧ್ಯರಾತ್ರಿ ಆ ಸಮಯದಲ್ಲಿ ಸೀರೆಯಿಂದ ಕತ್ತುಹಿಸುಕಿ ಸಾಯಿಸಿದ್ದಾರೆ. ಬೆಳಗ್ಗೆ ನಿತ್ಯಾನಂದ ಅವರ ಸ್ನೇಹಿತರು ಹಲವು ಬಾರಿ ಕರೆ ಮಾಡಿದಾಗ ಕರೆ ಸ್ವೀಕರಿಸದ ಕಾರಣ ಮನೆಗೆ ಬಂದಿದ್ದಾರೆ. ಪತಿ ಇನ್ನೂ ಮಲಗಿದ್ದಾರೆ ಎಂದು ಪತ್ನಿ ಹೇಳಿದ್ದಾರೆ. ಬಳಿಕ ರೂಮಿಗೆ ಹೋಗಿ ನೋಡಿದಾಗ ಹೃದಯಾಘಾತವಾಗಿದೆ ಎಂದು ಹತ್ತಿರದ ಆಸ್ಪತ್ರಗೆ ಕರೆದೊಯ್ದಿದ್ದಾರೆ.
ಆ ವೇಳೆ, ನಿತ್ಯಾನಂದ ಅವರ ಸಂಬಂಧಿಕರು ಕತ್ತಿನ ಬಳಿ ಗುರುತು ನೋಡಿ ಪ್ರಶ್ನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪತ್ನಿಯನ್ನ ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಪ್ರೇಯಸಿ ಕೊಲೆ : ಪ್ರೇಯಸಿಯನ್ನ ಊಟಕ್ಕೆ ಕರೆದಿದ್ದ ಪ್ರಿಯಕರ, ಮದುವೆ ವಿಚಾರ ಪ್ರಸ್ತಾಪಿಸಿ ಗಲಾಟೆ ಮಾಡಿದ್ದಾನೆ. ಈ ವೇಳೆ ಕೋಪಕೊಂಡು  ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ನಡೆದಿದೆ.

ರಾಜೀವ್‌, ಪ್ರೇಯಸಿ ಅಂಜಲಿಯನ್ನ ಊಟಕ್ಕೆ ಕರೆದುಕೊಂಡು ಬಂದಿದ್ದ. ಈ ವೇಳೆ ಮತ್ತೆ ಮದುವೆ ಪ್ರಸ್ತಾಪ ಮಾಡಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮತ್ತೆ ಗಲಾಟೆ ಶುರುವಾಗಿದೆ. ಕೊನೆಗೆ ಕೋಪಗೊಂಡ ರಾಜೀವ್‌, ಪೈಪ್ ಲೈನ್ ರಸ್ತೆಗೆ ಕರೆದುಕೊಂಡು ಬಂದು ಅಂಜಲಿಯ ಕತ್ತುಕೊಯ್ದು ಕೊಲೆ ಮಾಡಿದ್ದಾನೆ. 

ಮಹಾಲಕ್ಷ್ಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಕೆಲವೇ ನಿಮಿಷಗಳಲ್ಲಿ ಆರೋಪಿಯನ್ನ ಬಂಧಿಸಿದ್ದಾರೆ.  

More articles

Latest article

Most read