SIR –  ಬಿಜೆಪಿ ಹೇಳುತ್ತಿರುವ ಸುಳ್ಳುಗಳೇನು?

ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ದಲಿತ ಬಹುಜನರನ್ನು ಶೋಷಣೆ ಮಾಡಿದ್ದ ಮನು ಸಿದ್ಧಾಂತವನ್ನು, ವೈದಿಕ ಆಳ್ವಿಕೆಯನ್ನು ಜಾರಿಗೊಳಿಸಲು ಬಹುದೊಡ್ಡ ತಡೆಯಾಗಿರುವುದೇ ದಲಿತರು, ಆದಿವಾಸಿಗಳು ಹಾಗೂ ಬಹುಜನರು. ಅವರ ಮತದಾನದ ಹಕ್ಕನ್ನು ಇಲ್ಲವಾಗಿಸಿದರೆ ನಿರಾತಂಕವಾಗಿ ತಮ್ಮ ಮನು ಪ್ರಣೀತ ಆಡಳಿತವನ್ನು ಜಾರಿ ಮಾಡಬಹುದೆಂಬ ಹುನ್ನಾರ ಎಸ್‌ ಐ ಆರ್‌ ಪ್ರಕ್ರಿಯೆಯ ಒಳಗೆ ಅಡಗಿದೆ ಎಂಬುದು ಅರ್ಥವಾಗುತ್ತಿದೆ ಚಂದ್ರು ತರಹುಣಿಸೆ, ಪತ್ರಕರ್ತರು.

ದೇಶದಾದ್ಯಂತ ಗೊಂದಲ ಉಂಟುಮಾಡುತ್ತಿರುವ ದುರುದ್ದೇಶಪೂರಿತ SIR (Special Intensive Revision) ಅನ್ನು ಹಲವು ರಾಜ್ಯಗಳು ಕಟುವಾಗಿ ವಿಮರ್ಶೆ ಮಾಡುತ್ತಿವೆ. ಬೀದಿ ಹೋರಾಟಗಳು, ಕಾನೂನು ಹೋರಾಟಗಳು ಬಹಳ ತೀವ್ರವಾಗಿ ನಡೆಯುತ್ತಿವೆ. SIR ಜಾರಿಯಾದ ನಂತರದಲ್ಲಿ ನಡೆದ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಆಡಳಿತ ಪಕ್ಷಗಳು ಸೋಲನನುಭವಿಸಿವೆ.

ಪಶ್ಚಿಮ ಬಂಗಾಳದಲ್ಲಂತೂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಸರ್ಕಾರ ಇಡೀ ದೇಶಕ್ಕೆ ಒಂದು ಹಂತದಲ್ಲಿ ಮಾದರಿಯಾಗಬಹುದಾದ ಪ್ರತಿರೋಧವನ್ನು ಒಡ್ಡಿದ್ದರು. ಆದರೂ ಪಶ್ಚಿಮ ಬಂಗಾಳದಲ್ಲಿ ಸುಮಾರು 26 ಲಕ್ಷ ಜನರು ಸುಪ್ರೀಂ ಕೋರ್ಟ್‌ ನಲ್ಲಿ ತಮ್ಮ ಮತದಾನದ ಹಕ್ಕನ್ನು ಪುನರ್‌ ಸ್ಥಾಪಿಸಲು ಹೋರಾಟವನ್ನು ನಡೆಸುತ್ತಿದ್ದಾರೆ. ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಯಾವುದೇ ಒಬ್ಬ ಅರ್ಹ ಮತದಾರನು ತನ್ನ ಮತದಾನದ ಹಕ್ಕನ್ನು ಚಲಾಯಿಸದಿದ್ದರೆ, ಚಲಾಯಿಸಲು ಬಯಸಿದ್ದರೆ ಅವರು ತಮ್ಮ ಹಕ್ಕು ಚಲಾಯಿಸಲು ವಿಶೇಷ ಅವಕಾಶ ನೀಡಲಾಗಿದೆ. ಆದರೆ ಭಾರತದ ಚುನಾವಣಾ ಆಯೋಗವು “ಮುಂದಿನ ಚುನಾವಣೆಯಲ್ಲಿ ಮತದಾನ ಮಾಡಿ…” ಎಂಬ ದೋಷಪೂರಿತ ಹಾಗೂ ಅನುಮಾನಾಸ್ಪದವಾದ ತೀರ್ಪನ್ನು ನೀಡಿದೆ.

ಎಲ್ಲ ವಿರೋಧಗಳ ನಡುವೆಯೂ ಈಗ ಕರ್ನಾಟಕದಲ್ಲೂ ಜೂನ್‌ 30ರಿಂದ SIR ಜಾರಿಯಾಗುತ್ತಿದೆ. ಜನಸಂಘಟನೆಗಳು ನಿರಂತರವಾಗಿ SIR ಹೆಸರಿನಲ್ಲಿ ನಡೆಸಲಾಗುತ್ತಿರುವ ಈ ಪ್ರಕ್ರಿಯೆಯ ಹಿಂದಿನ ಹುನ್ನಾರಗಳ ಬಗ್ಗೆ ಬೀದಿಹೋರಾಟಗಳನ್ನು ಮಾಡುತ್ತಿವೆ ಅಲ್ಲದೇ ಕರ್ನಾಟಕದ ಆಡಳಿತಾರೂಢ ಪಕ್ಷವಾದ ಕಾಂಗ್ರೆಸ್‌ ಸರ್ಕಾರಕ್ಕೆ ಅರ್ಹ ಮತದಾರರನ್ನು ಉಳಿಸಿಕೊಳ್ಳುವಂತೆ ನಾನಾ ರೀತಿಯ ಒತ್ತಡಗಳನ್ನು ಹಾಕುತ್ತಿದ್ದಾರೆ.

ಅಸಲಿಗೆ ಈ ಎಸ್‌ಐಆರ್‌ ಅನ್ನು ಅಳವಡಿಸಲು ಬಿಜೆಪಿ ಮಾಡುತ್ತಿರುವ ವಾದಗಳೇನು? ಅದರಲ್ಲಿ ಸತ್ಯವಿದೆಯೇ? ಅಥವಾ ಸುಳ್ಳುಗಳಿಂದಲೇ ಕೂಡಿದೆಯೇ? ಬನ್ನಿ ನೋಡೋಣ.

ಬಿಜೆಪಿ ವಾದಗಳು:

1. ಎಸ್‌ಐಆರ್‌ ಹೊಸದಾಗಿ ಮಾಡುತ್ತಿಲ್ಲ ಈ ಹಿಂದೆಯೂ ಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ಈ ಪ್ರಕ್ರಿಯೆ ಮಾಡಿದೆ.

2. ವಿದೇಶಿ ನುಸುಳುಕೋರರನ್ನು ಗುರುತಿಸಲು ಹಾಗೂ ಅಂತಹವರನ್ನು ದೇಶದಿಂದ ಹೊರಹಾಕಲು

3. ಸತ್ತವರ ಹಾಗೂ ಎರಡು ಕಡೆಗಳಲ್ಲಿ ಮತದಾನದ ಹಕ್ಕಿರುವವರನ್ನು ಗುರುತಿಸಿ ತೆಗೆಯುವುದು

4. ಸರ್ಕಾರಿ ಸೌಲಭ್ಯಗಳನ್ನು ಈ ನುಸುಳುಕೋರರೇ ಬಳಸಿಕೊಳ್ಳುತ್ತಿದ್ದಾರೆ, ದೇಶದ ಹಣ ವ್ಯಯವಾಗುತ್ತಿದೆ.

ಇವು ಬಿಜೆಪಿ ಎಸ್‌ಐಆರ್‌ ಜಾರಿ ಮಾಡಲು ನೀಡುತ್ತಿರುವ ಕಾರಣಗಳಲ್ಲಿ ಪ್ರಮುಖವಾದವುಗಳು.

ಮೇಲ್ನೋಟಕ್ಕೆ ನೋಡಿದಾಗಲೇ ಬಿಜೆಪಿ ಹೇಳುತ್ತಿರುವ ಈ ಕಾರಣಗಳು ನಿಜವಾದವಲ್ಲ ಎಂದನ್ನಿಸುತ್ತದೆ. ಹೇಗೆಂದರೆ-

ಸುಳ್ಳು ಮತ್ತು ಸತ್ಯ 1:

ಬಿಜೆಪಿ 2014ರಲ್ಲಿ ಗುಜರಾತ್‌ ಮಾಡೆಲ್‌ ಎಂದು ಜನರ ಕಣ್ಣಿಗೆ ಮಣ್ಣೆರಚಿ ಅಧಿಕಾರಕ್ಕೆ ಬರುವ ಮುನ್ನ ಆಡಳಿತದಲ್ಲಿ ಕಾಂಗ್ರೆಸ್‌ ಸರ್ಕಾರವು ಈ ಪ್ರಕ್ರಿಯೆಯನ್ನು ಮಾಡಿತ್ತೆಂಬುದು ಸುಳ್ಳು. ಈ ಹಿಂದೆ ನಡೆದದ್ದು IR ಹಾಗೂ SSR ಎಂಬ ಮತದಾರರ ಪಟ್ಟಿಯಲ್ಲಿನ ಸತ್ತವರ ಹೆಸರು ತೆಗೆಯುವ ಮತ್ತು ಹೊಸದಾಗಿ ಮತದಾರರ ಪಟ್ಟಿಯಲ್ಲಿ ಅರ್ಹರನ್ನು ಸೇರಿಸುವ ಪ್ರಕ್ರಿಯೆ ಎಂಬ ಸತ್ಯವನ್ನು ಬಿಜೆಪಿ ಮರೆಮಾಚುತ್ತಿದೆ. ಆದರೆ ದೇಶದ ಜನರಿಗೆ ಈಗ ಮಾಹಿತಿ ಎಲ್ಲೆಡೆ ಲಭ್ಯವಾಗುವ ಪರಿಸ್ಥಿತಿಯಲ್ಲಿ ಬಿಜೆಪಿಯವರ ಸುಳ್ಳುಗಳನ್ನು ಜನರು ನಂಬುತ್ತಿಲ್ಲ.

ಸುಳ್ಳು ಮತ್ತು ಸತ್ಯ 2:

ಇನ್ನು ವಿದೇಶಿ ನುಸುಳುಕೋರರನ್ನು ಪತ್ತೆಹಚ್ಚಲು ಎಂದು ಹೇಳುತ್ತಿರುವುದು ಕೇವಲ ಕಾರಣವಷ್ಟೆ. ಅಸಲಿಗೆ ಇದು ಈ ದೇಶದ ಬಡವರು, ದಲಿತರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಂ ಸಮುದಾಯವನ್ನು ಗುರಿಯಾಗಿರಿಸಿಕೊಂಡೇ ಈ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಹಿಂದೆ SIR ನಡೆಸಿದ ರಾಜ್ಯಗಳಲ್ಲಿ  ಯಾವ ಸಮುದಾಯವನ್ನು ಮತದಾನದ ಹಕ್ಕಿನಿಂದ ವಂಚಿಸಲಾಗಿದೆ ಎಂಬುದನ್ನು ಗಮನಿಸಿದಾಗ ಬಿಜೆಪಿಯವರ ಈ ಹುನ್ನಾರ ತಿಳಿದುಬರುತ್ತದೆ.

ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ದಲಿತ ಬಹುಜನರನ್ನು ಶೋಷಣೆ ಮಾಡಿದ್ದ ಮನು ಸಿದ್ಧಾಂತವನ್ನು, ವೈದಿಕ ಆಳ್ವಿಕೆಯನ್ನು ಜಾರಿಗೊಳಿಸಲು ಬಹುದೊಡ್ಡ ತಡೆಯಾಗಿರುವುದೇ ಅದೇ ದಲಿತರು, ಆದಿವಾಸಿಗಳು ಹಾಗೂ ಬಹುಜನರು. ಅವರ ಮತದಾನದ ಹಕ್ಕನ್ನು ಇಲ್ಲವಾಗಿಸಿದರೆ ನಿರಾತಂಕವಾಗಿ ತಮ್ಮ ಮನು ಪ್ರಣೀತ ಆಡಳಿತವನ್ನು ಜಾರಿ ಮಾಡಬಹುದೆಂಬ ಹುನ್ನಾರ ಅಡಗಿದೆ ಎಂಬುದು ಅರ್ಥವಾಗುತ್ತಿದೆ.

ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟ ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ಥ್ಯ ಸೇನ್‌, ಭಾರತೀಯ ವಾಯು ಸೇನೆಯಲ್ಲಿ ಸುಮಾರು 17 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ಹೊಂದಿದ್ದ ಮಹಮ್ಮದ್‌ ಶಮೀಮ್‌ ಅಖ್ತರ್‌ ಹೀಗೆ ಗಣ್ಯಾತಿಗಣ್ಯರ ಹೆಸರನ್ನೇ SIR ಪ್ರಕ್ರಿಯೆಯಲ್ಲಿ ಮತಪಟ್ಟಿಯಿಂದ ಕೈಬಿಡಲಾಗಿದೆ. ಹಾಗಾದರೆ ಇವರೆಲ್ಲರೂ ಅಕ್ರಮ ವಲಸಿಗರೇ?

ಪಶ್ಚಿಮ ಬಂಗಾಳದಲ್ಲಿ ಡಿಲಿಟ್‌ ಆದ ಮತದಾರರಲ್ಲಿ ಸುಮಾರು ಶೇ 60ರಷ್ಟು ಮತುವಾ ಸಮುದಾಯಕ್ಕೆ ಸೇರಿದ ದಲಿತ ಸಮುದಾಯದ ಮತದಾರರು. ಪಾರಂಪರಿಕವಾಗಿ ದಲಿತರು ಹಾಗೂ ಮುಸಲ್ಮಾನರು ಬಿಜೆಪಿಗೆ ಮತ ನೀಡುವುದಿಲ್ಲ ಎಂದು ಎಲ್ಲರಿಗೂ ತಿಳಿದಿರುವ ಸತ್ಯ. ಹಾಗಾಗಿ ತಮ್ಮ ಮತದಾರರಲ್ಲದವರನ್ನು ಮತಪಟ್ಟಿಯಿಂದ ಕೈಬಿಡಲು ನಡೆಸುತ್ತಿರುವ ಸಂಚಿದೆ.

ಅಕ್ರಮ ವಲಸಿಗರನ್ನು ಗುರುತಿಸಲು ಎಂದು ಹೇಳುತ್ತಿರುವ ಬಿಜೆಪಿ ಬಿಹಾರದಲ್ಲಿ ಎಷ್ಟು ಜನ ವಿದೇಶಿಯರನ್ನು ಗುರುತಿಸಿದೆ ಎಂಬುದನ್ನು ನೋಡಿದರೆ SIR ನ ಅಸಲಿಯತ್ತು ಇನ್ನಷ್ಟು ಅರ್ಥವಾಗುತ್ತದೆ.

ಸುಳ್ಳು ಮತ್ತು ಸತ್ಯ 3:

ಸತ್ತವರ ಹಾಗೂ ಎರಡೆರಡು ಮತಪಟ್ಟಿಯಲ್ಲಿ ಹೆಸರಿರುವುದನ್ನು ತೆಗೆಯುವ ಪ್ರಕ್ರಿಯೆಯು ನಿರಂತರವಾಗಿ ಚುನಾವಣಾ ಆಯೋಗದಿಂದ ನಡೆಯುತ್ತಾ ಬಂದಿದೆ. ಆದರೆ ಈಗ ನಡೆಸುತ್ತಿರುವ SIR ಹೆಸರಿನಲ್ಲಿ ಕೋಟ್ಯಂತರ ಸಂಖ್ಯೆಯಲ್ಲಿ ಅರ್ಹ ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಸತ್ತವರ ಹೆಸರುಗಳನ್ನು BLO ಗಳು ಆಯಾ ಮತಪಟ್ಟಿಯಲ್ಲಿ ತೆಗೆಯುತ್ತಾ ಬರುತ್ತಿದ್ದಾರೆ. ಆದರೆ ಬಿಜೆಪಿಯಿಂದ ಒಂದು ವರ್ಗದ ಜನರನ್ನು ಗುರಿಯಾಗಿರಿಸಿಕೊಂಡು SIR ನಡೆಸಲಾಗುತ್ತಿದೆ.

ಸುಳ್ಳು ಮತ್ತು ಸತ್ಯ 4:

ದೇಶದ ಸಂಪತ್ತು ನುಸುಳುಕೋರರಿಗೆ ಹೋಗುತ್ತಿದೆ ಎಂಬುದು ಎಷ್ಟು ಅವಾಸ್ತವವೆಂದರೆ ಇದು ಕೇವಲ ಜನರನ್ನು ಯಾಮಾರಿಸುವ ಮತ್ತೊಂದು ಕಥೆ. ಅಸಲಿಗೆ ಈ ನುಸುಳುಕೋರರು ಎಲ್ಲಿಂದ ಬಂದವರು, ಅವರನ್ನು ದೇಶದ ಒಳಗೆ ಬಿಟ್ಟುಕೊಂಡವರು ಯಾರು? ಕೇಂದ್ರದಲ್ಲಿ ಮೂರು ಅವಧಿಗೆ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಗಡಿ ಭದ್ರತಾ ವೈಫಲ್ಯವಲ್ಲವೇ? ದೇಶದ ಗೃಹ ಮಂತ್ರಿ ಇದಕ್ಕೆ ಹೊಣೆಗಾರರಲ್ಲವೇ ಎಂಬ ಪ್ರಶ್ನೆಯನ್ನು ಕೇಳಬೇಕಿದೆ.

ಇನ್ನು ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಹಾಗೂ ತನ್ನ ಗೋಸ್ಟ್‌ ಪಡೆಗಳು ನಿರಂತರವಾಗಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಇವರ ಈ ಪ್ರಚಾರ ನೋಡಿದರೆ ಇದು ಕೇವಲ ಮುಸ್ಲಿಂ ಸಮುದಾಯದ ಮೇಲೆ ಬೆರಳು ತೋರಿಸಿ ದೇಶದ ಬಡವರನ್ನು ಮತಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂಬುದನ್ನು ಗಮನಿಸಬೇಕು.

ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕಿದ್ದ ಕೇಂದ್ರ ಚುನಾವಣಾ ಆಯೋಗವು ಬಿಜೆಪಿಯ ಮೂಗಿನಡಿಯಲ್ಲಿ ಕೆಲಸ ಮಾಡುತ್ತಿದೆ. SIR ಕುರಿತು ಕೇಳಿಬರುತ್ತಿರುವ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ.

ಇನ್ನು ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರವು ಸಂವಿಧಾನ ರಕ್ಷಣೆ, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರ ರಕ್ಷಣೆ ಮಾಡುತ್ತೇವೆ ಎಂದು, ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುತ್ತೇವೆ ಎಂದು ಹೇಳುತ್ತಿದೆ. ಆದರೆ ಅಸಲಿಗೆ SIR ನಿಂದ ದಲಿತ ಬಹುಜನರನ್ನು ರಕ್ಷಣೆ ಮಾಡಿಕೊಳ್ಳಲು ಜನಸಂಘಟನೆಗಳು ನೀಡುತ್ತಿರುವ ಸಲಹೆಗಳನ್ನು ಜಾರಿ ಮಾಡದಿರುವುದು ಸಂವಿಧಾನ ಪ್ರೇಮಿಗಳಲ್ಲಿ ಆತಂಕವನ್ನುಂಟು ಮಾಡುತ್ತಿದೆ.

ಕರ್ನಾಟಕ ಸರ್ಕಾರ ಮಾಡಬೇಕಿರುವುದೇನು?

1. ಪ್ರತ್ಯೇಕ ಮತಪಟ್ಟಿ: ಕರ್ನಾಟಕ ಸರ್ಕಾರವು ತನ್ನ ಪರಿಮಿತಿಯಲ್ಲಿ ಪ್ರತ್ಯೇಕ ಮತದಾರರ ಪಟ್ಟಿಯನ್ನು ತಯಾರಿಸಬೇಕು. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡುವ ಮತದಾರರ ಪಟ್ಟಿಯಲ್ಲಿ ಯಾವೆಲ್ಲ ಹೆಸರುಗಳು ಡಿಲಿಟ್‌ ಆಗಿವೆಯೋ ಅವು ಅರ್ಹ ಮತದಾರರದು ಎಂದು ಸಂಘರ್ಷ ಮಾಡಿ, ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ದುಷ್ಕೃತ್ಯವನ್ನು ಬಯಲುಗೊಳಿಸಬಹುದು.

2. ಗ್ರಾಮ ಸಭೆ: ಕರ್ನಾಟಕದ ಎಲ್ಲಾ ಗ್ರಾಮ ಪಂಚಾಯಿತಿಗಳ ಮೂಲಕ ಗ್ರಾಮಸಭೆಗಳನ್ನು ನಡೆಸಿ, ಆ ಸಭೆಯಲ್ಲಿ ಸತ್ತವರ ಹೆಸರುಗಳನ್ನು ಹಾಗೂ ಅರ್ಹ ಮತದಾರರನ್ನು ಗುರುತಿಸಬೇಕು. ಈ ಸಭೆಗಳಲ್ಲಿ ಯಾರೆಲ್ಲಾ ಅರ್ಹ ಮತದಾರರ ಬಳಿ ಚುನಾವಣಾ ಆಯೋಗವು ಕೇಳುತ್ತಿರುವ ದಾಖಲೆಗಳಿಲ್ಲವೋ ಆ ದಾಖಲೆಗಳನ್ನು ಆ ಸ್ಥಳದಲ್ಲಿಯೇ ನೀಡಲು ವ್ಯವಸ್ಥೆ ಮಾಡಬೇಕು.

3. ಯಾವುದೇ ಒಬ್ಬ ಅರ್ಹ ಮತದಾರನನ್ನು ಮತಪಟ್ಟಿಯಿಂದ ಕೈಬಿಟ್ಟರೆ BLO ಗಳ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಮುಂದಾಗಬೇಕು. ನಮಗೆಲ್ಲರಿಗೂ ತಿಳಿದಿರುವಂತೆ ಬಹುತೇಕ ಸರ್ಕಾರಿ ಅಧಿಕಾರಿಗಳು ಬಿಜೆಪಿ, ದುಷ್ಟ ಸಂಘ ಪರಿವಾರದ ಬೆಂಬಲಿಗರೇ ಇರುತ್ತಾರೆ. ಇಂತವರ ಹುನ್ನಾರಗಳನ್ನು ಬಯಲಿಗೆಳೆಯಲು ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಒಬ್ಬ ಅರ್ಹ ಮತದಾರನ ಹೆಸರು ಕೈಬಿಟ್ಟರೂ ಕೆಲಸದಿಂದ ವಜಾಗೊಳಿಸುವ ಹಾಗೂ ಅವರ ಮೇಲೆ ಸುಮೋಟೋ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂಬ ಸುತ್ತೋಲೆಯನ್ನು ಹೊರಡಿಸಬೇಕು.

ಒಟ್ಟಾರೆಯಾಗಿ ಹೇಳುವುದಾದರೆ ಬಿಜೆಪಿ ನಿರಂತರವಾಗಿ ಈ ದೇಶದಲ್ಲಿನ ತಮಗೆ ಮತ ಹಾಕದವರನ್ನು ಮತದಾರರ ಪಟ್ಟಿಯಿಂದಲೇ ತೆಗೆದು ಹಾಕುವ ಪ್ರಯತ್ನಕ್ಕೆ ಮುಂದಾಗಿದೆ. ಇದರ ಮೂಲಕ ತನಗೆ ಯಾರು ಮತ ಹಾಕಬೇಕು ಎಂಬುದನ್ನು ಆರಿಸಿಕೊಳ್ಳುತ್ತಿದ್ದಾರೆ. ಇದು ದೇಶದ ಇತಿಹಾಸದಲ್ಲಿ ಕರಾಳ ಇತಿಹಾಸವಾಗಿ ದಾಖಲಾಗುತ್ತಿದೆ. ಪ್ರಜಾತಂತ್ರ ದೇಶವನ್ನು ಸರ್ವಾಧಿಕಾರಿ ಆಡಳಿತಕ್ಕೆ ಕೊಂಡೊಯ್ಯಲು ನಡೆಸುತ್ತಿರುವ ಪ್ರಯತ್ನವೆಂಬುದು ನಿಚ್ಚಳವಾಗಿ ಕಂಡುಬರುತ್ತಿದೆ.

ಚಂದ್ರು ತರಹುಣಿಸೆ

ಪತ್ರಕರ್ತರು

ಇದನ್ನೂ ಓದಿ- ಜಿಗಜಿಣಗಿಯ “ದಲಿತ ಮನುಷ್ಯ” ಎಂಬ ಧ್ವನಿಯ ಸುತ್ತ….

More articles

Latest article

Most read