ಬೆಂಗಳೂರು: ಹೆತ್ತವರು ಮತ್ತು ತಂಗಿಯನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ಶ್ವೇತಾಳನ್ನು ಪುದುಚೇರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಕೆನತ್‌ಗಾಗಿ ಹುಡುಕಾಟ ನಡೆಸಿದ್ದಾರೆ.
ಕಳೆದ ಎರಡು ದಿನಗಳಿಂದ ಒಂದು ಕಡೆ ನಿಲ್ಲದೇ ಆರೋಪಿ ಶ್ವೇತಾ ಹಾಗೂ ಪ್ರಿಯಕರ ಕೆನತ್ ಸಂಚಾರ ಮಾಡುತ್ತಿದ್ದರು. ಇವರಿಬ್ಬರ ಪತ್ತೆಗಾಗಿ ವೈಟ್ ಫೀಲ್ಡ್ ವಿಭಾಗದ ಆರು ವಿಶೇಷ ಪೊಲೀಸ್ ತಂಡಗಳು ಶೋಧ ಕಾರ್ಯ ನಡೆಸುತ್ತಿದ್ದರು.
ಕೊಲೆ ನಡೆದ ಮನೆ ಶೋಧದ ವೇಳೆ ಶ್ವೇತಾ ಡೈರಿ ಪತ್ತೆಯಾಗಿದೆ. ಹಲವು ದಿನಗಳಿಂದ ಶ್ವೇತಾ ಡೈರಿ ಬರೆಯುತ್ತಿದ್ದಳು. ಡೈರಿಯಲ್ಲಿ ಐ ಆ್ಯಮ್ ಸ್ಯಾಡ್, ಐ ಆ್ಯಮ್ ಲೋನ್ಲಿ, ಫೀಲಿಂಗ್ ಲವ್ಡ್, ಐ ಆ್ಯಮ್ ಡಿಪ್ರೆಸ್ಡ್, ಐ ಆ್ಯಮ್ ಸೂಪಿರಿಯರ್ ಹೀಗೆ ಹಲವಾರು ಬರಹಗಳು ಪತ್ತೆಯಾಗಿದೆ. ಸದ್ಯ ಪೊಲೀಸರು ಡೈರಿ ಸೇರಿದಂತೆ ಮನೆಯಲ್ಲಿ ಹಲವಾರು ಸಾಕ್ಷಿಗಳ ಕಲೆ ಹಾಕಿದ್ದಾರೆ.

