ವಿಧಾನಪರಿಷತ್‌ ಚುನಾವಣೆ : ಕಾಂಗ್ರೆಸ್‌ನ ಐವರು ಅಭ್ಯರ್ಥಿಗಳ ಗೆಲುವು

ಬೆಂಗಳೂರು: ಇಂದು ನಡೆದ ಕರ್ನಾಟಕ ವಿಧಾನ ಪರಿಷತ್‌ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಕಾಂಗ್ರೆಸ್‌ನ ಐವರು ಮತ್ತು ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಿದರೆ,  ಜೆಡಿಎಸ್‌ನ ಗೋವಿಂದರಾಜು ಸೋಲನ್ನು ಅನುಭವಿಸಿದ್ದಾರೆ.

ಬಿಜೆಪಿ, ಜೆಡಿಎಸ್‌ನಿಂದ ಅಡ್ಡ ಮತದಾನ : ಜೆಡಿಎಸ್‌ ಹಾಗೂ ಬಿಜೆಪಿಯ ಮತಗಳು ಕಾಂಗ್ರೆಸ್‌ ಪಾಲಾಗಿವೆ. ಹೀಗಾಗಿಯೇ, 4 ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಸಾಮರ್ಥ್ಯವಿದ್ದ ಕಾಂಗ್ರೆಸ್‌ 5ನೇ ಅಭ್ಯರ್ಥಿಯಾಗಿ ವಿನಯ್ ಕಾರ್ತಿಕ್‌ನ ಗೆಲ್ಲಿಸಿಕೊಂಡಿದೆ.
ಬಿಜೆಪಿ ವಿಧಾನಸಭೆಯಲ್ಲಿ 62 ಸದಸ್ಯ ಬಲ ಹೊಂದಿದ್ದು, ತನ್ನ ಇಬ್ಬರು ಅಭ್ಯರ್ಥಿಗಳಿಗೆ 30 ಹಂಚಿಕೆ ಮಾಡಿ ಉಳಿದವುಗಳನ್ನು ಜೆಡಿಎಸ್‌ ಅಭ್ಯರ್ಥಿಗೆ ಹಾಕಲು ಸೂಚಿಸಲಾಗಿತ್ತು. ಆದರೆ, ಬಿಜೆಪಿ ಅಭ್ಯರ್ಥಿಗಳಿಗೇ ಕಡಿಮೆ ಮತ ಬಿದ್ದಿದ್ದು, ಅಡ್ಡ ಮತದಾನದ ಮೂಲಕ ಕಾಂಗ್ರೆಸ್‌ ಪಾಲಾಗಿವೆ. ಜೆಡಿಎಸ್‌ ಬಳಿ ಕೇವಲ 18 ಸದಸ್ಯರಿದ್ದು, ಅವರ ಪೈಕಿ ಹಲವರು ಕಾಂಗ್ರೆಸ್‌ಗೆ ಮತ ಹಾಕಿರುವ ಸಾಧ್ಯತೆ ಇದೆ. 

ಕಾಂಗ್ರೆಸ್‌ ನ ಗೆದ್ದ ಅಭ್ಯರ್ಥಿಗಳು : ಬಿ.ಕೆ.ಹರಿಪ್ರಸಾದ್‌: ಪಡೆದ ಮತಗಳು 30, ತಿಪ್ಪಣ್ಣಪ್ಪ ಕಮಕನೂರು: 30 ಮತ, ಪಿ.ವಿ.ಮೋಹನ್‌: 29 ಮತ, ಬಿ.ಎಸ್‌.ಶಿವಣ್ಣ: 30 ಮತ, ವಿನಯ್‌ ಕಾರ್ತಿಕ್‌ (5ನೇ ಅಭ್ಯರ್ಥಿ): 32 ಮತ

ಬಿಜೆಪಿ ಯ ಗೆದ್ದ ಅಭ್ಯರ್ಥಿಗಳು : ಆರ್‌.ರಘು: 29 ಮತಗಳು, ಲಿಂಗರಾಜು ಪಾಟೀಲ್‌: 27 ಮತ

ಜೆಡಿಎಸ್‌ ಸೋತ ಅಭ್ಯರ್ಥಿ : ಗೋವಿಂದರಾಜು: ಪಡೆದ ಮತಗಳು 14 

More articles

Latest article

Most read