₹48 ಲಕ್ಷ ಮೌಲ್ಯದ ಅವಧಿ ಮೀರಿದ ಆಹಾರ ಪದಾರ್ಥಗಳು ಜಪ್ತಿ: ರಿಲಯನ್ಸ್, ಬ್ಲಿಂಕಿಟ್, ಜೊಮ್ಯಾಟೊ ಹೈಪರ್‌ಪ್ಯೂರ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್

ಮುಂಬೈ: ಮಹಾರಾಷ್ಟ್ರದಲ್ಲಿ ಆಹಾರ ಮತ್ತು ಔಷಧ ಆಡಳಿತ ಇಲಾಖೆ (FDA) ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ₹48 ಲಕ್ಷಕ್ಕೂ ಅಧಿಕ ಮೌಲ್ಯದ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್, ರಿಲಯನ್ಸ್ ರಿಟೇಲ್, ಬ್ಲಿಂಕಿಟ್ ಹಾಗೂ ಜೊಮ್ಯಾಟೊ ಒಡೆತನದ ಹೈಪರ್‌ಪ್ಯೂರ್ ಸಂಸ್ಥೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಥಾಣೆ ಜಿಲ್ಲೆಯ ಶಾಂತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿವಿಧ ಕಂಪನಿಗಳ ಹಿರಿಯ ಅಧಿಕಾರಿಗಳು, ಉದ್ಯೋಗಿಗಳು, ಆಹಾರ ಪದಾರ್ಥಗಳ ವಿಲೇವಾರಿ ಸಂಸ್ಥೆಯ ನಿರ್ವಾಹಕರು ಹಾಗೂ ಸ್ಥಳೀಯ ಪೂರೈಕೆದಾರರು ಸೇರಿದಂತೆ ಒಟ್ಟು 10 ಮಂದಿಯನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಎರಡು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಎಫ್‌ಡಿಎ ದಾಳಿ

ಅಕ್ಟೋಬರ್ 14 ಮತ್ತು 15ರಂದು ಮಹಾರಾಷ್ಟ್ರದ ಥಾಣೆ ಹಾಗೂ ಪುಣೆ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಆಹಾರ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಏಕಕಾಲಕ್ಕೆ ಪರಿಶೀಲನಾ ಕಾರ್ಯಾಚರಣೆ ನಡೆಸಿದ್ದರು.

ಈ ವೇಳೆ ಗೋದಾಮುಗಳು, ಆಹಾರ ಪದಾರ್ಥಗಳ ಸಂಗ್ರಹಣಾ ಕೇಂದ್ರಗಳು ಹಾಗೂ ವಿಲೇವಾರಿ ಘಟಕಗಳಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳು ಪತ್ತೆಯಾಗಿವೆ ಎಂದು ಎಫ್‌ಡಿಎ ಮೂಲಗಳು ತಿಳಿಸಿವೆ. ಕಾರ್ಯಾಚರಣೆಯಲ್ಲಿ ಒಟ್ಟು ₹48,09,924 ಮೌಲ್ಯದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.

ಎಫ್‌ಡಿಎ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಭಿವಂಡಿಯಲ್ಲಿರುವ ಆಹಾರ ಪದಾರ್ಥಗಳ ವಿಲೇವಾರಿ ಕೇಂದ್ರದಿಂದ ₹24 ಲಕ್ಷಕ್ಕೂ ಅಧಿಕ ಮೌಲ್ಯದ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಾಡ್ಪೆಯಲ್ಲಿರುವ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಗೋದಾಮಿನಲ್ಲಿ ಸುಮಾರು ₹4.92 ಲಕ್ಷ ಮೌಲ್ಯದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಅದೇ ರೀತಿ ಉಸಾಟನೆಯಲ್ಲಿರುವ ಜೊಮ್ಯಾಟೊ ಹೈಪರ್‌ಪ್ಯೂರ್ ಘಟಕದಿಂದ ಸುಮಾರು ₹7.81 ಲಕ್ಷ ಮೌಲ್ಯದ ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದೆ. ಇತರ ಸ್ಥಳಗಳಲ್ಲಿ ಪತ್ತೆಯಾದ ಉತ್ಪನ್ನಗಳನ್ನೂ ಸೇರಿಸಿ ಒಟ್ಟು ಜಪ್ತಿ ಮೌಲ್ಯ ₹48.09 ಲಕ್ಷಕ್ಕೆ ತಲುಪಿದೆ.

More articles

Latest article

Most read