ಜೆನ್ ಝಿ ಹೋರಾಟ ಕಲಿಸಿದ ಸಮತೆಯ ಪಾಠ

ಜೆನ್ ಝಿಗಳು ಹೆಣ್ಣು- ಗಂಡಿನ ನಡುವೆ ಶತಶತಮಾನಗಳಿಂದ ಇರುವ ಗೆರೆಯನ್ನು ಸ್ವಲ್ಪಮಟ್ಟಿಗಾದರೂ ಅಳಿಸುತ್ತಿದ್ದಾರೆ ಎನ್ನುವುದು ಸಾಮಾಜಿಕ ಬದುಕಿನ ನೆಲೆಯಲ್ಲಿ, ದೇಶದ ಭವಿಷ್ಯದ ಹಿನ್ನೆಲೆಯಲ್ಲಿ ಗಮನಾರ್ಹ ಮತ್ತು ಹೆಮ್ಮೆಯ ಸಂಗತಿಯೇ ಹೌದು – ಶರೀಫ್ ಕಾಡುಮಠ, ಕವಿ, ಬರಹಗಾರ.

ದೆಹಲಿಯಲ್ಲಿ, ದೇಶದ ಹಲವೆಡೆ ಜೆನ್ ಝಿ ಪ್ರತಿಭಟನೆ ನಡೆಯುತ್ತಿದೆ. ಪೊಲೀಸರ ಬಂಧನ, ಪ್ರತಿಭಟನಾ ಸ್ಥಳಗಳ ಮೇಲಿನ ನಿರ್ಬಂಧಗಳ ನಡುವೆಯೂ ದೆಹಲಿಯಲ್ಲಿ ಪ್ರತಿಭಟನೆ ಸಂಪೂರ್ಣವಾಗಿ ನಿಂತಿಲ್ಲ. ಬಂಧನದ ಬಳಿಕವೂ ಪ್ರತಿಭಟನಾಕಾರರು ಪರ್ಯಾಯ ಸ್ಥಳಗಳಲ್ಲಿ ಒಟ್ಟು ಗೂಡಿದ್ದಾರೆ. ಬೀದಿಯ ಹೋರಾಟದ ಹಲವಾರು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ‌ ಇವೆ. ದೆಹಲಿಯಲ್ಲಿ ಈ ಬಾರಿ ನಡೆದ ಪ್ರತಿಭಟನೆಯ ವೇಳೆ ಹಿಂದುತ್ವವಾದಿಗಳೆಂದು ಬಿಂಬಿಸಿಕೊಂಡ ‘ಧರಮ್ ರಕ್ಷಕ್’ ಯುವಕರು ದೊಣ್ಣೆ ಹಿಡಿದುಕೊಂಡು ಕೇಸರಿ ಶಾಲು ಧರಿಸಿ ಜೆನ್ ಝಿಗಳ ವಿರುದ್ಧವೇ ಹಲ್ಲೆ ನಡೆಸಲು ಶುರು ಮಾಡಿದ್ದು, ಅದರ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಪ್ರತಿಭಟನೆ ವೇಳೆ ಎಷ್ಟು ಬಾರಿ ಬಂಧಿಸಲು ಯತ್ನಿಸಿದರೂ ಚಿಗರಿಯಂತೆ ಹಾರಿ ಬ್ಯಾರಿಕೇಡ್ ಗಳನ್ನು ಬದಿಗೆ ಸರಿಸಿ ಓಡುವ ಎಐಎಸ್ಎ (AISA) ನಾಯಕಿ ನೇಹಾ ಬೋರಾ ಈಗ ಹೋರಾಟದ ಪ್ರಮುಖ ನಾಯಕಿ. ಆಕೆಯ ದಿಟ್ಟತನ, ಪ್ರತಿಭಟನೆಯ ರೀತಿ ದೇಶದ ಬಹಳಷ್ಟು ಜನರಲ್ಲಿ ಸ್ಪೂರ್ತಿ, ಉತ್ಸಾಹ ತುಂಬಿದೆ. ಹಲವರು ಆಕೆಯ ಛಲವನ್ನು ಕೊಂಡಾಡುತ್ತಿದ್ದಾರೆ.

ಈ ನಡುವೆ ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ನೇಹಾ ಬೋರಾ ಉಡುಪಿನ ಬಗ್ಗೆ ಬಹಳಷ್ಟು ಟ್ರೋಲ್ ಗಳು ಕಂಡುಬಂದವು. ಮೋದಿ ಮತ್ತು ಹಿಂದುತ್ವವನ್ನು ಬೆಂಬಲಿಸುವ ಕೆಲವು ಸಾಮಾಜಿಕ ಜಾಲತಾಣ ಖಾತೆಗಳಿಂದ ನೇಹಾ ಅವರ ಉಡುಪು ಮತ್ತು ದೇಹವನ್ನು ಗುರಿಯಾಗಿಸಿಕೊಂಡ ಅಶ್ಲೀಲ ಪೋಸ್ಟ್‌ಗಳು ಪ್ರಕಟವಾದವು. ರಾಜಕೀಯ ವಿರೋಧವನ್ನು ಮಹಿಳೆಯ ದೇಹದ ಮೇಲಿನ ಅವಹೇಳನಕ್ಕೆ ಇಳಿಸಿದ ಈ ವರ್ತನೆ ತೀವ್ರ ಟೀಕೆಗೆ ಒಳಗಾಯಿತು.

ನೀಟ್ ಅಕ್ರಮ ವಿಚಾರವಾಗಿ ಕಳೆದ ಜೂನ್ ನಲ್ಲಿಯೂ ಜೆನ್ ಝಿ ಹೋರಾಟ ನಡೆದು, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯೊಂದಿಗೆ ಕೊನೆಗೊಂಡಿತ್ತು. ಇದೀಗ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ ಮುಂದುವರಿದಿದೆ.

ಜಂತರ್‌ ಮಂತರ್‌ ನಲ್ಲಿ ಜೆನ್‌ ಝೀ ಗಳ ಪ್ರತಿಭಟನೆ

ಹಿಂದಿನ ಪ್ರತಿಭಟನೆ, ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆಯ ದೃಶ್ಯಗಳ ವಿಡಿಯೊಗಳನ್ನು ನೋಡಿದಾಗ ಜೆನ್‌ ಝಿಗಳ ಬಗ್ಗೆ ಅಭಿಮಾನ ಮೂಡುವ ಸಂಗತಿಯೊಂದು ಗಮನಿಸಿದೆ. ಸಾವಿರಾರು ಸಂಖ್ಯೆಯಲ್ಲಿ ಯುವಕ- ಯುವತಿಯರು ಒಟ್ಟುಗೂಡಿ‌ ಈ ಪ್ರತಿಭಟನೆ ನಡೆಸುವಾಗ, ಪೊಲೀಸರು ಅವರನ್ನು ಬಂಧಿಸಿ ಬಸ್ ನೊಳಗೆ ತುರುಕುತ್ತಿದ್ದರು. ಬಸ್ಸಿನೊಳಗಿಂದ ತಪ್ಪಿಸಲು ಏನೆಲ್ಲ ಪ್ರಯತ್ನ ನಡೆಸಿ ಯಶಸ್ವಿಯಾದ ವಿದ್ಯಾರ್ಥಿಗಳು, ಕಿಟಕಿಯಿಂದಾಚೆ ಹಾರಿ ಓಡುವ ದೃಶ್ಯಗಳನ್ನು ಎಲ್ಲರೂ ಗಮನಿಸಿರುತ್ತೀರಿ. ಹೆಣ್ಣುಮಕ್ಕಳು ಬಸ್ಸಿನಿಂದ ತಪ್ಪಿಸಿಕೊಳ್ಳುವಾಗ ಅವರನ್ನು ಎತ್ತಿ ಕೆಳಗಿಳಿಸಲು ಯುವಕರು ಸಹಕರಿಸಿದರು. ಆದರೆ ಯಾವ ಯುವಕರೂ ಕೂಡ ಯುವತಿಯರಿಗೆ ಕೆಟ್ಟ ಭಾವ ಮೂಡಿಸುವಂತೆ ಸ್ಪರ್ಶಿಸಿಲ್ಲ. ಪ್ರತಿಭಟನೆಯ ಸಂದರ್ಭದಲ್ಲಿಯೂ ಸಾವಿರಾರು ಸಂಖ್ಯೆಯ ಯುವಕ ಯುವತಿಯರು ಸೇರಿರುವಲ್ಲಿ ಕೂಡ ಯಾವುದೋ ಜೆನ್ ಝಿ ಯುವಕ, ಯಾವುದಾದರೂ ಯುವತಿಯನ್ನು ಕೆಟ್ಟದಾಗಿ ಮುಟ್ಟಿದ, ನೋಡಿದ ಉದಾಹರಣೆ ಕಾಣಸಿಕ್ಕಿಲ್ಲ. ಅಂತಹ ದೂರುಗಳು ಕೇಳಿಬಂದಿಲ್ಲ. ಇದು ಜೆನ್ ಝಿಗಳಷ್ಟೇ ಸಾಧಿಸಿದ ಗೆಲುವು ಎಂದರೂ ತಪ್ಪಲ್ಲ.

ಇದಷ್ಟೇ ಅಲ್ಲ, ಅವರು ‘ಎಲ್ ಜಿಬಿಟಿಕ್ಯು’ ಸಮುದಾಯವನ್ನು ಕೂಡ ಸ್ವೀಕರಿಸಿದ ರೀತಿ ಮಾದರಿಯಾದುದು. ಪ್ರತಿಭಟನೆಯ ಸಂದರ್ಭದಲ್ಲಿ ಅವರನ್ನು ದೂರವಿಡದೆ, ವಿಶೇಷವಾಗಿ ಗುರುತಿಸಿ ಕನಿಕರ ತೋರದೆ ಸಹಜವಾಗಿಯೇ ಎಲ್ಲರಂತೆ ಅವರನ್ನು ಕಂಡದ್ದು ಗಮನಾರ್ಹ.

ದೇಶದಲ್ಲಿ ನಿಜಕ್ಕೂ ಏನು ನಡೆಯುತ್ತಿದೆ ಎನ್ನುವುದನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿರುವ, ಧರ್ಮ ರಕ್ಷಣೆಯ ನಕಲಿ ಆಟಕ್ಕೆ ಬಲಿಯಾಗದೆ ಇರುವ ಜೆನ್ ಝಿಗಳಲ್ಲಿ ಲಿಂಗ ಸಮಾನತೆ ಈ ಗುಣ ಸಹಜವಾಗಿ ಬಂದಿದೆ. ಧರ್ಮ ರಕ್ಷಣೆ ಎನ್ನುವ ಆಲೋಚನೆಯೇ ‘ಹೆಣ್ಣನ್ನು ಹತೋಟಿಯಲ್ಲಿಡುವ’ ಪುರುಷಾಹಂಕಾರದ ಮನಸ್ಥಿತಿಯಿಂದ ಶುರುವಾಗುವುದರಿಂದ ಅಂತಹ ಗುಂಪುಗಳ ಜೊತೆ ದೊಣ್ಣೆ ಹಿಡಿದುಕೊಂಡು ಹೆಜ್ಜೆಹಾಕುವ ಚಿಗುರು ಮೀಸೆಯವರ ಮನಸ್ಥಿತಿ ಹೀಗೆ ಸಮಾನ ಚಿಂತನೆಯ ಕಡೆ ಹೊರಳುವುದು ಕಷ್ಟ.‌

ಜೆನ್ ಝಿಗಳು ಒಟ್ಟಾಗಿ ರೀಲ್ಸ್ ಮಾಡಿ ಹಂಚಿಕೊಳ್ಳುತ್ತ ತುಂಟ ಮಕ್ಕಳಂತೆ ಪೊಲೀಸರೊಂದಿಗೆ ಮಾತನಾಡುತ್ತ, ಪೊಲೀಸರು ಓಡಿಸಿದರೆ ಮೊಬೈಲ್ ಕ್ಯಾಮೆರಾ ಆನ್ ಇಟ್ಟುಕೊಂಡೇ ರಸ್ತೆ ತುಂಬ ಓಡುತ್ತ ಕೇವಲ ಚೈತನ್ಯವೊಂದೇ ಜೀವಿಸಿದ ಹಾಗೆ, ಬೇರೆಲ್ಲ‌ ನಗಣ್ಯವೆಂದು ಇಡೀ ಸಮಾಜಕ್ಕೆ ಮನವರಿಕೆ ಮಾಡಿಕೊಡುವ ಹಾಗೆ ಅವರ ನಡವಳಿಕೆ ಇರುತ್ತದೆ. ತದ್ವಿರುದ್ಧ ಮನಸ್ಥಿತಿಯ ಜೆನ್ ಝಿಗಳೂ, ಮಿಲೇನಿಯಲ್ ಯುವಕರು ಇದೇ ಜೆನ್ ಝಿಗಳನ್ನು ಎದುರು ಹಾಕಿಕೊಂಡು ಕೇಸರಿ ಶಾಲು ಧರಿಸಿ, ಹಣೆಗೆ ನಾಮ ಎಳೆದುಕೊಂಡು ದೊಣ್ಣೆ ಹಿಡಿದುಕೊಂಡು ಜಂತರ್ ಮಂತರ್ ಗೆ ಬಂದು,‌ ಹೆಣ್ಣುಮಕ್ಕಳ ಮೇಲೂ ದೈಹಿಕ ಹಲ್ಲೆ ನಡೆಸಿರುವುದನ್ನು ಗಮನಿಸಿರಬಹುದು. ‘ಯತ್ರನಾರ್ಯಸ್ತು ಪೂಜ್ಯಂತೇ, ಭಾರತದ ನಾರಿಗೆ ದೇವಿಯ ಸ್ಥಾನವಿದೆ’ ಎಂದೆಲ್ಲ ಭಾಷಣಗಳಲ್ಲಿ, ‌ಪೋಸ್ಟುಗಳಲ್ಲಿ ಬರೆದುಕೊಳ್ಳುವ ಈ ‘ಧರ್ಮರಕ್ಷಕರು’ ಹೆಣ್ಣುಮಕ್ಕಳನ್ನು ನಡೆಸಿಕೊಂಡ ರೀತಿಗೆ ಅವರ ಮನೆಯ ಹೆಣ್ಣುಮಕ್ಕಳೇ ತಲೆತಗ್ಗಿಸಬೇಕು.

ಈ ಎರಡು ಮನಸ್ಥಿತಿಯ ನಡುವಿನ ವ್ಯತ್ಯಾಸ ಧರ್ಮರಕ್ಷಕ ಸಂಘಟನೆಗಳು ಸಮಾಜಕ್ಕೆ ಉಪಕಾರಿಯೋ ಅಪಾಯಕಾರಿಯೋ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತದೆ. ಸಾವಿರಾರು ವಿದ್ಯಾರ್ಥಿಗಳು ಸೇರಿದ್ದ ಆ ಪ್ರತಿಭಟನೆಯಲ್ಲಿ ಧರ್ಮರಕ್ಷಕ ಸಂಘಟನೆಯವರು ಇರಲಿಲ್ಲ. ಅಲ್ಲಿ ಎಲ್ಲ ಧರ್ಮದ ವಿದ್ಯಾರ್ಥಿಗಳು, ಯುವಕ ಯುವತಿಯರು ಇದ್ದರು. ಆದರೆ ಧರ್ಮಕ್ಕೆ ಅಪಾಯ ಉಂಟಾಗುವ ಏನೂ ನಡೆಯಲಿಲ್ಲ. ವಾಸ್ತವದಲ್ಲಿ ಈ ದೊಣ್ಣೆ ಹಿಡಿದುಕೊಂಡ ಯುವಕರು ಬಂದಿದ್ದು, ‘ಧರ್ಮಕ್ಕೆ ಧಕ್ಕೆಯಾಗುವ ಹಾಗೆ ನಡೆದುಕೊಂಡರೆ ಹೊಡೆಯುತ್ತೇವೆ’ ಎಂಬ ನಿರ್ಧಾರದೊಂದಿಗೆ. ಧರ್ಮಕ್ಕೆ ಧಕ್ಕೆಯಾಗುವ ಏನೂ ನಡೆಯದೇ ಇದ್ದರೂ ಅವರು ವಿದ್ಯಾರ್ಥಿಗಳನ್ನು ಹೊಡೆದರು. ದೆಹಲಿ ಪೊಲೀಸರು ಅವರಿಗೆ ರಕ್ಷಾಕವಚವಾದರೇ ಹೊರತು ವಿದ್ಯಾರ್ಥಿಗಳನ್ನು ರಕ್ಷಿಸಲಿಲ್ಲ.

ನೇಹಾ ಬೋರಾ ಕುರಿತಂತೆ ಅಶ್ಲೀಲವಾಗಿ ಫೇಸ್ಬುಕ್ ನಲ್ಲಿ ಬರೆದುಕೊಂಡಿರುವ ಧರ್ಮರಕ್ಷಕರು ಜೆನ್ ಝಿಗಳಲ್ಲ. ಅವರು 90ಸ್ ಕಿಡ್ ಗಳು ಅಥವಾ ಅದಕ್ಕೂ ಹಿಂದಿನವರು. ಈ‌ ಅವಧಿಯವರಿಗೆ ಹೆಣ್ಣಿನ ದೇಹದ ಅಂಗಾಂಗಗಳ‌ ಬಗೆಗಿನ ಕುತೂಹಲ ಮುಗಿಯಲಿಲ್ಲ. ಅದನ್ನು ದಾಟಲು ಸಾಧ್ಯವಾಗಿಲ್ಲ. ಜೊತೆಜೊತೆಗೆ ಆ ದೌರ್ಬಲ್ಯವನ್ನು ಮುಚ್ಚಿಹಾಕಲೆಂದೇ ಅವರು ಮಡಿವಂತಿಕೆಯ, ಸ್ತ್ರೀ, ಪಾವಿತ್ರ್ಯ, ಬಟ್ಟೆ, ಸಂಸ್ಕಾರದ ಮಾತನಾಡುತ್ತಾರೆ. ಇಂತಹ ಯಾವ ಮಾತನ್ನೂ ಆಡದೆ ಜೆನ್ ಝಿಗಳು ಹೆಣ್ಣಿನ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು‌ ತಮ್ಮ ನಡವಳಿಕೆಯಿಂದಲೇ ಕಲಿಸಿದ್ದಾರೆ.

ನೇಹಾ ಬೋರಾ

ಜೆನ್ ಝಿಗಳ ಜೀವನಶೈಲಿ ಬಗ್ಗೆ ಸಮಾಜದಲ್ಲಿ ಸಭ್ಯರು, ಸುಸಂಸ್ಕೃತರು, ಸಂಸ್ಕಾರಿಗಳೆಂದು ಪೋಸು ಕೊಡುವವರಲ್ಲಿ ಹಿಂದಿನಿಂದಲೂ ಒಂದು ಕೆಂಗಣ್ಣು ಇದೆ. ಅದು ಅವರ ಹೆಣ್ಣುಮಕ್ಕಳು ಬಸ್ಸಿನಿಂದ ತಪ್ಪಿಸಿಕೊಳ್ಳುವಾಗ ಅವರನ್ನು ಎತ್ತಿ ಕೆಳಗಿಳಿಸಲು ಯುವಕರು ಸಹಕರಿಸಿದರು. ಆದರೆ ಯಾವ ಯುವಕರೂ ಕೂಡ ಯುವತಿಯರಿಗೆ ಕೆಟ್ಟ ಭಾವ ಮೂಡಿಸುವಂತೆ ಸ್ಪರ್ಶಿಸಿಲ್ಲ. ಪ್ರತಿಭಟನೆಯ ಸಂದರ್ಭದಲ್ಲಿಯೂ ಸಾವಿರಾರು ಸಂಖ್ಯೆಯ ಯುವಕ ಯುವತಿಯರು ಸೇರಿರುವಲ್ಲಿ ಕೂಡ ಯಾವುದೋ ಜೆನ್ ಝಿ ಯುವಕ, ಯಾವುದಾದರೂ ಯುವತಿಯನ್ನು ಕೆಟ್ಟದಾಗಿ ಮುಟ್ಟಿದ, ನೋಡಿದ ಉದಾಹರಣೆ ಕಾಣಸಿಕ್ಕಿಲ್ಲ. ಅಂತಹ ದೂರುಗಳು ಕೇಳಿಬಂದಿಲ್ಲ. ಇದು ಜೆನ್ ಝಿಗಳಷ್ಟೇ ಸಾಧಿಸಿದ ಗೆಲುವು ಎಂದರೂ ತಪ್ಪಲ್ಲ.

ದ ಬಗೆಗಿರುವ ಅಸಮಾಧಾನ, ಪ್ರಶ್ನಿಸಿಲು ಕಷ್ಟವೆನಿಸುತ್ತಿರುವ ಅವರ ಆಯ್ಕೆಗಳ ಕುರಿತ ಅಸಹನೆ. ಲೈಂಗಿಕ ವಿಚಾರದಲ್ಲಿಯೂ ಅಷ್ಟೆ. ತಮ್ಮ ಸ್ವಾತಂತ್ರ್ಯವನ್ನು, ತಮ್ಮ ಬಯಕೆಯನ್ನು ತಾವರಿತುಕೊಂಡು ಅದಕ್ಕೆ ಬೇಕಾದಂತೆ ನಡೆದುಕೊಳ್ಳುವ ಜೆನ್ ಝಿಗಳು, ಪರಸ್ಪರ ಸಮ್ಮತಿಯೊಂದಿಗೆ ಅವರಿಗೆ ಬೇಕಾದಂತೆ ಇರುತ್ತಾರೆ, ಬಾಳುತ್ತಾರೆ. ಈ ಬಗೆಯ ಜೀವನಶೈಲಿ ಮಡಿವಂತಿಕೆಯ ಸಮಾಜಕ್ಕೆ ಅಂಟಿಕೊಂಡಿರುವವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

ಅತ್ಯಾಚಾರವನ್ನು ಸಾಮಾನ್ಯ ಎಂದು ಒಪ್ಪಿಕೊಂಡ ಸಮಾಜ ನಮ್ಮದು. ಬಿಹಾರದಲ್ಲಿ ಇತ್ತೀಚೆಗೆ ನಡೆದ ಭೀಕರ ಘಟನೆಯಲ್ಲಿ ಹತ್ತನೇ ತರಗತಿಯ ಬಾಲಕಿಯೊಬ್ಬಳನ್ನು ಕೇಸರಿ ಶಾಲುಧಾರಿ ಯುವಕನೊಬ್ಬ ಎತ್ತಿಕೊಂಡು ಹೋದ ರೀತಿ ಈ ದೇಶದಲ್ಲಿ ಇದೇನು ನಡೆಯುತ್ತಿದೆ ಎಂದು ಇಡೀ ದೇಶದ ಜನ ಬೆಚ್ಚಿಬೀಳುವಂತೆ ಮಾಡಿತ್ತು. ಇಂಥವರ ಕೈಗೆ ಸಿಗಬಾರದೆಂದು ಕಾಡಿನಂತಹ ಸ್ಥಳಗಳಿಗೆ ಸಮಯ ಕಳೆಯಲು ಯಾವುದಾದರೂ ಜೋಡಿ ಹೋದರೆ, ಅವರ ಹಿಂದೆ ಬಿದ್ದು ಅಟ್ಟಾಡಿಸಿಕೊಂಡು ಹೋಗುವ ಇಂತಹ ಯುವಕರ ಗುಂಪು, ಪ್ರಿಯಕರನ ಕಣ್ಣೆದುರಲ್ಲೇ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಉದಾಹರಣೆಗಳಿವೆ. ಇಂತಹ (ಅ)ನೈತಿಕ ಪೊಲೀಸ್ ಗಿರಿಯ ಘಟನೆಗಳು ದೇಶದಾದ್ಯಂತ ನಡೆಯುತ್ತಲೇ ಇರುತ್ತವೆಯಾದರೂ ಅವು ಹೆಣ್ಣಿನ ಮಾನದ ಕಾರಣಕ್ಕೆ ಸುದ್ದಿಯಾಗುತ್ತಿಲ್ಲ. ಆದರೆ ಕೆಲವು ವಿಡಿಯೊಗಳು ಸೋರಿಕೆಯಾದಾಗ ಇಂತಹ ಘಟನೆಗಳು ಬೆಳಕಿಗೆ ಬರುತ್ತವೆ. ಇದು ಇವರ ಧರ್ಮರಕ್ಷಣೆಯ ಮಾದರಿ.

ಅತ್ಯಾಚಾರ, ದೌರ್ಜನ್ಯದಂತಹ ಘಟನೆಗಳು ನಡೆದಾಗ, ‘ಅವಳು ಅಷ್ಟೊತ್ತಲ್ಲಿ ಅಲ್ಲಿಗೇಕೆ ಹೋದದ್ದು, ಹೆಣ್ಣುಮಕ್ಕಳೇಕೆ ತಡರಾತ್ರಿ ಓಡಾಡುವುದು ಎಂಬಂತಹ ಪ್ರಶ್ನೆಗಳನ್ನು ಸದನದೊಳಗೆ ರಾಜಕೀಯ ನಾಯಕರೂ ಕೇಳಿರುವುದು ನೋಡಿರಬಹುದು. ಅಂದರೆ ಅತ್ಯಾಚಾರ ಎನ್ನುವುದು ಅಷ್ಟೊಂದು ಸಾಮಾನ್ಯ ಸಂಗತಿ. ಹೆಣ್ಣು ತನ್ನನ್ನು ತಾನು ರಕ್ಷಿಸಿಕೊಳ್ಳಬೇಕೇ ಹೊರತು ಅತ್ಯಾಚಾರದ ಮನಸ್ಥಿತಿಯಿಂದ ಪುರುಷ ಸಮಾಜ ಹೊರಗೆ ಬರುವುದಿಲ್ಲ ಎನ್ನುವ ಸಂದೇಶ ಇದು. ಇದನ್ನು ಒಪ್ಪಿಕೊಂಡ ಸಮಾಜ,‌ ಯುವಕ ಯುವತಿಯರು ಪರಸ್ಪರ ಸಮ್ಮತಿಯೊಂದಿಗೆ ತಮ್ಮ ಆಯ್ಕೆಯನ್ನು ಆಯ್ದುಕೊಳ್ಳುವುದನ್ನು ಪಾಪ, ಅಪರಾಧ, ಸಂಸ್ಕಾರಹೀನವಾಗಿ ಕಾಣುತ್ತಾರೆ. ಇದೇ ಮಾದರಿಯ ವ್ಯಂಗ್ಯವೇ ‘ಧರ್ಮ ರಕ್ಷಣೆ’ ಹೆಸರಿನಲ್ಲಿ ಎಲ್ಲಾ ಆಯಾಮಗಳಲ್ಲಿಯೂ ನಡೆಯುತ್ತಿರುವುದು.

ಎಲ್ಲ ಜೆನ್ ಝಿಗಳೂ, ಎಲ್ಲ ಹಳೆ ತಲೆಮಾರಿನವರೂ ಒಂದೇ ಮನಸ್ಥಿತಿಯವರಿರಬೇಕೆಂದಿಲ್ಲ. ವ್ಯತ್ಯಾಸಗಳು ಖಂಡಿತ ಇದ್ದೇ ಇರುತ್ತದೆ. ಆದರೆ ಕಾಲದೊಂದಿಗಿನ ಹೊಸ ತಲೆಮಾರಿನ ಒಟ್ಟು ಆಲೋಚನೆಗಳಲ್ಲಿ ಉಂಟಾದ ಬದಲಾವಣೆಗಳು ಸಮಾಜವನ್ನು, ಭವಿಷ್ಯವನ್ನು ಭಿನ್ನವಾಗಿ ರೂಪಿಸುವಲ್ಲಿ ಸಹಕರಿಸಬಹುದು ಎಂಬ ಭರವಸೆ‌ ಮೂಡಿಸುತ್ತವೆ. ಒಟ್ಟಿನಲ್ಲಿ ಜೆನ್ ಝಿಗಳು ಹೆಣ್ಣು- ಗಂಡಿನ ನಡುವೆ ಶತಶತಮಾನಗಳಿಂದ ಇರುವ ಗೆರೆಯನ್ನು ಸ್ವಲ್ಪಮಟ್ಟಿಗಾದರೂ ಅಳಿಸುತ್ತಿದ್ದಾರೆ ಎನ್ನುವುದು ಸಾಮಾಜಿಕ ಬದುಕಿನ ನೆಲೆಯಲ್ಲಿ, ದೇಶದ ಭವಿಷ್ಯದ ಹಿನ್ನೆಲೆಯಲ್ಲಿ ಗಮನಾರ್ಹ ಮತ್ತು ಹೆಮ್ಮೆಯ ಸಂಗತಿಯೇ ಹೌದು.

ಶರೀಫ್ ಕಾಡುಮಠ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನವರು. ಪ್ರಸ್ತುತ ಸೌದಿ ಅರೇಬಿಯಾದ ರಿಯಾಧ್‌ನಲ್ಲಿದ್ದಾರೆ. ಇವರ ಅನೇಕ ಬರಹ, ಕವಿತೆಗಳು ಪತ್ರಿಕೆ, ವೆಬ್ ಸೈಟ್‌ಗಳಲ್ಲಿ ಪ್ರಕಟವಾಗಿವೆ.

More articles

Latest article

Most read