ಆರ್‌ಎಸ್‌ಎಸ್‌ ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವ ವಾದಿಗಳು ಅಷ್ಟೇ : ಡಾ. ಯತೀಂದ್ರ ಸಿದ್ದರಾಮಯ್ಯ

ಮೈಸೂರು : ಆರ್‌ಎಸ್‌ಎಸ್‌ನವರು ಹಿಂದುಗಳೇ ಅಲ್ಲ. ಅವರು ಕೇವಲ ಹಿಂದುತ್ವ ವಾದಿಗಳು ಅಷ್ಟೇ. ಧರ್ಮದ ಹೆಸರಿನಲ್ಲಿ ಏನು ಬೇಕಾದರೂ ಮಾಡುತ್ತೇವೆ ಎಂಬುದು ನಡೆಯೋದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಗುಡುಗಿದ್ದಾರೆ.

ಮಂಗಳವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ ಕೇವಲ ಸಾಂಸ್ಕೃತಿಕ ಸಂಘಟನೆ ಅಲ್ಲ, ಅದು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿರುವ ಸಂಸ್ಥೆ ಎಂದು ಟೀಕಿಸಿದರು.

ನೋಂದಣಿ ಆಗಲೇಬೇಕು : ದೇಶದ ಎಲ್ಲ ಕಡೆ ಆರ್‌ಎಸ್‌ಎಸ್‌ಗೆ  ಕೋಟ್ಯಂತರ ಮೌಲ್ಯದ ಆಸ್ತಿ ಇದೆ. ಅಲ್ಲದೇ ಅವರಿಗೆ ಕೋಟ್ಯಾಂತರ ರೂಪಾಯಿ ಹಣವೂ ಬರುತ್ತಿದೆ. ಇದರ ಲೆಕ್ಕವನ್ನು ಅವರು ಕೊಡಬೇಕು ತಾನೆ ? ಎಂದು ಪ್ರಶ್ನಿಸಿದ ಸಚಿವರು, ಎಲ್ಲಾ ವ್ಯವಹಾರಗಳ ಬಗ್ಗೆ ಪರಿಶೀಲನೆ ಮಾಡಬೇಕಿದೆ.ಹೀಗಾಗಿ ಅದು ನೋಂದಣಿ ಆಗಲೇಬೇಕು ಎಂದು ಬಲವಾಗಿ ಆಗ್ರಹಿಸಿದರು.

ಗೃಹ ಸಚಿವರ ನಿಲುವು ಸರಿಯಿದೆ : ದೇಶದ ಕಾನೂನಿಗಿಂತ ಯಾವ ಸಂಘಟನೆಯೂ ದೊಡ್ಡದಲ್ಲ.ಗೃಹ ಸಚಿವರು,ಆರ್‌ಎಸ್‌ಎಸ್‌  ನೋಂದಣಿಗೆ ಒತ್ತಾಯ ಮಾಡುತ್ತಿರುವ ನಿಲುವು ಸರಿಯಾಗಿದೆ ಎಂದು ಗೃಹ ಸಚಿವ ಮಲ್ಲಿಕಾರ್ಜುನ್‌ ಖರ್ಗೆ ಪರ ಬ್ಯಾಟಿಂಗ್‌ ಮಾಡಿದರು.

ಜೆಡಿಎಸ್ ವಿನಾಕಾರಣ ರಾಜಕಾರಣ

ಬಿಡದಿ ಟೌನ್ ಶಿಪ್  ಯೋಜನೆ ಪರ ಶೇಕಡ 80 ರಷ್ಟು ರೈತರು ಇದ್ದಾರೆ. ಈ ವಿಚಾರದಲ್ಲಿ ಜೆಡಿಎಸ್ ವಿನಾಕಾರಣ ರಾಜಕಾರಣ ಮಾಡುತ್ತಿದೆ. ಸರ್ಕಾರ ಬಿಡದಿ ಟೌನ್‌ಶಿಪ್‌ ಗಾಗಿ ವಶಪಡಿಸಿಕೊಳ್ಳುವ ಭೂಮಿಗೆ ಒಳ್ಳೆಯ ಪರಿಹಾರ ಕೊಡುತ್ತಿದೆ ಎಂದು ಸಚಿವರು ಪ್ರತಿಪಾದನೆ ಮಾಡಿದರು .

 ಬಿಡದಿ ಯೋಜನೆ ಕೈ ಬಿಡಲ್ಲ

ಬಿಡದಿ ಟೌನ್ ಶಿಪ್ ಗೆ ಕೆಲವರು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೆಲವರ ಮಾತನ್ನು ಕೇಳಿ ಯೋಜನೆ ಕೈ ಬಿಡಲು ಆಗಲ್ಲ. ಬೆಂಗಳೂರು ಜನಸಂದಣಿ ಹೆಚ್ಚಾಗಿದೆ. ಎಷ್ಟೋ ಜನರಿಗೆ ನಿವೇಶನದ ಅಗತ್ಯ ಇದೆ. ಬೆಂಗಳೂರು ಜನಸಂಖ್ಯೆ ತಕ್ಕಂತೆ ವಸತಿ ನೀಡಬೇಕಿದೆ.ಬೆಂಗಳೂರು ವಿಸ್ತರಣೆಯ ಅವಶ್ಯಕತೆಯಂತೂ ಇದೆ. ರೈತರೊಂದಿಗೆ ಮಾತುಕತೆ ನಡೆಸಿ, ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಮಾಡಲಾಗುವುದು ಎಂದರು.

ವಿಧಾನಪರಿಷತ್ ಚುನಾವಣೆ  ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಇವತ್ತು ಬಿಡದಿ ರೆಸಾರ್ಟ್ ನಲ್ಲಿ ಸಿಎಲ್‌ಪಿ ಸಭೆ ನಡೆಯುತ್ತದೆ. ನಾನೂ ಕೂಡ  ಸಭೆಯಲ್ಲಿ ಭಾಗಿಯಾಗುತ್ತೇನೆ. ಪ್ರತಿ ಚುನಾವಣೆಯಂತೆಯೇ ತಯಾರಿ ಮಾಡಿಕೊಂಡಿದ್ದಾರೆ.ವರಿಷ್ಠರ ಸೂಚನೆಯಂತೆ ನಮ್ಮೆಲ್ಲ ಶಾಸಕರು ಮತ ಹಾಕುತ್ತಾರೆ. ಐದನೇ ಸ್ಥಾನಕ್ಕೆ  ಸ್ಪರ್ಧಿಸಿರುವ ವಿನಯ್‌ ಕಾರ್ತಿಕ್‌ ಅವರು ಕೂಡ ಗೆಲ್ಲುವಂತಹ ವಿಶ್ವಾಸವಿದೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗೆ ಯಾರು ಅನರ್ಹರಿದ್ದಾರೋ ಅವರನ್ನು ಮಾತ್ರ ಪರಿಷ್ಕರಣೆ ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

More articles

Latest article

Most read