ಮೈಸೂರು : ಆರ್‌ಎಸ್‌ಎಸ್‌ನವರು ಹಿಂದುಗಳೇ ಅಲ್ಲ. ಅವರು ಕೇವಲ ಹಿಂದುತ್ವ ವಾದಿಗಳು ಅಷ್ಟೇ. ಧರ್ಮದ ಹೆಸರಿನಲ್ಲಿ ಏನು ಬೇಕಾದರೂ ಮಾಡುತ್ತೇವೆ ಎಂಬುದು ನಡೆಯೋದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಗುಡುಗಿದ್ದಾರೆ.
ಮಂಗಳವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಕೇವಲ ಸಾಂಸ್ಕೃತಿಕ ಸಂಘಟನೆ ಅಲ್ಲ, ಅದು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿರುವ ಸಂಸ್ಥೆ ಎಂದು ಟೀಕಿಸಿದರು.
ನೋಂದಣಿ ಆಗಲೇಬೇಕು : ದೇಶದ ಎಲ್ಲ ಕಡೆ ಆರ್‌ಎಸ್‌ಎಸ್‌ಗೆ ಕೋಟ್ಯಂತರ ಮೌಲ್ಯದ ಆಸ್ತಿ ಇದೆ. ಅಲ್ಲದೇ ಅವರಿಗೆ ಕೋಟ್ಯಾಂತರ ರೂಪಾಯಿ ಹಣವೂ ಬರುತ್ತಿದೆ. ಇದರ ಲೆಕ್ಕವನ್ನು ಅವರು ಕೊಡಬೇಕು ತಾನೆ ?...